ಅನ್ನದಾತರ ಅಂಗಳ

ಆಧುನಿಕ ಕೃಷಿಯೋ ಅಥವಾ ಊಟದ ತಟ್ಟೆಗೆ ವಿಷವೋ

ಐವತ್ತು-ಅರವತ್ತು ವರ್ಷಗಳ ಹಿಂದೆ ಕೃಷಿ ಎನ್ನುವುದು ಜೀವ ಸಂಕುಲವನ್ನು ಸಲಹುವ ಸಹಜ ಕೃಷಿಯಾಗಿತ್ತು. ಮೌಲ್ಯಾಧಾರಿತವಾಗಿತ್ತು. ಜೈವಿಕ ಸಮತೋಲನ ವನ್ನು ಕಾಪಾಡುತ್ತಿತ್ತು. ಆಗ ಆಹಾರವೇ ಔಷಧವಾಗಿತ್ತು. ಅಡುಗೆ ಮನೆಯೇ ಆಯುರ್ವೇದ ಔಷಧಾಲಯವಾಗಿತ್ತು. ಭತ್ತದ ಗದ್ದೆಗಳು ಅನ್ನದ ಬಟ್ಟಲುಗಳಾಗಿದ್ದವು. ಆದರೆ ಇಂದಿನ ಕೃಷಿ ಪದ್ಧತಿಗಳಿಂದ ಆಹಾರ ಪದಾರ್ಥಗಳು ವಿಷ ರಾಸಾಯನಿಕಗಳಿಂದ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಎಲ್ಲೆಡೆ ಕಾಣುತ್ತಿದ್ದೇವೆ.

ಕೆಲ ತಿಂಗಳುಗಳ ಹಿಂದೆ ವಿಜಯಪುರ ಜಿಲ್ಲೆಯ ರೈತನೊಬ್ಬ ಹತ್ತಿ ಬೆಳೆಗೆ ಕೀಟ ನಾಶಕ ಸಿಂಪಡಿಸಿ ನಂತರ ತುಸು ದೂರದಲ್ಲಿದ್ದ ಗೋರಿಕಾಯಿಗಳನ್ನು ಬಿಡಿಸಿ ತಂದು ಪಲ್ಯ ಮಾಡಿ ತನ್ನ ಇಬ್ಬರು ಮಕ್ಕಳು, ಮಡದಿಯೊಂದಿಗೆ ಊಟ ಮಾಡಿ ಮಲಗಿದವರು ಮತ್ತೆ ಮೇಲೇಳಲೇ ಇಲ್ಲ. ಅದಕ್ಕೆ ಕಾರಣ ಹತ್ತಿಗೆ ಸಿಂಪಡಿಸಿದ್ದ ವಿಷ ತರಕಾರಿ ಬೆಳೆಯ ಮೇಲೂ ಹರಡಿದ್ದು, ಅದನ್ನು ತಿಂದ ರೈತ ಕುಟುಂಬ ಸಾವನ್ನಪ್ಪಿದೆ ಎಂದು ನಂತರ ತಿಳಿದುಬಂತು.

ಈ ಘಟನೆ ಕೃಷಿಕರು ಹಾಗೂ ತರಕಾರಿ ಕೊಳ್ಳುವ ಗ್ರಾಹಕರನ್ನು ಬೆಚ್ಚಿ ಬೀಳಿಸಿತ್ತು. ವಿವೇಚನೆ ಇಲ್ಲದೆ, ಇತಿ ಮಿತಿಯಿಲ್ಲದೆ ಬಳಸುತ್ತಿರುವ ವಿಷ, ರಾಸಾಯನಿಕಗಳ ಕಪಿಮುಷ್ಟಿಯಿಂದ ಕೃಷಿಕರು ಹೊರಬರದಿದ್ದರೆ ಜೀವ ರಕ್ಷಕ ಆಹಾರವೇ ವಿಷವಾಗಿ ಪರಣಮಿಸಿ ಪ್ರಾಣ ತೆಗೆಯುವ ಹಂತಕ್ಕೆ ತಲುಪುವ ದಿನಗಳು ದೂರ ಉಳಿದಿಲ್ಲ. ಈ ಸಂದರ್ಭದಲ್ಲಿ ಮೈಸೂರು ಆಕಾಶವಾಣಿಗಾಗಿ, ಸಾವಯವ ಕೃಷಿ ಗೀತೆಗಾಗಿ ಬರೆದ ಕವಿತೆಯ ಸಾಲುಗಳು ಇಲ್ಲಿ ತುಂಬಾ ಪ್ರಸ್ತುತವೆನ್ನಿಸಿ ಅದನ್ನು ಇಲ್ಲಿ ತುಂಬಾ ಕಾಳಜಿಯಿಂದ ಉಲ್ಲೇಖಿಸುತ್ತಿದ್ದೇನೆ. ಕೃಷಿ ಎಂದರೆ ಬರಿ ಕೃಷಿಯಲ್ಲ ಕೃಷಿ ಸಂಸ್ಕೃತಿಯ ಹುಟ್ಟು ಜಗವ ಪೊರೆಯುತ್ತಿದೆ ಅನುದಿನವು ಅನ್ನಾಹಾರಗಳ ಕೊಟ್ಟು ಈ ಮಣ್ಣಿಗೆ ನಾವು ಬಡೆಯರಲ್ಲ ಬರಿ ಗೇಣಿದಾರರಷ್ಟೇ ಈ ನಿಜವ ತಿಳಿಯುತ ಕೃಷಿಯ ಮಾಡು ವಿಷವಿಕ್ಕದೆ ಇಳೆ-ಬೆಳೆಗೆ ಕೀಟವ ಕೊಲ್ಲಲು ಬಳಸುವ ವಿಷವೇ ನಮ್ಮನು ಕೊಲ್ಲುವುದು ಮೆಲ್ಲ ಮೆಲ್ಲಗೆ ಮನುಷ್ಯ ಸತ್ತರೆ ಮಣ್ಣಿಗೆ ಅಲ್ಲವೆ ಮಣ್ಣೇ ಸತ್ತರೆ ನಾವೆಲ್ಲ ಎಲ್ಲಿಗೆ ?? ವಿಷ ಮುಕ್ತ ಮತ್ತು ರಾಸಾಯನಿಕ ಮುಕ್ತ ಸಾವಯವ ಕೃಷಿಯ ಮಹತ್ವವನ್ನು ಈ ಕವಿತೆಯ ಸಾಲುಗಳು ಚೆನ್ನಾಗಿ ಅಭಿವ್ಯಕ್ತಪಡಿಸುತ್ತವೆ.

ಆಹಾರ ಧಾನ್ಯಗಳು, ಹಣ್ಣು -ತರಕಾರಿಗಳು ವಿಷಯುಕ್ತವಾಗುತ್ತಿರುವುದಕ್ಕೆ ಕಾರಣಗಳು” 

೧. ವಿವೇಚನಾ ರಹಿತವಾಗಿ, ಇತಿ ಮಿತಿ ಇಲ್ಲದೆ, ಅವೈಜ್ಞಾನಿಕವಾಗಿ ವಿಷ ರಾಸಾಯನಿಕಗಳನ್ನು ಕೃಷಿಯಲ್ಲಿ ಬಳಸುತ್ತಿರುವುದು

೨. ರೋಗ, ಕೀಟ, ಬೆಳೆಗಳು, ವಿಸ್ತೀರ್ಣಕ್ಕೆ ಎಷ್ಟು ಪ್ರಮಾಣದಲ್ಲಿ ವಿಷ ರಾಸಾಯನಿಕಗಳನ್ನು ಬಳಸಬೇಕೆಂಬ ಅರಿವಿಲ್ಲದಿರುವುದು

೩. ವಿಷದ ತೀವ್ರತೆ, ಬಳಸಬೇಕಾದ ನೀರಿನ ಮಿಶ್ರಣ ಸಿಂಪಡಣೆ ಸಲಕರಣೆಗಳ ವೇಗ, ಇದನ್ನು ತಿಳಿಯದಿರುವುದು

೪. ಔಷಧಿ, ಕೀಟನಾಶಕ ಮಾರಾಟಗಾರರ ಅವೈಜ್ಞಾನಿಕ ಸಲಹೆ, ಮಾರ್ಗದರ್ಶನ ಪಡೆದು ಮೋಸ ಹೋಗುತ್ತಿರುವುದು

೫. ಕೃಷಿ, ತರಕಾರಿ ಬೆಳೆಗಳಲ್ಲಿ ವೈಜ್ಞಾನಿಕತೆ, ಆಧುನಿಕ ಪದ್ಧತಿಗಳನ್ನು ಅಳವಡಿಸದಿರುವುದು

೬.ಕೃಷಿಯಲ್ಲಿ ಪಶು ಸಾಕಾಣಿಕೆಯನ್ನು ಕೈ ನಿಲ್ಲಿಸಿ ಕೊಟ್ಟಿಗೆ ಗೊಬ್ಬರ, ಸಾವಯವ ಪದ್ಧತಿಗಳನ್ನು ಕೃಷಿಕರು ಕೈ ಬಿಟ್ಟಿರುವುದು

೭. ಮಣ್ಣಿನ ಪರೀಕ್ಷೆ ಕೈಗೊಳ್ಳದೆ, ವಿಜ್ಞಾನಿ, ತಂತ್ರಜ್ಞರು, ಕೃಷಿ ಅಽಕಾರಿಗಳ ಸಲಹೆ, ಮಾರ್ಗದರ್ಶನ ಪಡೆಯಲು ಹಿಂಜರಿಯುವುದು

೮. ಕೃಷಿ ಇಲಾಖೆ ಹಾಗೂ ಸರ್ಕಾರಗಳ ಆಶಯದಂತೆ ಕೃಷಿಕರು  ವ್ಯವಸ್ಥೆಯನ್ನು ಬಳಸದಿರುವುದು

ವಿಷಮುಕ್ತ, ರಾಸಾಯನಿಕ ಮುಕ್ತ ಕೃಷಿಗೆ ಪೂರಕ ಅಂಶಗಳು: 

೧. ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ನೀರು, ಸೂರ್ಯನ ಶಾಖ, ಬೆಳಕುಗಳನ್ನು ಬಳಸಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದು

೨. ವಿಷ ರಾಸಾಯನಿಕಗಳ ಬಳಕೆಯು ಕೃಷಿ ನಿಸರ್ಗವನ್ನು ನಾಶ ಮಾಡುತ್ತದೆ ಎಂದು ಜರೂರಾಗಿ ತಿಳಿದುಕೊಳ್ಳಬೇಕು

೩ ನಿಸರ್ಗದ ಆಶಯಕ್ಕೆ ತಕ್ಕಂತೆ ಬಹು ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು

೪. ಸಕಲ ಜೀವ ಸಂಕುಲವನ್ನು ಸಲಹುವ ಸಹಜ, ನೈಸರ್ಗಿಕ, ಸಾವಯವ, ಶೂನ್ಯ ಬಂಡವಾಳದ ಕೃಷಿಯೆಡೆಗೆ ಒಲವು ಬೆಳೆಸಿಕೊಳ್ಳುವತ್ತ ಸರ್ಕಾರ ಹಾಗೂ ಕೃಷಿಕರು ಚಿಂತನೆ ಮಾಡಬೇಕು

೫. ಕೃಷಿ ಇಲಾಖೆ, ಕೃಷಿ ವಿಜ್ಞಾನಿಗಳು, ಅಽಕಾರಿಗಳು ರೈತರ ಜಮೀನುಗಳಿಗೆ ಭೇಟಿ ಕೊಟ್ಟು ಕೃಷಿಗೆ ಜೀವ ಚೈತನ್ಯ ತುಂಬ ಬೇಕು

೬. ಕೃಷಿ ಚಟುವಟಿಕೆ, ಮಾರುಕಟ್ಟೆ, ಮೌಲ್ಯವರ್ಧನೆ, ಸಹಕಾರ-ಸಹಾಯಗಳ ಬಗ್ಗೆ ಸರ್ಕಾರ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು

೭. ಪ್ರತಿ ಕೃಷಿ ಭೂಮಿಯ ಮಣ್ಣಿನ ಪರೀಕ್ಷೆ ಮಾಡಿಸುವುದು, ವಿಷ, ಕೀಟನಾಶಕಗಳ ತಯಾರಿಕಾ ಸಂಸ್ಥೆಗಳ ಬಗ್ಗೆ ಆರೋಗ್ಯಕರ ಕಾನೂನುಗಳನ್ನು ತಂದು ನಿಯಂತ್ರಣದಲ್ಲಿಡುವುದು

೮. ಸಮ ಸಮಾಜ, ಕಲ್ಯಾಣ ಜನ ಕರ್ನಾಟಕ, ಆರೋಗ್ಯಯುತ ಕರ್ನಾಟಕ, ರೋಗಮುಕ್ತ ಸಮಾಜ ಕುರಿತು ಕೃಷಿ ಇಲಾಖೆ ಹಾಗೂ ಸರ್ಕಾರ ಗಮನ ಕೊಡುವುದು

೯. ಕೀಟನಾಶಕಗಳ ವಿಷ ತೀವ್ರತೆಯನ್ನು ತಿಳಿಸುವ ಕೀಟನಾಶಕಗಳ ಬಾಟಲಿಗಳ ಮೇಲೆ ಬಳಸಿರುವ ನೀಲಿ, ಹಳದಿ, ಹಸಿರು, ಕೆಂಪು, ಕಿತ್ತಲೆ ಬಣ್ಣಗಳ ಕುರಿತು ಕೀಟ ವಿಜ್ಞಾನಿಗಳು ರೈತರಿಗೆ ಪ್ರತಿ ವರ್ಷ ತರಬೇತಿ ಕೊಡುವಂತಾಗಬೇಕು

-ರಮೇಶ್ ಪಿ.ರಂಗಸಮುದ್ರ

ಆಂದೋಲನ ಡೆಸ್ಕ್

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

14 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

14 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

20 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

20 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

20 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

21 hours ago