ಅನ್ನದಾತರ ಅಂಗಳ

ತಂದೆಯ ಆಸೆಯಂತೆ ಸಾವಯವ ಪದ್ಧತಿಯಲ್ಲಿ ಭತ್ತ ಬೆಳೆದೆ

• ಜಿ.ಎಂ.ಪ್ರವೀಣ್ ಕುಮಾರ್

ನನ್ನ ತಂದೆ ರೈತರಾಗಿದ್ದರಿಂದ ನನಗೂ ಚಿಕ್ಕಂದಿ ನಿಂದಲೂ ವ್ಯವಸಾಯದ ನಂಟಿತ್ತು. ಅವರು ಮಧುಮೇಹ ಹಾಗೂ ಹೃದಯ ಕಾಯಿಲೆ ಯಿಂದ ಬಳಲುತ್ತಿದ್ದರು. ನಮ್ಮ ಮುಖ್ಯ ಆಹಾರ ಅನ್ನ ಆಗಿರುವುದರಿಂದ, ಸಾವಯವ ಮಾದರಿ ಯಲ್ಲಿ ಭತ್ತ ಬೆಳೆಯಬೇಕು ಎಂದು ಅವರು ಆಗಾಗ್ಗೆ ಹೇಳುತ್ತಿದ್ದರು. ಆದರೆ ಅವರ ಈ ಆಸೆ ಈಡೇರಲೇ ಇಲ್ಲ, 2005ರಲ್ಲಿ ತೀರಿಕೊಂಡರು.

ಈಗಿನ ಪೀಳಿಗೆಯಲ್ಲಿ, ಎಲ್ಲರಿಗೂ ಒಂದಿ ಲ್ಲೊಂದು ಕಾಯಿಲೆ ಸರ್ವೇಸಾಮಾನ್ಯವಾಗಿದೆ. ನಮ್ಮ ಊರಿನಲ್ಲಿ, ನೆರೆ ಹೊರೆ ಹಳ್ಳಿಗಳಲ್ಲಿ, ಯಾರೂ ಸಾವಯವ ಮಾದರಿಯಲ್ಲಿ ಭತ್ತ ಬೆಳೆಯುತ್ತಿರಲಿಲ್ಲ. ನಮ್ಮ ತಂದೆಯ ಈ ಆಸೆ ಆಗಾಗ್ಗೆ ನನ್ನನ್ನು ಕಾಡುತ್ತಿತ್ತು. 2017ರಲ್ಲಿ ಈಶ್ವರನ್ ಪಿ.ತೀರ್ಥರವರ ಪರಿಚಯವಾಯಿತು. ನಾನು ಇನ್‌ಫೋಸಿಸ್‌ನಿಂದ 3 ತಿಂಗಳು ರಜೆ ಪಡೆದು, ಅವರ ಮಾರ್ಗದರ್ಶನದಿಂದ ಸಾವಯವ ಭತ್ತ ಬೆಳೆದೆ. ಕೆಲವು ಸ್ನೇಹಿತರಿಗೆ ಹಂಚಿದೆ, ಅವರು ದೊಡ್ಡ ಶಹಬ್ಬಾಸ್ ಗಿರಿಯನ್ನೇ ಕೊಟ್ಟರು. ಅಲ್ಲಿಂದ ಇಲ್ಲಿಯವರೆಗೆ ನನ್ನ ತಾಯಿಯ ಸಹಾಯದಿಂದ, 8 ಗುಂಟೆಯಲ್ಲಿ ಸಾವಯವ ಭತ್ತ ಬೆಳೆಯುವುದನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ‘ಸಿದ್ದ ಸಣ್ಣ’ ಎಂಬ ಭತ್ತದ ತಳಿಯನ್ನು ಬೆಳೆದಿದ್ದೇನೆ.

2017ರ ಜನವರಿ ತಿಂಗಳಿಂದ, ಎಂಟು ತಿಂಗಳ ಕಾಲ ಯಾವುದೇ ವಾಣಿಜ್ಯ ಬೆಳೆಗಳನ್ನು ಬೆಳೆಯದೆ, ಹಸಿರೆಲೆ ಗೊಬ್ಬರ ಬೆಳೆಗಳಾದ ಸೆಣಬು, ಹುರುಳಿ, ಎಳ್ಳನ್ನು ಬಿತ್ತನೆ ಮಾಡಿ, ಹೂವು ಬಿಡುವ ಸಂದರ್ಭದಲ್ಲಿ ಉತ್ತು ಭೂಮಿಗೆ ಸೇರಿಸಿದೆವು ಮತ್ತು ಸೆಣಬಿನಲ್ಲಿ ಎನ್.ಪಿ.ಎಚ್. ಹೇರಳವಾಗಿರುತ್ತದೆ. ಹೀಗೆ ಮಾಡುವುದರಿಂದ ಡಯಿಂಚಾ ಪ್ರಮಾಣ ಜಾಸ್ತಿಯಾಗುತ್ತದೆ.

ನಂತರ ಸೆಪ್ಟೆಂಬರ್‌ನಲ್ಲಿ, 6 ಗಾಡಿ ಕುರಿ ಗೊಬ್ಬರ ಹಾಕಿ ರಾಗಿ ಬೆಳೆದೆವು. ಬಳಿಕ ನವೆಂಬರ್ ನಲ್ಲಿ ಜೀವಾಮೃತವನ್ನು ಸಿಂಪಡಿಸಿದೆವು. ಬಳಿಕ ಡಿಸೆಂಬರ್‌ನಲ್ಲಿ ರಾಗಿ ಕಟಾವು ಮಾಡಿ, ಡಯಿಂಚಾ ಬಿತ್ತನೆ ಮಾಡಿದೆವು.

ಬಿಲ್ವ ಪತ್ರೆ ಕಷಾಯವನ್ನು ಡಿಸೆಂಬರ್‌ನಿಂದ, ಫೆಬ್ರವರಿವರೆಗೆ, ತಿಂಗಳಿಗೊಮ್ಮೆ ಮೂರು ಸಲ ಸಿಂಪಡಿಸಿದೆವು. ಇದರಿಂದ ಶತ್ರು ಕೀಟಗಳ ನಾಶವಾಗುತ್ತದೆ.

ನಂತರ ಜನವರಿ 15ರಂದು ಭತ್ತ ವಟ್ಟಲು ಹಾಕಿ, ಫೆಬ್ರವರಿ 10ರಂದು ನಾಟಿ ಮಾಡಿದೆವು. 10 ರಿಂದ 15 ದಿನಗಳಿಗೊಮ್ಮೆ, ಕಳೆ ತೆಗೆದೆವು. ಇದರಿಂದ ಗಿಡಗಳು ಚೆನ್ನಾಗಿ ಉಸಿರಾಡಲು ಸಹಾಯಕ. ಪೈರುಗಳಿಗೆ ತುಳಸಿ ಕಷಾಯವನ್ನು
ಮಾರ್ಚ್‌ನಿಂದ ಮೂರು ಸಲ, 15 ದಿನಗಳಿ ಗೊಮ್ಮೆ ಸಿಂಪಡಿಸಿದೆವು. ಇದರಿಂದ ಭತ್ತದ ಕಾಳುಗಳು ದಪ್ಪವಾಗುತ್ತವೆ. ಆಗಾಗ್ಗೆ ನಾಟಿ ಹಸುವಿನ ಸೆಗಣಿಯನ್ನು ನೀರಿನ ಜೊತೆ ಬಿಟ್ಟೆವು. ಇಷ್ಟೆಲ್ಲ ಸಾವಯವ ಬಳಕೆಯ ಬಳಿಕ ಆರೋಗ್ಯಕರ ಸಾವಯವ ಭತ್ತ ಬೆಳೆದೆವು. ಈ ಪದ್ಧತಿಯನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಲು ಆಸಕ್ತ ರೈತರು ಕೈಜೋಡಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.

(ಲೇಖಕರು ಬಿ.ಇ.ಎಲೆಕ್ಟ್ರಾನಿಕ್ಸ್‌ನಲ್ಲಿ ಪದವೀಧರರಾಗಿದ್ದು, ಇನ್ಫೋಸಿಸ್‌ನಲ್ಲಿ 17 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.)

andolanait

Recent Posts

ಶಿವಾಜಿ ಗಣೇಶನ್‌ ಅವರ ದೆಹಲಿ ಕಣ್ಣೋಟ | ರಾಮಮಂದಿರ ಅಕ್ರಮ ಮಂಕಾಗಿಸಿದ ಬಿಜೆಪಿ ಭವಿಷ್ಯ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗೆಗೆ ಭಕ್ತರು ಭಕ್ತಿಯಿಂದ ನಡೆದುಕೊಳ್ಳುವುದು ಮಾತ್ರವಲ್ಲ, ತಮ್ಮ ಇಚ್ಛೆಯ ಈಡೇರಿಕೆಗಾಗಿ ಹರಕೆ ಹೊತ್ತವರು , ದಾನ…

3 hours ago

ಭಾನುವಾರದ ಹಾಡುಪಾಡು | ಈಗ ಕೇರಳದಲ್ಲೂ ಫ್ರೀ ಬಸ್ ಪ್ರಿಯದರ್ಶಿನಿ

ಕೇರಳಂ ಎಂಬ ಈ ಸ್ತ್ರೀ ರಾಜ್ಯದ ಮಹಿಳೆಯರು ಉಚಿತ ಪ್ರಯಾಣದ ಸಂಪೂರ್ಣ ಸುಖವನ್ನು ಪಡೆಯುತ್ತಿದ್ದಾರೆ. ಈ ಸುಖ ಕ್ಷಣಿಕವೋ, ಶಾಶ್ವತವೋ…

4 hours ago

ಭಾನುವಾರದ ಹಾಡುಪಾಡು | ಕೊಡಗು ಕಾಡಿನ ಆ ಕಾಲದ ಮಳೆಗಾಲ ವೈಭವ

ಕೃಪಾ ದೇವರಾಜ್, ಮಡಿಕೇರಿ ಧೋ... ಎಂದು ಸುರಿಯುವ ಮಳೆ, ಅಜ್ಜ ಕಟ್ಟಿದ ಹಳೇ ನಾಡ ಹೆಂಚಿನ ಮನೆ, ನಿರಂತರವಾಗಿ ಸುರಿಯುವ…

4 hours ago

ಭಾನುವಾರದ ಹಾಡುಪಾಡು | ಹತ್ತನೆಯ ಸಾಹಿತ್ಯ ಸಂಭ್ರಮದ ಹೊತ್ತಲ್ಲಿ ಹದಿನಾರರ ಹರಯದ ಬುಕ್ ಕ್ಲಬ್ ಕುರಿತು

ಜುಲೈ ನಾಲ್ಕು ಮತ್ತು ಐದರ ಶನಿವಾರ ಮತ್ತು ಭಾನುವಾರ ಮೈಸೂರಿನ ಸದರ್ನ್ ಸ್ಟಾರ್‌ನಲ್ಲಿ ವಾರ್ಷಿಕ ಸಾಹಿತ್ಯ ರಸದೂಟ ಪೃಥ್ವಿ ಸುಧೀಂದ್ರ…

5 hours ago

ಅಗ್ನಿ ದುರಂತ | ಕೊನೆಗೂ ಅಬಕಾರಿ ಡಿಸಿ ತಲೆದಂಡ

ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್‌ಬಾರ್) ನಲ್ಲಿ ಸಂಭವಿಸಿದ  ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…

21 hours ago

ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…

23 hours ago