ಓದುಗರ ಪತ್ರ
ಕೊರಿಯನ್ ಗೇಮ್ಸ್ ವ್ಯಸನದಿಂದ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂದು ನಮ್ಮ ಯುವಜನತೆ ಕೆ ಪಾಪ್ ಮತ್ತು ಕೆ ಡ್ರಾಮಾ ಕಲ್ಪನಾ ಲೋಕದಲ್ಲಿ ಬಂದಿಯಾಗುತ್ತಿದ್ದಾರೆ.
ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಕೊರಿಯನ್ ವಿಷಯಗಳ ಬಳಕೆ ಕಳೆದ ಎರಡು ವರ್ಷಗಳಲ್ಲಿ ಶೇ.೩೦೦ ರಷ್ಟು ಹೆಚ್ಚಾಗಿದೆ. ಇದು ಕೇವಲ ಮನೋರಂಜನೆಯಾಗಿ ಉಳಿಯದೆ ಡಿಜಿಟಲ್ ಡ್ರಗ್ ಆಗಿ ಮಾರ್ಪಡುತ್ತಿದೆ. ಈ ಸರಣಿಗಳು ಮತ್ತು ಗೇಮ್‌ಗಳು ಹದಿಹರೆಯದವರಲ್ಲಿ ವಾಸ್ತವ ಪ್ರಜ್ಞೆಯನ್ನು ನಾಶಪಡಿಸಿ ಅವರನ್ನು ಒಂಟಿತನ ಮತ್ತು ಖಿನ್ನತೆಯ ಸುಳಿಗೆ ದೂಡುತ್ತಿವೆ. ಶೈಕ್ಷಣಿಕ ಪ್ರಗತಿಯ ಕುಸಿತ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ನಾಶಕ್ಕೆ ಇದು ನಾಂದಿಯಾಗುತ್ತಿದೆ.
ಸರ್ಕಾರವು ಇಂತಹ ಅಪಾಯಕಾರಿ ಗೇಮ್‌ಗಳ ಮೇಲೆ ಕಟ್ಟುನಿಟ್ಟಿನ ನಿಷೇಧ ಹೇರಬೇಕು ಮತ್ತು ಒಟಿಟಿ ವೇದಿಕೆಗಳಲ್ಲಿನ ವಿಷಯಗಳ ಮೇಲೆ ನಿಯಂತ್ರಣ ಹೇರಬೇಕು.
-ಡಾ. ಎಚ್.ಕೆ. ವಿಜಯಕುಮಾರ್, ಬೆಂಗಳೂರು
ನವದೆಹಲಿ : ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಜಾಗತಿಕವಾಗಿ ಸಾಮಾನ್ಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ…
ಮೇಘನ ಕೆ.ಆರ್ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…
ಡಾ. ಶಿಲಿನಾ ಕೋಟೆ ಎನ್. ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…
ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…
ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…
ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…