ಭೇರ್ಯ ಮಹೇಶ್
ಮೈಸೂರು ಜಿಲ್ಲೆಯಲ್ಲಿ ಭತ್ತ, ರಾಗಿ, ಕಬ್ಬು, ತೆಂಗು, ವಿವಿಧ ಬಗೆಯ ಹೂವುಗಳು ಹೀಗೆ ಕೆಲವೇ ಕೆಲವು ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇವುಗಳ ನಡುವೆ ಮಲೆನಾಡಿನಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳನ್ನೂ ಕೂಡ ಬೆಳೆಯಬಹುದು ಎಂಬುದನ್ನು ತಾಲ್ಲೂಕಿನ ಮಾಳನಾಯಕನಹಳ್ಳಿ ಗ್ರಾಮದ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕ ತ ಹಾಗೂ ಪ್ರಗತಿಪರ ರೈತ ಗೋಪಾಲೇಗೌಡ ತೋರಿಸಿಕೊಟ್ಟಿದ್ದಾರೆ.
ಕೃಷಿಯೇ ಹಾಗೆ ಅದು ತನ್ನ ಕೈ ಹಿಡಿದವರನ್ನು ಯಾವತ್ತೂ ಬಿಡುವುದಿಲ್ಲ. ಅದನ್ನು ನಿಷ್ಠೆ ಶ್ರದ್ಧೆಯಿಂದ ಮಾಡಬೇಕಷ್ಟೆ. ಅದು ಬಂಡವಾಳ ಹಾಕಿ ಲಾಭ ತೆಗೆಯುವಂತಹದಲ್ಲ. ಅದನ್ನು ಪ್ರೀತಿಸುತ್ತಾ ಶ್ರಮ ಪಡಬೇಕು. ಆಗ ಅದು ಕೈಹಿಡಿಯುತ್ತದೆ. ಅದರ ಬಗ್ಗೆ ಆಸಕ್ತಿ, ಪ್ರೀತಿ ಇಲ್ಲದೆ ಹೋದರೆ ಅದರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಶ್ರಮಪಟ್ಟು ದುಡಿದವರನ್ನು ಕಾಪಾಡುತ್ತದೆ. ಇದಕ್ಕೆ ಸಾಕ್ಷಿ ರೈತ ಗೋಪಾಲೇಗೌಡರು ಎಂದರೆ ತಪ್ಪಾಗಲಾರದು. ಅವರು ಕೃಷಿಯನ್ನು ತಪ್ಪಸ್ಸಿನಂತೆ ಧ್ಯಾನಿಸಿದ ಫಲದಿಂದ ಅದರಲ್ಲಿ ಯಶಸ್ಸು ಕಂಡಿದ್ದಾರೆ.
ಮಾಳನಾಯಕನಹಳ್ಳಿ ಗ್ರಾಮದಲ್ಲಿ ತಮ್ಮಗಿರುವ ಮೂರೂವರೆ ಎಕರೆ ಪ್ರದೇಶದ ತೋಟಕ್ಕೆ ತೆರಳಿದ್ದೇ ಆದರೆ ಅಚ್ಚರಿ ಮೂಡುತ್ತದೆ. ಅಷ್ಟೇ ಅಲ್ಲ ಅದೊಂದು ಕೇವಲ ತೋಟವಾಗಿ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಅದು ಹಚ್ಚ ಹಸಿರಿನ ಸ್ವರ್ಗದಂತೆ ಭಾಸವಾಗುತ್ತದೆ. ಕೃಷಿ ಮಾಡಬೇಕೆನ್ನುವವರಿಗೆ ಅದೊಂದು ಸಂಶೋ ಧನಾಲಯದ ಕೇಂದ್ರ ಮತ್ತು ಕಲಿಕೆಯ ಕ್ಷೇತ್ರ ವಾಗಿಯೂ ಕಂಗೊಳಿಸುತ್ತದೆ.
ಗೋಪಾಲೇಗೌಡರ ತೋಟದಲ್ಲಿ ಏನಿದೆ? ಏನಿಲ್ಲ? : ಇಲ್ಲಿ ಏನಿದೆ? ಏನಿಲ್ಲ ಎನ್ನುವುದನ್ನು ಹೇಳ ಲಾಗುವುದಿಲ್ಲ. ಮಲೆನಾಡಿನಲ್ಲಿ ಬೆಳೆಯುವ ಬೆಳೆ ಗಳಾದ ಕರಿಮೆಣಸು, ಏಲಕ್ಕಿ, ಚಕ್ಕೆ, ಜಾಯಿಕಾಯಿ, ಅರಿಶಿನ, ಶುಂಠಿ, ಪನ್ನೀರು, ಇಂಗು, ಕಾಫಿ, ತೆಂಗು, ಅಡಕೆ, ಕೋಕ್, ಸೀಬೆ, ಸಪೋಟ, ಪಪ್ಪಾಯ, ಅಂಜೂರಾ, ಸಿಲ್ವರ್, ತೇಗ ಹೀಗೆ ಒಂದೇ ಎರಡೇ ಹತ್ತಾರು ಬೆಳೆಗಳು ತೋಟದಲ್ಲಿ ಕಳೆಗಟ್ಟಿವೆ. ಈ ಬೆಳೆಯಿಂದ ಅವರು ವರ್ಷಕ್ಕೆ ೧೫ರಿಂದ ೧೮ ಲಕ್ಷ ರೂ. ಗಳಷ್ಟು ಆದಾಯವನ್ನು ಪಡೆಯುತ್ತಿದ್ದಾರೆ. ಇನ್ನು ಇವರು ಕಾಫಿ, ಏಲಕ್ಕಿ, ಚಕ್ಕೆ, ಜಾಕಾಯಿ, ಪತ್ರೆ, ಅಂಜೂರ, ಕಿತ್ತಳೆ, ಸಪೋಟ, ಮಾವು, ತೆಂಗು, ಅಡಕೆ, ಕೋಕ್, ಮೆಣಸು ಹೀಗೆ ಎಲ್ಲ ರೀತಿಯ ಸಾಂಬಾರ ಪದಾರ್ಥ ಗಳನೂ ನೈಸರ್ಗಿಕವಾಗಿ ಸಾವಯವ ಪದ್ಧತಿಯ ಲ್ಲಿಯೇ ಬೆಳೆಯುತ್ತಿರುವುದು ವಿಶೇಷವಾಗಿದೆ.
ಇವರ ಕೃಷಿ ಪದ್ಧತಿ ಹೇಗಿದೆ ಗೊತ್ತಾ: ಇವತ್ತು ಸಾವ ಯವ ಕೃಷಿ ಮಾಡಿ ಎಂದು ಹೇಳುವುದು ಸುಲಭ ಆದರೆ ಅದನ್ನು ಮಾಡಿ ತೋರಿಸುವುದು ಕಷ್ಟ. ಆದರೆ ಗೋಪಾಲೇಗೌಡರು ತಾವು ಸಾವಯವ ಕೃಷಿ ಮಾಡುವ ಮೂಲಕ ಇತರರನ್ನು ಪ್ರೇರೇಪಿಸುತ್ತಿ ರುವುದು ಶ್ಲಾಘನೀಯವಾದದು.
ಕೃಷಿ ಪಂಡಿತ ಪ್ರಶಸ್ತಿ: ಭೂಮಿಯನ್ನು ಗೌರವಿಸಿ ಶ್ರದ್ಧಾ ಭಕ್ತಿಯಿಂದ ಬೇಸಾಯ ಮಾಡಿ ವರ್ಷಕ್ಕೆ ಲಕ್ಷಾಂತರ ರೂ. ಗಳಿಗೂ ಹೆಚ್ಚಿನ ಆದಾಯ ಪಡೆದಿ ದ್ದಾರೆ. ಜತೆಗೆ ಇವತ್ತು ಕೃಷಿಯಿಂದ ವಿಮುಖರಾಗಿ ಬೇಸಾಯ ಚಟುವಟಿಕೆಗಳಿಂದ ದೂರ ಸರಿಯುತ್ತಿ ರುವ ಯುವ ಜನಾಂಗವನ್ನು ಮತ್ತೆ ಬೇಸಾಯಕ್ಕೆ ಕರೆ ತರುವ ಕೆಲಸವನ್ನು ಮಾಡಿದ್ದರಿಂದ ಇವರ ಸೇವೆಗೆ ೨೦೧೫-೧೬ ನೇ ಸಾಲಿನಲ್ಲಿ ಸರ್ಕಾರ ‘ಕೃಷಿ ಪಂಡಿತ’ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ.
ಬೆಂಗಳೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ಆದ ದೌರ್ಜನ್ಯ ಎಲ್ಲರೂ ತಲೆತಗ್ಗಿಸುವ ಘಟನೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ…
ಬೆಂಗಳೂರು: ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಒಳನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಮತ್ತೆ ಕುಸಿತವಾಗಿದ್ದು, ಚಳಿಯ…
ನವದೆಹಲಿ: 2027ರ ಜನಗಣತಿಯ ಮೊದಲ ಹಂತದ ಮನೆ ಪಟ್ಟಿ ಕಾರ್ಯ ಈ ವರ್ಷದ ಏಪ್ರಿಲ್ 1 ರಿಂದ ಸೆಪ್ಟೆಂಬರ್.30ರವರೆಗೆ ಎಲ್ಲಾ…
ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಫೈರಿಂಗ್ ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ…
ಬೆಂಗಳೂರು: ಆದಷ್ಟು ಬೇಗ ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದಿದ್ದಾರೆ. ಈ ಬಗ್ಗೆ…
ಮದ್ದೂರು: ಮದ್ದೂರು ಪಟ್ಟಣದ ಪೊಲೀಸ್ ಠಾಣೆಯ ವಿಶ್ರಾಂತಿ ಗೃಹದಲ್ಲಿ ಕಾನ್‌ಸ್ಟೇಬಲ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ…