ಆಂದೋಲನ ಪುರವಣಿ

ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ದರ್ಬಾರ್

ಇಂದು ಜಮಾಲಿ ಗುಡ್ಡ; ಮುಂದಿನ ವಾರ ಮಾನ್ಸೂನ್ ರಾಗ ತೆರೆಗೆ

ಸ್ಯಾಂಡಲ್‌ವುಡ್‌ನಲ್ಲಿ ಈಗ ಡಾಲಿ ಧನಂಜಯ್ ಅವರ ಮೆರವಣಿಗೆ ನಡೆಯುತ್ತಿದೆ. ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತಿವೆ. ಘೋಷಣೆ ಆಗಿರುವ ಸಿನಿಮಾಗಳ ಪಟ್ಟಿ ದೊಡ್ಡದಿದ್ದು, ಹೆಚ್ಚಿನ ಚಿತ್ರಗಳು ಟ್ರೇಲರ್, ಸಾಂಗ್ಸ್, ಪೋಸ್ಟರ್‌ಗಳಿಂದ ಈಗಾಗಲೇ ನಿರೀಕ್ಷೆ ಹೆಚ್ಚಿಸಿವೆ.

ಇಂದು (ಸೆ.09) ಕುಶಾಲ್ ಗೌಡ ನಿರ್ದೇಶನದ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿ ಗುಡ್ಡ’ ಚಿತ್ರ ತೆರೆಗೆ ಬರುತ್ತಿದ್ದು, ಮುಂದಿನ ವಾರ ‘ಮಾನ್ಸೂನ್ ರಾಗ’. ಅದಾದ ಮೇಲೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ವಿಜಯ ಪ್ರಸಾದ್ ನಿರ್ದೇಶನದ, ಜಗ್ಗೇಶ್, ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ತೋತಾಪುರಿ’, ಅ. ೨೧ಕ್ಕೆ ಬೆಂಗಳೂರಿನ ಭೂಗತ ಲೋಕದ ಚರಿತ್ರೆ ಹೇಳುವ ಶೂನ್ಯ ನಿರ್ದೇಶನದ ‘ಹೆಡ್ ಬುಷ್’ ಹೀಗೆ ಸಾಲು ಸಾಲು ಚಿತ್ರಗಳ ಮೂಲಕ ಡಾಲಿ ಮೆರವಣಿಗೆ ನಡೆಯಲಿದೆ.

ಆ. ೨೩ರಂದು ಹುಟ್ಟುಹಬ್ಬ ಆಚರಿಸಿಕೊಂಡ ಧನಂಜಯ್ ಅಂದೇ ‘ಡಾಲಿ ಪಿಕ್ಚರ್ಸ್‌’ ಘೋಷಣೆ ಮಾಡಿ ವರ್ಷಕ್ಕೆ ಎರಡು ಸಿನಿಮಾ ನಿರ್ಮಾಣ ಮಾಡುವ ಭರವಸೆ ನೀಡಿದರು. ಅದೇ ವೇಳೆಗೆ ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿಬರಲಿರುವ ‘ಉತ್ತರಕಾಂಡ’ ಚಿತ್ರದ ಘೋಷಣೆಯೂ ಆಯಿತು. ಇದೀಗ ವಿಜಯ್ ಎನ್. ನಿರ್ದೇಶನದಲ್ಲಿ ‘ಹೊಯ್ಸಳ’ ಚಿತ್ರದ ಪೋಸ್ಟರ್ ಲಾಂಚ್ ಆಗಿದ್ದು ೨೦೨೩ರ ಮಾರ್ಚ್ ೩೦ಕ್ಕೆ ಬಿಡುಗಡೆಗೆ ಅಣಿಯಾಗುತ್ತಿದೆ.

ಇಂದು ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ತೆರೆಗೆ

ನಿಹಾರಿಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಶ್ರೀಹರಿ ನಿರ್ಮಿಸಿರುವ, ಕುಶಾಲ್ ಗೌಡ ನಿರ್ದೇಶಿಸಿರುವ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದಲ್ಲಿ ಡಾಲಿಗೆ ಅದಿತಿ ಪ್ರಭುದೇವ ಜೊತೆಯಾಗಿದ್ದು, ಪ್ರಕಾಶ್ ಬೆಳವಾಡಿ, ಯಶ್ ಶೆಟ್ಟಿ, ಭಾವನಾ ರಾಮಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ಅರ್ಜುನ ಜನ್ಯ ಸಂಗೀತ ಚಿತ್ರಕ್ಕಿದೆ.

ಇನ್ನು ಮುಂದಿನ ವಾರ ತೆರೆಗೆ ಬರಲಿರುವ ‘ಮಾನ್ಸೂನ್ ರಾಗ’ ಚಿತ್ರದಲ್ಲಿ ಧನಂಜಯ್‌ಗೆ ರಚಿತಾ ರಾಮ್ ಜೋಡಿ. ಎಸ್. ರವೀಂದ್ರನಾಥ್ ನಿರ್ದೇಶನದ ಚಿತ್ರವನ್ನು ವಿಖ್ಯಾತ್ ಎ.ಆರ್. ನಿರ್ಮಾಣ ಮಾಡಿದ್ದಾರೆ. ಎಸ್.ಕೆ.ರಾವ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿರುವ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಯಶಾ ಶಿವಕುಮಾರ್, ಸುಹಾಸಿನಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಗ್ನಿ ಶ್ರೀಧರ್ ಅವರ ‘ದಾದಾಗಿರಿ ದಿನಗಳು’ ಕಾದಂಬರಿ ಆಧಾರಿತ ಸಿನಿಮಾ ‘ಹೆಡ್ ಬುಷ್’ ಬೆಂಗಳೂರಿನ ಭೂಗತ ಪಾತಕಿಯಾಗಿದ್ದ ‘ಎಂ.ಪಿ.ಜಯರಾಜ್’ ಜೀವನಾಧಾರಿತವಾಗಿದ್ದು ಶೂನ್ಯ ಸಾರಥ್ಯ ವಹಿಸಿದ್ದಾರೆ. ಅಶು ಬೇದ್ರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಚರಣ್‌ರಾಜ್ ಸಂಗೀತವಿದ್ದು, ಪ್ರೊಫೆಸರ್ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ.

ಈಗ ಪೋಸ್ಟರ್ ಮೂಲಕ ಗಮನ ಸೆಳೆದಿರುವ ‘ಹೊಯ್ಸಳ’ ಚಿತ್ರವನ್ನು ಕೆ.ಆರ್.ಜಿ ಸ್ಟುಡಿೋಂಸ್ ಲಾಂಛನದಲ್ಲಿ ಕಾರ್ತಿಕ್ ಗೌಡ ಹಾಗೂ ೋಂಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ. ಅಮೃತ ಅಯ್ಯಂಗಾರ್ ಚಿತ್ರದ ನಾಯಕಿಯಾಗಿದ್ದು, ಅಚ್ಯುತಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ತೆರೆ ಹಂಚಿಕೊಂಡಿದ್ದಾರೆ.

andolana

Recent Posts

ಮೊಬೈಲ್ ಮಿತ ಬಳಕೆ; ವಿದ್ಯಾರ್ಥಿಗಳ ಬಯಕೆ

ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ ಚಿಂತನೆ ಹಿನ್ನೆಲೆ ವಿದ್ಯಾರ್ಥಿಗಳ ಮನದ ಮಾತು ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ…

8 mins ago

ಪರಿಹಾರ ಧನ ಪರಿಹಾರವಲ್ಲ..!

ಗಿರೀಶ್ ಹುಣಸೂರು ನೊಂದ ಕುಂಟುಂಬಗಳಿಗೆ ಲಕ್ಷ ಲಕ್ಷ ರೂ. ಪರಿಹಾರ ತಲುಪಿಸಿರುವ ರಾಜ್ಯ ಸರ್ಕಾರ ಶಾಶ್ವತ ಪರಿಹಾರಕ್ಕಾಗಿ ಎದುರು ನೋಡುತ್ತಿರುವ…

13 mins ago

ಯುಜಿಡಿ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ

ಕೆ.ಬಿ.ರಮೇಶ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಹಲವು ಯೋಜನೆಗಳನ್ನು ಪ್ರಸ್ತಾಪಿಸಿದ ಡಿಸಿ ಮೈಸೂರು: ಬೆಂಗಳೂರು ಬಳಿಕ ವೇಗವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ…

20 mins ago

ಉಪಸಭಾಪತಿಗೆ ಚಿತ್ರಹಿಂಸೆ ಆರೋಪ : ಐಪಿಎಸ್‌ ಅಧಿಕಾರಿ ಬಂಧನ

ಅಮರಾವತಿ : ಹಿಂದಿನ ವೈಎಸ್‍ಆರ್‍ಸಿಪಿ ಆಡಳಿತದ ಅವಧಿಯಲ್ಲಿ ಆಂಧ್ರ ವಿಧಾನಸಭೆಯ ಪ್ರಸ್ತುತ ಉಪಸಭಾಪತಿ ಕೆ. ರಘುರಾಮ ಕೃಷ್ಣ ರಾಜು ಅವರ…

9 hours ago

ಮಾರ್ಚ್‌ 11ರಿಂದ ವೈದ್ಯಾಧಿಕಾರಿಗಳ ಮುಷ್ಕರ : ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11ರಿಂದ…

9 hours ago

ಟ್ರಂಪ್‌ ಜಾಗತಿಕ ಸುಂಕ ರದ್ದು : ವರದಿ

ವಾಷಿಂಗ್ಟನ್ : ಕಾನೂನುಬಾಹಿರವಾಗಿ ಟ್ರಂಪ್ ವಿಧಿಸಿದ್ದ ಆಮದು ಸುಂಕ ಸಂಗ್ರಹವನ್ನ ಅಮೆರಿಕ ನಿಲ್ಲಿಸಲಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ…

10 hours ago