ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ ಚಿಂತನೆ ಹಿನ್ನೆಲೆ ವಿದ್ಯಾರ್ಥಿಗಳ ಮನದ ಮಾತು ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧಕ್ಕೆ ಸರ್ಕಾರ ಚಿಂತನೆ ನಡೆಸಿದ್ದು, ೧೬ ವರ್ಷದೊಳಗಿನ ಮಕ್ಕಳು ಮೊಬೈಲ್ ಬಳಸುವುದಕ್ಕೂ ನಿರ್ಬಂಧ ವಿಧಿಸಲು ಕೂಡ ಚಿಂತನೆ ನಡೆದಿದೆ. ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳಿಂದ ವಿದ್ಯಾರ್ಥಿಗಳು ಹಾಳಾಗುತ್ತಿರುವ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಮೊಬೈಲ್ ಬಳಕೆ ನಿಷೇಧಕ್ಕೆ ಯೋಚಿಸಲಾಗುತ್ತಿದೆ ಎನ್ನಲಾಗಿದೆ. ಸರ್ಕಾರದ ಈ ಚಿಂತನೆಯ ಬಗ್ಗೆ ಶಾಲಾ ವಿದ್ಯಾರ್ಥಿಗಳ ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.
ಸಂಪೂರ್ಣ ಬ್ಯಾನ್ ಬೇಡ:
ಮೊಬೈಲ್ ಬಳಕೆಯಿಂದ ಅವಿದ್ಯಾವಂತ ವ್ಯಕ್ತಿಯೂ ಎಬಿಸಿಡಿ ಕಲಿಯಬಹುದು, ಜ್ಞಾನ ಪಡೆದುಕೊಳ್ಳಬಹುದು, ಮೊಬೈಲ್ ಅನ್ನು ವಿದ್ಯಾರ್ಥಿಗಳು ಹೇಗೆ ಬಳಸಿಕೊಳ್ಳುತ್ತಾರೋ, ಅದರ ಮೇಲೆ ಅದರ ಸಾಧಕ-ಬಾಧಕಗಳು ನಿರ್ಧಾರವಾಗುತ್ತವೆ. ವಿಡಿಯೋ ನೋಡುವಾಗ ಬರುವ ಜಾಹೀರಾತುಗಳಿಗೆ ಆಕರ್ಷಣೆಗೊಂಡು ಅಮಲು ರೋಗಿಗಳಂತೆ ವ್ಯಸನಕ್ಕೆ ಒಳಗಾಗುತ್ತಾರೆ. ಅಂತಹವರನ್ನು ಯಾವುದೇ ಚಿಕಿತ್ಸೆಯಿಂದಲೂ ಹೊರ ತರಲು ಸಾಧ್ಯವಿಲ್ಲ. ಸರ್ಕಾರ ಮೊಬೈಲ್ ಸಂಪೂರ್ಣ ಬ್ಯಾನ್ ಮಾಡುವ ಬದಲು ಕೆಲವು ಮಾಪಾರ್ಟುಗಳನ್ನು ತರಲಿ.
-ವೈ.ಎಂ.ಭರತ್, ೮ನೇ ತರಗತಿ ವಿದ್ಯಾರ್ಥಿ, ಕುಕ್ಕರಹಳ್ಳಿ ಪ್ರೌಢಶಾಲೆ, ಮೈಸೂರು
ಅಪಾಯಕಾರಿ ಆಪ್ ನಿಷೇಧ ಮಾಡಿದರೆ ಸಾಕು:
ಸರ್ಕಾರ ಮೊಬೈಲ್ ಬ್ಯಾನ್ ಮಾಡಬಾರದು ಬದಲಾಗಿ ವಿದ್ಯಾರ್ಥಿಗಳಿಗೆ ಅಪಾಯ ಉಂಟುಮಾಡುವ ಆಪ್ಗಳನ್ನು ನಿಷೇಧ ಮಾಡಲಿ, ಹಳ್ಳಿಗಳಿಂದ ಬಸ್ ಮೂಲಕ ಬರುವ ವಿದ್ಯಾರ್ಥಿಗಳಿಗೆ ಶಾಲೆಯಿಂದ ಮನೆಗೆ ಬರುವುದು ತಡವಾದರೆ ಪೋಷಕರು ಆತಂಕಪಟ್ಟುಕೊಳ್ಳುತ್ತಾರೆ. ಮೊಬೈಲ್ ಇದ್ದರೆ ಪೋಷಕರಿಗೆ ತಡವಾಗಿ ಬರುತ್ತಿದ್ದೇನೆ ಎಂದು ಇರುವ ಸಮಸ್ಯೆ ಹೇಳಿದರೆ ಅವರು ಸಮಾಧಾನವಾಗಿರಬಹುದು. ಇನ್‌ಸ್ಟಾಗ್ರಾಮ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಂದ ವಿದ್ಯಾರ್ಥಿಗಳು ಅನೇಕ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಗೂಗಲ್, ಚಾಟ್ ಜಿಪಿಟಿ, ವಾಟ್ಸಾಪ್ ಇದ್ದರೆ ಏನೂ ಸಮಸ್ಯೆಯಾಗುವುದಿಲ್ಲ.
-ಭಾಗ್ಯಲಕ್ಷ್ಮೀ, ೮ನೇ ತರಗತಿ ಕುಕ್ಕರಹಳ್ಳಿ ಸರ್ಕಾರಿ ಪ್ರೌಢ ಶಾಲೆ, ಮೈಸೂರು
ಮೊಬೈಲ್‌ನಿಂದ ಉಪಯುಕ್ತತೆ ಇದೆ:
ಮೊಬೈಲ್ ಬ್ಯಾನ್ ಮಾಡದಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಬ್ಯಾನ್ ಮಾಡುವ ನಿರ್ಧಾರ ಒಳ್ಳೆಯದಲ್ಲ. ಗ್ರಾಮೀಣ ಭಾಗದಿಂದ ಬರುವ ನಮಗೆ ಮೊಬೈಲ್‌ನಿಂದ ಹೆಚ್ಚು ಉಪಯುಕ್ತತೆ ಇದೆ. ಹೋಂ ವರ್ಕ್ ಹಾಗೂ ಗೊತ್ತಿಲ್ಲದ ವಿಷಯಗಳ ಬಗ್ಗೆ ಮೊಬೈಲ್ ಮೂಲಕ ತಿಳಿದುಕೊಳ್ಳಬಹುದು. ವಿದ್ಯಾರ್ಥಿಗಳು ಸಹ ರೀಲ್ಸ್ ಹಾಗೂ ಫೇಸ್‌ಬುಕ್‌ಗಳನ್ನು ಬಳಕೆ ಮಾಡಬಾರದು, ಮನೆಯವರ ಜೊತೆಗೂಡಿ ನಿಗದಿತ ಸಮಯವಷ್ಟೇ ಮೊಬೈಲ್ ಬಳಕೆ ಮಾಡಬೇಕು.
-ಸಿ.ಮೋಹನ್ , ೮ನೇ ತರಗತಿ ಸರ್ಕಾರಿ ಪ್ರೌಢ ಶಾಲೆ , ಕುಕ್ಕರಹಳ್ಳಿ, ಮೈಸೂರು
ಪೋಷಕರ ಮೇಲ್ವಿಚಾರಣೆ ಇರಲಿ: ನಾನು ಕೂಡ ಮೊಬೈಲ್ ಬಳಸುತ್ತೇನೆ, ನಿರ್ದಿಷ್ಟ ಸಮಯದಲ್ಲಿ ಮಾತ್ರ ಬಳಸಿದರೆ ಒಳ್ಳೆಯದು, ಜೆಮಿಬಿ ಆಪ್ ಮೂಲಕ ರಸ ಪ್ರಶ್ನೆಗಳಿಗೆ ತಯಾರಾಗುತ್ತೇನೆ. ಹಾಗೆಯೇ ಪರೀಕ್ಷೆಗೆ ತಯಾರಾಗಲು ಆಪ್‌ನಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದುಕೊಳ್ಳುತ್ತೇನೆ. ಸ್ಪರ್ಧಾತ್ಮಕ ವಿಷಯಗಳನ್ನು ತಿಳಿದುಕೊಳ್ಳಲು ಮೊಬೈಲ್ ಉಪಕಾರಿಯಾಗಿದೆ. ಸರ್ಕಾರ ಬ್ಯಾನ್ ಮಾಡುವ ಅವಶ್ಯಕತೆ ಇಲ್ಲ, ಪೋಷಕರ ಮೇಲ್ವಿಚಾರಣೆಯಲ್ಲಿ ಮಕ್ಕಳು ಮೊಬೈಲ್ ಬಳಸುವಂತಾಗಲಿ.
– ವೈ.ಎನ್.ಆದ್ಯಂತ್, ೮ನೇ ತರಗತಿ, ಸದ್ವಿದ್ಯಾ ಪ್ರೌಢಶಾಲೆ, ಮೈಸೂರು
ಕೆಲವು ಬದಲಾಣೆ ತರುವುದು ಸೂಕ್ತ:
ಮೊಬೈಲ್ ಬಳಕೆಯಲ್ಲಿ ಕೆಟ್ಟದ್ದು ಒಳ್ಳೆಯದ್ದು ಎರಡೂ ಇದೆ. ಈಗಾಗಲೇ ಸರ್ಕಾರಗಳು ೧೮ ವರ್ಷ ಒಳಪಟ್ಟವರು ಕೆಲವು ವಿಡಿಯೋ ಅಥವಾ ವೆಬ್‌ಸೈಟ್ ಗಳನ್ನು ನೋಡಬಾರದು ಎಂದು ನಿರ್ಬಂಧ ಮಾಡಿದೆ. ಆದರೂ ಕೆಲವರು ಫೇಕ್ ಐಡಿ ಮೂಲಕ ಬಳಕೆ ಮಾಡುತ್ತಾರೆ. ವಿದ್ಯಾರ್ಥಿಗಳು ಯೂಟ್ಯೂಬ್ ಬಳಕೆಯಿಂದ ಸಮಯ ವ್ಯರ್ಥ ಮಾಡಿಕೊಳ್ಳುತ್ತಾರೆ. ನಮಗೆ ಇದು ಅಮೂಲ್ಯ ವಾದ ಸಮಯ. ಅದನ್ನು ಮೊಬೈಲ್ ಬಳಕೆಗೆ ಸೀಮಿತಗೊಳಿಸಿಕೊಳ್ಳ ಬಾರದು. ಸಂಪೂರ್ಣ ಬದಲಾವಣೆ ಮಾಡುವ ಬದಲು ಕೆಲವು ಬದಲಾಣೆ ತರುವುದು ಸೂಕ್ತ.
-ಅಭಿನವ್ , ೮ನೇ ತರಗತಿ, ಸದ್ವಿದ್ಯಾ ಪ್ರೌಢಶಾಲೆ, ಮೈಸೂರು
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…
ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…
ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…
ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…