ವಾಷಿಂಗ್ಟನ್ : ಕಾನೂನುಬಾಹಿರವಾಗಿ ಟ್ರಂಪ್ ವಿಧಿಸಿದ್ದ ಆಮದು ಸುಂಕ ಸಂಗ್ರಹವನ್ನ ಅಮೆರಿಕ ನಿಲ್ಲಿಸಲಿದೆ ಎಂದು ಯುಎಸ್ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ ಸಚಿವಾಲಯ ತಿಳಿಸಿರುವುದಾಗಿ ವರದಿಯಾಗಿದೆ.
1977 ರ ಅಂತಾರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ ದುರುಪಯೋಗಪಡಿಸಿಕೊಂಡು ಟ್ರಂಪ್ ವಿಧಿಸಿದ್ದ ಆಮದು ಸುಂಕ ಸಂಗ್ರಹ ಮಂಗಳವಾರ ಬೆಳಗ್ಗೆ 10:30 ರಿಂದ (ಅಮೆರಿಕ ಕಾಲಮಾನ ಬೆಳಗ್ಗೆ 12.01 ರಿಂದ) ಸ್ಥಗಿತಗೊಳ್ಳಲಿವೆ ಎಂದು ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಯುಎಸ್ ಸುಪ್ರೀಂ ಕೋರ್ಟ್ ಟ್ರಂಪ್ ಜಾಗತೀಕ ಸುಂಕ ರದ್ದುಗೊಳಿಸಿ ತೀರ್ಪುಪ್ರಕಟಿಸಿದ 3 ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಸದ್ಯಕ್ಕೆ ಸುಂಕ ಸಂಗ್ರಹ ನಿಲ್ಲಿಸಲಾಗುತ್ತಿದೆ ಎಂದಷ್ಟೇ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಧ್ಯಂತರದಲ್ಲಿ ಮತ್ತೆ ಸುಂಕ ಸಂಗ್ರಹ ಮುಂದುವರಿಸುವುದಕ್ಕಾಗಲಿ ಅಥವಾ ಸಂಗ್ರಹಿಸಿರುವ ಸುಂಕ ಆಮದುದಾರರಿಗೆ ಮರುಪಾವತಿ ಮಾಡುವ ಬಗ್ಗೆಯಾಗಲಿ ವಿವರಣೆ ನೀಡಿಲ್ಲ.
ಅಲ್ಲದೇ ಕೋರ್ಟ್ ತೀರ್ಪು ಐಇಇಪಿಎ ಅಡಿಯಲ್ಲಿ ವಿಧಿಸಲಾದ ಸುಂಕಗಳಿಗೆ ಮಾತ್ರ ಅನ್ವಯಿಸುತ್ತದೆ. ಸೆಕ್ಷನ್ 232 ರಾಷ್ಟ್ರೀಯ-ಭದ್ರತಾ ಅಧಿಕಾರಗಳು ಮತ್ತು ಸೆಕ್ಷನ್ 301 ಅನ್ಯಾಯದ-ವ್ಯಾಪಾರ ಕಾನೂನುಗಳ ಅಡಿಯಲ್ಲಿ ವಿಧಿಸಿದ ಸುಂಕಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದೆ. ಹೀಗಾಗಿ ಯುಎಸ್ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಸೆಕ್ಷನ್ 232 ಹಾಗೂ ಸೆಕ್ಷನ್ 301 ಅಡಿಯಲ್ಲಿ ಟ್ರಂಪ್ ವಿಧಿಸಿರುವ ಹೆಚ್ಚುವರಿ 15% ಸುಂಕವು ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆ.
ಇನ್ನೂ ಅಮೆರಿಕದ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಅಮೆರಿಕಕ್ಕೆ ಸುಮಾರು 175 ಶತಕೋಟಿ ಡಾಲರ್‍ನಷ್ಟು ಆದಾಯ ಲಾಸ್ ಆಗುವ ಆತಂಕ ಎದುರಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಅಮೆರಿಕ ಮರುಪಾವತಿ ಮಾಡುವ ಅಪಾಯಕ್ಕೆ ಸಿಲುಕಬಹುದು. ಏಕೆಂದ್ರೆ ಕೋರ್ಟ್ ರದ್ದುಗೊಳಿಸಿರುವ ಸುಂಕಗಳು ಪ್ರತಿದಿನ 500 ದಶಲಕ್ಷ ಡಾಲರ್‍ಗಿಂತಲೂ ಹೆಚ್ಚು ಆದಾಯ ತರುತ್ತಿದ್ದವು ಎಂದು ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ.
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…