ಆಂದೋಲನ ಪುರವಣಿ

ಸಿನಿಮಾಲ್: ಈ ವಾರ ತೆರೆ ಕಾಣಲಿರುವ ಚಿತ್ರಗಳು

ರಾಜಕುಮಾರ್ ಮೊಮ್ಮಗ, ಪೂರ್ಣಿಮಾ -ರಾಮಕುಮಾರ್ ಮಗ ಧೀರೇನ್ ರಾಮಕುಮಾರ್ ಅಭಿನಯದ ಚೊಚ್ಚಲ ಚಿತ್ರ ಶಿವ ೧೪೩’, ತೆರೆಗೆ ಬರುವ ಮೊದಲೇ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ, ರಾಷ್ಟ್ರೀಯ ಪ್ರಶಸ್ತಿ ಪಡೆದ ?ಡೊಳ್ಳು’, ಚಾಣಾಕ್ಷ ಎಂಜಿನಿಯರ್ ಒಬ್ಬನ ಕಥಾನಕ ಎನ್ನಲಾದ ?ಕೌಟಿಲ್ಯ’ ಮತ್ತು ಡಿಜಿಟಲ್ ಲೋಕದಲ್ಲಿ ಚಿರಪರಿಚಿತ ಶಬ್ದವೇ ಶೀರ್ಷಿಕೆಯಾದ ?ವಿಕಿಪೀಡಿಯ’ ಈ ವಾರ ತೆರೆಗೆ ಬರುತ್ತಿರುವ ನಾಲ್ಕು ಚಿತ್ರಗಳು. 

‘ಶಿವ ೧೪೩’

ರಾಜ್‌ಕುಮಾರ್ ಅವರ ಮೊಮ್ಮಗ, ರಾಮ್‌ಕುಮಾರ್ ಮಗ ಧೀರನ್ ರಾಮ್‌ಕುಮಾರ್ ನಾಯಕನಾಗಿ ಎಂಟ್ರಿ ಕೊಡುತ್ತಿರುವ ಚಿತ್ರ ‘ಶಿವ ೧೪೩’. ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಜಯಣ್ಣ ಫಿಲಂಸ್ ಬಂಡವಾಳ ಹೂಡಿದೆ. ಮಾನ್ವಿತಾ ಕಾಮತ್ ನಾಯಕಿಯಾಗಿರುವ ಚಿತ್ರದಲ್ಲಿ ಚಿಕ್ಕಣ್ಣ, ಪುನೀತ್ ರುದ್ರನಾಗ್, ಸಾಧುಕೋಕಿಲ ಇದ್ದಾರೆ. ಅರ್ಜುನ್ ಜನ್ಯ ಸಂಗೀತ, ಶಿವ ಬಿ.ಕೆ.ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.


‘ಡೊಳ್ಳು’

ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಮೆಚ್ಚುಗೆ ಗಳಿಸಿರುವ ಚಿತ್ರ ‘ಡೊಳ್ಳು’. ಒಡೆಯರ್ ಮೂವೀಸ್ ಬ್ಯಾನರ್‌ನಡಿ ಅಪೇಕ್ಷಾ, ಪವನ್ ಒಡೆಯರ್ ದಂಪತಿ ನಿರ್ಮಿಸಿರುವ ಚಿತ್ರವಿದು. ಸಾಗರ್ ಪುರಾಣಿಕ್ ನಿರ್ದೇಶನ, ಶ್ರೀನಿಧಿ ಡಿ.ಎಸ್. ಚಿತ್ರಕಥೆ, ಅನಂತ ಕಾಮತ್ ಎಂ. ಸಂಗೀತ ಸಂೋಂಜನೆ ಚಿತ್ರಕ್ಕಿದೆ. ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ, ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಸೇರಿ ಹಲವರ ತಾರಾ ಬಳಗವಿದೆ.


‘ಕೌಟಿಲ್ಯ’

ಪ್ರಭಾಕರ್ ಶೇರಖಾನೆ ನಿರ್ದೇಶನದ ಚಿತ್ರ ‘ಕೌಟಿಲ್ಯ’. ಇದಕ್ಕೆ ಬಂಡವಾಳ ಹೂಡಿರುವುದು ಬಿ.ಎ. ವಿಜೇಂದ್ರ ಮತ್ತು ಸುರೇಖಾ. ‘ಬಿಗ್ ಬಾಸ್’ ನಲ್ಲಿ ಪಾಲ್ಗೊಂಡ ಅರ್ಜುನ್ ರಮೇಶ್ ನಾಯಕರಾಗಿದ್ದು, ಪ್ರಿಯಾಂಕ ಚಿಂಚೊಳಿ ನಾಯಕಿ. ಮಡೆನೂರು ಮನು, ಲಕ್ಷ್ಮೀಶ್ ಭಟ್, ಸುಶ್ಮಿತಾ ಸೋನು, ಹರಿಣಿ ಶ್ರೀಕಾಂತ್, ಜೊತೆಗಿದ್ದಾರೆ. ಕಿರಣ್ ಕೃಷ್ಣಮೂರ್ತಿ ಸಂಗೀತ ಸಂೋಂಜನೆ, ನೌಶಾದ್ ಆಲಂ ಛಾಯಾಗ್ರಹಣ ಚಿತ್ರಕ್ಕಿದೆ.


‘ವಿಕಿಪೀಡಿಯ’

ರಫ್ ಕಟ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ‘ವಿಕಿಪೀಡಿಯ’ ಚಿತ್ರ ತಯಾರಾಗಿದ್ದು, ಸೋಮು ಹೊಯ್ಸಳ ಚಿತ್ರದ ನಿರ್ದೇಶಕರು. ಯಶವಂತ್, ಆಶಿಕಾ ಸೋಮಶೇಖರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ರಕ್ಷಿತಾ, ರಾಧಾ ರಾಮಚಂದ್ರ, ಮೈಸೂರು ಶ್ರೀಹರಿ, ಮಂಜುನಾಥ ಹೆಗ್ಡೆ ಜತೆಗಿದ್ದಾರೆ. ರಾಕೇಶ್ ಮತ್ತು ನೀಲಿಮ ಸಂಗೀತ ಸಂೋಂಜನೆ, ಚಿದಾನಂದ್ ಎಚ್.ಕೆ. ಛಾಯಾಗ್ರಹಣ ಇದೆ.

andolana

Recent Posts

ಅಯ್ಯಪ್ಪಸ್ವಾಮಿ ಭಕ್ತರಿಗೆ ಮುಖ್ಯ ಮಾಹಿತಿ: ಡಿಸೆಂಬರ್.‌27ರಂದು ಶಬರಿಮಲೆಯಲ್ಲಿ ಮಂಡಲ ಪೂಜೆ

ಕೇರಳ: ಶ್ರೀಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಡಿಸೆಂಬರ್.‌27ರಂದು ಅಯ್ಯಪ್ಪ ಸ್ವಾಮಿಗೆ ಮಂಡಲ ಪೂಜೆ ನೆರವೇರಿಸಲಾಗುವುದು. ಅಂದು ಬೆಳಿಗ್ಗೆ 10.10ರಿಂದ 11.30ರವರೆಗಿನ…

14 mins ago

ಕಿಚ್ಚ ಸುದೀಪ್‌ ಯುದ್ಧದ ಮಾತಿಗೆ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಟಾಂಗ್‌

ನಟ ಕಿಚ್ಚ ಸುದೀಪ್‌ ಅಭಿನಯದ ಮಾರ್ಕ್ ಡಿಸೆಂಬರ್.‌25ರಂದು ಬಿಡುಗಡೆಯಾಗಲಿದೆ. ಹುಬ್ಬಳ್ಳಿಯಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ ಕಾರ್ಯಕ್ರಮದಲ್ಲಿ ಸುದೀಪ್‌…

1 hour ago

ಸಮ ಸಮಾಜಕ್ಕಾಗಿ ಬಡಿದಾಡಿದ ಸಮಾಜವಾದಿಯ ಕತೆ

ಉಳ್ಳವರ ಕೈಯಿಂದ ಉಳುವವನ ಕೈಗೆ ಭೂಮಿ ಕೊಡಿಸಲು ನಡೆಸಿದ ಹೋರಾಟ ಸಣ್ಣದೇ? ಬಾನಂದೂರು ರಂಗಪ್ಪ ತಣ್ಣಗೆ ಕಿಟಕಿಯಾಚೆ ನೋಡಿದರು. ಮನೆಯೊಳಗೆ…

1 hour ago

ದ್ವೇಷ ಕಾರುವವರಿಗೆ ಬೀಳಲಿದೆಯೇ ಕಡಿವಾಣ?

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಕರ್ನಾಟಕ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಪ್ರಬಲ ವಿರೋಧದ ನಡುವೆಯೂ ಕಾಂಗ್ರೆಸ್ ಸರ್ಕಾರ, ಕರ್ನಾಟಕ…

2 hours ago

ವಿ.ಬಾಡಗದಲ್ಲಿ ಕೌಟುಂಬಿಕ ಹಾಕಿ ಪಂದ್ಯಕ್ಕೆ ಚಾಲನೆ

ಕೊಡಗಿನ ಖ್ಯಾತಿ ಹೆಚ್ಚಿಸುವಲ್ಲಿ ಕ್ರೀಡಾಪಟುಗಳ ಕೊಡುಗೆ ಅಪಾರ: ಸುಜಾ ಕುಶಾಲಪ್ಪ ಪೊನ್ನಂಪೇಟೆ: ಕೊಡಗು ಜಿಲ್ಲೆ ರಾಷ್ಟ್ರಮಟ್ಟದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಎಲ್ಲ…

4 hours ago

ಮದ್ಯಪಾನಿಗಳ ತಾಣವಾದ ಶಾಲಾ ಕಟ್ಟಡ

ಮುಚ್ಚಲ್ಪಟ್ಟಿರುವ ಶಾಲೆಯ ಕೊಠಡಿಯಲ್ಲಿ ರಾರಾಜಿಸುತ್ತಿರುವ ಮದ್ಯದ ಬಾಟಲಿಗಳು; ನಾಗರಿಕರ ಆಕ್ರೋಶ ಹನೂರು: ನಿಗದಿತ ಸಂಖ್ಯೆಯ ಮಕ್ಕಳಿಲ್ಲ ಎಂಬ ಕಾರಣಕ್ಕೆ ಮುಚ್ಚಲ್ಪಟ್ಟಿರುವ…

5 hours ago