‘ನಾನು ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಆಗಿನಿಂದಲೂ ನಾಯಕನಾಗುವ ಆಸೆ. ಆದರೆ ಆಗಿರಲಿಲ್ಲ. ಕೆಲವು ವರ್ಷ ಬೇರೆ ವ್ಯಾಪಾರ ಮಾಡುತ್ತಿದ್ದೆ. ಈಗ ‘ಹೊಟ್ಟೆಪಾಡು’ ಚಿತ್ರ ನಿರ್ಮಾಣ ಮಾಡಿದ್ದೇವೆ. ನನ್ನ ಪತ್ನಿ ರಾಧ ಈ ಚಿತ್ರದ ನಿರ್ಮಾಪಕಿ. ನಾನೇ ಸಂಗೀತ ನಿರ್ದೇಶನ ಹಾಗೂ ನಿರ್ದೇಶನ ಮಾಡಿದ್ದೇನೆ. ‘ಹೊಟ್ಟೆಪಾಡು’ ವಿಭಿನ್ನ ಕಥೆ ಹೊಂದಿರುವ ಸಾಹಸಮಯ ಹಾಗೂ ಸಾಂಸಾರಿಕಚಿತ್ರ. ಸದ್ಯದಲ್ಲೇ ಚಿತ್ರಬಿಡುಗಡೆಯಾಗುತ್ತಿದೆ. – ಇದು ಮೊನ್ನೆ ಸಿರಿ ಮ್ಯೂಸಿಕ್ ಮೂಲಕ ಆಡಿಯೋ ಬಿಡುಗಡೆಯಾದ ‘ಹೊಟ್ಟೆಪಾಡು’ಚಿತ್ರದ ಸಂಗೀತ ಸಂಯೋಜಕ, ನಿರ್ದೇಶಕ, ಮುಖ್ಯ ಪಾತ್ರಧಾರಿ ವಸಂತ್ ಅವರ ಮಾತುಗಳು. ವಂದನ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಚಿತ್ರ ತಯಾರಾಗಿದೆ. ಹಿರಿಯ ನಿರ್ದೇಶಕರಾದ ಓಂ ಸಾಯಿಪ್ರಕಾಶ್, ಬಾಲಾಜಿಸಿಂಗ್, ಅಡಕಮಾರನಹಳ್ಳಿ ರಾಜಕಾರಣಿಗಳಾದ ರಾಜಣ್ಣ ಹಾಗೂ ಸಿರಿ ಮ್ಯೂಸಿಕ್ ಸುರೇಶ್‌ಚಿಕ್ಕಣ್ಣ ಈ ಹಾಡುಗಳ ಬಿಡುಗಡೆಗೆ ಅತಿಥಿಗಳಾಗಿದ್ದರು. ತನ್ಮಯ ಎಸ್ ಆನಂದಕುಮಾರ್ ಚಿತ್ರಕಥೆ, ಸಂಭಾಷಣೆ, ನೃತ್ಯ ಹಾಗೂ ಸಹಕಾರ ನಿರ್ದೇಶನ ಇರುವ ಈ ಚಿತ್ರಕ್ಕೆ ರವಿ ಬೆಳಗುಂದಿ ಛಾಯಾಗ್ರಹಣ ಹಾಗೂ ಅಮಿತ್ ಜವಳಪುರ ಸಂಕಲನವಿದೆ. ವಸಂತ್ ಅವರೊಂದಿಗೆ, ಜಾಹ್ನವಿ ವಿಶ್ವನಾಥ್, ವಿನಯ ಪ್ರಸಾದ್, ಶೋಭರಾಜ್, ಅಪೂರ್ವ, ಶೈಲೇಶ್ ತಾರಾಬಳಗದಲ್ಲಿದ್ದಾರೆ
ಟಾಂಗಾ ಸವಾರಿ ವಲಯ ನಿರ್ಮಾಣಕ್ಕೆ ೨.೭೧ ಕೋಟಿ ರೂ. ಮಂಜೂರು ಕೇಂದ್ರದ ಸ್ವದೇಶ ದರ್ಶನ ಯೋಜನೆಯಡಿ ಗ್ರೀನ್ ಟೂರ್‌ಗೆ ಆದ್ಯತೆ …
ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಆಯೋಜನೆ: ಡಾ.ಅನಂತರಾವ್ ಮಂಡ್ಯ: ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ…
ಕೋಟಿಗಾನಹಳ್ಳಿ ರಾಮಯ್ಯ ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ…
ಸ್ಟ್ಯಾನ್ಲಿ ‘ನನ್ನಮ್ಮ ರೋಸ್ಮಂಡ್ ವಾನಿಂಗನ್ ಆಂಗ್ಲ ಮಹಿಳೆಯಾಗಿದ್ದರೂ, ಅವಳು ನಂಜನಗೂಡಿನ ನಂಜಿಯಾಗಿದ್ದಳು. ಬಿಸಿಲ್ ಮಂಟಿ ಗ್ರಾಮಸ್ಥರು ಆಕೆಗೆ ಇಟ್ಟಿದ್ದ ಹೆಸರಾಗಿತ್ತದು.…
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…