Andolana originals

ಇರಾನಿನ ಗಿಣಿ ಮತ್ತು ಹಿಂದೂಸ್ಥಾನದ ಗಿಣಿ

 ಶೇಷಾದ್ರಿ ಗಂಜೂರು

ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ದೇಶಗಳು ಮುಂದುವರಿಸಿರುವ ಯುದ್ಧ ಸದ್ಯಕ್ಕೆ ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ಏತನ್ಮಧ್ಯೆ ಪರ್ಷಿಯನ್ ಸಾಹಿತ್ಯದಲ್ಲಿ ಭಾರತದ ಹೊಳಹುಗಳು ಹಾಗೂ ಕಳೆದ ಶನಿವಾರ ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಯಿಂದ ಹತ್ಯೆಗೀಡಾದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಭಾರತದ ಬೇರುಗಳು ಕುರಿತು ಮಾಧ್ಯಮ ತಜ್ಞ ಶೇಷಾದ್ರಿ ಗಂಜೂರು ಅವರ ವ್ಯಾಖ್ಯಾನದ ಪುಟ್ಟ ಬರಹ ರೂಪ ಇಲ್ಲಿದೆ.

ಪ್ರಾಚೀನ ಇರಾನಿನ ಕವಿ-ಕಾವ್ಯಗಳ ಪ್ರಕಾರ ಭಾರತ ಎಂದರೆ ಬರೀ ಭೌತಿಕ ಸಂಪತ್ತಿನ ದೇಶವಾಗಿರಲಿಲ್ಲ. ಅದು ಜ್ಞಾನ ಮತ್ತು ಅಧ್ಯಾತ್ಮಗಳ ಪುಣ್ಯಭೂಮಿಯೂ ಆಗಿತ್ತು. ಇದನ್ನು ನಾವು ಪರ್ಷಿಯನ್ ಕಾವ್ಯ-ಕಥನಗಳಲ್ಲಿ ಮತ್ತೆ ಮತ್ತೆ ಕಾಣಬಹುದು. ಉದಾಹರಣೆಗೆ ೧೩ನೇ ಶತಮಾನದ ಮಹಾಕವಿ ಮೌಲಾನ ರೂಮಿಯ ಅವರ ಭಾರತೀಯ ಗಿಣಿಯ ಕಥೆ.

ಒಬ್ಬ ಸಿರಿವಂತ ಪರ್ಷಿಯನ್ ವರ್ತಕ ವ್ಯಾಪಾರಕ್ಕಾಗಿ ಭಾರತಕ್ಕೆ ಹೊರಡುತ್ತಾನೆ. ಹೋಗುವ ಮುನ್ನ ಪಂಜರದಲ್ಲಿಟ್ಟಿದ್ದ ತನ್ನ ಮುದ್ದುಗಿಣಿಯನ್ನು ಕೇಳುತ್ತಾನೆ. ‘ನಾನು ನಿನ್ನ ತಾಯ್ನಾಡಾದ ಭಾರತಕ್ಕೆ ಹೋಗುತ್ತಿದ್ದೇನೆ, ಅಲ್ಲಿಂದ ನಿನಗೇನು ತರಬೇಕು?’ ಆಗ ಆ ಗಿಣಿ ಹೇಳುತ್ತದೆ. ‘ನನಗೇನು ತರಬೇಡ. ಅಲ್ಲಿನ ಕಾಡುಗಳಲ್ಲಿ ಗಿಣಿಗಳು ಕಂಡರೆ, ನನ್ನದೊಂದು ಮಾತನ್ನು ಅವುಗಳಿಗೆ ಹೇಳು. ನಾನು ಇಲ್ಲಿ ಬಂಗಾರದ ಪಂಜರದಲ್ಲಿದ್ದೀನಿ, ನೀವು ಹೇಗಿದ್ದೀರಿ? ಅಂತ’. ಆ ವರ್ತಕ ಭಾರತಕ್ಕೆ ಬರುತ್ತಾನೆ. ಅಲ್ಲಿ ಮರದ ಮೇಲೆ ಗಿಣಿಯೊಂದು ಕಂಡಾಗ ಅದಕ್ಕೆ, ತನ್ನ ಗಿಣಿ ಹೇಳಿದ ಮಾತುಗಳನ್ನು ಹೇಳುತ್ತಾನೆ. ಆ ಗಿಣಿ ತಕ್ಷಣ ಮರದಿಂದ ಕೆಳಗೆ ಬಿದ್ದು ಪ್ರಾಣ ಬಿಡುತ್ತದೆ. ವರ್ತಕನಿಗೆ ದುಃಖದ ಜೊತೆಗೆ ಆಶ್ಚರ್ಯವೂ ಆಗುತ್ತದೆ. ಅರೆ! ಭಾರತದ ಗಿಣಿಗಳು ಇಷ್ಟೊಂದು ಮೃದು ಸ್ವಭಾವದವ ಅಂತ.

ವ್ಯಾಪಾರ ಮುಗಿಸಿ ವಾಪಸ್ ಬಂದು ವರ್ತಕ, ತನ್ನ ಗಿಣಿಗೆ ಈ ಕಹಿ ಸುದ್ದಿಯನ್ನು ಹೇಳುತ್ತಾನೆ. ಈ ಮಾತು ಕೇಳಿದ ತಕ್ಷಣ ಪಂಜರದಲ್ಲಿದ್ದ ಗಿಣಿ, ತಾನು ಕೂಡ ಸತ್ತು ಕೆಳಗೆ ಬೀಳುತ್ತದೆ. ವರ್ತಕ ದುಃಖದಿಂದ ಪಂಜರದ ಬಾಗಿಲನ್ನು ತೆರೆದು ಗಿಣಿಯನ್ನು ಹೊರಗಿಟ್ಟಾಗ ಆ ಗಿಣಿ ರೆಕ್ಕೆ ಬಿಚ್ಚಿ ಹಾರಿ ಮರದ ಮೇಲೆ ಕೂತು ಹೇಳುತ್ತದೆ, ‘ನನ್ನ ಭಾರತದ ಗೆಳೆಯ ಸತ್ತಿರಲಿಲ್ಲ. ಅವನು ನನಗೆ ಸಂದೇಶ ಕಳುಹಿಸಿದ್ದ, ಈ ಪಂಜರದಿಂದ ತಪ್ಪಿಸಿಕೊಳ್ಳಬೇಕು ಎಂದರೆ ನಿನ್ನ ಅಹಂಕಾರವನ್ನು ಮೊದಲು ಸಾಯಿಸು ಅಂತ’. ರೂಮಿ ಹೇಳುವ ಈ ಕಥೆ ಕೇವಲ ಒಂದು ಉದಾಹರಣೆ ಮಾತ್ರ. ಪರ್ಷಿಯನ್ ಸಾಹಿತ್ಯದಲ್ಲಿ ಭಾರತವನ್ನು ಮುಕ್ತಿಜ್ಞಾನಗಳ ದೀಪವೆಂದು ಬಿಂಬಿಸುವ ಇನ್ನೆಷ್ಟೋ ಉಲ್ಲೇಖಗಳು ಇವೆ.

ಇರಾನ್ ಎಂದರೆ ಆಯಿಲ್, ಯುದ್ಧ, ಧರ್ಮಾಂಧತೆ ಮತ್ತು ಅಯತೊಲ್ಲಾ ಅಲಿ ಖಮೇನಿ ನಮಗೆ ನೆನಪಾಗುತ್ತಾರೆ. ಆದರೆ, ನಿಮಗೆ ಗೊತ್ತಾ? ಖಮೇನಿ ಕುಟುಂಬದ ಬೇರುಗಳು ಭಾರತದಲ್ಲಿವೆ. ಖಮೇನಿ ಅವರ ತಾತ ಸೈಯದ್ ಅಹಮ್ಮದ್ ಮುಸ್ಸಾವಿ ಅವರು ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ಕಿಂತೂರು ಗ್ರಾಮದವರು. ೧೮೩೦ರಲ್ಲಿ ಅವರು ಭಾರತವನ್ನು ಬಿಟ್ಟು ಮೊದಲ ಇರಾಕ್‌ನ ನಜಾಫ್‌ಗೆ ಹೋಗುತ್ತಾರೆ. ನಂತರ ಅಲ್ಲಿಂದ ಇರಾನಿನ ಖಮೇನ್ ನಗರಕ್ಕೆ ಹೋಗಿ ನೆಲೆಸುತ್ತಾರೆ.

ಅಲ್ಲಿ ನೆಲೆಸಿದ ಮೇಲೆ ಭಾರತೀಯ ಮೂಲದ ಕಾರಣದಿಂದ ಅವರ ಕುಟುಂಬದ ಹೆಸರಿನ ಜೊತೆಗೆ ಹಿಂದಿ ಅಥವಾ ಅಲ್ ಹಿಂದಿ ಎಂಬ ಉಪನಾಮ ಕೂಡ ಸೇರಿಕೊಳ್ಳುತ್ತದೆ. ಖಮೇನಿ ಅವರ ಸ್ವಂತ ಅಣ್ಣ ಅಯತೊಲ್ಲಾ ಸೈಯದ್ ಮೊರ್ತಾಜ ತಮ್ಮ ಹೆಸರಿನ ಹಿಂದೆ ಹಿಂದಿ ಎಂದೇ ಬರೆಯುತ್ತಿದ್ದರು. ಆದರೆ, ಅಯತೊಲ್ಲಾ ರೊಹಲ್ಲಾ ಮಾತ್ರ ಖಮೇನ್ ನಗರದ ಸೂಚಕವಾಗಿ ಖಮೇನಿ ಆಗುತ್ತಾರೆ. ಇನ್ನೊಂದು ಕುತೂಹಲದ ವಿಷಯ ಅಂದರೆ ಧಾರ್ಮಿಕ, ರಾಜಕೀಯ ನಾಯಕನಾಗಿದ್ದ ಖಮೇನಿ ಕವಿ ಕೂಡ ಆಗಿದ್ದರು. ಪರ್ಷಿಯನ್ ಭಾಷೆಯಲ್ಲಿ ಅವರು ಆಧ್ಯಾತ್ಮಿಕ ಹಾಗೂ ಸೂಫಿ ಶೈಲಿಯ ಕವಿತೆಗಳನ್ನು ಬರೆದಿದ್ದಾರೆ. ಈ ಕವಿತೆಗಳು ‘ದಿವಾನ್ ಎ ಇಮಾಮ್’

 

 

ಆಂದೋಲನ ಡೆಸ್ಕ್

Recent Posts

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

2 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

2 hours ago

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಪ್ರತಿ ಭಾರತೀಯರ ಎದೆ ಬಡಿತದ ಚೇತನ ಗಾಂಧೀಜಿ:  ಕೈಯಲ್ಲೊಂದು ಕೋಲು ಹಿಡಿದು, ದುಂಡು ಕನ್ನಡಕ ಧರಿಸಿ, ಸತ್ಯ, ಅಹಿಂಸೆಯ ಅಸದಿಂದ…

2 hours ago

ಸುಬ್ಬಮ್ಮ ಜೋಯಿಸ್ ಮೈಸೂರಿನಲ್ಲಿ ತ್ರಿವರ್ಣಧ್ವಜ ಹಾರಿಸಿದ್ದು

ಸೋನಿಯಾ ಎಮ್.ವಿ., ಉಪನ್ಯಾಸಕಿ, ಟೆರಿಷಿಯನ್ ಕಾಲೇಜ್ ಎಮ್. ಎನ್. ಜೋಯಿಸ್ ಮತ್ತು ಸುಬ್ಬಮ್ಮ ಜೋಯಿಸ್ ಮೈಸೂರಿನ ಸ್ವತಂತ್ರ ಹೋರಾಟಗಾರರಲ್ಲಿ ತಮ್ಮ…

2 hours ago

ಉರಿ ಉಂಡ ಕರ್ಪೂರ ಟಿ.ಎಸ್.ಸುಬ್ಬಣ್ಣ

ಪರಮಶಿವ ನಡುಬೆಟ್ಟ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟಗಾರರು ಧ್ವಜ ಸತ್ಯಾಗ್ರಹ ಕಾರ್ಯ ಕ್ರಮವನ್ನು ಹಮ್ಮಿ ಕೊಂಡಿದ್ದರು. ಈ ಧ್ವಜ ಸತ್ಯಾಗ್ರಹವನ್ನು…

2 hours ago

ಬ್ಯಾರಿಸ್ಟರ್ ಏನೋ ಆದೆ ಆದರೆ ಆಮೇಲೆ?

ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ‘ಆಂದೋಲನ’ ದಿನಪತ್ರಿಕೆಯ ಗಾಂಧಿ ಅಭಿಯಾನ ನಾನು ಇಂಗ್ಲೆಂಡಿಗೆ ಹೋದ ಉದ್ದೇಶವನ್ನು ಬ್ಯಾರಿಸ್ಟರ್ ಆಗುವುದನ್ನು, ಕುರಿತು ನಾನು…

2 hours ago