ಆಂದೋಲನ ಪುರವಣಿ

ಸಿನಿಮಾಲ್‌ : ಸಿನಿಕುಟುಂಬದ ತಾರೆಯರ ರಂಗಪ್ರವೇಶ

ಧನ್ಯಾ, ರಾಧನ್, ಅಮೃತಾ ನಂತರ ಕೀರ್ತಿ

ಸಿನಿಕುಟುಂಬಗಳಿಂದ ಚಿತ್ರರಂಗಕ್ಕೆ ನಟರಾಗಿ ಬಂದಿರುವ ಸಾಕಷ್ಟು ಮಂದಿ ಯುವಕರಿದ್ದಾರೆ. ಚಿತ್ರರಂಗದ ಮೊದಲ ಕುಟುಂಬಗಳ ಮೂರನೇ ತಲೆಮಾರಿನವರೂ ಇದ್ದಾರೆ. ಆದರೆ ಯುವತಿಯರು ಬಣ್ಣಹಚ್ಚಿದ್ದು ಕಡಿಮೆ. ಬಾಲನಟಿಯರಾಗಿ ಬಂದವರಿದ್ದಾರೆ. ಇತ್ತೀಚೆಗೆ ಅವರೂ ಬರತೊಡಗಿದ್ದಾರೆ.
ಡಾ.ರಾಜಕುಮಾರ್ ಅವರ ಮೊಮ್ಮಗಳು, ಪೂರ್ಣಿಮಾ-ರಾಮಕುಮಾರ್ ಮಗಳು ಧನ್ಯಾ ರಾಮಕುಮಾರ್ ?ನಿನ್ನ ಸನಿಹಕೆ’ ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಬಂದರು. ಆ ಚಿತ್ರ ತೆರೆಕಂಡಿದೆ. ?ಬೆಳ್ಳಿಕಾಲುಂಗುರ’ ಚಿತ್ರದಲ್ಲೂ ಅವರದು ಮುಖ್ಯ ಭೂಮಿಕೆ. ಹಿಂದೆ ಅದೇ ಹೆಸರಿನ ಚಿತ್ರ ನಿರ್ಮಿಸಿದ್ದ ನಿರ್ಮಾಪಕ.ರಾ.ಗೋವಿಂದು ಅವರದೇ ಚಿತ್ರವಿದು. ಇನ್ನೂ ಕೆಲವು ಚಿತ್ರಗಳಲ್ಲಿ ಅವರು ಅಭಿನಯಿಸುವ ಕುರಿತಂತೆ ಮಾತುಕತೆಗಳಾಗುತ್ತಿವೆ ಎನ್ನಲಾಗಿದೆ.
ಕನ್ನಡ ಚಿತ್ರರಂಗದಲ್ಲಿ ನಾಯಕಿಯರಿಗೆ ತಾರಾವರ್ಚಸ್ಸು ತಂದುಕೊಟ್ಟ ತಾರೆ ಮಾಲಾಶ್ರೀ. ಮಾಲಾಶ್ರೀ ಮತ್ತು ನಿರ್ಮಾಪಕ ರಾಮು ದಂಪತಿಯ ಮಗಳು ಅನನ್ಯ ಇದೀಗ ಚಿತ್ರರಂಗ ಪ್ರವೇಶಿಸಿದ್ದಾರೆ. ರಾಧನಾ ರಾಮ್ ಎನ್ನುವ ತೆರೆನಾಮದೊಂದಿಗೆ ಬಂದಿರುವ ಅವರ ಮೊದಲ ಚಿತ್ರ ಈಗಾಗಲೇ ಚಿತ್ರೀಕರಣ ಆರಂಭಿಸಿದೆ. ದರ್ಶನ್ ಅಭಿನಯದ 56ನೇ ಚಿತ್ರದಲ್ಲಿ ಅವರ ಜೋಡಿಯಾಗಿ ರಾಧನಾ ನಟಿಸುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಅವರಿಗಾಗಿ ತರುಣ್ ಸುಧೀರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಕನ್ನಡ ನಟ ?ನೆನಪಿರಲಿ’ ಖ್ಯಾತಿಯ ನಟ ಪ್ರೇಮ್ ಮಗಳು ಅಮೃತಾ ಪ್ರೇಮ್ ಬಣ್ಣಹಚ್ಚಿದ್ದಾರೆ. ಅವರು ಅಭಿನಯಿಸಲಿರುವ ಮೊದಲ ಚಿತ್ರ ?ಟಗರು ಪಲ್ಯ’. ನಟ ಡಾಲಿ ಧನಂಜಯ ನಿರ್ಮಿಸುತ್ತಿರುವ ಈ ಚಿತ್ರವನ್ನು ಉಮೇಶ್ ಕೆ.ಕೃಪಾ ನಿರ್ದೇಶಿಸುತ್ತಿದ್ದು ಅವರಿಗೂ ಇದು ಮೊದಲ ಚಿತ್ರ.
ಇದೀಗ ಮತ್ತೊಂದು ಕಲಾಕುಟುಂಬದ ಕುಡಿ ಬೆಳ್ಳಿತೆರೆಗೆ ಕಾಲಿಟ್ಟ ಸುದ್ದಿ. ಗುಬ್ಬಿ ಕಂಪೆನಿಯಲ್ಲಿದ್ದ ಕೃಷ್ಣ ಅವರ ಮೊಮ್ಮಗಳು ಕೀರ್ತಿ ಕೃಷ್ಣ ಈ ನಟಿ. ಕೃಷ್ಣ ಅವರ ಮಕ್ಕಳಾದ ಶ್ರುತಿ ಮತ್ತು ಶರಣ್ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹೆಸರಾದವರು. ಅವರ ಮತ್ತೊಬ್ಬ ಮಗಳು ಉಷಾ, ಚಿತ್ರರಂಗದಿಂದ ದೂರವಿದ್ದರು. ಆದರೆ ಆಕೆಯ ಮಗಳು ಕೀರ್ತಿ ಈಗ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಹಿಂದೆ ರಾಮ್‌ಕುಮಾರ್ -ಶ್ರುತಿ ಅಭಿಯದ ?ಶ್ರೀನಾಗಶಕ್ತಿ’ಯಲ್ಲಿ ಬಾಲನಟಿಾಂಗಿ ಕಾಣಿಸಿಕೊಂಡಿದ್ದ ಕೀರ್ತಿ ಇದೀಗ ಓದು ಮುಗಿಸಿ ಬಂದಿದ್ದಾರೆ. ಅವರು ಅಭಿನಯಿಸಲಿರುವ ಚಿತ್ರ ?ಧರಣಿ’. ?ಅನಂತು ವರ್ಸಸ್ ನುಸ್ರತ್’ ನಿರ್ದೇಶಿಸಿದ ಸುಧೀರ್ ಶಾನುಭೋಗ್ ಅವರ ಚಿತ್ರ ?ಧರಣಿ’. ಮನೋಜ್ ಜೋಡಿಯಾಗಿ ಕೀರ್ತಿ ನಟಿಸಲಿದ್ದಾರೆ. ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ, ಅರುಣ್ ಸುರೇಶ್ ಛಾಯಾಗ್ರಹಣ, ಅರುಣೋದಯ ಕಥೆ , ಶ್ರೀನಿಧಿ ಡಿ. ಎಸ್. ಸಂಭಾಷಣೆ ಈ ಚಿತ್ರದ ಮೊದಲ ನೋಟ ಹೊರಬಂದಿದೆ.

andolanait

Recent Posts

ಸಿಲಿಂಡರ್ ಸ್ಪೋಟ ಪ್ರಕರಣ : ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಮೈಸೂರು : ಮೈಸೂರು ಅರಮನೆ ಮುಂಭಾಗ ನಿನ್ನೆ ಸಂಜೆ ನಡೆದಿದ್ದ ಹೀಲಿಯಂ ಸ್ಫೋಟ ಪ್ರಕರಣದಲ್ಲಿ ಸಾವಿನ ಸಂಖ್ಯೆ ಇದೀಗ ಮೂರಕ್ಕೆ…

8 hours ago

ಮರ್ಯಾದೆಗೇಡು ಹತ್ಯೆ ವಿರೋಧಿಸಿ ಸಹಿ ಸಂಗ್ರಹ

ಮೈಸೂರು : ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಗೇಡು ಹತ್ಯೆ ವಿರೋಧಿಸಿ ಮತ್ತು ಮರ್ಯಾದೆಗೇಡು ಹತ್ಯೆ ತಡೆಗೆ ಕಠಿಣ ಕಾಯಿದೆ ರೂಪಿಸಬೇಕು ಎಂದು…

12 hours ago

ಕೆ.ಆರ್.ಆಸ್ಪತ್ರೆ ಶೆಡ್ ನಲ್ಲಿ ಬೆಂಕಿ : ಹಾಸಿಗೆಗಳು ಬೆಂಕಿಗಾಹುತಿ

ಮೈಸೂರು : ಇಲ್ಲಿನ ಕೆ.ಆರ್. ಆಸ್ಪತ್ರೆಯ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಆಸ್ಪತ್ರೆಯ ಹಾಸಿಗೆಗಳು ಬೆಂಕಿಗಾಹುತಿಯಾಗಿವೆ. ಆಸ್ಪತ್ರೆಯ ಚೆಲುವಾಂಬ ವಾರ್ಡ್…

12 hours ago

ಹೊಸ ವರ್ಷಾಚರಣೆಗೆ ಮುನ್ನೆಚ್ಚರಿಕೆ : ಸೂಕ್ಷ ಪ್ರದೇಶಗಳ ಬಗ್ಗೆ ಸಮೀಕ್ಷೆ ವರದಿಗೆ ಸೂಚನೆ

ಬೆಂಗಳೂರು : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಪ್ರಶ್ನೆಗಳು ಉದ್ಭವಿಸಿರುವ ಸಂದರ್ಭದಲ್ಲಿ, ಹೊಸ ವರ್ಷಾಚರಣೆಯ ವೇಳೆ ಯಾವುದೇ ಅವಘಡ ನಡೆಯದಂತೆ…

13 hours ago

ಸಿಲಿಂಡರ್‌ ಸ್ಪೋಟ ಪ್ರಕರಣ : ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಮಂಜುಳ ಸಾವು

ಮೈಸೂರು : ಮೈಸೂರಿನ ವಿಶ್ವ ವಿಖ್ಯಾತ ಅರಮನೆ ಸಮೀಪ ಸಂಭವಿಸಿದ್ದ ಹೀಲಿಯಂ ಗ್ಯಾಸ್ ಸಿಲೆಂಡರ್ ಸ್ಫೋಟ ದುರಂತದಲ್ಲಿ ಸಾವಿನ ಸಂಖ್ಯೆ…

14 hours ago

ಇತಿಹಾಸ ಸೃಷ್ಟಿಸಿದ ಬಿಜೆಪಿ : ತಿರುವನಂತಪುರಂನ ಮೇಯರ್ ಆಗಿ ವಿ.ವಿ.ರಾಜೇಶ್ ಆಯ್ಕೆ

ತಿರುವನಂತಪುರಂ : ಬಿಜೆಪಿಯಿಂದ ಮೊದಲ ಬಾರಿಗೆ ತಿರುವನಂತಪುರಂ ನಗರ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ವಿ.ವಿ.ರಾಜೇಶ್ ಇತಿಹಾಸ ನಿರ್ಮಿಸಿದ್ದಾರೆ. 49…

14 hours ago