ಚಿತ್ರ ಮಂಜರಿ

ಹೊಂಬಾಳೆ ಫಿಲ್ಮ್ಸ್‌ ಬಗ್ಗೆ ರಾಕಿ ಬಾಯ್‌ ಮೆಚ್ಚುಗೆ

ಹೊಂಬಾಳೆ ಫಿಲ್ಮ್ಸ್‌ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ನಡುವೆ ಒಳ್ಳೆಯ ಸಂಬಂಧ ಇಲ್ಲ ಎಂಬ ರೂಮರ್ಸ್‌ ಗೆ ಸ್ವತಃ ಯಶ್‌ ಹಾಗೂ ಹೊಂಬಾಳೆ ಸಂಸ್ಥೆಯೇ ತೆರೆ ಎಳೆದಿದ್ದಾರೆ.
ತಮ್ಮ ನಡುವೆ ಉತ್ತಮ ಬಾಂಧವ್ಯ ಇದೇ ಎನ್ನುವುದನ್ನು ತಿಳಿಸುವ ಸಲುವಾಗಿ ಯಶ್‌ ಮತ್ತು ಹೊಂಬಾಳೆ ಸಂಸ್ಥೆ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದು, ತಮ್ಮ ನಡುವಿನ ಬಾಂದವ್ಯಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದವರಿಗೆ ಚಾಟಿ ಬೀಸಿದ್ದಾರೆ.
ಯಶ್‌ ಅವರ ಟಾಕ್ಸಿಕ್‌ ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್‌ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿ ಶುಭಕೋರಿದೆ. ಅಂತೆಯೇ ರಾಕಿಮಗ್‌ ಸ್ಟಾರ್‌ ಯಶ್‌ ಅವರೂ ಕೂಡ ಕಾಂತಾರ ಚಾಪ್ಟರ್‌ 1 ಹಾಗೂ ಸಲಾರ್‌ ಸಿನಿಮಾಗೆ ಅಭಿನಂದನೆ ತಿಳಿಸಿದ್ದು, ಎರಡೂ ಸಿನಿಮಾಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಈ ಮೂಲಕ ಸುಳ್ಳುಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಯಶ್‌ ಮುಂದಿನ ಸಿನಿಮಾ ಯಾವುದು ಅಂತಾ ಕಾಯುತ್ತಿದ್ದ ಅಭಿಮಾನಿಗಳ ಕಾತರಕ್ಕೆ ಡಿಸೆಂಬರ್‌ 8  ರಂದು ತೆರೆ ಬಿದ್ದಿತ್ತು.
ಕೆಜಿಎಫ್‌ ಚಿತ್ರ ಸರಣಿಯ ಬಳಿಕ ಕಥೆ ಆರಿಸಿಕೊಳ್ಳುವಲ್ಲಿ ತೀರ ನಿಗಾ ವಹಿಸಿದ ಯಶ್‌ ಯಾವ ನಿರ್ದೇಶಕರ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಪ್ರಶ್ನೆ ಎದ್ದಿತ್ತು. ಹಲವಾರು ನಿರ್ದೇಶಕರ ಹೆಸರು ಕೇಳಿ ಬಂದಿತ್ತು. ಯಶ್‌ ಯಾವ ನಿರ್ದೇಶಕರ ಜತೆ ಸಿನಿಮಾ ಮಾಡಲಿದ್ದಾರೆ ಹಾಗೂ ಈ ಸಿನಿಮಾದ ಹೆಸರೇನು ಎಂಬ ಅಭಿಮಾನಿಗಳ ಕುತೂಹಲಕ್ಕೆ ಡಿಸೆಂಬರ್‌ 8  ರಂದು ತೆರೆ ಬಿದ್ದಿತ್ತು.
ಮಲಯಾಳಂನ ಮಾಜಿ ನಟಿ ಹಾಗೂ ನಿರ್ದೇಶಕಿ ಗೀತು ಮೋಹನ್‌ದಾಸ್‌ ಜತೆ ತನ್ನ ಮುಂದಿನ ಚಿತ್ರ ʼಟಾಕ್ಸಿಕ್‌ʼ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದರು.
ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್‌ ಬಂಡವಾಳ ಹೂಡಿದ್ದು, ಮಾನ್ಸ್ಟರ್‌ ಮೈಂಡ್‌ ಕ್ರಿಯೇಷನ್ಸ್ ಸಹ ಬಂಡವಾಳ ಹೂಡಿದೆ. ಚಿತ್ರ 2025ರ ಏಪ್ರಿಲ್‌ 10ಕ್ಕೆ ತೆರೆಗೆ ಬರಲಿದೆ.
lokesh

Recent Posts

ಕೆಆರ್‌ಎಸ್‌ ಜಲಾಶಯಕ್ಕೆ ಮತ್ತಷ್ಟು ಹೆಚ್ಚಾದ ಒಳಹರಿವು

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು…

2 hours ago

ಓದುಗರ ಪತ್ರ: ಮ್ಯಾನ್‌ಹೋಲ್ ಸರಿಪಡಿಸಿ

ವಿಜಯನಗರಕ್ಕೆ ಹೋಗುವ ರಸ್ತೆಯಲ್ಲಿ ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ಮಹಾದ್ವಾರದ ಎದುರಗಡೆ ರಸ್ತೆಯ ಅಂಚಿಗೆ ಸೇರಿದಂತಿರುವ ಮ್ಯಾನ್ ಹೋಲ್‌ನಿಂದ ಹೊಲಸು ನೀರು…

6 hours ago

ಓದುಗರ ಪತ್ರ: ಎಚ್೧ಎನ್೧ ಮುನ್ನೆಚ್ಚರಿಕೆ ಇರಲಿ

ಕರ್ನಾಟಕದ ೩೨ ಜಿಗಳಲ್ಲಿ ಆಗಸ್ಟ್೨೨ರವರೆಗೆ ಒಟ್ಟು ೫,೦೦೦ ಎಚ್೧ಎನ್೧ ಪ್ರಕರಣಗಳು ದಾಖಲಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲೂ ಪ್ರಕರಣಗಳು…

6 hours ago

ಓದುಗರ ಪತ್ರ: ಭಲೆ ದರ್ಶನ್…ಭಲೆ ಭಲೆ…

ಕೆಲವು ದಿನಗಳ ಹಿಂದೆ ನಂಜನಗೂಡು ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಸ್ಥಳೀಯ…

6 hours ago

ಪೊಲೀಸ್ ಆಪ್‌ಗೆ ಖಾಸಗಿ ಸಿಸಿಟಿವಿ ಸೇರ್ಪಡೆ

ಎಚ್.ಎಸ್.ದಿನೇಶ್‌ಕುಮಾರ್ ಅಪರಾಧ ಪ್ರಕರಣಗಳ ಪತ್ತೆಗೆ ನಗರ ಪೊಲೀಸರ ಕಾರ್ಯ ತಂತ್ರ; ಆಪ್ ವ್ಯಾಪ್ತಿಯಲ್ಲಿ ೩೦,೦೦೦ ಸಿಸಿಟಿವಿಗಳು; ಸಿಸಿಟಿವಿ ಸ್ಥಿತಿ ಬಗ್ಗೆಯೂ…

6 hours ago

ಫ್ಲೈಓವರ್ ಕಾಮಗಾರಿ ಕುಂಟುತ್ತಿದೆಯೇಕೆ?

ಎಂ.ಕೇಶವ ಮೈಸೂರು: ನಗರದ ಮಣಿಪಾಲ್ ಆಸ್ಪತ್ರೆಯ ಜಂಕ್ಷನ್ ಬಳಿ ಹಾಗೂ ನಂಜನಗೂಡು ರಸ್ತೆಯ ಎಪಿಎಂಸಿ ಬಳಿ ನಿರ್ಮಾ ಣವಾಗುತ್ತಿರುವ ಫ್ಲೈ…

9 hours ago