ಚಿತ್ರ ಮಂಜರಿ

ಇಂದಿನಿಂದ ‘ಕಥೆಯೊಂದು ಶುರುವಾಗಿದೆ’ ಧಾರಾವಾಹಿ

ಸ್ಟಾರ್ ಸುವರ್ಣದಲ್ಲಿ ನವೆಂಬರ್ ೨೮ರಂದು (ಇಂದಿನಿಂದ) ಸೋಮವಾರದಿಂದ ಸಂಜೆ ೭ ಗಂಟೆಗೆ ಪ್ರಾರಂಭ

ಮೈಸೂರು: ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮುದ್ದು ಮಣಿಗಳು, ಮನಸೆಲ್ಲಾ ನೀನೇ, ಮರಳಿ ಮನಸಾಗಿದೆ, ಬೆಟ್ಟದ ಹೂ, ಜೇನುಗೂಡು ಧಾರಾವಾಹಿಗಳು ಪ್ರೇಕ್ಷಕರ ಮನ ಗೆದ್ದು ಮನೆ ಮಾತಾಗಿವೆ. ಇದೀಗ ಸ್ಟಾರ್ ಸುವರ್ಣ ವಾಹಿನಿಯು ‘ಕಥೆಯೊಂದು ಶುರುವಾಗಿದೆ’ ಧಾರಾವಾಹಿ ಪ್ರಾರಂಭಿಸಲು ಸಜ್ಜಾಗಿದೆ.
‘ಕಥೆಯೊಂದು ಶುರುವಾಗಿದೆ’ ಇದು ಮೂರು ಜೋಡಿಗಳು ಹಾಗೂ ಎರಡು ಮನೆತನಗಳ ಮಧ್ಯೆ ನಡೆಯುವ ಪ್ರೀತಿ ಸಂಘರ್ಷದ ಅದ್ಧೂರಿ ಧಾರಾವಾಹಿ. ಈ ಧಾರಾವಾಹಿಯ ಕಥಾನಾಯಕಿ ಕೃತಿ. ಈಕೆ ಮಧ್ಯಮ ಕುಟುಂಬದ ಹುಡುಗಿಯಾಗಿರುತ್ತಾಳೆ. ಈಕೆ ಎಷ್ಟೇ ಕಷ್ಟ ಬಂದ್ರು ನಗುತ್ತಾ ಮನೆ ನಿಭಾಯಿಸೋ ಛಲಗಾರ್ತಿ. ಸಮಾಜದಲ್ಲಿ ಮಹಿಳೆಯರು ಯಾವುದಕ್ಕೂ ಕಮ್ಮಿ ಇಲ್ಲ, ಗಂಡಿಗೆ ಸರಿ ಸಮಾನಾಗಿ ನಿಲ್ಲೋ ಸಾಮರ್ಥ್ಯ ಹೆಣ್ಣಿಗಿದೆ ಎಂದು ತೋರಿಸೋಕೆ ‘ಹೆಣ್ಮಕ್ಳೆ ಸ್ಟ್ರಾಂಗು ಗುರು’ ಎಂಬ ನಾಮಪದದ ಅಡಿ ಸಮಾಜದಲ್ಲಿರೋ ಹೆಣ್ಣು ಕುಲಕ್ಕೆ ಸ್ಛೂರ್ತಿಯಾಗಿ ನಿಲ್ತಿದ್ದಾಳೆ ನಮ್ಮ ಕೃತಿ.
ಇನ್ನು ಈ ಕಥೆಯ ನಾಯಕ ಯುವರಾಜ ಬಹದ್ದೂರ್. ಬಹದ್ದೂರ್ ಫ್ಯಾಮಿಲಿಗೆ ಇವನೇ ಹಿರಿಯ ಮಗ. ಆದರೆ, ಸ್ವಲ್ಪ ಅಹಂಕಾರಿ, ಇವನ ನಿರ್ಧಾರ ತುಂಬಾ ಅಚ್ಚುಕಟ್ಟು. ಇವನು ತುಂಬಾ ಕಟ್ಟುನಿಟ್ಟು. ಮಾತಲ್ಲಿ ಮನೆ ಕಟ್ದೇ ಕೆಲಸ ಮಾಡಿ ತೋರಿಸೋ ಇವನು ಕೆಲಸಕ್ಕೆ ತುಂಬಾ ಪ್ರಾಮುಖ್ಯತೆ ಕೊಡ್ತಾನೆ.
ಒಬ್ಬಳು ಸ್ವಾಭಿಮಾನಿ, ಇನ್ನೊಬ್ಬ ಅಹಂಕಾರಿ. ಸ್ವಾಭಿಮಾನಿ ಹಾಗೂ ಅಹಂಕಾರಿಗಳ ನಡುವೆ ನಡೆಯುವ ಜಿದ್ದಾಜಿದ್ದಿಯೇ ಈ ಧಾರಾವಾಹಿಯ ಕಥಾಹಂದರವಾಗಿದೆ. ಈ ಧಾರಾವಾಹಿಯ ತಾರಾ ಬಳಗದಲ್ಲಿ ಸುಂದಶ್ರೀ, ಸಹನಾ, ಅಭಿನಯ, ಭವಾನಿ, ಸುಜಾತ ಅಕ್ಷುಯ್‌, ಸುಜ್ಯ್‌, ಭವಿಶ್, ಇಂಚರ ಜೋಶಿ ಸೇರಿದಂತೆ ಇನ್ನು ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ. ಹೊಚ್ಚ ಹೊಸ ಧಾರಾವಾಹಿ ‘ಕಥೆಯೊಂದು ಶುರುವಾಗಿದೆ’ ಇದೇ ನವೆಂಬರ್ ೨೮ರಂದು ಸೋಮವಾರದಿಂದ ಸಂಜೆ ೭ ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

andolanait

Recent Posts

ಸಿಇಸಿ ಜ್ಞಾನೇಶ್​ ಕುಮಾರ್​ರನ್ನು ಹುದ್ದೆಯಿಂದ ಕೆಳಗಿಳಿಸುವ ನಿರ್ಣಯ; ಕೇರಳಂ ವಿಧಾನಸಭೆಯಲ್ಲಿ ಪಾಸ್​​

ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್‌…

15 hours ago

ಧನಂಜಯ ಆನೆಯ ಹೆಗಲಿಗೆ ಶ್ರೀರಂಗಪಟ್ಟಣ ದಸರಾ ಜವಾಬ್ದಾರಿ

ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…

17 hours ago

ದಸರಾ ಗಜಪಡೆಗೆ 3ನೇ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…

17 hours ago

ಸತ್ಯಕ್ಕೆ ಅಂತಿಮ ಗೆಲುವಾಗಲಿದೆ: ರಾಹುಲ್‌ ಗಾಂಧಿ

ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…

17 hours ago

ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ್

ಮೈಸೂರು: ಬಹುಭಾಷಾ ನಟ ಪ್ರಭುದೇವ್‌ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…

17 hours ago

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

21 hours ago