ಹಿಂದಿ ಹಾಗೂ ಮರಾಠಿ ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ನಟ ಶ್ರೇಯಸ್ ತಲ್ಪಾಡೆ ಹೃದಯಾಘಾತಕ್ಕೊಳಗಾಗಿದ್ದಾರೆ. 47 ವರ್ಷದ ನಟ ಬಹುತಾರಾಗಣದ ʼವೆಲ್‌ಕಮ್ ಟು ದ ಜಂಗಲ್ʼ ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರೀಕರಣ ಮುಗಿಸಿ ಮನೆಗೆ ಮರಳಿದ ನಂತರ ತೀವ್ರ ಆಯಾಸಕ್ಕೆ ಒಳಗಾಗಿದ್ದಾರೆ.
ಪತ್ನಿ ದೀಪ್ತಿ ತಲ್ಪಾಡೆಗೆ ನಟ ಶ್ರೇಯಸ್ ತಲ್ಪಾಡೆ ವಿಷಯ ತಿಳಿಸಿದ್ದು, ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲಿ ಶ್ರೇಯಸ್ ಕುಸಿದುಬಿದ್ದಿದ್ದು, ಸದ್ಯ ನಟ ಮುಂಬೈನ ಅಂಧೇರಿಯಲ್ಲಿರುವ ಬೆಲ್ಲೆವ್ಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿತ್ರೀಕರಣದಲ್ಲಿ ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಭಾಗವಹಿಸಿದ್ದ ತಲ್ಪಾಡೆಗೆ ಹೃದಯಾಘಾತಕ್ಕೊಳಗಾಗಿರುವುದು ಬಾಲಿವುಡ್ ಮಂದಿಯಲ್ಲಿ ಆತಂಕವನ್ನುಂಟುಮಾಡಿದೆ. ಶ್ರೇಯಸ್ ತಲ್ಪಾಡೆಗೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಇನ್ನು ಶ್ರೇಯಸ್ ತಲ್ಪಡೆ ʼಅಜಾಗ್ರತʼ ಎಂಬ ಸೌತ್ ಸಿನಿಮಾದಲ್ಲಿಯೂ ಸಹ ನಟಿಸುತ್ತಿದ್ದು, ಈ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿದ್ದಾರೆ.
ಮೈಸೂರು : ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ವತಿಯಿಂದ ಭಾರತದಲ್ಲೇ ಪ್ರಥಮವಾಗಿ ನಿರ್ಮಿಸಲಾಗಿರುವ ರಾಜೀವ್ ಗಾಂಧಿ ಡ್ರಾಗನ್ ಪಾಂಡ್‌ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ…
ಹೊಸದಿಲ್ಲಿ : 2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜೆಎನ್‍ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್…
ಬೆಂಗಳೂರು : ಸಿ.ಎಂ.ಸಿದ್ದರಾಮಯ್ಯ ಅವರು ದೇವರಾಜು ಅರಸು ದಾಖಲೆ ಮುರಿಯುತ್ತಾರಂತೆ. ಯಾವ ಭಾಗ್ಯಕ್ಕೆ ಇದೆಲ್ಲಾ? ರಾಜ್ಯದ ಪರಿಸ್ಥಿತಿ ನೋಡಿದರೆ ಈ…
ಬೆಂಗಳೂರು : ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿರುವ ಬೆಂಗಳೂರು ನಗರದ ಕೋಗಿಲು ಲೇಔಟ್‍ನಲ್ಲಿ ವಲಸಿಗರು ಅನಧಿಕೃತವಾಗಿ…
ಬೆಂಗಳೂರು : ಚಿನ್ನದ ಹುಡುಗ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಮತ್ತು JSW ಸ್ಪೋರ್ಟ್ಸ್ ಸೋಮವಾರ ತಮ್ಮ ಅಧಿಕೃತ ಪಾಲುದಾರಿಕೆಯನ್ನು…