ಮೂಲತಃ ಫರ‌್ನ ಜಾತಿಗೆ ಸೇರಿದ , ನೀರಿನ ಮೇಲೆ ತೇಲಾಡಿಕೊಂಡು ಬೆಳೆಯಬಲ್ಲ ಝರಿ ರೀತಿಯ ಸಸ್ಯವೇ ಅಜೋಲಾ. ಇದರ ಕಾಂಡ ಮತ್ತು ಎಲೆಗಳು ಚಿಕ್ಕದಾಗಿದ್ದು, ಒಂದರ ಮೇಲೊಂದು ಜೋಡಿಸಿದಂತೆ ಇರುತ್ತವೆ. 8 ಸೆಂ.ಮೀ ನಷ್ಟು ಉದ್ದದ ಬೇರುಗಳು ನೀರಿನಲ್ಲಿ ಇಳಿ ಬಿದ್ದಿರುತ್ತವೆ.
ಬೆಳೆಯುವುದು ಹೇಗೆ?: ಆರಂಭದಲ್ಲಿ ನೆಲವನ್ನು ಸ್ವಚ್ಛಗೊಳಿಸಿ ಸಮತಟ್ಟಾಗಿಸಬೇಕು. 2.25 ಮೀಟರ್‌ನಷ್ಟು ಉದ್ದ ಹಾಗೂ ೧1.5 ಮೀಟರ್‌ನಷ್ಟು ಅಗಲವಿರುವ ( ರೈತರು ಅಗತ್ಯಕ್ಕೆ ತಕ್ಕಂತೆ ನಿರ್ಮಿಸಿಕೊಳ್ಳಬಹುದು) ಗುಂಡಿ ಅಗೆದು ಒಂದು ಅಂಗುಲದಷ್ಟು ಎತ್ತರಕ್ಕೆ ಮರಳು ಹಾಕಿ, ಇದರ ಮೇಲೆ ತೊಟ್ಟಿಯ ಮೇಲ್ಭಾಗದ ಅಂಚಿನವರೆಗೆ ಬರುವಂತೆ 120 ರಿಂದ 150 ಜೆಸಿಎಂ ಸಿಲ್ಫಾಲಿನ್ ಶೀಟು ಹರಡಬೇಕು. ಬಳಿಕ 30 ರಿಂದ 35 ಕಿಲೋದಷ್ಟು ಫಲವತ್ತಾದ ಮೆತ್ತನೆಯ ಮಣ್ಣನ್ನು ಸಮಾನವಾಗಿ ಅದರ ಮೇಲೆ ಹರಡಬೇಕು. ಬಳಿಕ ಸುಮಾರು 6 ಕಿಲೋದಷ್ಟು ಸಗಣಿಗೆ 40 ಗ್ರಾಂ. ಖನಿಜ ಮಿಶ್ರಣ ಬೆರೆಸಿ ನೀರಿನಲ್ಲಿ ಕಲಸಿದ ಮೇಲೆ ಮಣ್ಣಿನಲ್ಲಿ ಮಿಶ್ರಣ ಮಾಡಬೇಕು. ಸುಮಾರು 7 ರಿಂದ 10 ಸೆಂ.ಮೀ. ಎತ್ತರದ ವರೆಗೆ ನೀರು ಹಾಯಿಸಿ ಅದಕ್ಕೆ 1 ಕೆ.ಜಿ.ಯಷ್ಟು ಅಜೋಲಾ ಕಲ್ಚರ್ ಅಥವಾ ಹೆಪ್ಪನ್ನು ಮೇಲ್ಭಾಗದಿಂದ ಸಮಾನವಾಗಿ ಬೀಳುವಂತೆ ಹಾಕಬೇಕು. ಇಷ್ಟು ಮಾಡಿದ ನಂತರ ಅಜೋಲಾದ ಮೇಲೆ ನೀರನ್ನು ಚಿಮುಕಿಸಬೇಕು. ಇದು ಬಹುಬೇಗನೆ ಬೆಳೆಯಲು ನೆರವಾಗುತ್ತದೆ ಎನ್ನುತ್ತಾರೆ ತಜ್ಞರು.
ಪೂರಕ ಆಹಾರ: ಅಜೋಲಾವನ್ನು ಆಕಳು, ಎಮ್ಮೆ, ಕೋಳಿ,ಕುರಿ,ಮೇಕೆ,ಮೊಲ, ಹಂದಿ, ಬಾತುಕೋಳಿ ಮತ್ತು ಮೀನುಗಳಿಗೆ ಪೂರಕ ಆಹಾರವಾಗಿ ಬಳಸಬಹುದು. ಇದರಲ್ಲಿ ಒಟ್ಟು ೬ ತಳಿಗಳಿದ್ದು,. ಅವುಗಳಲ್ಲಿ ಪಿನ್ನಾಟ ಹಾಗೂ ಮೈಕ್ರೋಫಿಲ್ಲಾ ತಳಿಗಳು ಹೆಚ್ಚು ಪ್ರಚಲಿತದಲ್ಲಿವೆ. ಮೈಕ್ರೋ ಫಿಲ್ಲಾ ತಳಿಯನ್ನು ಮೇವಿಗಾಗಿ ಅತೀ ಹೆಚ್ಚಿನ ಪ್ರಮಾಣದಲ್ಲಿ ರೈತರು ಬಳಸುತ್ತಿದ್ದಾರೆ. ಇದನ್ನು ವಿಭಿನ್ನ ವಾತಾವರಣದಲ್ಲಿಯೂ ಬೆಳೆಯಬಹುದಾಗಿದೆ.ಅಜೋಲಾವನ್ನು ಹಸಿರು ಗೊಬ್ಬರವಾಗಿಯೂ ಬಳಸಬಹುದು ಎನ್ನುತ್ತಾರೆ ತಜ್ಞರು.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…