Andolana originals

ನಾವು ಇಂದು ಸರೆಂಡರ್ ಆಗಲ್ಲ

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ

ಡೆಡ್ ಬಾಡಿ ಬಿಸಾಕುವ ಸಮಯದಲ್ಲಿ ರಾಘವೇಂದ್ರ ಮತ್ತು ಕಾರ್ತಿಕ್ ಮಧ್ಯೆ ಗಲಾಟೆಯಾಗಿ, ಆತ ಸರೆಂಡರ್ ಆಗಿಲ್ಲ. ಈಗ ನಾಗರಭಾವಿ ಹತ್ತಿರ ಇರುವ ನೆಕ್ಸಾ ಶೋರೂಂ ಹತ್ತಿರ ಇದ್ದೇವೆ’ ಎಂದು ಲಕ್ಷ್ಮಣ್ ತಿಳಿಸಿದರು.

ಆಗ ನಾನು ಕಾರನ್ನು ತಿರುಗಿಸಿಕೊಂಡು ನೆಕ್ಸಾ ಶೋರೂಂ ಹತ್ತಿರ ಹೋದಾಗ. ಅಲ್ಲಿ ವಿನಯ್ ಅವರ ಜೀಪ್ ನಿಂತಿತ್ತು. ಜೀಪ್‌ನಲ್ಲಿ ವಿನಯ್, ದೀಪಕ್, ನಾಗರಾಜ್ ಮತ್ತು ರಾಘವೇಂದ್ರ ಕುಳಿತಿದ್ದರು. ನಾಗರಾಜ್, ‘ಈ ದಿನ ರಾಘವೇಂದ್ರ ಸರೆಂಡರ್ ಆಗುವುದಿಲ್ಲ ಎನ್ನುತ್ತಿದ್ದಾನೆ’ ಎಂದರು.

ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್ ಎಲ್ಲಿ ಬರುತ್ತದೆ?: ನಂತರ ದೀಪಕ್ ‘ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಬರುತ್ತಿದ್ದಾರೆ. ಅವರು ನನಗೆ ಆಟೋ ಡ್ರೈವರ್ ಒಬ್ಬನ ಮೊಬೈಲ್‌ನಿಂದ ಫೋನ್ ಮಾಡಿದ್ದರು’ ಎಂದು ತಾವು ಕರೆಸಿದ್ದ ಆ ಇಬ್ಬರು ಹುಡುಗರ ಬಗ್ಗೆ ಮಾಹಿತಿ ನೀಡಿದರು. ಇದಾದ ಐದು ನಿಮಿಷಗಳ ನಂತರ ನಾವು ಇದ್ದ ಸ್ಥಳಕ್ಕೆ ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಒಂದು ಆಟೋದಲ್ಲಿ ಬಂದಿಳಿದರು. ಈ ವೇಳೆ ನಾನು ಆಟೋ ಡ್ರೈವರ್‌ಗೆ ಇಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್ ಎಲ್ಲಿ ಬರುತ್ತದೆ ಎಂದು ಕೇಳಿದೆ. ಅದಕ್ಕೆ ಆತ ಸ್ಟೇಷನ್‌ಗೆ ಹೋಗುವ ದಾರಿ ಹೇಳಿದ. ನಂತರ ಆಟೋ ಅಲ್ಲಿಂದ ಹೊರಟಿತು. ಆ ನಂತರ ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಅವರಿಬ್ಬರನ್ನು ನನ್ನ ಸ್ಕಾರ್ಪಿಯೋ ಕಾರಿನ ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು, ಆಟೋ ಡ್ರೈವರ್ ತೋರಿಸಿದ ದಾರಿಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್ ಕಡೆಗೆ ಹೊರಟೆವು.

ನಮ್ಮ ಸ್ಕಾರ್ಪಿಯೋ ಕಾರನ್ನು ವಿನಯ್ ಅವರ ಜೀಪ್ ಫಾಲೋ ಮಾಡಿಕೊಂಡು ಬರುತ್ತಿತ್ತು. ದರ್ಶನ್ ಅವರು ನನಗೆ ನೀಡಿದ್ದ ೩೦ ಲಕ್ಷ ರೂಪಾಯಿ ಇದ್ದ ಬ್ಯಾಗ್ ನನ್ನ ಕಾರಿನಲ್ಲಿಯೇ ಇತ್ತು. ಮುಂದುವರಿದು ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್ ತಲುಪಿದೆವು. ಸ್ಟೇಷನ್ ಹತ್ತಿರ ಸ್ವಲ್ಪ ಮುಂದೆ ಹೋಗಿ ನಾನು ಕಾರು ನಿಲ್ಲಿಸಿದೆ. ನನ್ನ ಹಿಂದೆ ಜೀಪ್‌ನಲ್ಲಿ ಬರುತ್ತಿದ್ದ ವಿನಯ್ ಅವರು ಕೂಡ ನನ್ನ ಕಾರಿನ ಹಿಂದೆ ಬಂದು ಜೀಪ್ ನಿಲ್ಲಿಸಿದರು. ಆಗ ನಾಗರಾಜ್ ಅವರು ರಾಘವೇಂದ್ರ, ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಅವರಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್‌ಗೆ ಹೋಗಿ ಸರೆಂಡರ್ ಆಗಲು ತಿಳಿಸಿದರು. ಆ ವೇಳೆಗೆ ನಾವು ಗಾಡಿ ನಿಲ್ಲಿಸಿದ್ದ ಸ್ಥಳದಲ್ಲಿ ನಮ್ಮ ಎದುರುಗಡೆಯಿಂದ ಒಂದು ಪೊಲೀಸ್ ಜೀಪ್ ಬಂತು. ಆ ಜೀಪನ್ನು ನೋಡಿದ್ದೇ ತಡ ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಅವರಿಬ್ಬರೂ, ‘ನಾವು ಇಂದು ಸರೆಂಡರ್ ಆಗುವುದಿಲ್ಲ’ ಎಂದರು.

ಎರಡೂ ಗಾಡಿಗಳಲ್ಲಿದ್ದ ಪಾರ್ಟಿಗಳು ಎಕ್ಸ್‌ಚೇಂಜ್: ಬೇರೆ ವಿಧಿಯಿಲ್ಲದೆ ನಾವು ನಮ್ಮ ಎರಡೂ ಗಾಡಿಗಳನ್ನು ತಿರುಗಿಸಿಕೊಂಡು, ನಾಯಂಡಹಳ್ಳಿ ಕಡೆ ಹೊರಟೆವು. ಬಲಕ್ಕೆ ತಿರುಗಿದರೆ ಆರ್.ಆರ್.ನಗರದ ಕಡೆ ಹೋಗುವ ನಾಯಂಡಹಳ್ಳಿಯ ಜಂಕ್ಷನ್‌ನಲ್ಲಿ ನಮ್ಮ ಎರಡೂ ಗಾಡಿಗಳನ್ನು ನಿಲ್ಲಿಸಿಕೊಂಡೆವು. ಆಗ ನನ್ನ ಸ್ಕಾರ್ಪಿಯೋ ಕಾರಿನಿಂದ ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಇಳಿದುಕೊಂಡರು. ನಂತರ ವಿನಯ್ ಅವರ ಜೀಪಿನ ಹತ್ತಿರ ಹೋದರು. ಹಾಗೆಯೇ ವಿನಯ್ ಅವರ ಜೀಪಿನಿಂದ ಇಳಿದುಕೊಂಡ ನಾಗರಾಜ್, ನನ್ನ ಕಾರಿನ ಹತ್ತಿರ ಬಂದು ಕಾರು ಹತ್ತಿ ನನ್ನ ಪಕ್ಕದ ಸೀಟಿನಲ್ಲಿ ಕುಳಿತುಕೊಂಡರು. ನನ್ನ ಸ್ನೇಹಿತ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ.

ಹೇಗಾದರು ಮಾಡಿ ಇವರನ್ನು ಪೊಲೀಸರ ಮುಂದೆ ಸರೆಂಡರ್ ಮಾಡಿಸಬೇಕು: ನಾನು ನಾಗರಾಜ್ ಅವರಿಗೆ ಎಲ್ಲಿಗೆ ಹೋಗಬೇಕು ಎಂದು ಕೇಳಿದೆ. ಅದಕ್ಕೆ ಅವರು ‘ಸ್ವಲ್ಪ ನಮ್ಮ ಮನೆಯ ಹತ್ತಿರ ಬಿಟ್ಟುಬಿಡಿ’ ಎಂದರು.

ಅವರ ಮನೆ ಕೆಂಗೇರಿಯಲ್ಲಿ ಇತ್ತು. ಅವರು ಹೇಳಿದ ರಸ್ತೆಯಲ್ಲಿಯೇ ತೆರಳಿ ಮನೆಯ ಹತ್ತಿರ ಹೋದೆವು. ಅವರ ಮನೆ ಎಲ್ಲಿದೆ ಎಂದು ನಿಖರವಾಗಿ ಗೊತ್ತಿಲ್ಲದ ಕಾರಣ ಅವರು ತೋರಿಸುತ್ತಿದ್ದ ದಾರಿಯಲ್ಲಿ ಕಾರು ಚಲಾಯಿಸುತ್ತಿದ್ದೆ. ಈ ನಡುವೆ ನಾಗರಾಜ್, ‘ಇವರನ್ನು ಹೇಗಾದರು ಮಾಡಿ ಪೊಲೀಸರ ಮುಂದೆ ಸರೆಂಡರ್ ಮಾಡಿಸಬೇಕು, ಇಲ್ಲದಿದ್ದರೆ ತೊಂದರೆಯಾಗುತ್ತದೆ’ ಎಂದು ಹೇಳಿದರು. ಅಷ್ಟರಲ್ಲಿ ಅವರ ಮನೆ ಸಿಕ್ಕಿತು. ಅವರನ್ನು ಮನೆಗೆ ಡ್ರಾಪ್ ಮಾಡಿ, ನಮ್ಮ ಮನೆಯ ಕಡೆ ಹೊರಟೆ.

ನಮ್ಮ ಮನೆ ತಲುಪಿದ ನಂತರ ಕಾರನ್ನು ಮನೆಯ ಹೊರಗಡೆ ನಿಲುಗಡೆ ಮಾಡಿ, ಮನೆಯ ಒಳಗಡೆ ಹೋಗಿ, ನನ್ನ ಸ್ಕೂಟರ್‌ನ (ಕೆಎ-೦೧-ಇಎಕ್ಸ್-೧೫೫೧) ಕೀ ತಂದು ಆಚೆ ನಿಂತಿದ್ದ ನನ್ನ ಸ್ನೇಹಿತನಿಗೆ ಕೊಟ್ಟು ನಾಳೆ ಬೆಳಿಗ್ಗೆ ೧೦ ಗಂಟೆಗೆ ಬಾ ಎಂದು ತಿಳಿಸಿದೆ. ನಂತರ ನನ್ನ ಸ್ನೇಹಿತ ಸ್ಕೂಟರ್ ತೆಗೆದುಕೊಂಡು ಮನೆ ಕಡೆ ಹೊರಟರು. ಆ ನಂತರ ನನ್ನ ಕಾರಿನಲ್ಲಿ ೩೦ ಲಕ್ಷ ರೂಪಾಯಿಯ ನೋಟಿ ಕಂತೆಗಳಿದ್ದ ಬ್ಯಾಗನ್ನು ತೆಗೆದುಕೊಂಡು ನಮ್ಮ ಮನೆಯ ಒಳಗೆ ಹೋದೆ. ಬಳಿಕ ನಮ್ಮ ರೂಂಗೆ ಹೋಗಿ ನೋಟಿನ ಕಂತೆಗಳಿದ್ದ ಬ್ಯಾಗನ್ನು ನನ್ನ ಹಾಸಿಗೆ ಪಕ್ಕದಲ್ಲಿ ಇಟ್ಟೆ. ನಂತರ  ಫ್ರೆಶ್‌ಅಪ್ ಆಗಿ ಮಲಗಿದೆ.

ಏನಾಯಿತು ಪ್ರದೋಷ್? ಬೆಳಗಿನ ಜಾವ ೪ ಗಂಟೆಗೇ ದರ್ಶನ್ ವಾಟ್ಸಪ್ ಕಾಲ್: ಬೆಳಗಿನ ಜಾವ ೪ರಿಂದ ೫ ಗಂಟೆ ಸುಮಾರಿಗೆ ದರ್ಶನ್ ಅವರಿಂದ ನನಗೆ ವಾಟ್ಸಪ್ ಕಾಲ್ ಬಂತು. ರಿಸೀವ್ ಮಾಡುತ್ತಿದ್ದಂತೆ ‘ಏನಾಯಿತು ಪ್ರದೋಷ್’ ಎಂದು ಕೇಳಿದರು. ಆಗ ನಾನು ರೇಣುಕಾಸ್ವಾಮಿಯ ಡೆಡ್ ಬಾಡಿಯನ್ನು ಅಲ್ಲಿಂದ ಶಿಫ್ಟ್ ಮಾಡಿದ್ದೇವೆ. ಆದರೆ ಸರೆಂಡರ್ ಆಗಬೇಕಾಗಿದ್ದ ಹುಡುಗರು ರಾತ್ರಿ ಸರೆಂಡರ್ ಆಗಿಲ್ಲ. ಇವತ್ತು ಅಟ್ ಎನಿಕಾಸ್ಟ್ (ಹೇಗಾದರೂ ಮಾಡಿ) ಸರೆಂಡರ್ ಮಾಡಿಸಿ, ನಂತರ ನಿಮ್ಮನ್ನು ಬಂದು ಭೇಟಿಯಾಗುತ್ತೇನೆ ಎಂದು ಹೇಳಿ ವಾಟ್ಸಪ್ ಕಾಲ್ ಕಟ್ ಮಾಡಿದೆ. ನಂತರ ಬೆಳಿಗ್ಗೆ ಸುಮಾರು ಏಳೂವರೆಗೆ(೭.೩೦) ಎದ್ದು, ನೋಟಿನ ಕಂತೆಗಳಿದ್ದ ಬ್ಯಾಗನ್ನು ನನ್ನ ವಾರ್ಡ್ರೋಬ್(ಕಪಾಟು) ಒಳಗೆ ಇಟ್ಟು ಬೀಗ ಹಾಕಿದೆ. ನಂತರ ಇನ್ನೊಂದು ವಾರ್ಡ್ರೋಬ್ ತೆಗೆದು, ಅದರಲ್ಲಿದ್ದ ಒಂದು ಶರ್ಟ್ನಲ್ಲಿ ಬೀಗದ ಕೀ ಇಟ್ಟೆ.

ಏನಾದರೂ ಸರಿ ಇಂದು ಸರೆಂಡರ್ ಆಗುತ್ತಾರೆ: ಬೆಳಿಗ್ಗೆ ೯ ಗಂಟೆ ನಂತರ ನಾನು ಮತ್ತೆ ಪಿಎಸ್‌ಐ ವಿನಯ್ ಅವರಿಗೆ ವಾಟ್ಸಪ್ ಕಾಲ್ ಮಾಡಿದೆ. ಆದರೆ ಅವರು ಕಾಲ್ ರಿಸೀವ್ ಮಾಡಲಿಲ್ಲ. ಹಾಗಾಗಿ ನಾನು ಅವರಿಗೆ Sir can you send me the
photo of the dead body”‘ ಎಂದು ಮೆಸೇಜ್ ಹಾಕಿದೆ. ನಂತರ ಅವರು one time view photo ಕಳಿಸಿದರು. ನಂತರ ನಾನು ನಾರ್ಮಲ್ ಫೋಟೋ ಕಳುಹಿಸಿ ಎಂದು ಅವರಿಗೆ ಕೇಳಿದಾಗ, ಅವರು ನನಗೆ ಮತ್ತೆ ನಾರ್ಮಲ್ ಫೊಟೋ ಕಳಿಸಿದರು. ನಾನು ಡೆಡ್ ಬಾಡಿ ಫೊಟೋ ನೋಡಿ ನಂತರ ಡಿಲೀಟ್ ಮಾಡಿದೆ. ಆಗ ಪಿಎಸ್‌ಐ ವಿನಯ್ ಅವರು ‘”Did they surrender?‘ ಎಂದು ನನಗೆ ಮೆಸೇಜ್ ಮಾಡಿ ಕೇಳಿದರು. ಅದಕ್ಕೆ ನಾನು ಅವರಿಗೆ ‘”No sir, today they will surrender at any cost‘ ಎಂದು ಮೆಸೇಜ್ ಮಾಡಿದೆ.

ನಾಳೆ ಹಂಡ್ರೆಡ್ ಪರ್ಸೆಂಟ್ ಸರೆಂಡರ್ ಮಾಡಿಸುತ್ತೇವೆ: ಅಷ್ಟೊತ್ತಿಗೆ ನನ್ನ ಸ್ನೇಹಿತ ಕಾರ್ತಿಕ್(ಚಾ.ಸಾ.೧೦೮) ನಮ್ಮ ಮನೆಯ ಬಳಿ ಬಂದರು. ನಂತರ ನಾನು, ಕಾರ್ತಿಕ್ ಪಟ್ಟಣಗೆರೆ ಶೆಡ್ ಕಡೆಗೆ ಹೊರಟೆವು. ಈ ವೇಳೆ ನಾನು, ನಾಗರಾಜ್ ಹಾಗೂ ಲಕ್ಷ್ಮಣ್ ಅವರಿಗೆ ಫೋನ್ ಕಾಲ್ ಮಾಡಿದಾಗ ನಾಗರಾಜ್‌ಅವರು, ‘ನಾನು ಶೆಡ್ ಬಳಿ ಇದ್ದೇನೆ; ನೀವು ಬನ್ನಿ. ನೀವು ಬರುವಷ್ಟರಲ್ಲ ಲಕ್ಷ್ಮಣ್ ಕೂಡ ಬರುತ್ತೇನೆ ಎಂದು ತಿಳಿಸಿದ್ದಾರೆ’ ಎಂದರು. ನಾನು ಹಾಗೂ ಕಾರ್ತಿಕ್ ಶೆಡ್ ಬಳಿ ಹೋದಾಗ, ಅಲ್ಲಿ ರಾಘವೇಂದ್ರ, ನಾಗರಾಜ್, ದೀಪಕ್, ಕಾರ್ತಿಕ್ ಮತ್ತು ನಿಖಿಲ್ ನಾಯ್ಕ ಇದ್ದರು. ನಾನು ಶೆಡ್‌ನ ಗೇಟ್‌ನಿಂದ ೩೦ ಅಡಿ ದೂರದಲ್ಲೇ ನನ್ನ ಕಾರನ್ನು ನಿಲ್ಲಿಸಿದೆ. ನನ್ನ ಸ್ನೇಹಿತನನ್ನು ಕಾರಿನಲ್ಲೇ ಕೂತಿರಲು ಹೇಳಿ ನಾನು ಶೆಡ್‌ನ ಒಳಗೆ ಹೋದೆ. ಆಗ ನಾನು ಮತ್ತು ನಾಗರಾಜ್ ಸೇರಿ ಕಾರ್ತಿಕ್, ನಿಖಿಲ್ ನಾಯ್ಕ ಮತ್ತು ರಾಘವೇಂದ್ರ ಅವರನ್ನು ಉದ್ದೇಶಿಸಿ ನಡೆಯಿರಿ, ನೀವು ಈ ದಿನ ಸರೆಂಡರ್ ಆಗಬೇಕು ಎಂದು ಹೇಳಿದೆವು. ಆಗ ಕಾರ್ತಿಕ್, ‘ಈ ದಿನ ಭಾನುವಾರ, ಸರೆಂಡರ್ ಆದರೆ ಕೋರ್ಟ್‌ಗೆ ಹಾಜರುಪಡಿಸುವುದಿಲ್ಲ, ಹಾಗಾಗಿ ನಾಳೆ ಸರೆಂಡರ್ ಆಗುತ್ತೇವೆ’ ಎಂದ. ತಕ್ಷಣ ನಾಗರಾಜ್, ‘ಇಲ್ಲ ಈಗಾಗಲೇ ತಡವಾಗಿದೆ, ಈ ದಿನವೇ ಸರೆಂಡರ್ ಆಗಿ’ ಎಂದರು. ಆದರೆ ಆ ಮೂವರೂ ಅದಕ್ಕೆ ಒಪ್ಪಲಿಲ್ಲ.

ಆಗ ವಿಧಿಯಿಲ್ಲದೆ ನಾಗರಾಜ್ ಅವರು, ‘ಆಯ್ತು ನಾಳೆ ಸರೆಂಡರ್ ಆಗಿ’ ಎಂದರು. ನಂತರ ನಾನು, ಲಕ್ಷ್ಮಣ್ ಮತ್ತು ನಾಗರಾಜ್ ಶೆಡ್‌ನಿಂದ ಹೊರಗಡೆ ಬಂದೆವು. ಅಲ್ಲಿಂದ ನಾನು, ಲಕ್ಷ್ಮಣ್ ಮತ್ತು ನಾಗರಾಜ್ ಮೂವರೂ ಆರ್.ಆರ್.ನಗರದಲ್ಲಿರುವ ದರ್ಶನ್ ಮನೆಗೆ ಹೋದೆವು. ಅಲ್ಲಿ ದರ್ಶನ್ ಅವರೊಂದಿಗೆ ‘ಆ ಹುಡುಗರು ಇಂದು ಸರೆಂಡರ್ ಆಗಿಲ್ಲ, ನಾಳೆ Zಠಿ Zqs ಟoಠಿ ಹಂಡ್ರೆಡ್ ಪರ್ಸೆಂಟ್ ಸರೆಂಡರ್ ಮಾಡಿಸುತ್ತೇವೆ’ ಎಂದು ಹೇಳಿದೆವು.

” ಪೊಲೀಸ್ ಜೀಪ್ ನೋಡಿದ್ದೇ ತಡ ಉಲ್ಟಾ ಹೊಡೆದ ಕಾರ್ತಿಕ್, ನಿಖಿಲ್ ನಾಯ್ಕ; ಅದಕ್ಕೂ ಮೊದಲೇ ಇಂದು ಸರೆಂಡರ್ ಆಗಲ್ಲ ಎಂದಿದ್ದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ರಾಘವೇಂದ್ರ”

 

 

ಆಂದೋಲನ ಡೆಸ್ಕ್

Recent Posts

ಹೆಣ ಹಾಕಬೇಕಿದ್ದು ತೋಪಿನಲ್ಲಿ; ಬಿಸಾಕಿದ್ದು…?

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…

8 mins ago

ಎಸ್‌ಐಆರ್: ಪ್ರತಿಭಟನೆ ಹತ್ತಿಕ್ಕುವ ಯತ್ನ ಸರಿಯಲ್ಲ

ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಕೇಂದ್ರ ಚುನಾವಣಾ ಆಯೋಗ ಮತದಾರರ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಳ್ಳಲು ಹೊರಟಿದೆ ಎಂದು…

16 mins ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ದಲಿತ ಚಳವಳಿಗೆ ಬೇಕಾಗಿದೆ ‘ಹೊಳಪು’

ಆಶಾದಾಯಕ ಕನಸು ಬಿತ್ತುವ ಕೆಲಸಕ್ಕೆ ಚಾಲನೆ ಸಿಗಬೇಕು ಕರ್ನಾಟಕದ ರಾಜಕೀಯ ಚರಿತ್ರೆಯ ದಿಕ್ಕು ೧೯೮೩ ರಲ್ಲಿ ಬದಲಾಯಿತು. ಅರ್ಥಾತ್, ಸ್ವಾತಂತ್ರ್ಯೋತ್ತರ…

26 mins ago

ನಾಳೆಯಿಂದ ಮಡಿಕೇರಿಯಲ್ಲಿ ಕಾಫಿ ದಸರಾ ಸಂಭ್ರಮ

ನವೀನ್ ಡಿಸೋಜ ೫೦ ಮಳಿಗೆಗಳಲ್ಲಿ ಕಾಫಿ ವೈವಿಧ್ಯ; ೧೩ ಸಾಧಕ ಕೃಷಿಕರಿಗೆ ಸನ್ಮಾನ, ೬೮ ಪೌರಕಾರ್ಮಿಕರಿಗೆ ಗೌರವ ಮಡಿಕೇರಿ: ಮಂಜಿನ…

47 mins ago

ಎಚ್.ಡಿ.ಕೋಟೆಯಲ್ಲಿ ರಂಗೇರಿದ ನವರಾತ್ರಿ ಉತ್ಸವ

ಮಂಜು ಕೋಟೆ ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ೯ ದಿನಗಳು ವಿವಿಧ ಕಾರ್ಯಕ್ರಮ ಎಚ್.ಡಿ.ಕೋಟೆ: ವಿಶ್ವ ವಿಖ್ಯಾತ ಮೈಸೂರು ದಸರಾ ಭಾನುವಾರ…

53 mins ago