ಹೆಚ್.ಎಸ್. ದಿನೇಶ್‌ಕುಮಾರ್
ಮೈಸೂರು ಜಿಲ್ಲೆಯಲ್ಲಿ ೨೭ ಮಂದಿ ಪಶು ವೈದ್ಯರ ಹುದ್ದೆ ಖಾಲಿ
ಮೈಸೂರು: ಹಸು, ಎಮ್ಮೆ, ಕುರಿಗಳಂತಹ ಪ್ರಾಣಿಗಳು ಅನಾರೋಗ್ಯಕ್ಕೀಡಾದಲ್ಲಿ ತಕ್ಷಣವೇ ಅವುಗಳಿಗೆ ಚಿಕಿತ್ಸೆ ನೀಡಿ ಪಾಲನೆ ಮಾಡಬೇಕಾದ ಪಶು ಸಂಗೋಪನಾ ಇಲಾಖೆಯ ಮೈಸೂರು ಜಿಲ್ಲೆಯಲ್ಲಿ ೨೭ ವೈದ್ಯರ ಹುದ್ದೆಗಳು ಖಾಲಿ ಇವೆ.
ಸಾಕಷ್ಟು ಇಲಾಖೆಯಲ್ಲಿ ಇಂದು ಅಧಿಕಾರಿಗಳು ಹಾಗೂ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಬಹಳಷ್ಟು ವರ್ಷಗಳಿಂದ ಹುದ್ದೆಗಳಿಗೆ ನೇಮಕಾತಿ ಕೂಡ ಆಗಿಲ್ಲ. ಇದಕ್ಕೆ ಪಶು ಸಂಗೋಪನಾ ಇಲಾಖೆ ಕೂಡ ಹೊರತಲ್ಲ. ಮೈಸೂರು ಜಿಲ್ಲೆಯ ಒಂಬತ್ತು ತಾಲ್ಲೂಕುಗಳಲ್ಲಿ ಪಶು ಆಸ್ಪತ್ರೆ, ಪಶು ಚಿಕಿತ್ಸಾ ಕೇಂದ್ರ, ಪ್ರಾಥಮಿಕ ಪಶು ಆರೋಗ್ಯ ಕೇಂದ್ರ ಸೇರಿದಂತೆ ಒಟ್ಟು ೨೦೫ ಕೇಂದ್ರಗಳಿವೆ.
ಇದರ ಜೊತೆಗೆ ಸ್ಪೆಷಾಲಿಟ ಆಸ್ಪತ್ರೆ ಕೂಡ ಇದೆ. ಆದರೆ, ಹಲವು ಕೇಂದ್ರಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಅಂಕಿ-ಅಂಶಗಳ ಪ್ರಕಾರ ೫,೦೦೦ ಪ್ರಾಣಿಗಳಿಗೆ ಓರ್ವ ಪಶು ವೈದ್ಯರಿರಬೇಕು ಎಂದು ನಿಯಮ ಹೇಳುತ್ತದೆ. ಆದರೆ, ಅಗತ್ಯವಿರುವಷ್ಟು ವೈದ್ಯರು ಜಿಲ್ಲೆಯಲ್ಲಿ ಇಲ್ಲ. ಇದರಿಂದ ಸಂಕಷ್ಟಕ್ಕೆ ಒಳಗಾಗುವವರು ಮಾತ್ರ ರೈತರು.
ಮೈಸೂರು ಜಿಲ್ಲೆಗೆ ೧೩೯ ಪಶು ವೈದ್ಯರ ಹುದ್ದೆಗಳು ಮಂಜೂರಾಗಿವೆ. ಆದರೆ, ೧೦೨ ಮಂದಿ ವೈದ್ಯರ ನೇಮಕಾತಿ ಮಾತ್ರ ಆಗಿದೆ. ಇದರ ಜೊತೆಗೆ ೧೦ ಮಂದಿ ವೈದ್ಯರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಆದರೂ, ೨೭ ಮಂದಿ ವೈದ್ಯರ ಹುದ್ದೆಗಳು ಖಾಲಿ ಇವೆ.
ಜಿಲ್ಲೆಯಲ್ಲಿ ಮೈಸೂರು, ನಂಜನಗೂಡು, ಕೆ.ಆರ್.ನಗರ, ಹುಣಸೂರು ಸೇರಿದಂತೆ ಒಟ್ಟು ಒಂಬತ್ತು ತಾಲ್ಲೂಕುಗಳಲ್ಲಿ ೯,೩೩,೨೯೮ ಪಶುಗಳಿವೆ. ಅವುಗಳಲ್ಲಿ ೪,೯೨,೫೮೯ ಹಸುಗಳು, ೨೧,೬೮೨ ಎಮ್ಮೆಗಳು, ೨,೦೩,೪೬೩ ಕುರಿಗಳು, ೨,೦೮,೨೦೬ ಮೇಕೆಗಳು ಹಾಗೂ ೭,೩೪೯ ಹಂದಿಗಳು ಇವೆ.
ಇವುಗಳಲ್ಲಿ ಅನಾರೋಗ್ಯಕ್ಕೀಡಾಗುವ ಪ್ರಾಣಿಗಳನ್ನು ರೈತರು ಪಶು ಆಸ್ಪತ್ರೆಗಳಿಗೆ ತರುವುದು ವಾಡಿಕೆ. ಆದರೆ, ವೈದ್ಯರ ಕೊರತೆ ಕಾರಣದಿಂದಾಗಿ ರೈತರಿಗೆ ತೊಂದರೆ ಎದುರಾಗಿದೆ. ಅದರಲ್ಲಿಯೂ ವೈದ್ಯರುಗಳು ರಜೆ ಮೇಲೆ ತೆರಳಿದಲ್ಲಿ ಅನ್ಯಮಾರ್ಗವಿಲ್ಲದೆ ವೈದ್ಯರಲ್ಲದ ಅಲ್ಲಿನ ಸಿಬ್ಬಂದಿಗಳೇ ಪಶುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇದಲ್ಲದೆ, ತಾಂತ್ರಿಕ ಸಿಬ್ಬಂದಿ, ವಾಹನ ಚಾಲಕರು, ಡಿ ದರ್ಜೆ ನೌಕರರೂ ಸೇರಿದಂತೆ ಒಟ್ಟು ೧೬೮ ಹುದ್ದೆಗಳು ಖಾಲಿ ಇವೆ. ಆದರೆ, ಡಿ ದರ್ಜೆ ನೌಕರರಾಗಿ ೨೩೦ ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರುವುದು ಸಮಾಧಾನಕರ ಸಂಗತಿ. ಪಶುಗಳಿಗೆ ಚಿಕಿತ್ಸೆ ನೀಡಬೇಕಾದಲ್ಲಿ ಅವರುಗಳ ಅವಶ್ಯಕತೆ ಹೆಚ್ಚು ಇರುತ್ತದೆ. ಇನ್ನು ೬ ಮಂದಿ ವಾಹನ ಚಾಲಕರು ಕೂಡ ಹೊರ ಗುತ್ತಿಗೆ ನೌಕರರು.
ಪಸು ಸಂಗೋಪನಾ ಇಲಾಖೆಗೆ ತನ್ನದೇ ಆದ ಕರ್ತವ್ಯಗಳಿವೆ. ಹೈನುಗಾರಿಕೆ, ಕುರಿ ಸಾಕಣೆ ಸೇರಿದಂತೆ ರೈತರು ಕೃಷಿಯ ಜೊತೆಗೆ ಪ್ರಾಣಿಗಳ ಸಾಕಾಣಿಕೆಯಲ್ಲಿ ಜೀವನ ಕಂಡುಕೊಂಡಿದ್ದಾರೆ. ಹೀಗಾಗಿ, ಸರ್ಕಾರ ಕೂಡಲೇ ಖಾಲಿ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು ಎಂಬುದು ರೈತರ ಒತ್ತಾಯವಾಗಿದೆ.
” ಮೈಸೂರು ಜಿಲ್ಲೆಯಲ್ಲಿ ಪಶು ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಇರುವುದು ನಿಜ. ಆದರೆ, ಅತೀ ಶೀಘ್ರದಲ್ಲಿ ಸರ್ಕಾರ ವೈದ್ಯರ ಹುದ್ದೆಗಳಿಗೆ ನೇಮಕಾತಿ ಮಾಡಲಿದೆ. ಇನ್ನು ಜಿಲ್ಲೆಯಲ್ಲಿ ಡಿ ಗ್ರೂಪ್ ನೌಕರರ ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದಲ್ಲಿ ಸಂಪೂರ್ಣವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಹೀಗಾಗಿ, ಜಿಲ್ಲೆಯಲ್ಲಿ ಅಷ್ಟಾಗಿ ಸಮಸ್ಯೆ ಎದುರಾಗಿಲ್ಲ.”
-ಸಿ. ನಾಗರಾಜು, ಉಪನಿರ್ದೇಶಕರು, ಪಶುಸಂಗೋಪನಾ ಇಲಾಖೆ, ಮೈಸೂರು
ಕೇರಳಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಆಗ್ರಹಿಸಿ ಕೇರಳಂ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಎಸ್‌ಐಆರ್…
ಶ್ರೀರಂಗಪಟ್ಟಣ: ಇಲ್ಲಿ ನಡೆಯುವ ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳನ್ನು ಆಯ್ಕೆ ಮಾಡಲಾಗಿದೆ. ಧನಂಜಯ, ಲಕ್ಷ್ಮಿ ಹಾಗೂ ರೂಪ ಆನೆಗಳು ಈ…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಸಿದ್ಧತೆಗಳು ಬಿರುಸುಗೊಂಡಿವೆ. ದಸರಾ ಗಜಪಡೆ ಹಾಗೂ ಅಶ್ವಪಡೆಗೆ ನಡೆದ ಮೂರನೇ ಹಂತದ ಕುಶಾಲತೋಪು…
ನವದೆಹಲಿ: ಸತ್ಯಕ್ಕೆ ಅಂತಿಮ ಗೆಲುವಾಗಲಿದೆ. ಈ ಹೋರಾಟದಿಂದ ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್…
ಮೈಸೂರು: ಬಹುಭಾಷಾ ನಟ ಪ್ರಭುದೇವ್ ಅವರು ತಮ್ಮ ತಾಯಿಯೊಂದಿಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದರು. ನಾಳೆ…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…