Andolana originals

ಮಕ್ಕಳ ಮನದಂಗಳದಲ್ಲಿ ಗಾಂಧಿ ಚಿಂತನೆಯ ಬೇರುಗಳು

ಗಾಂಧೀಜಿಯವರ ಜೀವನವೇ ತೆರೆದ ಪುಸ್ತಕ: 

ಇಡೀ ವಿಶ್ವವೇ ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯಾಗ್ರಹಗಳನ್ನು ಗೌರವಿಸುತ್ತದೆ. ಗಾಂಧಿಯವರು ತಮ್ಮ ಶಾಲಾ ದಿನಗಳಲ್ಲಿಯೇ ಸತ್ಯ ಮತ್ತು ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡಿದ್ದರು. ಗಾಂಧಿಜಿಯವರ ಸರಳ ಜೀವನ ಮತ್ತು ಉನ್ನತ ಚಿಂತನೆಗಳು ಇಂದಿಗೂ ಯುವ ಜನತೆಗಳಿಗೆ ಸೂರ್ತಿಯಾಗಿವೆ. ಗಾಂಧಿಜಿಯವರ ಜೀವನವೇ ಒಂದು ತೆರೆದ ಪುಸ್ತಕವಾಗಿದೆ. ಅವರ ದೂರದೃಷ್ಟಿ ಭಾರತವನ್ನು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಗೊಳಿಸಿತು. ಗಾಂಧಿಯವರು ಕೇವಲ ನಮ್ಮ ದೇಶದ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಮಾತ್ರ ಹೋರಾಡಲಿಲ್ಲ. ಬದಲಿಗೆ ನಮ್ಮ ದೇಶದಲ್ಲಿ ಸಾಮಾಜಿಕವಾಗಿ ಸ್ವಾತಂತ್ರ್ಯ ಸಿಗಬೇಕೆಂದು ಬಯಿಸಿದ್ದರು. ಮಹಿಳೆಯರು ಕೂಡ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಮುಂಚೂಣಿಯಲ್ಲಿರಲು ಮಹಾತ್ಮ ಗಾಂಧಿಯವರು ಪ್ರೇರೇಪಿಸಿದರು. ಗಾಂಧಿಜಿಯವರು ಅಷ್ಟು ವರ್ಷಗಳ ಕಠಿಣ ಪರಿಶ್ರಮದ ಪ್ರತಿ-ಲವಾಗಿ ನಮಗೆ ಸ್ವಾತಂತ್ರ್ಯ ಲಭಿಸಿತು. ಹಿಂಸೆಯಿಂದ ಯಾವ ಸಮಸ್ಯೆಯನ್ನೂ ಬಗೆಹರಿಸಲು ಸಾಧ್ಯವಿಲ್ಲ’ ಬದಲಿಗೆ ಅಹಿಂಸೆಯಿಂದ ಸಾಧ್ಯವಿದೆ ಎಂದು ಅವರು ಹೇಳುತ್ತಿದ್ದರು. ಹಾಗಾಗಿ ಗಾಂಧಿಯವರ ಅಹಿಂಸಾ ತತ್ವವನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ. ದೇಶಪ್ರೇಮಿಗಳಾಗೋಣ. ದೇಶ ರಕ್ಷಕರಾಗೋಣ. ಶಾಂತಿ, ಸಹಿಷ್ಣುತೆ ಮತ್ತು ಸೌಹಾರ್ದತೆಯನ್ನು ಬೆಳೆಸಿಕೊಳ್ಳೋಣ. ಅದೇ ನಾವು ಅವರಿಗೆ ಕೊಡುವ ಗೌರವವಾಗಿದೆ.

ಪ್ರಾರ್ಥನ , ೮ನೇ ತರಗತಿ, ಕನ್ನಡ ವಿಕಾಸ ವಿದ್ಯಾ ಸಂಸ್ಥೆ, ರಾಮಕೃಷ್ಣ ನಗರ, ಮೈಸೂರು

ಅವರ ಬದುಕೇ ನಮಗೆ ಸಂದೇಶ: 

ನಾನು ಕಂಡ ಗಾಂಧಿ ಹಳ್ಳಿಗಳ ಕನಸುಗಾರ. ‘ಭಾರತದ ಆತ್ಮ ಹಳ್ಳಿಗಳಲ್ಲಿದೆ’ ಎಂದು ನಂಬಿದ್ದರು. ಖಾದಿ, ಗ್ರಾಮದ್ಯೋಗದ ಮೂಲಕ ಸ್ವಾವಲಂಬನೆ ಬೋಧಿಸಿದರು. ಸಮಾಜದಲ್ಲಿದ್ದ ಅಸ್ಪೃಶ್ಯತೆ ಎಂಬ ಕಳಂಕವನ್ನು ತೊಡೆದು ಹಾಕಲು ದಲಿತರನ್ನು  ಹರಿಜನರು’-ದೇವರ ಮಕ್ಕಳು ಎಂದು ಕರೆದು ಅವರನ್ನು ಅಪ್ಪಿಕೊಂಡರು. ದೇವಸ್ಥಾನ, ಬಾವಿ, ಶಾಲೆಗಳಲ್ಲಿ ಎಲ್ಲರಿಗೂ ಸಮಾನತೆ ಸಿಗಬೇಕು ಎಂದು ಹೋರಾಡಿದರು. ಹಿಂದು-ಮುಸ್ಲಿಂ ಗಲಭೆ ನಡೆದಾಗ ತಮ್ಮ ಜೀವನವನ್ನೇ ಪಣಕ್ಕಿಟ್ಟು ಉಪವಾಸ ಮಾಡಿ ಶಾಂತಿ ತಂದರು.

ಮಹಿಳೆಯರು ಮನೆಯಿಂದ ಹೊರಬಂದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಮಾಡಿ ಅವರಿಗೆ ಗೌರವ ತಂದುಕೊಟ್ಟರು. ‘ಅವರಿಗೆ ಸ್ವರಾಜ್ಯ ಎಂದರೆ ಕೇವಲ ರಾಜಕೀಯ ಬಿಡುಗಡೆಯಲ್ಲ, ಸಮಾಜದ ಕೊನೆಯ ವ್ಯಕ್ತಿಗೂ ನ್ಯಾಯ ಸಿಗಬೇಕು ಎಂಬುದೇ ಸರ್ವೋದಯ. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಅವರಂತಹ ನಾಯಕರಿಗೆ ಗಾಂಧಿಜಿ ಸೂರ್ತಿ. ಗಾಂಧಿಜಿ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ, ಒಂದು ಆದರ್ಶ. ಅವರ ಬದುಕೇ ನಮಗೆ ಸಂದೇಶ.

ಜಸ್ಮಿತ ಮಹೇಶ್, ೯ನೇ ತರಗತಿ, ವಿಜಯ ವಿಠಲ ವಿದ್ಯಾ ಶಾಲಾ, ಸರಸ್ವತಿಪುರಂ, ಮೈಸೂರು.

ಗಾಂಧಿ ಮಾರ್ಗದಿಂದ ಉತ್ತಮ ಸಮಾಜ: 

ಮಹಾತ್ಮ ಗಾಂಧಿಜಿ ಭಾರತದ ಇತಿಹಾಸದಲ್ಲಿ ಅಜರಾಮರ ವ್ಯಕ್ತಿ. ಅವರ ಜೀವನ ಮತ್ತು ಆದರ್ಶಗಳು ನಮಗೆ ಸದಾ ದಾರಿದೀಪವಾಗಿವೆ. ಸತ್ಯ, ಅಹಿಂಸೆ, ಪ್ರೀತಿ ಮತ್ತು ಶಾಂತಿಯ ಮಾರ್ಗದಲ್ಲಿ ನಡೆದು ನಾವು ಉತ್ತಮ ಸಮಾಜವನ್ನು ನಿರ್ಮಿಸಬಹುದು. ‘ನೀವು ಜಗತ್ತಿನಲ್ಲಿ ನೋಡಲು ಬಯಸುವ ಬದಲಾವಣೆ ನೀವೇ ಆಗಿರಿ’ ಎಂಬ ಗಾಂಧಿಜಿಯ ಮಾತು ಎಲ್ಲರಿಗೂ ಪ್ರೇರಣೆ ನೀಡುತ್ತದೆ. ಆ ಕಾರಣದಿಂದ ಗಾಂಧಿಜಿ ಎಂದಿಗೂ ಮರೆಯಲಾಗದ ಮಹಾನ್ ನಾಯಕರು. ಗಾಂಧಿಜಿಯವರು ಅಸ್ಪೃಶ್ಯತೆಯನ್ನು ವಿರೋಧಿಸಿದರು. ಹರಿಜನರ ಹಕ್ಕುಗಳಿಗಾಗಿ ಹೋರಾಟ ನಡೆಸಿದರು. ಮಹಿಳೆಯರ ಸಬಲೀಕರಣಕ್ಕೂ ಒತ್ತು ನೀಡಿದರು. ಗಾಂಧಿಜಿಯವರು ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸಿದರು. ಖಾದಿ ಬಳಕೆಯ ಮೂಲಕ ದೇಶೀಯ ಕೈಗಾರಿಕೆಗಳಿಗೆ ಬೆಂಬಲ ನೀಡಿದರು. ಗಾಂಧಿಜಿಯವರು ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸಿದರು. ಅವರು ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರಿಗೂ ಸಮಾನತೆ ಬೇಕೆಂದು ಬೋಧಿಸಿದರು.

ಎಂ.ಎಸ್. ತೃಪ್ತಿ, ೯ನೇ ತರಗತಿ, ಮಾಂಡವ್ಯ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನೆಹರು ನಗರ, ಮಂಡ್ಯ

ಜಗತ್ತಿಗೆ ಶಾಂತಿ ಪಾಠ ಕಲಿಸಿದವರು ಗಾಂಧಿಜಿ: 

ಮಹಾತ್ಮ ಗಾಂಧಿಜಿಯವರು ನನ್ನ ಕಣ್ಣಲ್ಲಿ ಕೇವಲ ಇತಿಹಾಸದ ಪುಟಗಳಲ್ಲಿರುವ ಒಬ್ಬ ನಾಯಕರಲ್ಲ. ಅವರು ಇಂದಿನ ತಲೆಮಾರಿಗೆ ಬೇಕಾದ ಅತ್ಯಂತ ದೊಡ್ಡ ಆದರ್ಶ ಮತ್ತು ಶಕ್ತಿ. ಭಾರತಕ್ಕೆ ಬ್ರಿಟೀಷರಿಂದ ಸ್ವಾತಂತ್ರ್ಯ ತಂದುಕೊಟ್ಟ ಈ ಮಹಾತ್ಮ, ಇಡೀ ಜಗತ್ತಿಗೆ ಶಾಂತಿಯ ಪಾಠ ಕಲಿಸಿದವರು. ಅದಕ್ಕಾಗಿಯೇ ಅವರು ನನ್ನ ಜೀವನದ ಅತ್ಯಂತ ಪ್ರಿಯವಾದ ಮಾದರಿ ಆಗಿದ್ದಾರೆ. ನನ್ನನ್ನು ಆಕರ್ಷಿಸಿದ ಗಾಂಧಿಜಿಯವರ ತತ್ವಗಳು ಅನನ್ಯವಾದವು. ಕತ್ತಿ, ಬಂದೂಕುಗಳಿಲ್ಲದೆ ಕೇವಲ ‘ಸತ್ಯ’ ಮತ್ತು ‘ಅಹಿಂಸೆ’ಯ ಮೂಲಕ ಜಗತ್ತಿನ ಅತಿ ದೊಡ್ಡ ಬ್ರಿಟೀಷ್ ಸಾಮ್ರಾಜ್ಯವನ್ನು ಮಣಿಸಬಹುದು ಎಂದು ಗಾಂಧಿಜಿ ತೋರಿಸಿಕೊಟ್ಟರು. ಕೋಪ ಮತ್ತು ಹಿಂಸೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಶಾಂತಿಯಿಂದ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ನಾನು ಇವರಿಂದ ಕಲಿತಿದ್ದೇನೆ. ಗಾಂಧಿಜಿಯವರು ‘ಸ್ವಚ್ಛತೆಯೇ ದೇವರು’ ಎಂದು ನಂಬಿದ್ದರು. ತಮ್ಮ ಆಶ್ರಮದ ಶೌಚಾಲಯಗಳನ್ನು ತಾವೇ ಸ್ವಚ್ಛಗೊಳಿಸುತ್ತಿದ್ದರು. ರಾಟೆಯ ಮೂಲಕ ತಮಗೆ ಬೇಕಾದ ಬಟ್ಟೆಯನ್ನು ತಾವೇ ನೇಯ್ದುಕೊಳ್ಳುತ್ತಿದ್ದರು. ಇಂದಿನ ‘ಸ್ವಚ್ಛ ಭಾರತ’ ಮತ್ತು ‘ಆತ್ಮ ನಿರ್ಭರ ಭಾರತ’ದ ಪರಿಕಲ್ಪನೆಗೆ ಅವರೇ ನಿಜವಾದ ಪ್ರೇರಣೆ. ಗಾಂಧಿಜಿ ಎಂದರೆ ಕೇವಲ ಕರೆನ್ಸಿ ನೋಟುಗಳ ಮೇಲಿರುವ ಚಿತ್ರವಲ್ಲ; ನಮ್ಮ ದಿನನಿತ್ಯದ ಬದುಕಿನಲ್ಲಿ ನಾವು ಅಳವಡಿಸಿಕೊಳ್ಳಬೇಕಾದ ಪವಿತ್ರ ಗುಣಗಳು. ಗಾಂಽಜಿಯವರ ಆಲೋಚನೆಗಳು ಎಂದಿಗೂ ಹಳೆಯದಾಗುವುದಿಲ್ಲ. ನಾವು ಪ್ರೀತಿ, ಶಾಂತಿ ಮತ್ತು ಪ್ರಾಮಾಣಿಕತೆಯಿಂದ ಬದುಕಿದಾಗ ಮಾತ್ರ ನಮ್ಮ ಕಣ್ಣಲ್ಲಿರುವ ಗಾಂಧಿಜಿಗೆ ನಾವು ನೀಡುವ ಗೌರವ ನಿಜವಾದ ಗೌರವವಾಗುತ್ತದೆ.

ವರ್ಷಿಣಿ, ೧೦ನೇ ತರಗತಿ, ಸರ್ಕಾರಿ ಪ್ರೌಢಶಾಲೆ, ಉಮ್ಮಡಿಹಳ್ಳಿ, ಮಂಡ್ಯ ತಾಲ್ಲೂಕು

 

 

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

2 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

14 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

15 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

15 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

15 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

15 hours ago