Andolana originals

ಕೈ ಸುಡುತ್ತಿದೆ ಎಳನೀರು ಬೆಲೆ

ಪ್ರಶಾಂತ್ ಎಸ್.

ಮೈಸೂರು: ಎಲ್ಲೆಡೆ ಬಿರು ಬಿಸಿಲು ಜನರನ್ನು ಹೈರಾಣಾಗಿಸುತ್ತಿದೆ. ಬಿಸಿಲ ಬೇಗೆಯಿಂದ ದಾಹ ನೀಗಿಸಿಕೊಳ್ಳಲು ಜನರು ಎಳನೀರು ಮೊರೆ ಹೋಗಿದ್ದಾರೆ. ಬೇಡಿಕೆ ಹೆಚ್ಚಾದಂತೆ ಎಳನೀರಿನ ದರ ದಿಢೀರನೆ ಗಗನಕ್ಕೇರಿದೆ. ಎರಡು ತಿಂಗಳ ಹಿಂದೆ ೩೦ರಿಂದ ೪೦ ರೂ. ಇದ್ದ ಬೆಲೆ ಇದೀಗ ಕೆಲವೆಡೆ ಸಣ್ಣ ಗಾತ್ರದ ಎಳನೀರು ೫೦ ರೂ.ಗೆ ಹಾಗೂ ಸಾಧಾರಣ ಗಾತ್ರದ ಎಳನೀರು ೬೦ ರೂ. ಗೆ ಜಿಗಿದಿದೆ. ಕಳೆದ ಎರಡು ವರ್ಷಗಳಿಂದ ಎಳನೀರಿನ ಬೆಲೆ ಏರಿಕೆಯಾಗುತ್ತಲೇ ಇದೆ.

೨೦೨೫ರ ಬಳಿಕ ಏರಿಕೆಯಾದ ದರ: ಎರಡು ವರ್ಷಗಳ ಹಿಂದೆ ೨೫ ರಿಂದ ೩೦ರೂ.ಗೆ ಸಾಧಾರಣ ಗಾತ್ರದ ಎಳನೀರು ಸಿಗುತ್ತಿತ್ತು. ಆದರೆ, ೨೦೨೫ರ ಬಳಿಕ ದರ ಏರು ಹಾದಿಯಲ್ಲಿದೆ. ತೆಂಗು ಬೆಳೆಗಾರರಿಗೆ ಕೇವಲ ೨೮ರಿಂದ ೩೦ರೂ. ಸಿಗುತ್ತಿದ್ದು, ಉಳಿದ ಹಣ ಮಧ್ಯವರ್ತಿಗಳು ಮತ್ತು ಮಾರಾಟಗಾರರ ಪಾಲಾಗುತ್ತಿದೆ. ೨೦೨೩ರಲ್ಲಿ ಸ್ವಲ್ಪ ಮಟ್ಟದ ಬರಗಾಲ ಕಾಡಿದ ಪರಿಣಾಮ ತೆಂಗಿನ ಮರಗಳು ಒಣಗಿ ಕಳೆದ ವರ್ಷ ಇಳುವರಿ ಕುಸಿದಿತ್ತು. ೨೦೨೪ರಲ್ಲಿ ಉತ್ತಮ ಮಳೆಯಾಗಿದ್ದು, ಒಣಗಿದ್ದ ಮರಗಳು ಚೇತರಿಸಿಕೊಂಡು ಮರು ಜೀವ ಪಡೆದಿದ್ದವು. ಆ ವರ್ಷ ಎಳನೀರಿಗೆ ಹೆಚ್ಚಿನ ಬೇಡಿಕೆ ಇದ್ದುದರಿಂದ ಬಹುತೇಕ ರೈತರು ಗರಿಷ್ಟ ಪ್ರಮಾಣದಲ್ಲಿ ಎಳನೀರು ಇಳಿಸಿದ್ದರು.

ಬಂಪರ್ ಬೆಲೆ: ತೆಂಗಿನಕಾಯಿಗೆ ಹೋಲಿಸಿದರೆ ಎಳನೀರಿಗೆ ಬಂಪರ್ ಬೆಲೆ ಬಂದಿದೆ. ಜನವರಿ ಅಂತ್ಯ ಭಾಗದಲ್ಲೇ ಚಳಿ ಕಡಿಮೆಯಾಗಿ ಬಿಸಿಲಿನ ಬೇಗೆ ಹೆಚ್ಚಾಗತೊಡಗಿದ್ದು, ಸಹಜವಾಗಿಯೇ ಜನರು ಎಳನೀರಿನತ್ತ ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಬೆಲೆ ಏಕಾಏಕಿ ಕೆಲವೆಡೆ ೫೦ ರಿಂದ ೬೦ರೂ.ಗೆ ಏರಿಕೆಯಾಗಿದೆ. ಸಣ್ಣ ಗಾತ್ರದ ಎಳನೀರಿಗೆ ೫೦ರೂ. ಸಾಧಾರಣ ಗಾತ್ರದ ಎಳನೀರಿಗೆ ೬೦ರೂ. ಬೆಲೆ ನಿಗದಿ ಮಾಡಲಾಗಿದೆ.

ವ್ಯಾಪಾರಿಗಳಿಗೆ ಹೆಚ್ಚು ಲಾಭ: ಎಳನೀರಿನ ಬೆಲೆ ಹೆಚ್ಚಾಗಿದ್ದರೂ ಅದರ ಲಾಭಾಂಶ ಮಾತ್ರ ರೈತರ ಕೈಸೇರುತ್ತಿಲ್ಲ. ವ್ಯಾಪಾರಿಗಳು ರೈತರಿಗೆ ೨೮ ರಿಂದ ೩೦ರೂ. ನೀಡಿ ತೋಟದಲ್ಲೇ ಎಳನೀರು ಖರೀದಿಸುತ್ತಿದ್ದಾರೆ. ವ್ಯಾಪಾರಿಗಳೇ ತೋಟಕ್ಕೆ ಕಾರ್ಮಿಕರನ್ನು ಕರೆತಂದು ತೆಂಗಿನ ಮರಗಳಿಂದ ಎಳನೀರು ಇಳಿಸಿ ಕೊಂಡೊಯ್ಯುತ್ತಿದ್ದಾರೆ. ಮರದಿಂದ ಎಳನೀರು ಇಳಿಸುವ ಕಾರ್ಮಿಕರ ಕೂಲಿ, ವಾಹನಗಳಿಗೆ ಎಳನೀರು ತುಂಬುವುದು, ಸಾಗಣೆ ವೆಚ್ಚ ಕಳೆದರೂ ವ್ಯಾಪಾರಿಗಳಿಗೆ ೨೦ರೂ. ಲಾಭವಾಗುತ್ತಿದೆ. ಆದರೆ, ತೆಂಗು ಬೆಳೆಗಾರನಿಗೆ ೨೮ ರಿಂದ ೩೦ರೂ. ಮಾತ್ರ ಸಿಗುತ್ತಿದೆ.

” ಹಳ್ಳಿಯಿಂದ ನಗರ ಪ್ರದೇಶಗಳವರೆಗೆ ಎಲ್ಲೆಡೆ ಎಳನೀರಿನ ದರವು ಸಾಮಾನ್ಯ ಜನರ ಕೈಗೆಟುಕದ ಮಟ್ಟಕ್ಕೆ ತಲುಪುತ್ತಿದ್ದು, ಒಂದು ಎಳನೀರಿನ ಬೆಲೆ ಐವತ್ತು ರೂಪಾಯಿಗಳ ಆಸುಪಾಸಿನಲ್ಲಿದೆ. ವ್ಯಾಪಾರಿಗಳ ಪ್ರಕಾರ, ಈ ಬಾರಿ ಮಳೆ ಕೊರತೆಯಿಂದ ಇಳುವರಿ ಕಡಿಮೆ ಮತ್ತು ಸಾರಿಗೆ ವೆಚ್ಚ ಹೆಚ್ಚಾಗಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.”

” ತೋಟದಲ್ಲಿ ಒಂದು ಎಳನೀರಿಗೆ ೨೮ ರಿಂದ ೩೦ ರೂ.ನಂತೆ ತೋಟದ ಮಾಲೀಕರು ನಮಗೆ ನೀಡುತ್ತಾರೆ. ನಾವು ವಾಹನದ ಬಾಡಿಗೆ ಹಾಗೂ ಮರ ಹತ್ತುವ ಕಾರ್ಮಿಕನಿಗೂ ಕೂಲಿ ನೀಡಬೇಕಿದೆ. ಹಾಗಾಗಿ ೫೦ರಿಂದ ೬೦ ರೂ.ಗೆ ಮಾರುತ್ತೇವೆ.”

 ಶಿವು, ಎಳನೀರು ಅಂಗಡಿ ಮಾಲೀಕ

 

 

ಆಂದೋಲನ ಡೆಸ್ಕ್

Recent Posts

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

7 hours ago

ಭಾರೀ ಮಳೆಗೆ ಮನೆ ಕುಸಿತ: ಲಕ್ಷಾಂತರ ರೂ. ನಷ್ಟ

ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…

8 hours ago

ಧರ್ಮಸ್ಥಳ ಸೌಜನ್ಯ ಪ್ರಕರಣ: ಮರು ತನಿಖೆಗೆ ಸುಪ್ರೀಂಕೋರ್ಟ್ ಮಹತ್ವದ ಆದೇಶ

ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…

9 hours ago

ಕಾಡಾನೆ ದಾಳಿ: ವ್ಯಕ್ತಿ ಸಾವು

ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…

11 hours ago

ಗಣೇಶ ವಿಸರ್ಜನೆ ಮೆರವಣಿಗೆ ರಾಜಕೀಯ ದಾಳವಾಗದಿರಲಿ…

ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…

15 hours ago

ಕಾಂಗ್ರೆಸ್‌ನಲ್ಲೀಗ ಆತಂಕದ ಕಾರ್ಮೋಡ…

ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…

15 hours ago