Andolana originals

ಕಪಿಲಾ ತೀರದ ಬಿಸಿ ನೀರಿನ ವ್ಯಾಪಾರ ನಿಂತಿಲ್ಲ, ಸುಲಿಗೆ ತಪ್ಪಿಲ್ಲ

ನಂಜನಗೂಡು : ಮುಜರಾಯಿ ಇಲಾಖೆ ಅದೀನದಲ್ಲಿರುವ ಸುಬ್ರಹ್ಮಣ್ಯದಲ್ಲಿ 1 ಬಕೆಟ್ ನೀರಿಗೆ 5 ರೂ. ಆದರೆ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ 50 ರೂ. ಇದು ದೇವಾಲಯಗಳಲ್ಲಿ ನಡೆಯುತ್ತಿರುವ ಭಕ್ತರ ಶೋಷಣೆಗೆ ಒಂದು ಉದಾಹರಣೆ.

ಹಿಮಾಲಯದ ತಪ್ಪಲಿನಲ್ಲಿ ಒಂದು ಬಕೆಟ್ ನೀರಿನ ಬೆಲೆ 20 ರೂ. ಆದರೆ ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಕಪಿಲಾ ತೀರದಲ್ಲಿ ಬಕೆಟ್ ನೀರಿಗೆ 50 ರೂ. ನಿಂದ 100 ರೂ. ಪಡೆಯಲಾಗುತ್ತಿದೆ ಎಂಬ ಸುದ್ದಿ ಫೆ. 12ರಂದು ‘ಆಂದೋಲನ’ ದಿನ ಪತ್ರಿಕೆ ಯಲ್ಲಿ ಪ್ರಕಟವಾದಾಗ ಒಂದೆರಡು ವಾರ ಸ್ಥಗಿತವಾಗಿದ್ದ ಬಿಸಿ ನೀರಿನ ಸುಲಿಗೆ ಈಗ ಮತ್ತೆ ರಾಜಾರೋಷವಾಗಿ ಪುನಾರಂಭವಾಗಿದೆ. ಶ್ರೀಕಂಠೇಶ್ವರನ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಬೆಳಗಿನ ಜಾವ ಸೇರಿದಂತೆ ಚಳಿಯಲ್ಲಿ ತೀರ್ಥ ಸ್ನಾನ ಮಾಡುವವರು ಬಿಸಿ ನೀರಿನ ಸ್ನಾನ ಮಾಡಲು ಬಯಸುತ್ತಾರೆ. ಮಕ್ಕಳಿಗಂತೂ ತಣ್ಣೀರಿನ ಸ್ನಾನ ಮಾಡಿಸಲು ಒಪ್ಪದ ಅವರು ಹಣ ನೀಡಿ ಬಿಸಿ ನೀರು ಖರೀದಿಸಿ ಸ್ನಾನ ಮಾಡಿಸುತ್ತಾರೆ.

5 ವರ್ಷಗಳ ಹಿಂದೆ ಕಪಿಲಾ ಸ್ನಾನಘಟ್ಟದಲ್ಲಿ ದೇವಾಲಯದ ವತಿಯಿಂದ ಎರಡು ಬಾಯ್ಲರ್‌ಗಳನ್ನು ಸ್ಥಾಪಿಸಿ ಭಕ್ತರಿಗೆ 5 ರೂ. ಗಳಿಗೆ ಒಂದು ಬಕೆಟ್ ಬಿಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವ್ಯವಸ್ಥೆಯನ್ನು ದೇವಾಲಯದಿಂದ ಸಂಬಳ ಪಡೆಯುವ ಸಿಬ್ಬಂದಿಗಳ ಮೂಲಕವೇ ನಿರ್ವಹಿಸಲಾಗುತ್ತಿತ್ತು. ಆದರೆ ದೇವಾಲಯದ ಈ ಸೌಲಭ್ಯ ಕೆಲವೇ ದಿನಗಳಲ್ಲಿ ಸುಲಿಗೆ ರೂಪ ತಾಳಿ ದೇವಾಲಯದ ಪಾಲಿಗೆ ಉಚಿತವಾಗಿ ಭಕ್ತರ ಜೇಬಿಗೆ ಕನ್ನ ಆಗಿ ಪರಿವರ್ತನೆಯಾಗಿ ಸುಲಿಗೆಕೋರರ ಪಾಲಿಗೆ ದಿನಕ್ಕೆ 10-20 ಸಾವಿರ ರೂ. ಆದಾಯಕ್ಕೆ ದಾರಿಯಾಯಿತು. ನಿತ್ಯ ಕನಿಷ್ಠ 200 ಬಕೆಟ್ ನೀರಿನ ವ್ಯಾಪಾರವಾಗುತ್ತಿದ್ದು, ಭಾನುವಾರ, ಸೋಮವಾರ ಹುಣ್ಣಿಮೆ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ 800 ಬಕೆಟ್‌ವರೆಗೆ ಇಲ್ಲಿ ವ್ಯಾಪಾರ ವಾಗುತ್ತದೆ ಎನ್ನುತ್ತಾರೆ ಈ ಕಾರ್ಯಕ್ಕೆ ದಿನಗೂಲಿ ಸಿಬ್ಬಂದಿ. ಅವರುಗಳೇ ಹೇಳುವ ಪ್ರಕಾರ, ಒಂದು ಬಕೆಟ್‌ಗೆ 50 ರೂ. ಆದರೆ 100 ಬಕೆಟ್‌ಗೆ 5,000 ರೂ. ನಿತ್ಯ ಕನಿಷ್ಠ 200 ಬಕೆಟ್ ಎಂದರೂ 10,000 ರೂ. , ದಿನದ ಆದಾಯ. ವಿಶೇಷ ದಿನಗಳಲ್ಲಿ ಅದು ಐದು ಪಟ್ಟು ಹೆಚ್ಚಾಗಿ 40 ಸಾವಿರ ರೂ. ವರೆಗೂ ಹೋಗುತ್ತದೆ. ಕೊನೆಗೆ ರಶೀತಿಯೇ ಇಲ್ಲದ ಈ ಅಘೋಷಿತ ಆದಾಯ ಎಲ್ಲಿಗೆ ಹೋಗುತ್ತಿದೆ? ಯಾರ ಜೇಬು ಸೇರುತ್ತಿದೆ? ಇದರಲ್ಲಿ ಯಾರ‍್ಯಾರು ಪಾಲುದಾರರು ಎಂಬ ಸಾರ್ವಜನಿಕರ ಪ್ರಶ್ನೆಗೆ ಉತ್ತರ ದೊರೆಯದಾಗಿದೆ.

 

ಆಂದೋಲನ ಡೆಸ್ಕ್

Recent Posts

ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಗೆ ನಟ ರವಿಚಂದ್ರನ್‌ ಚಾಲನೆ

ಮಂಡ್ಯ: ಜಿಲ್ಲೆಯ ಐತಿಹಾಸಿಕ ಶ್ರೀರಂಗಪಟ್ಟಣದಲ್ಲಿ ದಸರಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆತಿದೆ. ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಭಕ್ತಿಪೂರ್ವಕ ಪುಷ್ಪಾರ್ಚನೆ…

12 hours ago

ಅಭಿಮನ್ಯು ಆನೆ ಮಾವುತನ ಪತ್ನಿ ಸಾವು

ಮೈಸೂರು: ದಸರಾ ಗಜಪಡೆಯ ಆನೆ ಅಭಿಮನ್ಯುವಿನ ಮಾವುತ ವಸಂತ ಅವರ ಪತ್ನಿ ಅಂಬಿಕಾ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 35 ವರ್ಷ…

13 hours ago

ಮತದಾರರ ಹೆಸರು ಡಿಲೀಟ್‌ ವಿವಾದ: ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌

ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆ ವಿವಾದ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಮಹತ್ವದ ಹಂತ ತಲುಪಿದೆ. ರಾಹುಲ್‌ ಗಾಂಧಿ ಹಾಗೂ ‘ಇಂಡಿಯಾ’…

13 hours ago

ಹೆಣ ಇದ್ದ ಸ್ಕಾರ್ಪಿಯೋ ಓಡಿಸಲು ಯಾರೂ ಸಿದ್ಧರಿಲ್ಲ

ಶೆಡ್‌ನಿಂದ ಹೆಣ ಹಾಕಿಕೊಂಡು ಬಂದ ದೀಪಕ್, ಗೇಟ್ ತನಕ ಬಂದು ಮುಂದಕ್ಕೆ ಹೋಗಲು ಆಗಲ್ಲ ಎಂದು ನಿರಾಕರಣೆ ಹೆಣ ಬಿಸಾಡುವ…

15 hours ago

ರೇಣುಕಾಸ್ವಾಮಿಯ ಹೆಣ ಬಿಸಾಡಲು ಜಾಗ ಹುಡುಕಾಟ

ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ Sattva Apartment ಹಿಂದಿನ ಜನ…

15 hours ago

ನೋಟಿನ ಕಂತೆಗಳನ್ನು ತಂದಿಟ್ಟ ದರ್ಶನ್

ಸರೆಂಡರ್ ಆದವರಿಗೆ ಕೊಡಲು; ಖರ್ಚುವೆಚ್ಚಕ್ಕೆ ಪ್ರದೋಷ್, ವಿನಯ್, ನಾಗರಾಜು ಕೈಗೆ ಕೇಳಿದಷ್ಟು ಹಣ ಕೊಟ್ಟರು ಸಹಾಯ ಮಾಡಿ, ಇಲ್ಲದಿದ್ದರೆ ನೇಣು…

15 hours ago