ಮೈಸೂರು ನಗರ

ಮೈಸೂರು ದಸರಾ | ಸೆ.28 ರಿಂದ ಅ.5ರವರೆಗೆ ಯುವ ಸಂಭ್ರಮ

ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮಕ್ಕೂ ಮುನ್ನ ಸ್ಥಳೀಯ ಕಾಲೇಜು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡಲು ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಸಿಕೊಂಡು ಬರುತ್ತಿರುವ ಯುವ ಸಂಭ್ರಮವನ್ನು ಈ ಬಾರಿ ಸೆ.28ರಿಂದ ಅಕ್ಟೋಬರ್ 5 ರವರೆಗೆ ವಿಶೇಷವಾಗಿ ಆಯೋಜಿಸಲು ಉಪ ಸಮಿತಿ ನಿರ್ಧರಿಸಿದ್ದು, ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ನಡೆಸಿ ಹಲವಾರು ಸಲಹೆಗಳನ್ನು ಸ್ವೀಕರಿಸಲಾಯಿತು.

ಮಹಾರಾಜ ಕಾಲೇಜು ಶತಮಾನೋತ್ಸವ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಾಂಶುಪಾಲರ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರು ಹಲವು ವಿಚಾರಗಳನ್ನು ಸಮಿತಿ ಗಮನಕ್ಕೆ ತಂದರು. ಯುವ ಸಂಭ್ರಮದಲ್ಲಿ ಪಾಲ್ಗೊಳ್ಳುವ ತಂಡಗಳು ಮತ್ತು ವಿಜೇತ ತಂಡಗಳಿಗೆ ಕೊಡುವ ಭತ್ಯೆಯನ್ನು ಹೆಚ್ಚಿಸಬೇಕು. ಇವೆಂಟ್‌ಗಳನ್ನು ಕಡಿಮೆ ಮಾಡುವ ಜತೆಗೆ, ಮತ್ತಷ್ಟು ದಿನಗಳನ್ನು ಹೆಚ್ಚಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು, ಸದಸ್ಯರು, ಮತ್ತಿತರರಿಗೆ ಗುಣಮಟ್ಟದ ಊಟ ನೀಡಬೇಕು. ಹಿಂದೆ ಕೆಲವರು ಊಟವನ್ನು ಬಿಸಾಡಿ ಹೋಗಿದ್ದಾರೆ. ಹಾಗಾಗಿ, ಶುಚಿ ಮತ್ತು ರುಚಿಯಾದ ಊಟ ಕೊಡುವ ಜತೆಗೆ, ವಾಷ್ ರೂಂಗಳಲ್ಲಿ ನೀರು ಒದಗಿಸಬೇಕು. ಪಾರ್ಕಿಂಗ್ ವ್ಯವಸ್ಥೆ, ಸ್ವಚ್ಛತೆಯನ್ನು ಕಾಪಾಡಬೇಕು ಎಂದು ಸಲಹೆ ನೀಡಿದರು.

ಎನ್‌ಎಸ್‌ಎಸ್ ಹಾಗೂ ಇತರೆ ಅಧಿಕಾರಿಗಳು, ಸ್ವಯಂಸೇವಕರು ಶಿಸ್ತಾಗಿ ನಡೆದುಕೊಳ್ಳಬೇಕು. ವೇದಿಕೆ ಮುಂಭಾಗ ಹಾಗೂ ವೇದಿಕೆ ಮೇಲೆ ಅಶಿಸ್ತು ಇಲ್ಲದಂತೆ ಗಮನಿಸಬೇಕು. ಗೌರವಧನ ಹೆಚ್ಚಿಸಬೇಕು. ಕೊರಿಯೋಗ್ರಾಫರ್‌ಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಥೀಮ್ ಬೇಷ್ ಮೇಲೆ ಅತ್ಯುತ್ತಮ ಕಾಲೇಜುಗಳನ್ನು ಆಯ್ಕೆ ಮಾಡಬೇಕು. ಕೊರಿಯೋಗ್ರಾಫರ್‌ಗಳನ್ನು ಬಳಸಿಕೊಳ್ಳಬೇಕು. ಕಾರ್ಯಕ್ರಮಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಲಾಯಿತು.

ಇವೆಂಟ್‌ಗಳನ್ನು ಕಡಿಮೆ ಮಾಡಿ ಹೆಚ್ಚು ದಿನ ಅವಕಾಶ ನೀಡಿದರೆ ಗುಣಮಟ್ಟದ ಜತೆಗೆ ಎಲ್ಲರಿಗೂ ಅವಕಾಶ ಸಿಗುವಂತೆ ಮಾಡಬೇಕು. ಒಂದೊಂದು ದಿನ ಜಾಸ್ತಿ ಆಯ್ಕೆ ಮಾಡಿದಷ್ಟು ಪುನರಾವರ್ತನೆಗೆ ದಾರಿಯಾಗಲಿದೆ ಎನ್ನುವ ಸಲಹೆಯನ್ನು ಸಮಿತಿ ಪರಿಗಣಿಸಿ ಕ್ರಮದ ಭರವಸೆ ನೀಡಿತು. ಯುವ ಸಂಭ್ರಮ ಉಪ ಸಮಿತಿ ಉಪ ವಿಶೇಷಾಧಿಕಾರಿ ಆರ್.ಐಶ್ವರ್ಯ, ಮೈಸೂರು ವಿವಿ ಪ್ರಭಾರ ಕುಲಸಚಿವ ಪ್ರೊ.ಎಸ್.ಜೆ.ಮಂಜುನಾಥ್, ಪ್ರಾದೇಶಿಕ ಶಿಕ್ಷಣ ಇಲಾಖೆ ಪ್ರಾದೇಶಿಕ ನಿರ್ದೇಶಕರಾದ ಎಸ್.ಪ್ರತಿಮಾ, ಡಿಡಿಪಿಯು ಸಿ.ನಾಗಮ್ಮ, ಪ್ರಾದೇಶಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ನಾಗೇಂದ್ರಪ್ರಸಾದ್, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶಕ ಟಿ.ರಾಮಚಂದ್ರ, ಸಮಿತಿ ಕಾರ್ಯಾಧ್ಯಕ್ಷರಾದ ಪ್ರತಿಭಾ, ಸಹ ಕಾರ್ಯದರ್ಶಿಗಳಾದ ಪ್ರೊ.ಕೆ.ವೆಂಕಟೇಶ್, ಪ್ರೊ.ಎಂ.ಎಸ್.ಸಪ್ನಾ, ಪೂರ್ಣಶ್ರೀ, ಕಾರ್ಯದರ್ಶಿ ಮೈತ್ರಿ, ಸಮನ್ವಯಾಧಿಕಾರಿ ಆರ್.ನಿಂಗರಾಜು ಮತ್ತಿತರರು ಹಾಜರಿದ್ದರು.

ಆಂದೋಲನ ಡೆಸ್ಕ್

Recent Posts

ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಡಾನೆ ದಾಳಿ

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದ ತೇರು ಪಕ್ಕದಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ಅಂಗಡಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿ…

18 hours ago

ರೈತನನ್ನು ಬಲಿ ಪಡೆದಿದ್ದ ಆನೆ ಕೊನೆಗೂ ಸೆರೆ!

ನಂಜನಗೂಡು: ತಾಲ್ಲೂಕಿನ ಹಂಚೀಪುರ ಗ್ರಾಮದಲ್ಲಿ ರೈತನ ಸಾವಿಗೆ ಕಾರಣವಾಗಿದ್ದ ಆನೆಯನ್ನು ಅರಣ್ಯ ಇಲಾಖೆ ಇಂದು ಸೆರೆ ಹಿಡಿದಿದೆ. ಸಾಕಾನೆಗಳ ನೆರವಿನಿಂದ…

18 hours ago

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್‌ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ…

19 hours ago

ಓದುಗರ ಪತ್ರ: ನಡೆಯಲಿ ಪ್ರಶಾಂತ…!

ನಡೆಯಲಿ ಪ್ರಶಾಂತ...! ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯುತಿಹನು ಪ್ರಶಾಂತ ಎಲ್ಲವೂ ನಡೆಯಲಿ ಶಾಂತ... ಪ್ರಶಾಂತ ! ಅಭಿಮನ್ಯುವಿನ ಉತ್ತರಾಧಿಕಾರಿ…

19 hours ago

ಓದುಗರ ಪತ್ರ: ಜೀವ ಉಳಿಸುವ ಔಷಧಗಳು ಅತಿ ಲಾಭದ ವಸ್ತು ಆಗಬಾರದಲ್ಲವೇ?

ಗಂಭೀರ ಕಾಯಿಲೆಗಳ ೧೮೦ ದುಬಾರಿ ಔಷಧಗಳು ಮತ್ತು ೭೮೦ ವೈದ್ಯಕೀಯ ಸಾಮಗ್ರಿಗಳನ್ನು ಹತ್ತಾರು ಪಟ್ಟು ಹೆಚ್ಚು ಲಾಭವಿಟ್ಟುಕೊಂಡು ಮಾರಾಟ ಮಾಡುತ್ತಿರುವುದು…

19 hours ago

ಓದುಗರ ಪತ್ರ: ‘ಕುಬೇರನ ಮೂಲೆ’ಯಲ್ಲೇ ಕಸದ ಕೊಪ್ಪರಿಗೆ!

ನಮ್ಮ ಮನೆಯ ಕಸವನ್ನು,ಪಕ್ಕದ ಮನೆಗೋ ,ಅವರ ಅಂಗಳಕ್ಕೋ ಸುರಿಯುವುದು ನಾಗರಿಕತೆಯ ಲಕ್ಷಣವಲ್ಲ. ಆದರೆ ಅದು ಮೈಸೂರಿನ ಆರ್.ಟಿ.ನಗರದ ಬಡಾವಣೆಯ ಮೂಲೆ…

19 hours ago