Andolana originals

ರಾಜಕೀಯ ಮೇಲಾಟ ನಿಲ್ಲಲಿ; ಸಾಮಾನ್ಯರ ವಿಷಯ ಚರ್ಚೆಯಾಗಲಿ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣ ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಕೇಂದ್ರ ಬಿಂದುವಾಗಿದ್ದು, ರಾಜಕೀಯ ಮೇಲಾಟಗಳಿಗೆ ವೇದಿಕೆಯಾಗಿದೆ. ಪ್ರಕರಣದ ಆರೋಪಗಳು, ತನಿಖಾ ಸಂಸ್ಥೆಗಳ ವರದಿಗಳು, ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆ, ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದ ಕಾಂಗ್ರೆಸ್ ಸರ್ಕಾರದ ನಿರ್ಧಾರ ಹಾಗೂ ಇದೀಗ ಮತ್ತೆ ಅವರ ರಾಜೀನಾಮೆ ಈ ಬೆಳವಣಿಗೆಗಳ ನಡುವೆ ಬಿಜೆಪಿ ಸೆ.೧ರಿಂದ ರಾಯಚೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಲು ಮುಂದಾಗಿದೆ.

ಆದರೆ ಈಗ ಬಿಜೆಪಿ ಎದುರಿಸುತ್ತಿರುವ ಮೂಲಭೂತ ಪ್ರಶ್ನೆ ಒಂದೇ. ರಾಜೀನಾಮೆ ಕೇಳಿ ಹೋರಾಟ ರೂಪಿಸಿದಾಗ, ರಾಜೀನಾಮೆಯೇ ದೊರೆತ ನಂತರವೂ ಪಾದಯಾತ್ರೆ ಮುಂದುವರಿಸುವ ಅಗತ್ಯವೇನು? ಇದೇ ಪ್ರಶ್ನೆ ಬಿಜೆಪಿ ವಲಯದಲ್ಲಿಯೂ ಚರ್ಚೆಗೆ ಕಾರಣವಾಗಿದೆ.

ಇಲ್ಲಿಯೇ ಬಿಜೆಪಿಯ ಇಂದಿನ ರಾಜಕೀಯ ಸವಾಲು ಆರಂಭವಾಗುತ್ತದೆ. ಹಗರಣದ ನೈತಿಕ ಹೊಣೆ ಹೊತ್ತು ಬಿ.ನಾಗೇಂದ್ರ ಅವರು ಈಗಾಗಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದರೂ, ಬಿಜೆಪಿ ಈ ಪಾದಯಾತ್ರೆಯನ್ನು ಮುಂದುವರಿಸಲು ಹೊರಟಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.

ಹಗರಣದ ನೈತಿಕ ಹೊಣೆ ಹೊತ್ತು ಸಚಿವರೊಬ್ಬರು ಈಗಾಗಲೇ ಅಧಿಕಾರ ತ್ಯಜಿಸಿರುವಾಗ, ಅದೇ ವಿಷಯವನ್ನು ಮುಂದಿಟ್ಟುಕೊಂಡು ಪಾದಯಾತ್ರೆ ಹಮ್ಮಿಕೊಳ್ಳು ವುದರಿಂದ ಜನಸಾಮಾನ್ಯರಲ್ಲಿ ಅಪೇಕ್ಷಿತ ರಾಜಕೀಯ ಸಂದೇಶ ರವಾನೆಯಾಗುತ್ತದೆಯೇ ಎಂಬ ಗೊಂದಲ ನಾಯಕರಲ್ಲಿ ಮೂಡಿದೆ. ಕೇಂದ್ರ ಸಚಿವ ವಿ.ಸೋಮಣ್ಣ ಸೇರಿದಂತೆ ಪಕ್ಷದ ಕೆಲವು ನಾಯಕರು ಪರೋಕ್ಷವಾಗಿ ಈ ಪಾದಯಾತ್ರೆ ಅಗತ್ಯವಿಲ್ಲ ಎಂದಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ.

ಇಂದಿನ ವಾಸ್ತವಿಕ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ, ಕೇವಲ ಒಂದು ಹಗರಣವನ್ನು ಕೇಂದ್ರವಾಗಿಟ್ಟುಕೊಂಡು ಹತ್ತು ದಿನಗಳ ಕಾಲ ಪಾದಯಾತ್ರೆ ಮಾಡುವುದಕ್ಕಿಂತ ರಾಜ್ಯದ ಇತರ ಜ್ವಲಂತ ಸಮಸ್ಯೆಗಳತ್ತ ಗಮನ ಹರಿಸುವುದು ಸೂಕ್ತ ಎಂಬ ಪ್ರಜ್ಞಾವಂತ ಅಭಿಪ್ರಾಯಗಳು ಪಕ್ಷದೊಳಗೆ ವ್ಯಕ್ತವಾಗುತ್ತಿವೆ. ಈಗಾಗಲೇ ನಾಗೇಂದ್ರ ರಾಜೀನಾಮೆ ವಿಚಾರ ಕಲಾಪವನ್ನು ಬಲಿ ತೆಗೆದುಕೊಂಡಿದೆ. ನಾಗೇಂದ್ರ ಅವರ ರಾಜೀನಾಮೆಯ ನಂತರವೂ ಹೋರಾಟ ಮುಂದುವರಿಸುವುದು ಪ್ರಕರಣವನ್ನು ಜೀವಂತವಾಗಿಡಲು ಅಗತ್ಯ. ಮತ್ತೊಂದು ವಾದದ ಪ್ರಕಾರ, ರಾಜೀನಾಮೆ ಎಂಬ ತಕ್ಷಣದ ರಾಜಕೀಯ ಬೇಡಿಕೆ ಈಡೇರಿದ ನಂತರ ಅದೇ ಘೋಷಣೆಯೊಂದಿಗೆ ಪಾದಯಾತ್ರೆ ನಡೆಸುವುದು ಜನರಿಗೆ ಪುನರಾವರ್ತನೆಯಂತೆ ಕಾಣಬಹುದು. ರಾಜೀನಾಮೆ ಪಡೆಯುವುದೇ ಅಂತಿಮ ಗುರಿಯಾಗಿದ್ದರೆ ಪಾದಯಾತ್ರೆಯ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಆದರೆ ರಾಜೀನಾಮೆ ಒಂದು ಹಂತ ಮಾತ್ರ; ಪ್ರಕರಣದ ಸಂಪೂರ್ಣ ತನಿಖೆ, ಹಣದ ಮರುಪಡೆಯುವಿಕೆ, ಆಡಳಿತಾತ್ಮಕ ಹೊಣೆಗಾರಿಕೆ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ರಕ್ಷಣೆಯೇ ಗುರಿಯಾಗಿದ್ದರೆ, ಪಾದಯಾತ್ರೆಗೆ ಇನ್ನೂ ರಾಜಕೀಯ ಅರ್ಥವಿದೆ.

ಹಿಂದಿನ ಬೆಳವಣಿಗೆಗಳನ್ನು ಅವಲೋಕಿಸಿದಾಗ, ಬಿಜೆಪಿಯು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಜನರ ಮುಂದಿಟ್ಟು ನೈತಿಕ ಮೇಲುಕೈ ಸಾಧಿಸಲು ಈ ಪಾದಯಾತ್ರೆಯನ್ನು ರೂಪಿಸಿರುವುದು ಸ್ಪಷ್ಟ. ಆದರೆ, ಸಚಿವರ ರಾಜೀನಾಮೆಯ ನಂತರವೂ ಹೋರಾಟದ ಹಾದಿ ಬದಲಾಗದಿರುವುದು ಬಿಜೆಪಿ ನಾಯಕತ್ವದಲ್ಲಿ ಸಮನ್ವಯದ ಕೊರತೆ ಅಥವಾ ಸ್ಪಷ್ಟ ಕಾರ್ಯತಂತ್ರದ ಕೊರತೆಯನ್ನು ಎತ್ತಿ ತೋರಿಸುತ್ತದೆ. ಆದರೆ ಆ ಅರ್ಥವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಹೊಣೆ ಬಿಜೆಪಿ ನಾಯಕತ್ವದ ಮೇಲಿದೆ. ಇಲ್ಲದಿದ್ದರೆ, ರಾಜೀನಾಮೆ ಪಡೆದ ನಂತರವೂ ಅದೇ ರಾಜೀನಾಮೆಗಾಗಿ ಪಾದಯಾತ್ರೆ ನಡೆಸಿದಂತಾಗುತ್ತದೆ.

” ರೈತರ ಸಮಸ್ಯೆಗಳು, ಹದಗೆಟ್ಟ ಕಾನೂನು ಸುವ್ಯವಸ್ಥೆ, ಆರ್ಥಿಕ ಮುಗ್ಗಟ್ಟು ಮತ್ತು ಬೆಲೆ ಏರಿಕೆಯಂತಹ ಜನಸಾಮಾನ್ಯರ ಬದುಕಿಗೆ ನೇರವಾಗಿ ತಟ್ಟುವ ವಿಷಯಗಳ ಬಗ್ಗೆ ಧ್ವನಿಯೆತ್ತುವುದು ಹೆಚ್ಚು ಪರಿಣಾಮಕಾರಿ ಅನ್ನಿಸುತ್ತದೆ.”

 

 

ಆಂದೋಲನ ಡೆಸ್ಕ್

Recent Posts

ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಡಾನೆ ದಾಳಿ

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನದ ತೇರು ಪಕ್ಕದಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ಅಂಗಡಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿ…

18 hours ago

ರೈತನನ್ನು ಬಲಿ ಪಡೆದಿದ್ದ ಆನೆ ಕೊನೆಗೂ ಸೆರೆ!

ನಂಜನಗೂಡು: ತಾಲ್ಲೂಕಿನ ಹಂಚೀಪುರ ಗ್ರಾಮದಲ್ಲಿ ರೈತನ ಸಾವಿಗೆ ಕಾರಣವಾಗಿದ್ದ ಆನೆಯನ್ನು ಅರಣ್ಯ ಇಲಾಖೆ ಇಂದು ಸೆರೆ ಹಿಡಿದಿದೆ. ಸಾಕಾನೆಗಳ ನೆರವಿನಿಂದ…

19 hours ago

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್‌ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ಶುಕ್ರವಾರ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದರು. ಲೋಕಭವನದ ಗಾಜಿನ ಮನೆಯಲ್ಲಿ ನಡೆದ…

20 hours ago

ಓದುಗರ ಪತ್ರ: ನಡೆಯಲಿ ಪ್ರಶಾಂತ…!

ನಡೆಯಲಿ ಪ್ರಶಾಂತ...! ಹೆಸರಿಗೆ ತಕ್ಕಂತೆ ಗಜ ಗಾಂಭೀರ್ಯದಿಂದ ನಡೆಯುತಿಹನು ಪ್ರಶಾಂತ ಎಲ್ಲವೂ ನಡೆಯಲಿ ಶಾಂತ... ಪ್ರಶಾಂತ ! ಅಭಿಮನ್ಯುವಿನ ಉತ್ತರಾಧಿಕಾರಿ…

20 hours ago

ಓದುಗರ ಪತ್ರ: ಜೀವ ಉಳಿಸುವ ಔಷಧಗಳು ಅತಿ ಲಾಭದ ವಸ್ತು ಆಗಬಾರದಲ್ಲವೇ?

ಗಂಭೀರ ಕಾಯಿಲೆಗಳ ೧೮೦ ದುಬಾರಿ ಔಷಧಗಳು ಮತ್ತು ೭೮೦ ವೈದ್ಯಕೀಯ ಸಾಮಗ್ರಿಗಳನ್ನು ಹತ್ತಾರು ಪಟ್ಟು ಹೆಚ್ಚು ಲಾಭವಿಟ್ಟುಕೊಂಡು ಮಾರಾಟ ಮಾಡುತ್ತಿರುವುದು…

20 hours ago

ಓದುಗರ ಪತ್ರ: ‘ಕುಬೇರನ ಮೂಲೆ’ಯಲ್ಲೇ ಕಸದ ಕೊಪ್ಪರಿಗೆ!

ನಮ್ಮ ಮನೆಯ ಕಸವನ್ನು,ಪಕ್ಕದ ಮನೆಗೋ ,ಅವರ ಅಂಗಳಕ್ಕೋ ಸುರಿಯುವುದು ನಾಗರಿಕತೆಯ ಲಕ್ಷಣವಲ್ಲ. ಆದರೆ ಅದು ಮೈಸೂರಿನ ಆರ್.ಟಿ.ನಗರದ ಬಡಾವಣೆಯ ಮೂಲೆ…

20 hours ago