Andolana originals

ಸರಸ್ವತಿಪುರಂ ಗ್ರಂಥಾಲಯದ ಸ್ಥಿತಿ ಶೋಚನೀಯ

ಕೆ.ಪಿ.ಮದನ್

ದೂಳು ಹಿಡಿಯುತ್ತಿರುವ ರಾಶಿ ರಾಶಿ ಪುಸ್ತಕಗಳು

ಮೈಸೂರು: ಗ್ರಂಥಾಲಯವೆಂದರೆ ಅಧ್ಯಯನಕ್ಕೆ ಪೂರಕವಾದ ಪ್ರಶಾಂತತೆ, ಅಕ್ಷರ ಒಲುಮೆ ಇರುವವರ ಕೈ ಬೀಸಿ ಕರೆಯುವಂತಿರುವ ಪುಸ್ತಕಗಳು, ಪರಾಮರ್ಶನಾ ಗ್ರಂಥಗಳು, ಸ್ವಚ್ಛತೆ, ಯಥೇಚ್ಛ ಗಾಳಿ – ಬೆಳಕು… ಮತ್ತಿತರ ಸೌಲಭ್ಯಗಳು ಇರಬೇಕು. ಆದರೆ, ನಗರದ ಬಡಾವಣೆಯಲ್ಲಿರುವ ಗ್ರಂಥಾಲಯವೊಂದು ಇದಕ್ಕೆ ತದ್ವಿರುದ್ಧವಾಗಿದೆ.

ಪುಸ್ತಕ ಓದಲು ಸರಿಯಾದ ಗಾಳಿ ಬೆಳಕು ಇಲ್ಲ. ಹಳೆಯ ಪುಸ್ತಕಗಳನ್ನು ಇಡಲು ಸೂಕ್ತ ಸ್ಥಳವಿಲ್ಲ. ಕಟ್ಟಡದ ನಿರ್ವಹಣೆ ಸಮರ್ಪಕವಾಗಿಲ್ಲ… ಇದು ನಗರದ ಸರಸ್ವತಿಪುರಂನಲ್ಲಿರುವ ಸಾರ್ವಜನಿಕ ಗ್ರಂಥಾಲಯದ ದುಸ್ಥಿತಿ.

ಕಟ್ಟಡದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ. ಕಟ್ಟಡಕ್ಕೆ ಬಣ್ಣ- ಸುಣ್ಣ ಬಳಿದು ಎಷ್ಟು ವರ್ಷಗಳಾಗಿವೆಯೋ? ಪುಸ್ತಕಗಳನ್ನು ಜೋಡಿಸಿರುವ ರ‍್ಯಾಕ್ ಯಾವಾಗ ಬೇಕಾದರೂ ಮುರಿದು ಬೀಳಬಹುದು.

ಶೌಚಾಲಯದ ವ್ಯವಸ್ಥೆ ಇಲ್ಲ: ಸ್ಪರ್ಧಾತ್ಮಕ ಪರೀಕ್ಷೆ ಗಾಗಿ ಅಭ್ಯಾಸ ಮಾಡುವುದಕ್ಕೆ ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳು/ ವಿದ್ಯಾರ್ಥಿನಿಯರು ಗಂಟೆಗಟ್ಟಲೇ ಇರುತ್ತಾರೆ. ಹಿರಿಯ ನಾಗರಿಕರೂ ದಿನಪತ್ರಿಕೆಗಳು, ನಿಯತಕಾಲಿಕೆಗಳನ್ನು ಓದುವುದಕ್ಕೆ ಇಲ್ಲಿಗೆ ಬರುತ್ತಾರೆ. ಅಂತಹವರಿಗೆ ಕುಡಿಯಲು ನೀರು, ಶೌಚಾಲಯದ ಸೌಲಭ್ಯ ಅತ್ಯಗತ್ಯ. ಆದರೆ, ಇಲಾಖೆಯು ಅದರ ಬಗ್ಗೆ ಕಿಂಚಿತ್ತೂ ಚಿಂತಿಸಿದಂತೆಯೇ ಇಲ್ಲ.

ಈ ಗ್ರಂಥಾಲಯ ಉದ್ಯಾನದ ಆವರಣದಲ್ಲಿದ್ದು, ಅಲ್ಲಿ ನಗರಪಾಲಿಕೆಯಿಂದ ನಿರ್ಮಾಣವಾದ ಶೌಚಾಲಯ ಇದೆ. ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ ಸಾರ್ವಜನಿಕರ ಬಳಕೆಗೆ ಯೋಗ್ಯ ಇಲ್ಲದಂತಾಗಿದೆ. ದಿನಪತ್ರಿಕೆಗಳು ಹಾಗೂ ಮ್ಯಾಗ್‌ಜಿನ್ ವಿಭಾಗದಲ್ಲಿಯೇ ಹಳೆಯ ಪುಸ್ತಕಗಳು ಮತ್ತು ಹಳೆಯ ಪತ್ರಿಕೆಗಳನ್ನು ಗುಡ್ಡೆ ಹಾಕಲಾಗಿದೆ. ಅವು ದೂಳು ಹಿಡಿಯುತ್ತಿವೆ. ಗ್ರಂಥಾಲಯಕ್ಕೆ ಬಂದಿರುವ ನೂತನ ಪುಸ್ತಕಗಳನ್ನು ಹಳೆಯ ಪುಸ್ತಕಗಳ ಜೊತೆಯಲ್ಲಿಯೇ ಇಡಲಾಗಿದೆ. ಹಾಗಾಗಿ ಅವೂ ಹಾಳಾಗುತ್ತಿವೆ.

ಪುಸ್ತಕಗಳ ರಾಶಿ: ಗ್ರಂಥಾಲಯದಲ್ಲಿ ಪುಸ್ತಕಗಳನ್ನು ರಾಶಿಯಲ್ಲಿ ಎಸೆಯಲಾಗಿದೆ. ಅಲ್ಲಿನ ಒಳಾವರಣ ಗ್ರಂಥಾಲಯದಂತೆ ಕಾಣುವುದಿಲ್ಲ. ಗ್ರಂಥಾಲಯದ ಮೇಲ್ಭಾಗದ ಕೊಠಡಿಯಲ್ಲಿ ಉಪಯೋಗಕ್ಕೆ ಬಾರದ ವಸ್ತುಗಳು ಹಾಗೂ ಮುರಿದ ಕುರ್ಚಿ, ಟೇಬಲ್‌ಗಳನ್ನು ತುಂಬಲಾಗಿದೆ. ಸ್ವಚ್ಛತೆ ಇಲ್ಲದ ಕಾರಣ ಸಂಜೆಯ ವೇಳೆ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಸಮಸ್ಯೆಗಳ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು. ಗ್ರಂಥಾಲಯವನ್ನು ಓದುಗ ಸ್ನೇಹಿಯನ್ನಾಗಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ

” ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ. ಹಾಗೂ ಓದುಗರು ನಿಗದಿಪಡಿಸಿರುವ ಸ್ಥಳದಲ್ಲಿ ಹಳೆಯ ಪುಸ್ತಕಗಳ ರಾಶಿಯನ್ನು ಇಡಲಾಗಿದೆ. ಗ್ರಂಥಾಲಯದಲ್ಲಿ ಶೌಚಾಲಯದ ವ್ಯವಸ್ಥೆಯಿಲ್ಲ ಹಾಗೂ ಪಾರ್ಕ್ನಲ್ಲಿರುವ ಶೌಚಾಲಯವನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಪ್ರತಿದಿನ ಗ್ರಂಥಾಲಯಕ್ಕೆ ಬರುವ ಓದುಗರಿಗೆ ತೊಂದರೆಗಳು ಹೆಚ್ಚಾಗಿವೆ.”

-ರಾಕೇಶ್, ಗ್ರಂಥಾಲಯಕ್ಕೆ ಬರುವ ಓದುಗ.

” ಮಹಾನಗರ ಪಾಲಿಕೆಯಿಂದ ಕಟ್ಟಡ ಹಸ್ತಾಂತರ ಮಾಡಿಲ್ಲ. ಆದ್ದರಿಂದ ಗ್ರಂಥಾಲಯ ಉನ್ನತೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಆಗುತ್ತಿಲ್ಲ. ಗ್ರಂಥಾಲಯದಲ್ಲಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ, ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದು.”

 -ಬಿ.ಮಂಜುನಾಥ್, ಉಪನಿರ್ದೇಶಕರು, ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ, ಮೈಸೂರು.

” ೬೦೦ ಮಂದಿ ಸದಸ್ಯರು” 

” ಗ್ರಂಥಾಲಯದಲ್ಲಿ ಕುಳಿತುಕೊಳುವುದಕ್ಕೆ ಕನಿಷ್ಠ ಕುರ್ಚಿಗಳ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಗ್ರಂಥಾಲಯದಲ್ಲಿ ಖಾಯಂ ಗ್ರಂಥಪಾಲಕರೊಬ್ಬರು ಹಾಗೂ ಇಬ್ಬರು ಹಂಗಾಮಿ ನೌಕರರು ಇದ್ದಾರೆ. ೬೦೦ಕ್ಕೂ ಹೆಚ್ಚು ಮಂದಿ ಈ ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆದಿದ್ದಾರೆ.”

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಜನರ ಹಿತ ಕಾಯಲಿ!

ಜನರ ಹಿತ ಕಾಯಲಿ! ನಕಲಿ ವೈದ್ಯರು, ಕಲಬೆರಿಕೆ ಔಷಧದ ಹಾವಳಿಯಿಂದ ಜನ ಬೇಸ್ತುಬಿದ್ದಿರುವಾಗ ನೈಜ ದರಕ್ಕಿಂತ ಅತ್ಯಧಿಕ ದರಕ್ಕೆ ಔಷಧಿ ಮಾರಾಟ…

4 hours ago

ಓದುಗರ ಪತ್ರ: ಜಾಗೃತಿ, ನಿಯಂತ್ರಣ ಇರಬೇಕು

ಆಹಾರದಲ್ಲಿ ಬಳಸುವ ಉಪ್ಪು, ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ಅರೋಗ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಹಾಗೆಯೇ…

4 hours ago

ಓದುಗರ ಪತ್ರ: ಚಾ.ನಗರ ಜಿಲ್ಲೆಗೆ ವಿಶೇಷ ಅನುದಾನ ನೀಡಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿ

ಚಾಮರಾಜನಗರ ಜಿಯ ಕೊಳ್ಳೇಗಾಲ ಮತ್ತು ಹನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು ರೂ.೫೦೦ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ…

4 hours ago

ಆಯಾ ಕೆಲಸ ಮಾಡಿ ಮಕ್ಕಳನ್ನು ಮಾಸ್ಟರ್ಸ್‌ ಮಾಡಿದ ಸತ್ಯಮ್ಮ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳು ದೊಡ್ಡ ಹುದ್ದೆಗಳಿಗೆ ಹೋದರೂ ತನ್ನ ಕಾಯಕ ಮುಂದುವರಿಸಿರುವ ‘ಮಹಾತಾಯಿ’ ತೆಲಂಗಾಣದ ಸಂಗಾರೆಡ್ಡಿಯ ರಾಕೇಶ್…

4 hours ago

ಮಂಜಿನ ನಗರಿಯಲ್ಲಿ ರಸ್ತೆಗಳ ದುಸ್ಥಿತಿ

ಪುನೀತ್ ಮಡಿಕೇರಿ ಮಡಿಕೇರಿ ದಸರಾ ಸಮೀಪಿಸುತ್ತಿದ್ದರೂ ಗುಂಡಿಗಳಿಗೆ ಸಿಗದ ಮುಕ್ತಿ ಮಡಿಕೇರಿ ದಸರಾ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ದಸರಾ…

4 hours ago

ಅ.೧, ೨ರಂದು ಶ್ರೀ ಗುರುಮಲ್ಲೇಶ್ವರ ದಾಸೋಹ ಭವನ ಉದ್ಘಾಟನೆ

ಮಹೇಂದ್ರ ಹಸಗೂಲಿ ದೇಪಾಪುರದಲ್ಲಿ ಗುಡಿಸಲಿನಲ್ಲಿ ಆರಂಭವಾದ ಅನ್ನ ದಾಸೋಹಕ್ಕೆ ಈಗ ದಾಸೋಹ ಭವನದ ರೂಪ ಗುಂಡ್ಲುಪೇಟೆ: ಸಣ್ಣ ಗುಡಿಸಲಿನಲ್ಲಿ ಆರಂಭಗೊಂಡ…

4 hours ago