Andolana originals

ಓದುಗರ ಪತ್ರ: ಪ್ರತಿ ನಗರಕ್ಕೂ ಬೇಕಾಗಿದೆ ಕಸ ಸಂಸ್ಕರಣಾ ಘಟಕ

ಸ್ವಚ್ಛತಾ ಪಟ್ಟಿಯಲ್ಲಿ ರಾಜ್ಯದಲ್ಲಿ ಮೈಸೂರು ಮಕುಟ ಧರಿಸಿರುವುದು ಹೆಮ್ಮೆಯ ಸಂಗತಿಯಾದರೂ ಶೇ.೯೦ಕ್ಕೂ ಹೆಚ್ಚು ನಗರಗಳಲ್ಲಿ ಇಂದಿಗೂ ಕಸದ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದು ಆಡಳಿತ ವೈಫಲ್ಯಕ್ಕೆ ಕನ್ನಡಿಯಾಗಿದೆ.

ಮೈಸೂರು ಹೊರತುಪಡಿಸಿ ಉಳಿದ ಜಿಲ್ಲಾ ಕೇಂದ್ರಗಳು ಕಸ ವಿಂಗಡಣೆ, ಪ್ರತಿದಿನ ಕಸ ಸಂಗ್ರಹ ಮತ್ತು ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ. ಕೇವಲ ಶೇ.೧೦ ರಷ್ಟು ನಗರಗಳ ಯಶಸ್ಸು ಇಡೀ ರಾಜ್ಯದ ಚಿತ್ರಣವನ್ನು ಬದಲಿಸಲಾರದು. ಸರ್ಕಾರವು ಪ್ರತಿ ನಗರಕ್ಕೂ ಕಸ ಸಂಸ್ಕರಣಾ ಘಟಕ ಹಾಗೂ ಆಧುನಿಕ ವಾಹನಗಳನ್ನು ಒದಗಿಸಬೇಕು.

ನಾಗರಿಕರೂ ರಸ್ತೆಗೆ ಕಸ ಎಸೆಯುವ ಚಾಳಿಯನ್ನು ಬಿಟ್ಟು ಸ್ವಚ್ಛತೆಯನ್ನು ಕೇವಲ ಅಭಿಯಾನವಾಗಿ ನೋಡದೆ ಬದುಕಿನ ಭಾಗವಾಗಿಸಿಕೊಂಡರೆ ಮಾತ್ರ ನಮ್ಮ ರಾಜ್ಯವು ರಾಷ್ಟ್ರಮಟ್ಟದಲ್ಲಿ ಮಾದರಿಯಾಗಲು ಸಾಧ್ಯ.

-ಡಾ.ಎಚ್. ಕೆ.ವಿಜಯಕುಮಾರ್ , ಬೆಂಗಳೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ನೆಹರೂ ಸೇವೆ ಸ್ಮರಿಸೋಣ

ರಾಜಕೀಯ ಮುತ್ಸದ್ದಿ, ದೇಶದ ಪ್ರಥಮ ಪ್ರಧಾನ ಮಂತ್ರಿ ದಿವಂಗತ ಪಂಡಿತ್ ಜವಾಹರಲಾಲ್ ನೆಹರೂರವರ ಹುಟ್ಟುಹಬ್ಬವನ್ನು ಮಕ್ಕಳ ದಿನಾಚರಣೆಯ ಹೆಸರಿನಲ್ಲಿ ಶನಿವಾರ…

9 mins ago

ಓದುಗರ ಪತ್ರ: ಮೋದಿಯವರ ಹೃದಯ ವೈಶಾಲ್ಯತೆಯೂ ಹಾಸ್ಯಪ್ರಜ್ಞೆಯೂ

ಪ್ರಧಾನ ಮಂತ್ರಿ ಮೋದಿ ಅವರು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲಿನ ಗುಲಾಬಿ ಮಾರ್ಗದ ಉದ್ಘಾಟನೆ ಹಾಗೂ ಮೈಸೂರಿನ ಚಾಮುಂಡಿ ಬೆಟ್ಟದ…

13 mins ago

ಓದುಗರ ಪತ್ರ: ಜನ ಮೆಚ್ಚುಗೆಗೆ ಪಾತ್ರವಾದ ಪಾಲಿಕೆ ಆಯುಕ್ತರ ಕರ್ತವ್ಯ ನಿಷ್ಠೆ

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತೆ ಎಂ.ಕೆ. ಸವಿತಾ ಅವರ ಕಾರ್ಯವೈಖರಿ ಹಾಗೂ ಕರ್ತವ್ಯನಿಷ್ಠೆ ಸಹಜವಾಗಿ ನಗರವಾಸಿಗಳ ಗಮನಸೆಳೆದಿದೆ. ಅಧಿಕಾರಿಯೊಬ್ಬರು ತಮ್ಮ…

17 mins ago

ಸುಪ್ರೀಂಕೋರ್ಟ್ ಪೀಠಕ್ಕೆ ನಿಲ್ಲದ ತಮಿಳುನಾಡಿನ ಹೋರಾಟ

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ನಾಲ್ಕು ಸುಪ್ರೀಂ ಕೋರ್ಟ್ ಪೀಠಗಳ ಸ್ಥಾಪನೆಗೆ ಕಾನೂನು ಆಯೋಗದ ಶಿಫಾರಸ್ಸು …

22 mins ago

ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಹಲವರ ಕಣ್ಣು

ಕೆ.ಬಿ.ರಮೇಶನಾಯಕ ಎರಡು ವರ್ಷಗಳ ಅವಧಿ ಪೂರೈಸಿರುವ ಅಯೂಬ್ ಖಾನ್, ಡಾ.ಪುಷ್ಪ ಅಮರನಾಥ್ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ…

29 mins ago

ಹಲಗೂರಿನಲ್ಲಿ ಮಿತಿ ಮೀರಿದ ಚಿರತೆ ಹಾವಳಿ

ಎಸ್.ಉಮೇಶ ಚಿರತೆ ಸೆರೆಗೆ ವಿಶೇಷ ಕಾರ್ಯಪಡೆ ರಚಿಸಲು ಗ್ರಾಮಸ್ಥರ ಒತ್ತಾಯ ಹಲಗೂರು: ಗ್ರಾಮೀಣ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ…

44 mins ago