Andolana originals

ಜೂ.13ರಂದು ಡೋರ‍್ನಹಳ್ಳಿಯಲ್ಲಿ ಸಂತ ಅಂತೋಣಿ ಜಾತ್ರೆ

ಭೇರ್ಯ ಮಹೇಶ್

ಕೆ.ಆರ್.ನಗರ: ತಾಲ್ಲೂಕು ಆಡಳಿತದಿಂದ ಸಕಲ ಸಿದ್ಧತೆ; ಸಾವಿರಾರು ಮಂದಿ ಸೇರುವ ನಿರೀಕ್ಷೆ

ಕೆ.ಆರ್.ನಗರ: ತಾಲ್ಲೂಕಿನ ಡೋರ‍್ನಹಳ್ಳಿಯ ವಿಶ್ವವಿಖ್ಯಾತ ಸಂತ ಅಂತೋಣಿ ಬಸಿಲಿಕಾದ ವಾರ್ಷಿಕ ಮಹೋತ್ಸವ ಆರಂಭವಾಗಿದ್ದು, ಜೂನ್ ೧೩ರ ಶನಿವಾರ ತೇರಿನ ಮೆರವಣಿಗೆ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ವಾರ್ಷಿಕೋತ್ಸವದ ಮೊದಲ ದಿನವಾದ ಜೂ.೪ರಂದು ಗುರುವಾರ ಸಂಜೆ ೫.೩೦ಕ್ಕೆ ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವೊ ಅವರಿಂದ ಧ್ವಜಾರೋ ಹಣ ಮತ್ತು ಕನ್ನಡದ ಬಲಿಪೂಜೆ ನೆರವೇರಿದೆ. ಜೂ.೭ರಂದು ಭಾನುವಾರ ಸಂಜೆ ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನ ರೆಕ್ಟರ್ ಫಾಲೂರ್ದು ಪ್ರಸಾದ್ ಅವರಿಂದ ಮಾರ್ಗದರ್ಶನ ಕಾರ್ಯಕ್ರಮ ನಡೆದಿದೆ.

ಜೂ.೮ರಂದು ಸೋಮವಾರ ಸಂಜೆ ೫.೩೦ಕ್ಕೆ ಮಡಿಕೇರಿ ಸಂತ ಮೈಕಲ್‌ರ ದೇವಾಲಯದ ಧರ್ಮಗುರುಗಳಾದ ಪ್ಯಾಟ್ರಿಕ್ ಕ್ಸೇವಿಯರ್ ಅವರಿಂದ ‘ಭರವಸೆ ನ್ಯಾಯವನ್ನು ಸಾಽಸುತ್ತದೆ’ ಎಂಬ ವಿಷಯದ ಬಗ್ಗೆ ಮಾರ್ಗದರ್ಶನ ಶಿಬಿರ ಆಯೋಜಿಸಲಾಗಿದೆ.

ಜೂ.೯ರಂದು ಮಂಗಳವಾರ ಸಂಜೆ ೫.೩೦ಕ್ಕೆ ಶ್ರೀರಾಂಪುರ ನಿತ್ಯಾಧಾರ ಮಾತೆ ದೇವಾಲಯದ ಧರ್ಮಗುರು ಆರೋಗ್ಯಸ್ವಾಮಿ ಅವರಿಂದ ‘ಭರವಸೆ ದಾಸತ್ವದ ಮೇಲೆ ಜಯ ಸಾಧಿಸುತ್ತದೆ’ ಎಂಬ ವಿಚಾರದ ಕುರಿತು ಉಪನ್ಯಾಸ, ಜೂ.೧೦ರಂದು ಸಂಜೆ ೫.೩೦ಕ್ಕೆ ಮೈಸೂರಿನ ಬೋಗಾದಿಯ ಸೇಂಟ್ ಪೀಟರ್ಸ್ ಚರ್ಚ್‌ನ ಧರ್ಮಗುರು ವಾಲೆಂಟಿನ್ ರಾಜೇಂದ್ರ ಕುಮಾರ್ ಅವರಿಂದ ‘ಭರವಸೆ ಸ್ವರ್ಗ ಸಾಮ್ರಾಜ್ಯಕ್ಕೆ ದಾರಿ’ ಎಂಬ ವಿಚಾರದ ಬಗ್ಗೆ ಬೆಳಕು ಚೆಲ್ಲುವ ಬೋಧನೆ ನಡೆಯಲಿದೆ.

ಜೂ.೧೧ರಂದು ಗುರುವಾರ ಸಂಜೆ ೫.೩೦ಕ್ಕೆ ಹೆಚ್.ಡಿ.ಕೋಟೆ ಸೇಂಟ್ ಮೇರೀಸ್ ಚರ್ಚ್‌ನ ಧರ್ಮಗುರು ಬರ್ನಾಡ್ ಪ್ರಕಾಶ್ ಬಾರ್ನಿಸ್ ಅವರಿಂದ ‘ಭರವಸೆ ಹೊಸ ಆಜ್ಞೆಯ ಸಮುದಾಯವನ್ನು ನಿರ್ಮಿಸುತ್ತದೆ’ ಎಂಬ ವಿಷಯದ ಬಗ್ಗೆ ಪ್ರಬೋಧನೆ ಏರ್ಪಡಿಸಲಾಗಿದೆ. ಜೂನ್ ೧೨ರ ಶುಕ್ರವಾರ ಸಂಜೆ ೫.೩೦ಕ್ಕೆ ಬೆಂಗಳೂರಿನ ಸೇಂಟ್ ಪೀಟರ್ಸ್ ಸೆಮಿನರಿಯ ಫಾ. ರಿಚರ್ಡ್ ಬ್ರಿಟ್ಟೋ ಅವರಿಂದ ‘ಭರವಸೆಯ ಮೇಲಿನ ಮಾತುಗಳು’ ಬಗ್ಗೆ ಬೋಧನೆ ನಡೆಯಲಿದೆ

ವಾರ್ಷಿಕೋತ್ಸವದ ಅಂತಿಮ ದಿನವಾದ ಜೂ.೧೩ರಂದು ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಮೈಸೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷರಾದ ಡಾ.ಫ್ರಾನ್ಸಿಸ್ ಸೆರಾವೊ ಅವರಿಂದ ಹಬ್ಬದ ಆಡಂಬರ ಗಾಯನ ಬಲಿಪೂಜೆ ಜರುಗಲಿದೆ. ಆನಂತರ ಸಂಜೆ ಸಮ್ಮುಖದಲ್ಲಿ ಡೋರ‍್ನಹಳ್ಳಿ ಸಂತ ಅಂತೋಣಿಯವರ ವೈಭವದ ತೇರಿನ ಮೆರವಣಿಗೆ ಹಾಗೂ ಪರಮಪ್ರಸಾದ ಜೊತೆಗೆ ಆಶೀರ್ವಾದ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಬಸಿಲಿಕಾದ ಚರ್ಚ್ ಆಡಳಿತ ಮಂಡಳಿ ಮನವಿ ಮಾಡಿದೆ.

” ವಿಶ್ವವಿಖ್ಯಾತ ಸಂತ ಅಂತೋಣಿಯವರ ಬಸಿಲಿಕಾ ಜಾತ್ರಾ ಮಹೋತ್ಸವಕ್ಕೆ ವಿವಿಧೆಡೆಯಿಂದ ಭಕ್ತರು ಆಗಮಿಸಲಿದ್ದಾರೆ. ಕ್ಷೇತ್ರದ ಶಾಸಕರು ಹಾಗೂ ತಾಲ್ಲೂಕು ಆಡಳಿತದವರು ಎಂಟು ದಿನಗಳವರೆಗೆ ನಡೆಯುವ ಪವಾಡ ಪುರುಷರ ವಾರ್ಷಿಕೋತ್ಸವಕ್ಕೆ ಬರುವ ಭಕ್ತರಿಗೆ ಮೂಲಸೌಕರ್ಯಗಳನ್ನು ಒದಗಿಸಲು ಸಹಕಾರ ನೀಡಿದ್ದಾರೆ.”

-ಫಾ.ಡೇವಿಡ್ ಸಗಾಯ ರಾಜ್, ರೆಕ್ಟರ್, ಸಂತ ಅಂತೋಣಿಯವರ ಬಸಿಲಿಕಾ, ಡೋರ‍್ನಹಳ್ಳಿ 

” ಜಾತ್ರೆಗೆ ದೇಶ-ವಿದೇಶಗಳಿಂದ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಡೋರ‍್ನಹಳ್ಳಿಗೆ ಸಾರಿಗೆ ಮತ್ತು ರೈಲಿನ ವ್ಯವಸ್ಥೆ ಇದೆ. ಈಗಾಗಲೇ ಮೂರು ದಿನಗಳಿಂದ ಸಂತ ಅಂತೋಣಿಯವರ ದೇವಾಲಯದಲ್ಲಿ ಪ್ರಾರ್ಥನೆ ಹಾಗೂ ವಿಚಾರ ಸಂಕಿರಣ, ಬೋಧನೆಗಳು ಪ್ರಾರಂಭವಾಗಿವೆ. ಚರ್ಚ್ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.”

-ಪ್ರವೀಣ್ ಪೆದ್ರು, ಆಡಳಿತಾಧಿಕಾರಿ, ಸಂತ ಅಂತೋಣಿಯವರ ಬಸಿಲಿಕಾ, ಡೋರ‍್ನಹಳ್ಳಿ

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

4 hours ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

4 hours ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

4 hours ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

4 hours ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

4 hours ago