Andolana originals

ಪುಸ್ತಕ ಮೇಳದಲ್ಲಿ ‘ಕವಿತೆ ಹೇಳಿ, ಗಿಡ ಪಡೆಯಿರಿ’

ಚಿರಂಜೀವಿ ಸಿ.ಹುಲ್ಲಹಳ್ಳಿ

ಸಾಹಿತ್ಯ, ಪರಿಸರ ಸಂರಕ್ಷಣೆ ಕಾರ್ಯಕ್ಕೆ ಮುಂದಾಗಿರುವ ಸಂತೋಷ್ ಸಂಬಳದ ಹಣವೇ ವಿನಿಯೋಗ; ಬಿಎಂಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಸೇವೆ ಸಲ್ಲಿಸುತ್ತಿರುವ ಮಡೇನೂರು

ಮೈಸೂರು: ದಸರಾ ಮಹೋತ್ಸವದ ಪುಸ್ತಕ ಮೇಳಕ್ಕೆ ಬಂದವರು ಪುಸ್ತಕ ಖರೀದಿಸಿ ಮನೆಗೆ ಮರಳುವುದು ಸಾಮಾನ್ಯ. ಆದರೆ, ಇಲ್ಲಿ ಕವಿತೆ ಹೇಳಿ ಗಿಡವೊಂದನ್ನು ಉಚಿತವಾಗಿ ಪಡೆದುಕೊಂಡು ಹೋಗಬಹುದು!

ಸಾಹಿತ್ಯದ ಮೂಲಕ ಮನಸ್ಸುಗಳನ್ನು ತಲುಪುವ ಜತೆಗೆ ಪರಿಸರದ ಹಸಿರನ್ನು ಹೆಚ್ಚಿಸುವ ವಿನೂತನ ಪ್ರಯತ್ನಕ್ಕೆ ತುಮಕೂರು ಜಿಲ್ಲೆಯ ಸಂತೋಷ ಮಡೆನೂರು ಮುಂದಾಗಿದ್ದಾರೆ. ‘ಕವಿತೆ ಹೇಳಿ, ಗಿಡ ಪಡೆಯಿರಿ’ ಎಂಬ ವಿಭಿನ್ನ ಅಭಿಯಾನದ ಮೂಲಕ ಸಾಹಿತ್ಯ ಮತ್ತು ಪರಿಸರಪ್ರೀತಿಯನ್ನು ಒಟ್ಟಿಗೆ ಪಸರಿಸುತ್ತಿದ್ದು, ಪುಸ್ತಕ ಮೇಳದ ೧೧ ಮತ್ತು ೧೨ನೇ ಮಳಿಗೆಗಳಲ್ಲಿ ಸಾಹಿತ್ಯಪ್ರಿಯರು ಹಾಗೂ ಪರಿಸರಾಸಕ್ತರನ್ನು ಸೆಳೆಯುತ್ತಿದ್ದಾರೆ.

ಬಿಎಂಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂತೋಷ್ ಅವರು ಉದ್ಯೋಗದ ಜವಾಬ್ದಾರಿಗಳ ನಡುವೆಯೂ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಸಾಹಿತ್ಯ ಮತ್ತು ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ದಸರಾ ಪುಸ್ತಕ ಮೇಳದಲ್ಲಿ ೨೩ ಪ್ರಕಾರಗಳ ಔಷಧಿಯ ಸಸ್ಯಗಳು ಹಾಗೂ ೧೮ ಪ್ರಕಾರದ ಕಸಿ ಮಾಡಿದ ಹಣ್ಣಿನ ೬ ಸಾವಿರ ಗಿಡಗಳು ಹಾಗೂ ೬ ಸಾವಿರ ಕಾವ್ಯ ಪ್ರತಿಗಳನ್ನು ಹಂಚುವ ಗುರಿ ಹೊಂದಿದ್ದಾರೆ. ಈ ಕಾರ್ಯಕ್ಕಾಗಿ ಸ್ವಂತ ಸಂಬಳದ ಹಣವನ್ನೇ ಖರ್ಚು ಮಾಡುತ್ತಿದ್ದಾರೆ.

ಔಷಧಿಯ ಗಿಡವೊಂದಕ್ಕೆ ಸುಮಾರು ೩೦ ರೂ. ಹಾಗೂ ಕಸಿ ಮಾಡಿದ ಹಣ್ಣಿನ ಗಿಡವೊಂದಕ್ಕೆ ಸುಮಾರು ೯೦ ರೂ. ವೆಚ್ಚವಾಗುತ್ತಿದೆ. ಈಗಾಗಲೇ ಸುಮಾರು ೯೦ ಸಾವಿರ ರೂ. ಖರ್ಚು ಮಾಡಿದ್ದು, ಪುಸ್ತಕ ಮೇಳದ ಅಭಿಯಾನ ಪೂರ್ಣಗೊಳ್ಳುವ ವೇಳೆಗೆ ಇನ್ನಷ್ಟು ಹಣ ವಿನಿಯೋಗಬಹುದು ಎಂದು ಅವರು ಮಾಹಿತಿ ನೀಡಿದರು.

ಮೂರು ಕವನ ಸಂಕಲನಗಳು: ಸಂತೋಷ ತಮ್ಮ ರಚನೆಯಲ್ಲಿ ‘ರಾಗಿ ಹೊಲ’, ‘ಹಡೆದವ್ವ’ ‘ಹಸಿರಿಲ್ಲಾದ ನಾಡಿನತ್ತ’ ರಾಗಿ ಪುಸ್ತಕ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದು, ಮೂರು ಕೃತಿಗಳಿಂದ ೬೪೦ ಕವನಗಳನ್ನು ಒಳಗೊಂಡಿವೆ. ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿಗಳು ಸೇರಿದಂತೆ ವಿವಿಧ ಪ್ರಶಸ್ತಿಗಳೂ ಸಂದಿವೆ.

೧೯ ಸಾವಿರ ಗಿಡಗಳನ್ನು ನೆಟ್ಟ ಸಾಧನೆ: ೨೨ ವರ್ಷಗಳಿಂದ ಪರಿಸರ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸಂತೋಷ ಮಡೇನೂರು ಅವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಪೈಕಿ ೧೬ ಡಿಪೋಗಳಲ್ಲಿ ಗಿಡಗಳನ್ನು ನೆಟ್ಟಿದ್ದು, ೧೮೧ ಸರ್ಕಾರಿ ಶಾಲೆಗಳಲ್ಲಿಯೂ ಸಸಿಗಳನ್ನು ನೆಡುವ ಕಾರ್ಯ ಕೈಗೊಂಡಿದ್ದಾರೆ. ೧೯,೪೦೦ ಗಿಡಗಳನ್ನು ಸ್ವತಃ ನೆಟ್ಟು ಸಾಧನೆ ಮಾಡಿದ್ದು, ೨೩ ವರ್ಷಗಳಿಂದ ಪರಿಸರ ಕ್ಷೇತ್ರದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ತಾತನ ನೆನಪೇ ಪರಿಸರ ಕಾಳಜಿಗೆ ಪ್ರೇರಣೆ: ಸಂತೋಷ್ ಅವರ ಪರಿಸರ ಕಾಳಜಿಯ ಹಿಂದೆ ಬಾಲ್ಯದ ನೆನಪೊಂದು ಗಾಢವಾಗಿ ಬೇರೂರಿದೆ. ಅವರ ತಾತ ಎಂ.ಎಚ್.ರಾಮಣ್ಣ ಅವರು ಪಕ್ಷಿಗಳು ಹಾಗೂ ಇತರ ಜೀವಿಗಳಿಗೆ ಅನುಕೂಲವಾಗಲೆಂದು ಕಟ್ಟೆ ನಿರ್ಮಿಸಿ, ಗಿಡ-ಮರಗಳನ್ನು ಬೆಳೆಸಿದ್ದರು. ಆ ಕಟ್ಟೆಯನ್ನು ಕೆಡವಿ, ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಯಿತು. ಅಲ್ಲಿದ್ದ ಗಿಡ-ಮರಗಳು ನಾಶವಾದವು. ಬಾಲಕನಾಗಿದ್ದ ಅವರ ಬದುಕಿನಲ್ಲಿ ನಡೆದ ಈ ಘಟನೆ ಕಂಡು ತೀವ್ರವಾಗಿ ನೊಂದಿದ್ದರು. ಅಂದಿನಿಂದಲೇ ಗಿಡಗಳನ್ನು ಬೆಳೆಸಬೇಕು, ಪರಿಸರವನ್ನು ಉಳಿಸಬೇಕು ಎಂಬ ಆಲೋಚನೆ ಅವರಲ್ಲಿ ಗಟ್ಟಿಯಾಯಿತು.

ಆದಾಯ ಬಹುಪಾಲು ಸೇವೆಗೆ…:  ೨೦೦೩ರಲ್ಲಿ ‘ಸಸ್ಯಯಜ್ಞ’ ಎಂಬ ತಂಡವನ್ನು ರಚಿಸುವ ಮೂಲಕ ಪರಿಸರ ಸಂರಕ್ಷಣೆಯ ಕಾರ್ಯಕ್ಕೆ ಸಂಘಟಿತ ರೂಪ ನೀಡಿದರು. ಅಂದಿನಿಂದ ಇಂದಿನವರೆಗೂ ತಮ್ಮ ಪರಿಸರ ಸೇವೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪತ್ನಿ, ಇಬ್ಬರು ಮಕ್ಕಳಿರುವ ಕುಟುಂಬದ ಜವಾಬ್ದಾರಿಯ ಜತೆಗೆ ಒಂದು ಎಕರೆ ೧೬ ಗುಂಟೆ ಜಮೀನು ಹೊಂದಿರುವ ಅವರು, ತಮ್ಮ ಆದಾಯದ ಬಹುಪಾಲನ್ನು ಈ ಸೇವಾ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಸಾಲು ಮರದ ತಿಮ್ಮಕ್ಕ ಅವರಂತಹ ಪರಿಸರ ಪ್ರೇಮಿಗಳ ಪ್ರೇರಣೆಯು ಅವರಿಗಿದೆ.

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ರಾಜಕಾರಣಿಗಳದ್ದು ‘ಆಚಾರವಿಲ್ಲದ ನಾಲಿಗೆ’ ಆಗಬಾರದಲ್ಲವೇ?

ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…

8 mins ago

ಓದುಗರ ಪತ್ರ: ಶೇ. ೭.೫ರಷ್ಟು ಮೀಸಲಾತಿ: ಜನ ಮೆಚ್ಚುವ ನಿರ್ಧಾರ

ರಾಜ್ಯ ಸರ್ಕಾರವು ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ಶೇ. ೭.೫ರಷ್ಟು ಮೀಸಲಾತಿ ನೀಡಿರುವುದು ಜನ ಮೆಚ್ಚುವ…

11 mins ago

ಓದುಗರ ಪತ್ರ: ಸುಪ್ರೀಂಕೋರ್ಟ್ ಪೀಠಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು

ಸುಪ್ರೀಂ ಕೋರ್ಟ್ ಬಾಗಿಲು ಭಾರತದ ಪ್ರತಿಯೊಬ್ಬ ನಾಗರಿಕನಿಗೂ ತೆರೆದಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ. ಆದರೆ ದೇಶದ ಉತ್ತರದ…

12 mins ago

‘ಬಂದೋಬಸ್ತ್ ’ ಎಂಬ ಬದ್ಧತೆ

ಎಸ್. ಎಲ್. ಚೆನ್ನಬಸವಣ್ಣ ,ಐಪಿಎಸ್, ಉಪನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಇತಿಹಾಸದಿಂದ ಪ್ರಸ್ತುತ ಪೊಲೀಸ್ ಕರ್ತವ್ಯದವರೆಗೆ  ಸಾರ್... ಎಲ್ಲ…

14 mins ago

ರಾಮ್ ಜೀ ಸಕ್ಪಾಲ್ ಬಡಾವಣೆಯಲ್ಲಿ ಮೂಲಸೌಕರ್ಯ ಮರೀಚಿಕೆ

ಕೃಷ್ಣ ಸಿದ್ದಾಪುರ ನೀರಿಗೂ ಪರದಾಟ, ಕತ್ತಲಲ್ಲೇ ಮಕ್ಕಳ ವಿದ್ಯಾಭ್ಯಾಸ   ಸಿದ್ದಾಪುರ: ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊನ್ನತ್…

22 mins ago

ಡೆಡ್ ಬಾಡಿ ಬಿಸಾಕಿದ ಜಾಗದಲ್ಲಿ ಹೊಸ ಸುಳಿವು

ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಸ್ಕಾರ್ಪಿಯೋ ಹೋಗಿ-ಬರುವುದು, ೩ ಜನರು ನಡೆದು ಬರುವುದು ವಿಡಿಯೋದಲ್ಲಿ ಸೆರೆ ನಾಳೆ ೧೦ ಗಂಟೆಯವರೆಗೆ…

34 mins ago