Andolana originals

ಓದುಗರ ಪತ್ರ: ಸರಳತೆಯ ಸ್ವರೂಪವೆಂದರೆ ಇದು

ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್, ತಮಗೆ ನೀಡಿದ್ದ ಭದ್ರತಾ ವ್ಯವಸ್ಥೆಯನ್ನು ಬದಿಗೆ ಸರಿಸಿ, ಜನಸಾಮಾನ್ಯರಲ್ಲಿ ಒಬ್ಬರಂತೆ ನಡೆದುಕೊಳ್ಳುತ್ತಿರುವುದು ಮಾದರಿಯ ನಡೆಯಾಗಿದೆ. ಇತ್ತೀಚೆಗೆ ಅವರು ವಿಮಾನ ನಿಲ್ದಾಣದಿಂದ ಇಳಿದು ಹೊರಗೆ ಬರುವಾಗ ಸಾಮಾನ್ಯ ಪ್ರಯಾಣಿಕರಂತೆ ಭದ್ರತಾ ಸಿಬ್ಬಂದಿಗಳಿಂದ ಭದ್ರತಾ ತಪಾಸಣೆಗೆ ಒಳಗಾದದ್ದನ್ನು ನೋಡಿ ಹೃದಯ ತುಂಬಿ ಬಂದಿತು.

ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ‘ಮರಿ’ ರಾಜಕಾರಣಿಗಳು ಇನ್ನಿಲ್ಲದ ಬಿಲ್ಡಪ್ ಮತ್ತು ಗೆಟಪ್ ನೀಡಿ, ತಮ್ಮನ್ನು ತಾವೇ ವೈಭವೀಕರಿಸಿಕೊಳ್ಳುವ ಪರಿ ಅಸಹ್ಯವನ್ನು ಉಂಟು ಮಾಡುತ್ತದೆ. ಮತ್ತೊಂದು ಕಡೆ, ಮಂತ್ರಿ ಮಹೋದಯರ ಭದ್ರತಾ ವ್ಯವಸ್ಥೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಾರ್ಷಿಕವಾಗಿ ನೂರಾರು ಕೋಟಿ ರೂಪಾಯಿಗಳನ್ನೇ ಖರ್ಚು ಮಾಡುತ್ತಿರುವಾಗ ತಮಿಳುನಾಡಿನಂತಹ ದೊಡ್ಡ ರಾಜ್ಯದ ಮುಖ್ಯಮಂತ್ರಿ ಅಬ್ಬರ ಅಥವಾ ಆಡಂಬರವಿಲ್ಲದೆ ತಾನು ಜನಸಾಮಾನ್ಯರ ಪ್ರತಿನಿಧಿ, ಎಂದು ಭಾವಿಸಿ ಸರಳತೆ ಮೆರೆಯುತ್ತಿರುವುದು ಅನುಕರಣೀಯ.

-ಕೆ.ವಿ.ವಾಸು, ಮೈಸೂರು

ಆಂದೋಲನ ಡೆಸ್ಕ್

Recent Posts

ವ್ಯಕ್ತಿ ಮೇಲೆ ಕಾಡುಕೋಣ ದಾಳಿ : ಸಾವು

ಮಂಡ್ಯ : ಹಸು ಮೇಯಿಸಲು ಆರಣ್ಯದಂಚಿಗೆ ತೆರಳಿದ್ದ ವೃದ್ಧರೊಬ್ಬರ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದ ಪರಿಣಾ ಮ ಅವರು…

51 seconds ago

ಓದುಗರ ಪತ್ರ: ಮೂರಾಬಟ್ಟೆಯಂತಾಗಿದೆ ಶ್ರೀಸಾಮಾನ್ಯನ ಬದುಕು

ರಾಜ್ಯದಲ್ಲಿ ಬೆಲೆ ಏರಿಕೆ ಬಿಸಿ ಹೇಗಿದೆಯೆಂದರೆ ಬೇಸಿಗೆ ಬಿರುಬಿಸಿಲಿಗಿಂತಲೂ ಜೋರಾಗಿದೆ. ಇತ್ತೀಚೆಗೆ ಹಾಲು, ಮೊಸರು ಬಸ್‌ಪ್ರಯಾಣ ದರ ಏರಿಕೆಯ ಬೆನ್ನಲ್ಲೇ…

5 mins ago

ಓದುಗರ ಪತ್ರ: ರೈತರನ್ನು ಅಲೆದಾಡಿಸುವುದು ಸರಿಯಲ್ಲ

ರಸಗೊಬ್ಬರ ವಿತರಣೆಯ ಹೊಸ ಆಪ್ ವ್ಯವಸ್ಥೆಯು ಸರ್ಕಾರದ ಆಡಳಿತದ ಕಾರ್ಯವೈಖರಿಯನ್ನು ಬಯಲು ಮಾಡಿದೆ. ಸ್ಮಾಟ್ ಫೋನ್ ಮತ್ತು ಇಂಟರ್ನೆಟ್ ಕೊರತೆಯಿರುವ…

8 mins ago

ಓದುಗರ ಪತ್ರ: ನಾಗಲಕ್ಷ್ಮಿ ಚೌಧರಿ ಅವರ ಜನಪರ ಕಾಳಜಿ ನಿಜಕ್ಕೂ ಮಾದರಿ

ಜನಪರ ಕಾಳಜಿ ಇಟ್ಟುಕೊಂಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಅವರು ರಾಜದ್ಯಂತ ಪ್ರವಾಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.…

10 mins ago

ಸಿನಿ ಮಂದಿಯ ಚಿತ್ತ ಅತಿಪ್ರತಿಷ್ಠಿತ ಚಿತ್ರೋತ್ಸವದತ್ತ

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಇಂದಿನಿಂದ ೨೮ರವರೆಗೆ ಗೋವಾದಲ್ಲಿ ನಡೆಯಲಿರುವ ‘ಚಿತ್ರಜಾತ್ರೆ’ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದ (ಇಂಟರ್…

13 mins ago

ಐದೂವರೆ ವರ್ಷಗಳಲ್ಲಿ 473 ಆನೆಗಳ ಸಾವು

ಕೇಶವ ಎಂ. ಹೆಚ್ಚು ತ್ತಲೇ ಇದೆ ಆನೆಗಳ ಮರಣ; ವಿದ್ಯುತ್ ಸ್ಪರ್ಶದಿಂದಲೇ ೫೫ ಆನೆಗಳು ಅಸುನೀಗಿದವು ಮೈಸೂರು: ರಾಜ್ಯದಲ್ಲಿ ೨೦೨೧ರಿಂದ…

24 mins ago