Andolana originals

ಓದುಗರ ಪತ್ರ: ಮೂರಾಬಟ್ಟೆಯಂತಾಗಿದೆ ಶ್ರೀಸಾಮಾನ್ಯನ ಬದುಕು

ರಾಜ್ಯದಲ್ಲಿ ಬೆಲೆ ಏರಿಕೆ ಬಿಸಿ ಹೇಗಿದೆಯೆಂದರೆ ಬೇಸಿಗೆ ಬಿರುಬಿಸಿಲಿಗಿಂತಲೂ ಜೋರಾಗಿದೆ. ಇತ್ತೀಚೆಗೆ ಹಾಲು, ಮೊಸರು ಬಸ್‌ಪ್ರಯಾಣ ದರ ಏರಿಕೆಯ ಬೆನ್ನಲ್ಲೇ ಸ್ಥಿರಾಸ್ತಿ ಮಾರ್ಗಸೂಚಿ ದರ ಶೇ.೩೫ರಿಂದ ೩೫ಕ್ಕೆ ಏರಿಸುವ ಶಾಕ್ ನೀಡಲಾಗಿದೆ. ಬೆಲೆ ಏರಿಕೆ ಶಾಕ್ ನೀಡುವಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಹಳ ನಿಸ್ಸೀಮರು.

ಕಾಕತಾಳಿಯವೋ ಏನೋ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಗಾದಿಗೆ ಬಂದ ಮೇಲೆ ಹಲವರು ಐಟಂಗಳ ಬೆಲೆ ಏರಿಸಿದ್ದಾರೆ. ಅದರಲ್ಲೂ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಹೊಡೆತವೇ ಜಾಸ್ತಿ. ಕೇಂದ್ರ ಸರ್ಕಾರ ತನ್ನ ವ್ಯಾಪ್ತಿಗೆ ಬರುವ ಪದಾರ್ಥಗಳ ಬೆಲೆ ಹೆಚ್ಚಿಸಿದರೆ, ರಾಜ್ಯ ಸರ್ಕಾರ ಅದೇ ರೀತಿಯ ಹಾದಿ ಹಿಡಿಯುವ ಮೂಲಕ ಪೈಪೋಟಿಗೆ ಬಿದ್ದಂತಿದೆ. ಇದರಿಂದ ಶ್ರೀಸಾಮಾನ್ಯನ ಬದುಕು ಮೂರಾಬಟ್ಟೆಯಂತಾಗಿದೆ. ಹೀಗೆ ಲಂಗೂ ಲಗಾಮಿಲ್ಲದೆ ಬೆಲೆ ಏರಿಕೆಯಾಗುತ್ತಿದ್ದರೆ ಬೆಲೆ ನಿಯಂತ್ರಿಸುವವರು ಯಾರು? ಜನಸಾಮಾನ್ಯರ ಕಷ್ಟ ಕೇಳುವವರು ಯಾರು?

-ವಿ.ಎಸ್. ಗೋಪಾಲಕೃಷ್ಣ, ಮೈಸೂರು

ಆಂದೋಲನ ಡೆಸ್ಕ್

Recent Posts

ವ್ಯಕ್ತಿ ಮೇಲೆ ಕಾಡುಕೋಣ ದಾಳಿ : ಸಾವು

ಮಂಡ್ಯ : ಹಸು ಮೇಯಿಸಲು ಆರಣ್ಯದಂಚಿಗೆ ತೆರಳಿದ್ದ ವೃದ್ಧರೊಬ್ಬರ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದ ಪರಿಣಾ ಮ ಅವರು…

45 seconds ago

ಓದುಗರ ಪತ್ರ: ಸರಳತೆಯ ಸ್ವರೂಪವೆಂದರೆ ಇದು

ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್, ತಮಗೆ ನೀಡಿದ್ದ ಭದ್ರತಾ ವ್ಯವಸ್ಥೆಯನ್ನು ಬದಿಗೆ ಸರಿಸಿ, ಜನಸಾಮಾನ್ಯರಲ್ಲಿ ಒಬ್ಬರಂತೆ ನಡೆದುಕೊಳ್ಳುತ್ತಿರುವುದು ಮಾದರಿಯ ನಡೆಯಾಗಿದೆ. ಇತ್ತೀಚೆಗೆ…

7 mins ago

ಓದುಗರ ಪತ್ರ: ರೈತರನ್ನು ಅಲೆದಾಡಿಸುವುದು ಸರಿಯಲ್ಲ

ರಸಗೊಬ್ಬರ ವಿತರಣೆಯ ಹೊಸ ಆಪ್ ವ್ಯವಸ್ಥೆಯು ಸರ್ಕಾರದ ಆಡಳಿತದ ಕಾರ್ಯವೈಖರಿಯನ್ನು ಬಯಲು ಮಾಡಿದೆ. ಸ್ಮಾಟ್ ಫೋನ್ ಮತ್ತು ಇಂಟರ್ನೆಟ್ ಕೊರತೆಯಿರುವ…

8 mins ago

ಓದುಗರ ಪತ್ರ: ನಾಗಲಕ್ಷ್ಮಿ ಚೌಧರಿ ಅವರ ಜನಪರ ಕಾಳಜಿ ನಿಜಕ್ಕೂ ಮಾದರಿ

ಜನಪರ ಕಾಳಜಿ ಇಟ್ಟುಕೊಂಡಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌಧರಿ ಅವರು ರಾಜದ್ಯಂತ ಪ್ರವಾಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.…

10 mins ago

ಸಿನಿ ಮಂದಿಯ ಚಿತ್ತ ಅತಿಪ್ರತಿಷ್ಠಿತ ಚಿತ್ರೋತ್ಸವದತ್ತ

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಇಂದಿನಿಂದ ೨೮ರವರೆಗೆ ಗೋವಾದಲ್ಲಿ ನಡೆಯಲಿರುವ ‘ಚಿತ್ರಜಾತ್ರೆ’ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವದ (ಇಂಟರ್…

13 mins ago

ಐದೂವರೆ ವರ್ಷಗಳಲ್ಲಿ 473 ಆನೆಗಳ ಸಾವು

ಕೇಶವ ಎಂ. ಹೆಚ್ಚು ತ್ತಲೇ ಇದೆ ಆನೆಗಳ ಮರಣ; ವಿದ್ಯುತ್ ಸ್ಪರ್ಶದಿಂದಲೇ ೫೫ ಆನೆಗಳು ಅಸುನೀಗಿದವು ಮೈಸೂರು: ರಾಜ್ಯದಲ್ಲಿ ೨೦೨೧ರಿಂದ…

23 mins ago