Andolana originals

ಐದೂವರೆ ವರ್ಷಗಳಲ್ಲಿ 473 ಆನೆಗಳ ಸಾವು

ಕೇಶವ ಎಂ.

ಹೆಚ್ಚು ತ್ತಲೇ ಇದೆ ಆನೆಗಳ ಮರಣ; ವಿದ್ಯುತ್ ಸ್ಪರ್ಶದಿಂದಲೇ ೫೫ ಆನೆಗಳು ಅಸುನೀಗಿದವು

ಮೈಸೂರು: ರಾಜ್ಯದಲ್ಲಿ ೨೦೨೧ರಿಂದ ಈವರೆಗೆ ವಿದ್ಯುತ್ ಸ್ಪರ್ಶ, ಗುಂಡೇಟು ಸೇರಿದಂತೆ ಒಟ್ಟಾರೆ ೪೭೩ ಆನೆಗಳು ಸಾವನ್ನಪ್ಪಿವೆ.

ಈ ಪೈಕಿ ೫೫ ಆನೆಗಳು ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿವೆ. ವರ್ಷದಿಂದ ವರ್ಷಕ್ಕೆ ಆನೆಗಳ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ನೋವಿನ ಸಂಗತಿಯಾಗಿದೆ.

ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಭದ್ರಾ ವನ್ಯಜೀವಿ ಅಭಯಾರಣ್ಯ, ಕಾವೇರಿ ವನ್ಯಜೀವಿ ಅಭಯಾರಣ್ಯ, ದಾಂಡೇಲಿ ವನ್ಯಜೀವಿ ಅಭಯಾರಣ್ಯ, ಬಿಳಿಗಿರಿರಂಗನ ಬೆಟ್ಟ ಅಭಯಾರಣ್ಯ, ಮಲೆ ಮಹದೇಶ್ವರ ವನ್ಯಜೀವಿ, ತಲಕಾವೇರಿ ವನ್ಯಜೀವಿ ಅಭಯಾರಣ್ಯ ಸೇರಿದಂತೆ ರಾಜ್ಯದ ವಿವಿಧೆಡೆಯ ಅಭಯಾರಣ್ಯಗಳಲ್ಲಿ ೨೦೨೧ರಿಂದ ೨೦೨೬ರವರೆಗೆ ೪೭೩ ಆನೆಗಳು ಸಾವನ್ನಪ್ಪಿವೆ.

ಕಾಡಂಚಿನ ಪ್ರದೇಶಗಳಲ್ಲಿ ರೈತರು ರಾಗಿ, ತರಕಾರಿ ಇತರೆ ಬೆಳೆಗಳ ರಕ್ಷಣೆಗಾಗಿ ಸೋಲಾರ್ ಫೆನ್ಸ್ ಹಾಕುವುದರ ಜೊತೆಗೆ ತಂತಿಬೇಲಿಗೆ ಅಕ್ರಮವಾಗಿ ವಿದ್ಯುತ್ ಹಾಯಿಸುವುದರಿಂದ ಆಹಾರ ಅರಸಿ ಬಂದ ಆನೆಗಳು ವಿದ್ಯುತ್ ಸ್ಪರ್ಶಕ್ಕೆ ಮೈಸೂರು ಭಾಗದಲ್ಲಿರುವ ನಾಗರಹೊಳೆ, ಬಂಡೀಪುರ, ಕಾವೇರಿ ವನ್ಯಧಾಮ, ಮಲೆ ಮಹದೇಶ್ವರ ವನ್ಯಧಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗಿವೆ.

” ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ೪ ವರ್ಷಗಳಲ್ಲಿ ವಿದ್ಯುತ್ ತಗುಲಿ ೪ ಆನೆಗಳು ಸೇರಿದಂತೆ ಒಟ್ಟಾರೆ ೭೧ ಆನೆಗಳು ಮೃತಪಟ್ಟಿವೆ. ಕಾಡಂಚಿನ ಪ್ರದೇಶದಲ್ಲಿ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳ ರಕ್ಷಣೆ ಮಾಡಲು, ಕಾಡಾನೆ ಹಾಗೂ ಇತರೆ ಕಾಡು ಪ್ರಾಣಿಗಳ ಹಾವಳಿ ತಡೆಯಲು ರೈತರಿಗೆ ಸೋಲಾರ್ ಫೆನ್ಸ್ ಅಳವಡಿಸುವಂತೆ ಅರಣ್ಯ ಇಲಾಖೆ ಮಾಹಿತಿ ನೀಡಿದೆ.”

ಸೌರಭ್ ಕುಮಾರ್, ನಿರ್ದೇಶಕ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

” ಕಾಡಂಚಿನ ಪ್ರದೇಶದಲ್ಲಿ ಆಹಾರ ಅರಸಿ ಬರುವ ಆನೆಗಳನ್ನು ತಡೆಯಲು ರೈತರು ಸೋಲಾರ್ ಫೆನ್ಸ್ ಅಳವಡಿಸಬೇಕು. ಒಂದು ವೇಳೆ ವಿದ್ಯುತ್ ತಂತಿಗಳನ್ನು ಅಳವಡಿಸಿದರೆ ಆನೆಗಳ ಸಾವಿಗೂ ಕಾರಣವಾಗಬಹುದು. ಹಾಗಾಗಿ ಅರಣ್ಯ ಇಲಾಖೆಯು ಆನೆಗಳ ಹಾವಳಿಯನ್ನು ತಡೆಯಲು ಕಾಡಂಚಿನ ಪ್ರದೇಶದ ರೈತರಿಗೆ ಅರಿವು ಮೂಡಿಸಬೇಕು. ಆಹಾರ ಕೊರತೆಯಿಂದಲೂ ಸಾವುಗಳು ಉಂಟಾಗುತ್ತವೆ. ಆನೆಗಳಿಗೆ ಕಾಡಿನಲ್ಲಿಯೇ ನೀರು, ಆಹಾರ ಒದಗಿಸುವಂತಹ ವಾತಾವರಣವನ್ನು ಅರಣ್ಯ ಇಲಾಖೆ ಸೃಷ್ಟಿಸಬೇಕು.”

ಡಾ.ಸಿ.ಮಾದೇಗೌಡ, ಸಂಶೋಧಕ

” ಆನೆಗಳ ಸಾವಿನಲ್ಲಿ ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳ, ಛತ್ತಿಸ್‌ಘಡ ರಾಜ್ಯಗಳ ನಂತರ ಕರ್ನಾಟಕ ರಾಜ್ಯ ೫ನೇ ಸ್ಥಾನದಲ್ಲಿದೆ. ಕಾಡಂಚಿನ ಪ್ರದೇಶಗಳಲ್ಲಿ ಆನೆಗಳು ವಿದ್ಯುತ್ ಸ್ಪರ್ಶದಿಂದ ಸಾಯಲು, ಅರಣ್ಯ ಇಲಾಖೆಯ ಸಮನ್ವಯ ಕೊರತೆಯೂ ಕೂಡ ಕಾರಣವಾಗಿದೆ. ಸೆಸ್ಕ್, ಕಂದಾಯ, ಅರಣ್ಯ, ಪೊಲೀಸ್ ಇಲಾಖೆಯು ಸಮನ್ವಯದೊಂದಿಗೆ ಕೆಲಸ ಮಾಡಿ, ರೈತರಿಗೆ ಅರಿವು ಮೂಡಿಸಬೇಕು.”

ಜೋಸೆಫೆ ಹೂವರ್, ವನ್ಯಜೀವಿ ತಜ್ಞ

 

 

ಆಂದೋಲನ ಡೆಸ್ಕ್

Recent Posts

ಟ್ಯಾಕ್ಸಿ-ಆಟೋ ಚಾಲಕರಿಗೆ ಮಾರಕವಾಗಿರುವ ಬೈಕ್ ಟ್ಯಾಕ್ಸಿ

ಪುನೀತ್ ಮಡಿಕೇರಿ ಮಡಿಕೇರಿಯಲ್ಲಿ ೧೦ಕ್ಕೂ ಹೆಚ್ಚು ಖಾಸಗಿ ಬೈಕ್ ಕಂಪೆನಿಗಳು ಕಾರ್ಯನಿರ್ವಹಣೆ; ಬಾಡಿಗೆ ಆಟೋ, ಕಾರು ಚಾಲಕರಿಗೆ ಸಂಕಷ್ಟ  ಮಡಿಕೇರಿ:…

7 mins ago

ಚಾಮರಾಜನಗರ ಜಿಲ್ಲೆಯ 51,972 ರೈತರಿಗೆ ಬರ ಪರಿಹಾರ

ತಲಾ ೨,೫೦೦ ರೂ. ನೆರವಿನಂತೆ ಒಟ್ಟು ೧೨,೯೯,೩೦,೦೦೦ ರೂ. ಬಿಡುಗಡೆ  ಚಾಮರಾಜನಗರ: ಮುಂಗಾರು ವೈಫಲ್ಯದಿಂದ ಜಿಲ್ಲೆಯ ಎಲ್ಲ ಐದು ತಾಲ್ಲೂಕುಗಳೂ…

13 mins ago

ಕುಮಾರಕೃಪಾಗೆ ‘ಗಂಗಾ’ ಹೆಸರು, ಸಿಎಂ ಔತಣಕೂಟದ ವೇಳೆಯೇ ವಾಟಾಳ್ ಪ್ರತಿಭಟನೆ

ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಕುಮಾರಕೃಪಾ ಅತಿಥಿ ಗೃಹಕ್ಕೆ ‘ಗಂಗಾ’ ಎಂದು ಮರುನಾಮಕರಣ ಮಾಡಿರುವುದನ್ನು ವಿರೋಧಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್…

15 hours ago

ಇಬ್ಬರ ಸಾವಿನ ಬಳಿಕ ಸಕಲೇಶಪುರದಲ್ಲಿ ಜೋಡಿ ಸಲಗಗಳ ಸೆರೆ, ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಡಿಬೆಟ್ಟ ಎಸ್ಟೇಟ್‌ನಲ್ಲಿ ಎರಡು ಕಾಡಾನೆಗಳನ್ನು ಅರಣ್ಯ ಇಲಾಖೆ ಸೆರೆಹಿಡಿದಿದೆ. ನವೆಂಬರ್ 14ರಂದು ಬೇಲೂರು ತಾಲೂಕಿನ…

15 hours ago

ಚುನಾವಣೆಯಲ್ಲಿ ಭಾಗವಹಿಸಿಯೇ ಮತದಾರರ ಹಕ್ಕಿಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದ ರಾಹುಲ್ ಗಾಂಧಿ

ನವದೆಹಲಿ: ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ. ಚುನಾವಣೆಯಲ್ಲಿ ಭಾಗವಹಿಸಿಯೇ ಮತದಾರರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್…

16 hours ago