ಹಾಸನ

ಇಬ್ಬರ ಸಾವಿನ ಬಳಿಕ ಸಕಲೇಶಪುರದಲ್ಲಿ ಜೋಡಿ ಸಲಗಗಳ ಸೆರೆ, ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಡಿಬೆಟ್ಟ ಎಸ್ಟೇಟ್‌ನಲ್ಲಿ ಎರಡು ಕಾಡಾನೆಗಳನ್ನು ಅರಣ್ಯ ಇಲಾಖೆ ಸೆರೆಹಿಡಿದಿದೆ.

ನವೆಂಬರ್ 14ರಂದು ಬೇಲೂರು ತಾಲೂಕಿನ ಕುಶಾವರ ಬಳಿ ಕಾಡಾನೆ ದಾಳಿಗೆ ಜಯಮ್ಮ ಮೃತಪಟ್ಟಿದ್ದರು. ಎರಡು ದಿನಗಳ ಬಳಿಕ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಹಫೀಜ್‌ ಕೂಡ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಈ ಎರಡು ಘಟನೆಗಳ ಬಳಿಕ ಅರಣ್ಯ ಇಲಾಖೆ ಜೋಡಿ ಸಲಗಗಳ ಸೆರೆಗೆ ಕಾರ್ಯಾಚರಣೆ ಆರಂಭಿಸಿತ್ತು.

ಡ್ರೋನ್‌ ಕ್ಯಾಮರಾದಲ್ಲಿ ಜೊತೆಜೊತೆಯಾಗಿ ಓಡಾಡುತ್ತಿದ್ದ ಸಲಗಗಳು ಪತ್ತೆಯಾಗಿದ್ದವು. ಕ್ಯಾಪ್ಟನ್ ಪ್ರಶಾಂತ ನೇತೃತ್ವದ ಏಳು ಕುಮ್ಕಿ ಆನೆಗಳ ನೆರವಿನಿಂದ, ಎರಡೂ ಕಾಡಾನೆಗಳಿಗೆ ಅರಿವಳಿಕೆ ನೀಡಿ ನವೆಂಬರ್ 19ರಂದು ಸೆರೆಹಿಡಿಯಲಾಯಿತು.

ಹಾಸನ ಜಿಲ್ಲೆಯಲ್ಲಿ ಒಂದೇ ಕಾರ್ಯಾಚರಣೆಯಲ್ಲಿ ಎರಡು ಕಾಡಾನೆಗಳನ್ನು ಸೆರೆಹಿಡಿದಿರುವುದು ಇದೇ ಮೊದಲು ಎಂದು ವರದಿಯಾಗಿದೆ.

ಆಂದೋಲನ ಡೆಸ್ಕ್

Recent Posts

ಕುಮಾರಕೃಪಾಗೆ ‘ಗಂಗಾ’ ಹೆಸರು, ಸಿಎಂ ಔತಣಕೂಟದ ವೇಳೆಯೇ ವಾಟಾಳ್ ಪ್ರತಿಭಟನೆ

ಬೆಂಗಳೂರು: ಬೆಂಗಳೂರಿನ ಐತಿಹಾಸಿಕ ಕುಮಾರಕೃಪಾ ಅತಿಥಿ ಗೃಹಕ್ಕೆ ‘ಗಂಗಾ’ ಎಂದು ಮರುನಾಮಕರಣ ಮಾಡಿರುವುದನ್ನು ವಿರೋಧಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್…

1 min ago

ಚುನಾವಣೆಯಲ್ಲಿ ಭಾಗವಹಿಸಿಯೇ ಮತದಾರರ ಹಕ್ಕಿಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದ ರಾಹುಲ್ ಗಾಂಧಿ

ನವದೆಹಲಿ: ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ. ಚುನಾವಣೆಯಲ್ಲಿ ಭಾಗವಹಿಸಿಯೇ ಮತದಾರರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್…

47 mins ago

ರಾಜ್ಯಕ್ಕೆ ಮತ್ತೆರಡು ಸರ್ಕಾರಿ ವೈದ್ಯಕೀಯ ಕಾಲೇಜು

ಬೆಂಗಳೂರು: ಕರ್ನಾಟಕಕ್ಕೆ ಮತ್ತೆರಡು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಬರಲಿವೆಯಾ? 2027–28ನೇ ಶೈಕ್ಷಣಿಕ ವರ್ಷದಲ್ಲಿ ಪುತ್ತೂರು ಮತ್ತು ರಾಮನಗರದಲ್ಲಿ ತಲಾ ಒಂದು…

3 hours ago

ಊಟಿಯಲ್ಲಿ ಮೈಕೊರೆಯುವ ಚಳಿ, 5.9°Cಗೆ ಇಳಿದ ಕನಿಷ್ಠ ತಾಪಮಾನ!

ಊಟಿ: ಊಟಿಯಲ್ಲಿ ಮೈಕೊರೆಯುವ ಚಳಿ! ನೀಲಗಿರಿ ಜಿಲ್ಲೆಯ ಈ ಗಿರಿಧಾಮದಲ್ಲಿ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಗುರುವಾರ…

4 hours ago

ಅಕ್ವಾನ್ ಚಂಡಮಾರುತದ ಅಬ್ಬರ: ಆಂಧ್ರ–ಒಡಿಶಾ ಕರಾವಳಿಯಲ್ಲಿ ಕಟ್ಟೆಚ್ಚರ: ಬೆಂಗಳೂರಿನಲ್ಲೂ ಮಳೆ ಸಾಧ್ಯತೆ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅಕ್ವಾನ್‌’ ತೀವ್ರ ಚಂಡಮಾರುತ ಶುಕ್ರವಾರ, ನವೆಂಬರ್‌ 20ರಂದು ಕರಾವಳಿ ದಾಟುವ ಸಾಧ್ಯತೆಯಿದೆ. ಭಾರತೀಯ ಹವಾಮಾನ ಇಲಾಖೆ…

4 hours ago

ಓದುಗರ ಪತ್ರ: ಧೋನಿ ನಾಯಕತ್ವ ಮಾದರಿ

ಭಾರತೀಯ ಕ್ರಿಕೆಟ್ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್‌ಗೆ…

6 hours ago