Andolana originals

ಓದುಗರ ಪತ್ರ: ಧೋನಿ ನಾಯಕತ್ವ ಮಾದರಿ

ಭಾರತೀಯ ಕ್ರಿಕೆಟ್ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್‌ಗೆ ನಿವೃತ್ತಿ ಘೋಷಿಸಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಭಾವನಾತ್ಮಕ ಕ್ಷಣವನ್ನು ಸೃಷ್ಟಿಸಿದೆ.

ಧೋನಿ ಎಂದರೆ ಕೇವಲ ಒಬ್ಬ ಕ್ರಿಕೆಟಿಗನಲ್ಲ, ಅವರು ನಾಯಕತ್ವ, ತಾಳ್ಮೆ, ಆತ್ಮವಿಶ್ವಾಸ ಮತ್ತು ಯಶಸ್ಸಿನ ಪ್ರತೀಕ. ತಮ್ಮ ವಿಶಿಷ್ಟ ನಾಯಕತ್ವದ ಮೂಲಕ ಭಾರತಕ್ಕೆ ೨೦೦೭ರ ಟಿ-೨೦ ವಿಶ್ವಕಪ್, ೨೦೧೧ರ ಏಕದಿನ ವಿಶ್ವಕಪ್ ಹಾಗೂ ೨೦೧೩ರ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಟ್ಟ ಕೀರ್ತಿ ಅವರದು. ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿ ಹಲವು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.

ಮೈದಾನದಲ್ಲಿ ಎಂತಹ ಒತ್ತಡದ ಸಂದರ್ಭವಿದ್ದರೂ ಶಾಂತಚಿತ್ತದಿಂದ ನಿರ್ಧಾರ ಕೈಗೊಳ್ಳುವ ಅವರ ಗುಣವೇ ಅವರನ್ನು ‘ಕ್ಯಾಪ್ಟನ್ ಕೂಲ’ ಎಂದು ಪ್ರಸಿದ್ಧಿಗೊಳಿಸಿತು. ಯುವ ಆಟಗಾರರಿಗೆ ಅವಕಾಶ ನೀಡುವುದು, ತಂಡದ ಹಿತಕ್ಕೆ ಆದ್ಯತೆ ನೀಡುವುದು ಮತ್ತು ಕೊನೆಯ ಕ್ಷಣದವರೆಗೂ ಗೆಲುವಿಗಾಗಿ ಹೋರಾಡುವುದು ಅವರ ವ್ಯಕ್ತಿತ್ವದ ವಿಶೇಷತೆಗಳಾಗಿವೆ. ಅವರ ಆಟ ಹಾಗೂ ನಾಯಕತ್ವದ ತಂತ್ರಗಳು ಮುಂದಿನ ಪೀಳಿಗೆಯ ಕ್ರಿಕೆಟಿಗರಿಗೆ ಮಾದರಿಯಾಗಲಿವೆ.

 -ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಶುಲ್ಕ ಮರುಪರಿಶೀಲನೆ ಮಾಡಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಗದಿಪಡಿಸಿರುವ ಅರ್ಜಿ ಶುಲ್ಕವು ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ…

8 mins ago

ಓದುಗರ ಪತ್ರ: ಪಾದಚಾರಿಗಳಿಗೆ ಮಾರ್ಗವೇ ಇಲ್ಲ

ಮಂಡ್ಯ ನಗರದ ಕೆ.ವಿ.ಶಂಕರಗೌಡ ರಸ್ತೆಯು ಮೈಸೂರು-ಬೆಂಗಳೂರು ಹೆದ್ದಾರಿ ಮತ್ತು ಬನ್ನೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಇಲ್ಲಿ ಫುಟ್‌ಪಾತ್‌ಇಲ್ಲದೇ ಪಾದಚಾರಿಗಳು…

13 mins ago

‘ನಾನು ತೆರಿಗೆ ಕಟ್ಟುವುದನ್ನು ನಿಲ್ಲಿಸಬೇಕೇ?’ ಬಂಧನ, ಭದ್ರತೆಗೆ ₹2 ಕೋಟಿ ವೆಚ್ಚ ಎಂದ ವಾಂಗ್‌ಚುಕ್‌

 ನವದೆಹಲಿ: ‘ನಾನು ತೆರಿಗೆ ಕಟ್ಟುವುದನ್ನು ನಿಲ್ಲಿಸಬೇಕೇ?’ ಹೀಗೊಂದು ಪ್ರಶ್ನೆ ಎತ್ತಿದ್ದಾರೆ ಲಡಾಖ್‌ನ ಪರಿಸರ ಹೋರಾಟಗಾರ ಸೋನಮ್‌ ವಾಂಗ್‌ಚುಕ್‌. ತಮ್ಮ ಬಂಧನ…

18 hours ago

‘ಭಾರತ ಆರ್ಥಿಕ ವಿಪತ್ತಿನ ಅಂಚಿನಲ್ಲಿದೆ’ — ಅಮೆರಿಕದಲ್ಲಿ ರಾಹುಲ್‌ ಗಾಂಧಿ ಆರೋಪ

ನ್ಯೂಯಾರ್ಕ್‌: ಭಾರತ ಆರ್ಥಿಕ ವಿಪತ್ತಿನ ಅಂಚಿನಲ್ಲಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ನವೆಂಬರ್‌ 17ರಂದು ನ್ಯೂಯಾರ್ಕ್‌ನ…

19 hours ago

ಕಾಡಾನೆಯನ್ನು ಕೆಣಕಿದ ಸವಾರ, ಕಠಿಣ ಕ್ರಮಕ್ಕೆ ಸಚಿವ ರಾಮಲಿಂಗಾರೆಡ್ಡಿ ಆದೇಶ

 ನಾಗರಹೊಳೆ: ರಸ್ತೆ ಬದಿಯಲ್ಲಿ ಕಾಡಾನೆ ಕಾಣುತ್ತಿದ್ದಂತೆ ಸ್ಕೂಟರ್‌ ನಿಲ್ಲಿಸಿದ ಇಬ್ಬರು ಸವಾರರಲ್ಲಿ ಓರ್ವ ಹಿಂಬದಿ ಸವಾರ ಕೆಳಗಿಳಿದು ಆನೆಯತ್ತ ಕಲ್ಲೆಸೆದಿದ್ದಾನೆ.…

20 hours ago