ಓದುಗರ ಪತ್ರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಗದಿಪಡಿಸಿರುವ ಅರ್ಜಿ ಶುಲ್ಕವು ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾಕಾಂಕ್ಷಿಗಳಿಗೆ ಆರ್ಥಿಕ ಹೊರೆಯಾಗಿದೆ.
ಈಗಾಗಲೇ ಅಧಿಸೂಚನೆ ಹೊರಡಿಸಿರುವ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಆದರೆ ಇಲ್ಲಿ ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳಿಗೆ ೭೫೦ ರೂ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ೫೦೦ ರೂ. ಅರ್ಜಿ ಶುಲ್ಕವನ್ನು ವಿಧಿಸಿದ್ದಾರೆ.
ಸರ್ಕಾರಿ ಉದ್ಯೋಗ ಅರಸಿ, ತಮ್ಮ ತಮ್ಮ ಊರುಗಳನ್ನು ಬಿಟ್ಟು ನಗರ ಪ್ರದೇಶದಲ್ಲಿ ಬಾಡಿಗೆಯ ಕೊಠಡಿಗಳಲ್ಲಿದ್ದುಕೊಂಡು , ತಮ್ಮ ಊಟೋಪಚಾರಗಳನ್ನ ತಾವೇ ಸಿದ್ಧಪಡಿಸಿಕೊಂಡು, ಗ್ರಂಥಾಲಯಗಳಲ್ಲಿ ಓದುವಂತಹ ಅನೇಕ ಸ್ಪರ್ಧಾಕಾಂಕ್ಷಿಗಳಿದ್ದಾರೆ. ಇವರು ಈ ಎಲ್ಲಾ ಆರ್ಥಿಕ ಸವಾಲುಗಳನ್ನು ಎದುರಿಸುವ ಜೊತೆಗೆ ಪ್ರತಿ ಪರೀಕ್ಷೆಗೂ ಪ್ರತ್ಯೇಕ ಶುಲ್ಕ ಭರಿಸಬೇಕು.
ಈ ಅಭ್ಯರ್ಥಿಗಳು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭಗಳಲ್ಲಿ ಈ ಹೆಚ್ಚಿನ ಪರೀಕ್ಷಾ ಶುಲ್ಕವು ಅವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. ನಮ್ಮ ಸಂವಿಧಾನವು ಸರ್ಕಾರಿ ಉದ್ಯೋಗದಲ್ಲಿ ಸಮಾನ ಅವಕಾಶವನ್ನೂ ಪ್ರತಿಪಾದಿಸುತ್ತದೆ. ಆದರೆ ಈ ಪರೀಕ್ಷಾ ಅರ್ಜಿ ಶುಲ್ಕಗಳು ಅರ್ಹ ಅಭ್ಯರ್ಥಿಗಳ ಅವಕಾಶವನ್ನು ನಿರಾಕರಿಸುವಂತೆ ಪರೋಕ್ಷವಾಗಿ ಅಡ್ಡಿಯಾಗಬಾರದು. ಆದ್ದರಿಂದ ಬಡ ಮತ್ತು ಮಧ್ಯಮ ವರ್ಗದ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಮತ್ತು ಕೆ ಇ ಎ ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಶುಲ್ಕವನ್ನು ಮರುಪರಿಶೀಲನೆ ಮಾಡಿ ಆದಷ್ಟು ಕಡಿಮೆ ಮಾಡಬೇಕಿದೆ.
-ದರ್ಶನ್ ಚಂದ್ರ ಎಂ. ಪಿ., ಮುಕ್ಕಡಹಳ್ಳಿ, ಚಾಮರಾಜನಗರ ತಾ.
ಭಾರತೀಯ ಕ್ರಿಕೆಟ್ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್‌ಗೆ…
ಮಂಡ್ಯ ನಗರದ ಕೆ.ವಿ.ಶಂಕರಗೌಡ ರಸ್ತೆಯು ಮೈಸೂರು-ಬೆಂಗಳೂರು ಹೆದ್ದಾರಿ ಮತ್ತು ಬನ್ನೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಇಲ್ಲಿ ಫುಟ್‌ಪಾತ್‌ಇಲ್ಲದೇ ಪಾದಚಾರಿಗಳು…
ನವದೆಹಲಿ: ‘ನಾನು ತೆರಿಗೆ ಕಟ್ಟುವುದನ್ನು ನಿಲ್ಲಿಸಬೇಕೇ?’ ಹೀಗೊಂದು ಪ್ರಶ್ನೆ ಎತ್ತಿದ್ದಾರೆ ಲಡಾಖ್‌ನ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್. ತಮ್ಮ ಬಂಧನ…
ನ್ಯೂಯಾರ್ಕ್: ಭಾರತ ಆರ್ಥಿಕ ವಿಪತ್ತಿನ ಅಂಚಿನಲ್ಲಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ನವೆಂಬರ್ 17ರಂದು ನ್ಯೂಯಾರ್ಕ್‌ನ…
ನಾಗರಹೊಳೆ: ರಸ್ತೆ ಬದಿಯಲ್ಲಿ ಕಾಡಾನೆ ಕಾಣುತ್ತಿದ್ದಂತೆ ಸ್ಕೂಟರ್ ನಿಲ್ಲಿಸಿದ ಇಬ್ಬರು ಸವಾರರಲ್ಲಿ ಓರ್ವ ಹಿಂಬದಿ ಸವಾರ ಕೆಳಗಿಳಿದು ಆನೆಯತ್ತ ಕಲ್ಲೆಸೆದಿದ್ದಾನೆ.…