ದೇಶ- ವಿದೇಶ

ಅಕ್ವಾನ್ ಚಂಡಮಾರುತದ ಅಬ್ಬರ: ಆಂಧ್ರ–ಒಡಿಶಾ ಕರಾವಳಿಯಲ್ಲಿ ಕಟ್ಟೆಚ್ಚರ: ಬೆಂಗಳೂರಿನಲ್ಲೂ ಮಳೆ ಸಾಧ್ಯತೆ

ನವದೆಹಲಿ: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅಕ್ವಾನ್‌’ ತೀವ್ರ ಚಂಡಮಾರುತ ಶುಕ್ರವಾರ, ನವೆಂಬರ್‌ 20ರಂದು ಕರಾವಳಿ ದಾಟುವ ಸಾಧ್ಯತೆಯಿದೆ.

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಆಂಧ್ರಪ್ರದೇಶದ ನರಸಾಪುರ ಮತ್ತು ಒಡಿಶಾದ ಪುರಿ ನಡುವಿನ ಕರಾವಳಿಯಲ್ಲಿ, ಗೋಪಾಲಪುರದ ಪೂರ್ವಕ್ಕೆ ಚಂಡಮಾರುತ ತೀರ ದಾಟುವ ನಿರೀಕ್ಷೆಯಿದೆ. ಈ ವೇಳೆ ಗಂಟೆಗೆ 90ರಿಂದ 100 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಬಹುದು. ಗಾಳಿಯ ಹೊಡೆತ ಗಂಟೆಗೆ 110 ಕಿಲೋಮೀಟರ್‌ವರೆಗೂ ತಲುಪಬಹುದು.

ಕರಾವಳಿ ಆಂಧ್ರ ಮತ್ತು ಒಡಿಶಾದ ಕೆಲವೆಡೆ ಭಾರೀ ಮಳೆಯ ಮುನ್ಸೂಚನೆ ಇದೆ. ಒಡಿಶಾದಲ್ಲಿ ಮುನ್ನೆಚ್ಚರಿಕೆಯಾಗಿ ಸುಮಾರು 50 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತದ ಪ್ರಭಾವದಿಂದ ಬೆಂಗಳೂರಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದ್ದು, ಜನತೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

 

ಆಂದೋಲನ ಡೆಸ್ಕ್

Recent Posts

ಊಟಿಯಲ್ಲಿ ಮೈಕೊರೆಯುವ ಚಳಿ, 5.9°Cಗೆ ಇಳಿದ ಕನಿಷ್ಠ ತಾಪಮಾನ!

ಊಟಿ: ಊಟಿಯಲ್ಲಿ ಮೈಕೊರೆಯುವ ಚಳಿ! ನೀಲಗಿರಿ ಜಿಲ್ಲೆಯ ಈ ಗಿರಿಧಾಮದಲ್ಲಿ ಕನಿಷ್ಠ ತಾಪಮಾನ 5.9 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಗುರುವಾರ…

5 mins ago

ಓದುಗರ ಪತ್ರ: ಧೋನಿ ನಾಯಕತ್ವ ಮಾದರಿ

ಭಾರತೀಯ ಕ್ರಿಕೆಟ್ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಐಪಿಎಲ್‌ಗೆ…

2 hours ago

ಓದುಗರ ಪತ್ರ: ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಶುಲ್ಕ ಮರುಪರಿಶೀಲನೆ ಮಾಡಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿಗದಿಪಡಿಸಿರುವ ಅರ್ಜಿ ಶುಲ್ಕವು ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ…

2 hours ago

ಓದುಗರ ಪತ್ರ: ಪಾದಚಾರಿಗಳಿಗೆ ಮಾರ್ಗವೇ ಇಲ್ಲ

ಮಂಡ್ಯ ನಗರದ ಕೆ.ವಿ.ಶಂಕರಗೌಡ ರಸ್ತೆಯು ಮೈಸೂರು-ಬೆಂಗಳೂರು ಹೆದ್ದಾರಿ ಮತ್ತು ಬನ್ನೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಇಲ್ಲಿ ಫುಟ್‌ಪಾತ್‌ಇಲ್ಲದೇ ಪಾದಚಾರಿಗಳು…

2 hours ago

‘ನಾನು ತೆರಿಗೆ ಕಟ್ಟುವುದನ್ನು ನಿಲ್ಲಿಸಬೇಕೇ?’ ಬಂಧನ, ಭದ್ರತೆಗೆ ₹2 ಕೋಟಿ ವೆಚ್ಚ ಎಂದ ವಾಂಗ್‌ಚುಕ್‌

 ನವದೆಹಲಿ: ‘ನಾನು ತೆರಿಗೆ ಕಟ್ಟುವುದನ್ನು ನಿಲ್ಲಿಸಬೇಕೇ?’ ಹೀಗೊಂದು ಪ್ರಶ್ನೆ ಎತ್ತಿದ್ದಾರೆ ಲಡಾಖ್‌ನ ಪರಿಸರ ಹೋರಾಟಗಾರ ಸೋನಮ್‌ ವಾಂಗ್‌ಚುಕ್‌. ತಮ್ಮ ಬಂಧನ…

20 hours ago