Andolana originals

ಓದುಗರ ಪತ್ರ: ಜಾತಿವಾದಿ ಮನದ ‘ ಓನ್ಲಿ ವೆಜ್’ ಎಂಬ ಕೇಕೆ

ಮಂಡ್ಯದಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟದ ಪ್ರಸ್ತಾಪ ಚರ್ಚೆಗೆ ಒಳಗಾಗುತ್ತಿದೆ. ಅದು ಆಹಾರ ಸಂಸ್ಕೃತಿಯ ಮೇಲೆ ಪ್ರಭಾವ ಬೀರುತ್ತದೆ. ಅಲ್ಲದೆ ಅದು ಪರೋಕ್ಷವಾಗಿ ಜತಿ ವ್ಯವಸ್ಥೆಯ ಪರ- ವಿರೋಧವಾಗಿ ಕಾಣುತ್ತಿದೆ. ಯಾರು ಏನೇ ಹೇಳಿದರೂ ದೇಶದಲ್ಲಿ ಜತಿ ಪದ್ಧತಿಯ ಬೇರು ಗಟ್ಟಿಯಾಗುತ್ತಲೇ ಇರುವಂತಿದೆ. ಅಲ್ಲದೆ, ಆಧುನಿಕತೆಗೆ ಒಗಿಕೊಂಡಷ್ಟೂ, ಜತಿವಾದವೂ ನವೀನ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಮಾತಿಗೆ ಒಂದು ‘ಮನೆ ಭೋಗ್ಯಕ್ಕೆ ಖಾಲಿ ಇದೆ’ ಎಂಬ ಭಿತ್ತಿಪತ್ರ (ಗೋಡೆ ಬದಲಿಗೆ ಮರದ ಮೇಲಿದೆ)ದಲ್ಲಿರುವ ಒಕ್ಕಣೆ ಸಾಕ್ಷ್ಯವಾಗಿದೆ.

ಮೈಸೂರಿನ ಬಡಾವಣೆಯೊಂದರಲ್ಲಿ ಆ ಪತ್ರವನ್ನು ಮರಕ್ಕೆ ಅಂಟಿಸಲಾಗಿದೆ. ಅದರಲ್ಲಿ ಒಳಗೆ ೨ ಬಿಎಚ್‌ಕೆ ಎಂಬುದಾಗಿ ಇಂಗ್ಲಿಷ್ ಭಾಷೆಯಲ್ಲಿ ಬರೆಯಲಾಗಿದೆ. ಅದನ್ನು ಮೀರಿ ಅದೇ ಇಂಗ್ಲಿಷ್ ಭಾಷೆಯಲ್ಲಿ ಆವರಣದ ಒಳಗೆ ‘ವೆಜ್ ಓನ್ಲಿ’ ಎಂಬುದನ್ನು ರಾಜರೋಷವಾಗಿ ಬರೆಯಲಾಗಿದೆ. ಅದೂ ಮೊಬೈಲ್ ಸಂಖ್ಯೆ ಸಹಿತ ದಾಖಲಿಸಿದ್ದಾರೆ. ಆ ಮನೆಯ ಮಾಲೀಕರಿಗೆ ಬಹುಶಃ ಕಾನೂನಿನ ಅರಿವು ಇಲ್ಲದಿರಬಹುದು. ಆದರೆ, ಇದು ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಅಪರಾಧ ಎಂಬುದು ಗೊತ್ತಿಲ್ಲದಿರಬಹುದು. ಆದರೆ, ಈ ನೆಲದಲ್ಲಿ ಜತಿ ಪದ್ಧತಿ ಯನ್ನು ಬೇರು ಸಮೇತ ಕೀಳುವುದು ಸಾಧ್ಯವೇ ಎಂಬ ಬೃಹತ್ ಪ್ರಶ್ನೆಯನ್ನು ಈ ಭಿತ್ತಿಪತ್ರ ಅಣಕಿಸಿ ಕೇಳಿದಂತಿತ್ತು. ಇದು ಒಂದು ಉದಾಹರಣೆ ಅಷ್ಟೆ. (ಬಹುಶಃ ಈಗ ಆ ಭಿತ್ತಿಪತ್ರ ಕಿತ್ತುಹೋಗಿರಬಹುದು)

-ಅನ್ವಿಕ್, ಕೆಎಚ್‌ಬಿ ಕಾಲೋನಿ, ನಂಜನಗೂಡು

ಆಂದೋಲನ ಡೆಸ್ಕ್

Recent Posts

10 ಅಡಿ ಉದ್ದದ ಬೃಹತ್ ಹೆಬ್ಬಾವು ಸೆರೆ: ಸ್ನೇಕ್ ಮಧು ಕಾರ್ಯಕ್ಕೆ ಮೆಚ್ಚುಗೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿತ್ತಾಪುರ ಗ್ರಾಮದ ವಿಜಿ…

3 hours ago

ವಿದ್ಯುತ್ ಸ್ಪರ್ಶ: ಲೈನ್‌ಮ್ಯಾನ್ ಕಾರ್ತಿಕ್‌ ಸ್ಥಿತಿ ಗಂಭೀರ, ಆದರೆ ಸ್ಥಿರ: ವೈದ್ಯರಿಂದ ಮಾಹಿತಿ

ಮೈಸೂರು: ವಿದ್ಯುತ್ ಸ್ಪರ್ಶದಿಂದ ತೀವ್ರವಾಗಿ ಗಾಯಗೊಂಡಿದ್ದ ಲೈನ್‌ಮ್ಯಾನ್ ಕಾರ್ತಿಕ್ ಅವರ ಆರೋಗ್ಯ ಸ್ಥಿತಿ ಗಂಭೀರ, ಆದರೆ ಸ್ಥಿರವಾಗಿದೆ ಎಂದು ವೈದ್ಯರು…

4 hours ago

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್‌ ರಾಜೀನಾಮೆ

ವಿಜಯಪುರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ ಸಲ್ಲಿಸಿದ್ದಾರೆ. ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಇಂಡಿ ಹಾಗೂ ಚಡಚಣ ತಾಲೂಕುಗಳನ್ನು ಕೈಬಿಟ್ಟಿರುವುದಕ್ಕೆ…

4 hours ago

ನಿರೋಡಿ ನಿಧನ; ಸಂಗೀತ ಕ್ಷೇತ್ರಕ್ಕೆ ದೊಡ್ಡ ನಷ್ಟ

ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಮಾಂತ್ರಿಕ ಗಾಯಕ ಪಂಡಿತ್ ಇಂದೂಧರ ನಿರೋಡಿ ಮಂಗಳವಾರ ಮಹಾರಾಷ್ಟ್ರದ ಪನವೇಲ್‌ನಲ್ಲಿ ನಿಧನರಾದರು. ಅವರು ಕೆಲ ವರ್ಷಗಳ…

7 hours ago

ಭರದಿಂದ ಸಾಗಿದ ದಸರಾ ಕಾಮಗಾರಿ

೫.೯೬ ಕೋಟಿ ರೂ.ವೆಚ್ಚದಲ್ಲಿ ಪೇಂಟಿಂಗ್, ಫುಟ್‌ಪಾತ್ ಅಂಚುಗಳಿಗೆ ಬಣ್ಣ, ವೃತ್ತಗಳ ದುರಸ್ತಿ ಸೆ.೩೦ರೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ತಾಕೀತು ಮೈಸೂರು:…

11 hours ago

ಮಣ್ಣಾದ ಸತ್ಯಕ್ಕೆ ಮರುಜೀವ

ಸೌಜನ್ಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ನ್ಯಾಯಾದೀಪ’ ರಾಜ್ಯದ ಜನಮಾನಸವನ್ನು ತೀವ್ರವಾಗಿ ಕಾಡುತ್ತಿರುವ ಹಾಗೂ ಇಡೀ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿರುವ ಧರ್ಮಸ್ಥಳದ…

11 hours ago