Andolana originals

ಓದುಗರ ಪತ್ರ: ಬೃಂದಾವನ: ಟಿಕೆಟ್ ಹಣ ವಾಪಸ್ ನೀಡಿ

ವಿಶ್ವವಿಖ್ಯಾತ ಕೆ ಆರ್‌ಎಸ್‌ನ ಬೃಂದಾವನ ಗಾರ್ಡನ್‌ನಲ್ಲಿ ಫೆ.೨೨ರ ಸಂಜೆ ಸಂಗೀತ ನೃತ್ಯ ಕಾರಂಜಿ ತಾಂತ್ರಿಕ ಕಾರಣದಿಂದ ಚಾಲನೆಗೊಳ್ಳದ ಕಾರಣ ಅಲ್ಲಿ ಸಂಗೀತ ಕಾರಂಜಿ ನೋಡಲು ಸೇರಿದ್ದ ದೇಶ, ವಿದೇಶಗಳ ಸಾವಿರಾರು ಪ್ರವಾಸಿಗರಿಗೆ ನಿರಾಸೆಯಾಗಿದೆ.

ಇದರಿಂದ ಬೇಸತ್ತು ಅವರು ಟಿಕೆಟ್ ಹಣ ವಾಪಸ್ ನೀಡುವಂತೆ ಪ್ರತಿಭಟನೆ ನಡೆಸಿರುವುದು, ಇಲಾಖೆ ಹಾಗೂ ಸಿಬ್ಬಂದಿ ಹಣ ವಾಪಸ್ ನೀಡಲು ನಿರಾಕರಿಸಿರುವುದು, ಕರ್ನಾಟಕ ಕೈಗಾರಿಕಾ ಪಡೆ ಹಾಗೂ ಸಿವಿಲ್ ಪೊಲೀಸ್ ಸಿಬ್ಬಂದಿ ಪ್ರವಾಸಿಗರನ್ನು ಹೊರ ದಬ್ಬಿರುವುದು ಕೂಡ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಿನಿಮಾ ಷೋ, ಕ್ರಿಕೆಟ್ ಪಂದ್ಯ ರದ್ದಾದರೆ ಅಥವಾ ಸೇವೆಯಲ್ಲಿ ಲೋಪವಾದರೆ ಹಣ ವಾಪಸ್ ನೀಡುವ ನಿಯಮವಿದೆ. ಆದರೆ ಸರ್ಕಾರಿ ಇಲಾಖೆ ಅಥವಾ ಗುತ್ತಿಗೆದಾರರು ಇಂತಹ ಸಂದರ್ಭದಲ್ಲಿ ಹಣ ವಾಪಸ್ ನೀಡದೇ ಇರುವುದು ಖಂಡನೀಯ.

ಮುಂದಿನ ದಿನಗಳಲ್ಲಿ ಕೆಆರ್‌ಎಸ್ ಬೃಂದಾವನದಲ್ಲಿ ಇಂತಹ ಲೋಪಗಳಾದಾಗ ಪ್ರವಾಸಿಗರಿಗೆ ಟಿಕೆಟ್ ಹಣ ಹಿಂದಿರುಗಿಸುವ ವ್ಯವಸ್ಥೆಯನ್ನು ಇಲಾಖೆ ನೀಡುವಂತೆ ಸರ್ಕಾರ ಆದೇಶ ಮಾಡಲಿ.

-ಮುಳ್ಳೂರು ಪ್ರಕಾಶ್, ಕನಕದಾಸ ನಗರ , ಮೈಸೂರು

ಆಂದೋಲನ ಡೆಸ್ಕ್

Recent Posts

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಲಕ್ಷಾಂತರ ತಂಗಿಯರ ಬದುಕನ್ನು ಹೊಲಿಯುವ ‘ಟೈಲರ್ ಅಣ್ಣʼ

ತಮಿಳುನಾಡಿನ ನಾಲ್ಕೂವರೆ ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸೆಲ್ವಕುಮಾರ್ ಹೊಲಿಗೆ ತರಬೇತಿ ಯೂಟ್ಯೂಬ್ ತೆರೆದು ಅದರಲ್ಲಿ ‘ಟೈಲರ್ ಬ್ರೋ’ ಎಂದು ಟೈಪಿಸಿದರೆ…

1 hour ago

ಮಡಿಕೇರಿ ನಗರದ ಅನಧಿಕೃತ ಹೋಂಸ್ಟೇಗಳಿಗೆ ನೋಟಿಸ್

ಪುನೀತ್ ಮಡಿಕೇರಿ ಮಡಿಕೇರಿ: ನಗರ ವ್ಯಾಪ್ತಿಯಲ್ಲಿರುವ ಅನಧಿಕೃತ ಮತ್ತು ಅಕ್ರಮ ಹೋಂಸ್ಟೇಗಳಿಗೆ ಕಡಿವಾಣ ಹಾಕಲು ನಗರಸಭೆ ಮುಂದಾಗಿದೆ. ನಗರದ ಹೋಂಸ್ಟೇಗಳಿಗೆ…

1 hour ago

ಮಿರ್ಲೆ: ಹುಣಸಮ್ಮ ತಾಯಿ ಸಿಡಿ ಉತ್ಸವಕ್ಕೆ ಸಕಲ ಸಿದ್ಧತೆ

ಕೆ.ಟಿ.ಮೋಹನ್ ಕುಮಾರ್ ಫೆ.೨೭ರಂದು ನವಗ್ರಾಮದೇವತೆ ಹುಣಸಮ್ಮತಾಯಿ ಸಿಡಿ ಉತ್ಸವ, ೨೮ರಂದು ರಥೋತ್ಸವ ಸಾಲಿಗ್ರಾಮ: ತಾಲ್ಲೂಕಿನ ಮಿರ್ಲೆ ಗ್ರಾಮದ ನವಗ್ರಾಮದೇವತೆ ಶ್ರೀ…

2 hours ago

ಮೊಬೈಲ್ ವ್ಯಸನ; ಕೊರೊನಾ ಸಂದರ್ಭ ಮೂಲ ಕಾರಣ

ಕೆ.ಎಸ್.ಚಂದ್ರಶೇಖರಮೂರ್ತಿ ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ ಚಿಂತನೆಗೆ ಶಿಕ್ಷಕ ವೃಂದ ಸ್ವಾಗತ  ಮೈಸೂರು: ಆಧುನಿಕತೆ ಬೆಳೆಯುತ್ತಾ ಹೋದಂತೆ ಆಧುನಿಕ ತಂತ್ರಜನ…

2 hours ago

‘ಮೈಸೂರು ಮತ್ತೆ ಸ್ವಚ್ಛ ನಗರಿ ಗರಿ ಧರಿಸಬೇಕು’

ಪ್ರಶಾಂತ್ ಎನ್.ಮಲ್ಲಿಕ್ ಸ್ವಚ್ಛತಾ ರಾಯಭಾರಿಗಳ ಆಶಯ ; ‘ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿದ ಹರಿಪ್ರಿಯಾ, ವಸಿಷ್ಠ ಸಿಂಹ, ಅನನ್ಯಾ ಭಟ್…

2 hours ago

ಸಫಾರಿ ಕಾಡಿನ ನಾಶಕ್ಕೆ ರಹದಾರಿ: ರೈತರ ಆರೋಪ

ಗಿರೀಶ್ ಹುಣಸೂರು ರೆಸಾರ್ಟ್‌ಗಳ ಮಾಲೀಕರ ಹಿತಾಸಕ್ತಿ ಕಾಪಾಡುವ ಹುನ್ನಾರ ಪ್ರವಾಸೋದ್ಯಮ ಅಭಿವೃದ್ಧಿ ಎಂಬುದು ನೆಪ ಇಂದು ಸಫಾರಿ ವಿರೋಧಿಸಿ ಪ್ರತಿಭಟನೆ …

2 hours ago