ಓದುಗರ ಪತ್ರ
ಸರ್ಕಾರವು ೭೦ ವರ್ಷದೊಳಗಿನ ನಿವೃತ್ತ ಸರ್ಕಾರಿ ಪಿಂಚಣಿದಾರರಿಗೆ, ಕುಟುಂಬ ಪಿಂಚಣಿದಾರರಿಗೆ ಮತ್ತು ಅವರ ಅರ್ಹ ಅವಲಂಬಿತ ವಿಕಲಚೇತನ ಮಕ್ಕಳ ಆರೋಗ್ಯ ವೈದ್ಯಕೀಯ ಸೌಲಭ್ಯಗಳಿಗಾಗಿ ‘ಸಂಧ್ಯಾ ಕಿರಣ’ ನಗದು ರಹಿತ ಆರೋಗ್ಯ ಯೋಜನೆಯನ್ನು ಜರಿಗೆ ತಂದಿದೆ. ಈ ಯೋಜನೆಯು ’ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್’ ಮೂಲಕ ಅನುಷ್ಠಾನಗೊಳ್ಳುವುದಾಗಿ ಆದೇಶ ಹೊರಡಿಸಲಾಗಿದೆ.
ಈ ಯೋಜನೆಯ ವ್ಯಾಪ್ತಿಯೊಳಗೆ ಸರ್ಕಾರಿ ನೌಕರರು ನಿವೃತ್ತಿ ಹೊಂದಿದ ದಿನಾಂಕದಿಂದ ೭೦ ವರ್ಷ ವಯೋಮಿತಿ ತಲುಪುವವರೆಗೆ ಅಂದರೆ ಹತ್ತು ವರ್ಷ ಮಾತ್ರ ಈ ಸೌಲಭ್ಯ ದೊರಕುವುದು ಎಂದೇ ಅರ್ಥವ್ಯಾಪ್ತಿಯಾಗಿದೆ. ಇದರಿಂದಾಗಿ ೭೦ ವರ್ಷ ಮೀರಿದ ನೌಕರರು ಸಂಧ್ಯಾಕಿರಣ ಸೌಲಭ್ಯದಿಂದ ವಂಚಿತರಾಗುತ್ತಾರೆ. ಎಪ್ಪತ್ತು ವರ್ಷ ದಾಟಿದ ನಂತರವೇ ಸಹಜವಾಗಿ ಆರೋಗ್ಯದಲ್ಲಿ ಏರುಪೇರುಗಳು, ಒತ್ತಡಗಳು, ಅವಲಂಬಿತರ ಆಶ್ರಯ ಕೊರತೆಗಳೂ ಉಂಟಾಗುವುದು.ಇಂಥ ಸಮಸ್ಯೆಗಳ ಪರಿಸ್ಥಿತಿಯನ್ನು ನನ್ನಂಥ ಈ ವಯೋಮಾನದ ನೌಕರರು ಅನುಭವಿಸುತ್ತಿರುವ ನೋವುಗಳೂ ಸಹ. ಆದುದರಿಂದ ಸಂಧ್ಯಾಕಿರಣ ಯೋಜನೆಯ ವ್ಯಾಪ್ತಿಗೆ ೭೦ ವರ್ಷದೊಳಗಿನವರಿಗೆ ಮಾತ್ರ ಸೀಮಿತಗೊಳಿಸದೇ ಎಲ್ಲ ವಯೋಮಾನದವರಿಗೂ ಅನ್ವಯಿಸುವಂತೆ ಮಾಡುವುದರಿಂದ ಸಾಮಾಜಿಕ ನ್ಯಾಯವನ್ನು ಪಾಲಿಸಿದಂತಾಗುತ್ತದೆ. ಸರ್ಕಾರ ಇತ್ತ ಗಮನಹರಿಸಬೇಕು.
-ಜಿ.ಹೆಚ್.ಸಂಕಪ್ಪ, ಮೈಸೂರು
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಜಲಸಂಪನ್ಮೂಲ ಸಚಿವ ಎನ್.ಚಲುವರಾಯ ಸ್ವಾಮಿಯವರ ನಡುವಿನ ಆರೋಪ ಮತ್ತು ಪ್ರತ್ಯಾರೋಪಗಳು…
ನಮ್ಮಲ್ಲಿ ಗುರುವಿಗೆ ಅಗ್ರಸ್ಥಾನ ಕೊಟ್ಟಿದ್ದೇವೆ. ಒಂದು ಅಕ್ಷರ ಕಲಿಸಿದವರನ್ನು ಗುರುವೆಂದು ಒಪ್ಪಿಕೊಂಡಿದ್ದೇವೆ. ಗುರುವು ನಮಗೆ ಒಳ್ಳೆಯ ಮಾರ್ಗ,ನಡತೆ ಹಾಗೂ ಜ್ಞಾನವನ್ನು…
ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದ ಶಿಕ್ಷಕರು,…
ಮೈಸೂರು: ಶಿಕ್ಷಕರ ಒಗ್ಗಟ್ಟಿನ ಬಲ ಹಾಗೂ ಸಕಾರಾತ್ಮಕ ಚಿಂತನೆಗಳಿಂದ, ಖಾಸಗಿ ಶಾಲೆಗಳಿಗೂ ಸಡ್ಡು ಹೊಡೆದಿರುವ ನಗರದ ಸರ್ಕಾರಿ ಶಾಲೆಯೊಂದು ಹೆಮ್ಮೆಯಿಂದ…
ಆರ್.ಎ.ಚೇತನರಾಮ್, ಮೈಸೂರು ಗುರುಚರಣ ಸ್ಪರ್ಶದಲಿ, ಭಯಭಕ್ತಿ ಸೇವೆಯಲಿ ಇದೆ ವಿದ್ಯೆ ಸಂಪ್ರಾಪ್ತಿ, ವಿನಯ ಸಂಸ್ಕಾರ ;ಗುರು ಶಿಷ್ಯ ಸಂಬಂಧ ನದಿಕಡಲ…
ಚಿರಂಜೀವಿ ಸಿ ಹುಲ್ಲಹಳ್ಳಿ ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಸಮಾನತೆಯ ಸಂದೇಶ ಸಾರಿದ ಬಾಲಕಿ ಮೈಸೂರು: ‘ಮನುಷ್ಯ ಜಾತಿ ತಾನೊಂದೇವಲಂ’ ಎಂಬ…