ಚಿರಂಜೀವಿ ಸಿ ಹುಲ್ಲಹಳ್ಳಿ
ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲಿ ಸಮಾನತೆಯ ಸಂದೇಶ ಸಾರಿದ ಬಾಲಕಿ
ಮೈಸೂರು: ‘ಮನುಷ್ಯ ಜಾತಿ ತಾನೊಂದೇವಲಂ’ ಎಂಬ ಆದಿಕವಿ ಪಂಪನ ಸಂದೇಶಕ್ಕೆ ಮರುಜೀವ ತುಂಬುವಂತೆ ಆ ಪುಟ್ಟ ಬಾಲಕಿ ರಾಧೆಯ ವೇಷದಲ್ಲಿ ಬಂದದ್ದು ‘ನಾವೆಲ್ಲರೂ ಒಂದು’ ಎಂಬಂತೆ ಭಾಸವಾಗಿತ್ತು.
ನಗರದ ಅಗ್ರಹಾರದ ಕೇಂಬ್ರಿಡ್ಜ್ ಮಾಂಟೆಸ್ಸರಿ ಶಾಲೆಯಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಅಲ್ಪಸಂಖ್ಯಾತ ಸಮುದಾಯದ ಪುಟ್ಟ ಕಂದಮ್ಮ ರಾಧೆಯ ವೇಷದಲ್ಲಿ ಕಂಗೊಳಿಸಿ, ಧರ್ಮಗಳ ಗಡಿಯನ್ನು ಮೀರಿದ ಸೌಹಾರ್ದತೆಯ ಸಂದೇಶ ಸಾರಿದಳು.
ಧರ್ಮದ ಹೆಸರಿನಲ್ಲಿ ವಿಭಜನೆಯ ಮಾತುಗಳು ಕೇಳಿಬರುತ್ತಿರುವ ಇಂದಿನ ದಿನಗಳಲ್ಲಿ ಶಾಲೆಯ ಯುಕೆಜಿ ವಿದ್ಯಾರ್ಥಿನಿ ಆಯೇಝಾ ಫಾತಿಮಾ, ಪುರಾಣದಲ್ಲಿ ಶ್ರೀ ಕೃಷ್ಣನ ಪ್ರಾಣಸಖಿ ಎನ್ನಲಾದ ರಾಧೆಯ ವೇಷದಲ್ಲಿ ಕಂಗೊಳಿಸಿದ್ದು ಕೇವಲ ಒಂದು ಶಾಲಾ ಕಾರ್ಯಕ್ರಮದ ಚಿತ್ರಣವಾಗಿರದೆ ಸೌಹಾರ್ದತೆಯ ಸುಂದರ ಸಂದೇಶವಾಗಿ ಗಮನ ಸೆಳೆಯಿತು.
ನಂಜುಮಳಿಗೆಯ ಬಳಿಯ ನಿವಾಸಿ ಸೈಯದ್ ಅಸೀಮ್ ಮತ್ತು ಹುದಾ ದಂಪತಿಯ ಪುತ್ರಿಯಾಗಿರುವ ಐದೂವರೆ ವರ್ಷದ ಆಯೇಝಾ, ಶಾಲೆಯಲ್ಲಿ ನಡೆಯುವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕ ತಿಕ ಆಚರಣೆಗಳಲ್ಲಿ ಆಯಾ ಸಂದರ್ಭಕ್ಕೆ ತಕ್ಕಂತೆ ವೇಷಭೂಷಣಧರಿಸಿ ಪಾಲ್ಗೊಳ್ಳುವ ಮೂಲಕ ಮಕ್ಕಳಲ್ಲಿ ಧರ್ಮ ಸಾಮರಸ್ಯದ ಭಾವನೆ ಮೂಡಿಸುತ್ತಿದ್ದಾಳೆ. ನಮಗೆ ಎಲ್ಲ ಜಾತಿ, ಧರ್ಮಗಳೂ ಒಂದೇ. ನಾವು ಬೆಳೆದಿರುವ ಸಂಸ್ಕೃತಿಯೂ ಅದೇ ರೀತಿಯದ್ದು. ಹೀಗಾಗಿ ನಮ್ಮ ಮಗಳೂ ಅದೇ ವಾತಾವರಣದಲ್ಲಿ ಬೆಳೆಯಬೇಕು ಎಂಬುದು ನಮ್ಮ ಆಶಯ ಎನ್ನುತ್ತಾರೆ ತಂದೆ ಸೈಯದ್ ಅಸೀಮ್ ಅವರು.
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಯಾವುದೇ ಧರ್ಮದ ಹಬ್ಬಗಳ ಆಚರಣೆ ಇರಲಿ, ಆಯಾ ಸಂದರ್ಭಕ್ಕೆ ತಕ್ಕ ಉಡುಗೆ ತೊಡಿಸಿ ಮಗಳನ್ನು ಶಾಲೆಗೆ ಕಳುಹಿಸುತ್ತೇವೆ. ಎಲ್ಲ ಧರ್ಮಗಳೂ ಸಮಾನ ಎಂಬ ಭಾವನೆಯೊಂದಿಗೆ ಮಗು ಬೆಳೆಯಬೇಕು ಎಂಬುದು ಅವರ ಅಂತರಾಳದ ಮಾತು. ಕಳೆದ ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಆಯೇಝಾ ಶಾಲೆಗೆ ಬಂದಿರಲಿಲ್ಲ. ಆದರೆ ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಉತ್ಸಾಹದಿಂದ ಜ್ವರವಿದ್ದರೂ ರಾಧೆಯ ವೇಷದಲ್ಲಿ ಶಾಲೆಗೆ ಆಗಮಿಸಿ ಸಂಭ್ರಮದಲ್ಲಿ ಭಾಗಿಯಾದಳು. ಪುಟ್ಟ ಬಾಲಕಿಯ ಈ ಉತ್ಸಾಹ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
” ನಮ್ಮ ಶಾಲೆಯಲ್ಲಿ ಮಕ್ಕಳು ಎಲ್ಲ ಧರ್ಮಗಳ ಆಚರಣೆಗಳನ್ನೂ ತಿಳಿದುಕೊಂಡು, ಪರಸ್ಪರ ಗೌರವ ಮತ್ತು ಸೌಹಾರ್ದತೆಯಿಂದ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಆಯೇಝಾ ಪ್ರತಿಯೊಂದು ಕಾರ್ಯಕ್ರಮದಲ್ಲೂ ವಿಶೇಷವಾಗಿ ಸಿದ್ಧವಾಗಿ ಬರುವ ಮೂಲಕ ಈ ಆಶಯಕ್ಕೆ ಮತ್ತಷ್ಟು ಮೆರುಗು ನೀಡುತ್ತಿದ್ದಾಳೆ.”
ಅಕ್ಷತಾ ಸುಧೀರ್, ನಿರ್ದೇಶಕರು, ಕೇಂಬ್ರಿಡ್ಜ್ ಮಾಂಟೆಸ್ಸರಿ ಶಾಲೆ
” ಆಯೇಝಾಳ ತಂದೆ ಸೈಯದ್ ಅಸೀಮ್ ದುಬೈನಲ್ಲಿ ಉದ್ಯೋಗದಲ್ಲಿದ್ದು, ತಾಯಿ ಹುದಾ ಕೂಡ ನೌಕರಿಯಲ್ಲಿದ್ದಾರೆ. ಹೀಗಾಗಿ ಅಜ್ಜಿ ರೇಷ್ಮಾ ಅವರು ಮೊಮ್ಮಗಳ ಆರೈಕೆಯ ಜವಾಬ್ದಾರಿ ವಹಿಸಿಕೊಂಡು, ಶಾಲೆಯ ಪ್ರತಿಯೊಂದು ವಿಶೇಷ ಕಾರ್ಯಕ್ರಮಕ್ಕೂ ಮಗುವನ್ನು ಅಣಿಗೊಳಿಸಿ ಕರೆತರುತ್ತಾರೆ.”
ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಜಲಸಂಪನ್ಮೂಲ ಸಚಿವ ಎನ್.ಚಲುವರಾಯ ಸ್ವಾಮಿಯವರ ನಡುವಿನ ಆರೋಪ ಮತ್ತು ಪ್ರತ್ಯಾರೋಪಗಳು…
ಸರ್ಕಾರವು ೭೦ ವರ್ಷದೊಳಗಿನ ನಿವೃತ್ತ ಸರ್ಕಾರಿ ಪಿಂಚಣಿದಾರರಿಗೆ, ಕುಟುಂಬ ಪಿಂಚಣಿದಾರರಿಗೆ ಮತ್ತು ಅವರ ಅರ್ಹ ಅವಲಂಬಿತ ವಿಕಲಚೇತನ ಮಕ್ಕಳ ಆರೋಗ್ಯ…
ನಮ್ಮಲ್ಲಿ ಗುರುವಿಗೆ ಅಗ್ರಸ್ಥಾನ ಕೊಟ್ಟಿದ್ದೇವೆ. ಒಂದು ಅಕ್ಷರ ಕಲಿಸಿದವರನ್ನು ಗುರುವೆಂದು ಒಪ್ಪಿಕೊಂಡಿದ್ದೇವೆ. ಗುರುವು ನಮಗೆ ಒಳ್ಳೆಯ ಮಾರ್ಗ,ನಡತೆ ಹಾಗೂ ಜ್ಞಾನವನ್ನು…
ಮೈಸೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದ ಶಿಕ್ಷಕರು,…
ಮೈಸೂರು: ಶಿಕ್ಷಕರ ಒಗ್ಗಟ್ಟಿನ ಬಲ ಹಾಗೂ ಸಕಾರಾತ್ಮಕ ಚಿಂತನೆಗಳಿಂದ, ಖಾಸಗಿ ಶಾಲೆಗಳಿಗೂ ಸಡ್ಡು ಹೊಡೆದಿರುವ ನಗರದ ಸರ್ಕಾರಿ ಶಾಲೆಯೊಂದು ಹೆಮ್ಮೆಯಿಂದ…
ಆರ್.ಎ.ಚೇತನರಾಮ್, ಮೈಸೂರು ಗುರುಚರಣ ಸ್ಪರ್ಶದಲಿ, ಭಯಭಕ್ತಿ ಸೇವೆಯಲಿ ಇದೆ ವಿದ್ಯೆ ಸಂಪ್ರಾಪ್ತಿ, ವಿನಯ ಸಂಸ್ಕಾರ ;ಗುರು ಶಿಷ್ಯ ಸಂಬಂಧ ನದಿಕಡಲ…