Andolana originals

ಓದುಗರ ಪತ್ರ: ರೈಲುಗಳಲ್ಲೂ ನಂದಿನಿ ಉತ್ಪನ್ನಗಳು ಸಿಗುವಂತಾಗಲಿ

ಮೈಸೂರಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿಬರುವ – ಬಸ್ಸುಗಳಲ್ಲಿ ಪ್ರಯಾಣಿಕರಿಗೆ ನಮ್ಮ ಹೆಮ್ಮೆಯ ನಂದಿನಿಯ ಬಾದಾಮಿ ಹಾಲು, ಮಜ್ಜಿಗೆ, ಲಸ್ಸಿ , ನಂದಿನಿ ಶುದ್ಧ ಕುಡಿಯುವ ನೀರು ಬಾಟಲ್ಗಳಲ್ಲಿ ಹಾಗೂ ಬಾಕ್ಸ್‌ಗಳಲ್ಲಿ ದೊರೆಯುತ್ತವೆ.

ಇದೇ ರೀತಿ ಶತಾಬ್ದಿ ಎಕ್ಸ್‌ಪ್ರೆಸ್ ಹಾಗೂ ಬಸವ, ಮತ್ತು ವಂದೇ ಭಾರತ್ ರೈಲುಗಳಲ್ಲಿ ನಂದಿನಿಯ ಈ ಉತ್ಪನ್ನಗಳು ಸಿಗುವ ವ್ಯವಸ್ಥೆಯಾಗಬೇಕು. ಹೆಚ್ಚಿನ ಪ್ರಯಾಣಿಕರು ಸಂಚರಿಸುವ ರೈಲುಗಳಲ್ಲಿ ಇಂತಹ ಉತ್ಪನ್ನಗಳು ದೊರೆತೆರೆ ಗ್ರಾಹಕರಿಗೂ ಸಹಕಾರಿ, ಸಂಸ್ಥೆಯ ವರಮಾನವೂ ವೃದ್ಧಿಸುತ್ತದೆ. ರೈಲ್ವೆ ರಾಜ್ಯ ಸಚಿವರಾದ ಸೋಮಣ್ಣ ಅವರು ನಮ್ಮವರೇ ಆಗಿರುವುದರಿಂದ ಈ ಬಗ್ಗೆ ಗಮನಹರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರೆ ‘ನಮ್ಮ ನಂದಿನಿ’ಗೂ ಸಾವಿರಾರು ಕಿ.ಮೀ. ರೈಲಿನಲ್ಲಿ ಪ್ರಯಾಣಿಸುವ ಯೋಗ ಬರುತ್ತದೆ.

– ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆಶಾ ಕಾರ್ಯಕರ್ತೆಯರ ಶ್ರಮ ಸರ್ಕಾರ ಅರಿಯಲಿ

ತಮ್ಮ ಪ್ರಮುಖ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಆಶಾ ಕಾರ್ಯಕರ್ತೆಯರು ಮುಷ್ಕರ ಮುಂದುವರಿಸಿರುವುದು…

4 mins ago

ಓದುಗರ ಪತ್ರ: ಹೆಚ್ಚುತ್ತಿರುವ ಕಾಡಾನೆ ದಾಳಿ: ಮುನ್ನೆಚ್ಚರಿಕೆ ಕ್ರಮ ಅಗತ್ಯ

ರೈತರು ತಮ್ಮ ಹೊಲಗದ್ದೆ ಹಾಗೂ ತೋಟಗಳಲ್ಲಿ ಕೃಷಿ ಕಾರ್ಯಕ್ಕೆ ತೆರಳುವಾಗ ಇಲ್ಲವೇ ಮನೆಗೆ ಮರಳುವಾಗ ಕಾಡಾನೆಗಳ ದಾಳಿಗೆ ತುತ್ತಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.…

6 mins ago

ದಸರಾ: ಯೋಜಿತ ಸಂಘಟನೆಗೆ ಬೇಕು ಪ್ರಾಧಿಕಾರ

ಕೆ.ವಿ.ಮಲ್ಲೇಶ್ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಅನಿಕೇತನ ಸೇವಾ ಟ್ರಸ್ಟ್, ಅಧ್ಯಕ್ಷ ಹೊಸತನದ ನಿರಂತರ ಹರಿವಿಗೆ ಮುಖ್ಯಮಂತ್ರಿ…

9 mins ago

ಗೌಡ ಯುವಜನರ ಕ್ರಿಕೆಟ್ ಕನಸಿಗೆ ಜಿಪಿಎಲ್ ವೇದಿಕೆ

ನವೀನ್ ಡಿಸೋಜ ಡಿ.೨೧ರಿಂದ ಮಡಿಕೇರಿಯಲ್ಲಿ ೪ನೇ ಆವೃತ್ತಿಯ ಗೌಡ ಪ್ರೀಮಿಯರ್ ಲೀಗ್; ನ.೨೭ರಂದು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಮಡಿಕೇರಿ: ಕೊಡಗು…

17 mins ago

‘ಆಪ್ ಮೂಲಕ ರಸಗೊಬ್ಬರ ಕಾಯ್ದಿರಿಸುವ ಸೌಲಭ್ಯ

ಹೆಚ್.ಡಿ.ಮಣಿಕಂಠನಾಯಕ ಖರೀದಿ ಪ್ರಕ್ರಿಯೆ ಸರಳಗೊಳಿಸಿದ ಕೇಂದ್ರ ಸರ್ಕಾರ; ಡಿ.೧ರಿಂದ ಯಳಂದೂರು ತಾಲ್ಲೂಕಿನಲ್ಲಿ ಜಾರಿ ಯಳಂದೂರು: ರಸಗೊಬ್ಬರ ಖರೀದಿಗಾಗಿ ಅಂಗಡಿಗಳ ಮುಂದೆ…

23 mins ago