Andolana originals

ಓದುಗರ ಪತ್ರ: ಹೆಚ್ಚುತ್ತಿರುವ ಕಾಡಾನೆ ದಾಳಿ: ಮುನ್ನೆಚ್ಚರಿಕೆ ಕ್ರಮ ಅಗತ್ಯ

ರೈತರು ತಮ್ಮ ಹೊಲಗದ್ದೆ ಹಾಗೂ ತೋಟಗಳಲ್ಲಿ ಕೃಷಿ ಕಾರ್ಯಕ್ಕೆ ತೆರಳುವಾಗ ಇಲ್ಲವೇ ಮನೆಗೆ ಮರಳುವಾಗ ಕಾಡಾನೆಗಳ ದಾಳಿಗೆ ತುತ್ತಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

ಇತ್ತೀಚೆಗೆ ಇಂತಹ ದುರಂತಗಳು ಜಾಸ್ತಿಯಾಗುತ್ತಿರುವುದು ಕಳವಳ ಮೂಡಿಸುವಂತಹದ್ದಾಗಿದೆ. ಕಾಡು ಪ್ರಾಣಿಗಳು ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ನಾಡಿನತ್ತ ಬರುತ್ತಿವೆ. ಇದರಿಂದ ರೈತರ ಜೀವ ಹಾಗೂ ಬೆಳೆಗಳಿಗೆ ಅಪಾಯ ಉಂಟಾಗುತ್ತಿದೆ.

ಇಂತಹ ಘಟನೆಗಳು ಮರು ಕಳಿಸದಂತೆ ಅರಣ್ಯ ಇಲಾಖೆ ಹಾಗೂ ಸರ್ಕಾರ ಎಚ್ಚರ ವಹಿಸುವುದು ಅಗತ್ಯವಾಗಿದೆ. ಜತೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ.

ಕಾಡಾನೆಗಳ ಸಂಚಾರ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಕಾಡಾನೆಗಳ ಚಲನವಲನ ತಿಳಿಸಲು ಗ್ರಾಮಗಳಲ್ಲಿ ಎಚ್ಚರಿಕೆ ವ್ಯವಸ್ಥೆ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಕಾಡಾನೆಗಳು ನಾಡಿಗೆ ಬರದಂತೆ ವೈಜ್ಞಾನಿಕವಾಗಿ ರೈಲ್ವೆ ಬ್ಯಾರಿಕೇಡ್ ಹಾಗೂ ಸೌರಬೇಲಿಗಳನ್ನು ನಿರ್ಮಿಸಬೇಕು.

ಅರಣ್ಯ ಪ್ರದೇಶಗಳಲ್ಲಿ ನೀರು ಮತ್ತು ಆಹಾರದ ಲಭ್ಯತೆಯನ್ನು ಹೆಚ್ಚಿಸಬೇಕು. ಕಾಡಾನೆ ದಾಳಿಯಿಂದ ಮೃತಪಟ್ಟ ರೈತರ ಕುಟುಂಬಗಳಿಗೆ ತಕ್ಷಣ ಸೂಕ್ತ ಪರಿಹಾರ ನೀಡಿ, ಕುಟುಂಬದ ಒಬ್ಬರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು.

– ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಆಶಾ ಕಾರ್ಯಕರ್ತೆಯರ ಶ್ರಮ ಸರ್ಕಾರ ಅರಿಯಲಿ

ತಮ್ಮ ಪ್ರಮುಖ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಆಶಾ ಕಾರ್ಯಕರ್ತೆಯರು ಮುಷ್ಕರ ಮುಂದುವರಿಸಿರುವುದು…

1 min ago

ದಸರಾ: ಯೋಜಿತ ಸಂಘಟನೆಗೆ ಬೇಕು ಪ್ರಾಧಿಕಾರ

ಕೆ.ವಿ.ಮಲ್ಲೇಶ್ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಅನಿಕೇತನ ಸೇವಾ ಟ್ರಸ್ಟ್, ಅಧ್ಯಕ್ಷ ಹೊಸತನದ ನಿರಂತರ ಹರಿವಿಗೆ ಮುಖ್ಯಮಂತ್ರಿ…

6 mins ago

ಗೌಡ ಯುವಜನರ ಕ್ರಿಕೆಟ್ ಕನಸಿಗೆ ಜಿಪಿಎಲ್ ವೇದಿಕೆ

ನವೀನ್ ಡಿಸೋಜ ಡಿ.೨೧ರಿಂದ ಮಡಿಕೇರಿಯಲ್ಲಿ ೪ನೇ ಆವೃತ್ತಿಯ ಗೌಡ ಪ್ರೀಮಿಯರ್ ಲೀಗ್; ನ.೨೭ರಂದು ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ಮಡಿಕೇರಿ: ಕೊಡಗು…

14 mins ago

‘ಆಪ್ ಮೂಲಕ ರಸಗೊಬ್ಬರ ಕಾಯ್ದಿರಿಸುವ ಸೌಲಭ್ಯ

ಹೆಚ್.ಡಿ.ಮಣಿಕಂಠನಾಯಕ ಖರೀದಿ ಪ್ರಕ್ರಿಯೆ ಸರಳಗೊಳಿಸಿದ ಕೇಂದ್ರ ಸರ್ಕಾರ; ಡಿ.೧ರಿಂದ ಯಳಂದೂರು ತಾಲ್ಲೂಕಿನಲ್ಲಿ ಜಾರಿ ಯಳಂದೂರು: ರಸಗೊಬ್ಬರ ಖರೀದಿಗಾಗಿ ಅಂಗಡಿಗಳ ಮುಂದೆ…

21 mins ago

‘40 ವರ್ಷದ ಗೆಳೆತನಕ್ಕೆ ಬಿರುಕು ಸಾಧ್ಯವೇ ಇಲ್ಲ’: ಸಂಸದ ಸುನಿಲ್‌ ಬೋಸ್‌

ಮೈಸೂರು: ಸಿದ್ದರಾಮಯ್ಯ ಮತ್ತು ಮಹದೇವಪ್ಪ ನಡುವೆ ಮುನಿಸು ಮೂಡಿದೆ ಎಂಬ ವರದಿಗಳಿಗೆ ಸಂಸದ ಸುನಿಲ್‌ ಬೋಸ್‌ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಇಬ್ಬರದ್ದು…

1 day ago