ಓದುಗರ ಪತ್ರ
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಅನೇಕ ರಸ್ತೆಗಳಿಗೆ ಹಾಕಲಾಗಿರುವ ವಿದ್ಯುತ್ ದೀಪಾಲಂಕಾರ ಕಣ್ತುಂಬಿಕೊಳ್ಳಲು ನಾನಾ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಆದರೆ ಪ್ರಮುಖ ರಸ್ತೆಗಳೂ ಸೇರಿದಂತೆ ಅನೇಕ ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ಸಂಚಾರದಿಂದ ಸಮಸ್ಯೆಗಳು ಉಂಟಾಗುತ್ತಿವೆ.
ಟ್ರಾಫಿಕ್ ಜಾಮ್‌ನ ಪರಿಣಾಮ ಎರಡು ದಿನಗಳ ಹಿಂದೆ ಆಂಬ್ಯುಲೆನ್ಸ್ ಸೇವೆಗೆ ತೊಂದರೆಯಾಯಿತಂತೆ. ಹೀಗೆ ನೋವಿನ ಅನುಭವ ಬೇರೆಯವರಿಗೂ ಬೇರೆ ರೀತಿಯಲ್ಲಿ ಆಗಿರಬಹುದು. ನಮ್ಮ ಸಂತೋಷ ತೊಂದರೆಯಲ್ಲಿರುವವರಿಗೆ ನೋವು ತರಬಾರದು.
ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು. ಲೈಟಿಂಗ್ಸ್ ವೈಭವಕ್ಕೆ ನಿಗದಿಪಡಿಸಿರುವ ರಸ್ತೆಗಳಲ್ಲಿ ನೋಡುಗರಿಗೆ ಸಮಯ ನಿಗದಿ ಮಾಡಿ ವಾಪಸು ಬರುವಂತೆ ಮಾಡಬೇಕು. ಲೈಟಿಂಗ್ಸ್ ಪ್ರಿಯರು ತಮ್ಮ ಮೊಬೈಲ್‌ಗಳಲ್ಲಿ , ಕ್ಯಾಮೆರಾಗಳಲ್ಲಿ ಗಂಟೆಗಟ್ಟಲೆ ಫೋಟೋ ಶೂಟ್ ಮಾಡುತ್ತಾ ಕಾಲ ಕಳೆಯುತ್ತಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದಕ್ಕೆ ಸ್ವಲ್ಪಮಟ್ಟಿಗಾದರೂ ನಿಯಂತ್ರಣ ಹಾಕಬೇಕಾಗಿದೆ.
– ನಾಗೇಶ್ , ಮಾನಸಗಂಗೋತ್ರಿ, ಮೈಸೂರು
ಕೈವ್: ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಮಾರಕ ಡ್ರೋನ್ ದಾಳಿ ನಡೆದಿದೆ. ಉಕ್ರೇನ್‌ನ ಡ್ನಿಪ್ರೊ ನಗರದ ಮುಖ್ಯ ರೈಲು ನಿಲ್ದಾಣದ ಮೇಲೆ…
ಬೆಂಗಳೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಬೆಂಗಳೂರಿನಲ್ಲಿ ಒಟ್ಟಾರೆ ವಾಯು ಗುಣಮಟ್ಟ…
ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದಲ್ಲಿ ಸರ್ಕಾರಿ ಬಸ್ ಟಿಕೆಟ್ ದರವೂ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ. ಅಕ್ಟೋಬರ್ 29ರಂದು…
ನವದೆಹಲಿ: ಅರ್ನಬ್ ಚಂಡಮಾರುತದ ಅಬ್ಬರ ತಗ್ಗುತ್ತಿರುವ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಹೊಸ ಹವಾಮಾನ ವ್ಯವಸ್ಥೆ ರೂಪುಗೊಂಡಿದೆ. ದಕ್ಷಿಣ ಅಂಡಮಾನ್ ಸಮುದ್ರ ಹಾಗೂ…
ಪ್ರತಿವರ್ಷ ಸೆಪ್ಟೆಂಬರ್ ಐದನೇ ತಾರೀಕು ಶಿಕ್ಷಕರನ್ನು ಹೊಗಳಲು ಇರುವ ದಿನ ಎಂದು ಕರೆಯಬಹುದು. ಆ ದಿನ ದೇಶದ ಎಲ್ಲೆಡೆ ತುಂಬಾನೆ…
ಮೈಸೂರು ರಾಜಮನೆತನವು ರಾಜ್ಯದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಇತಿಹಾಸದ ಪುಟಗಳಲ್ಲಿ…