Andolana originals

ಓದುಗರ ಪತ್ರ: ಅನುಭವವೂ ‘ಪಾಠ’ ಕಲಿಸಿಲ್ಲವಲ್ಲ!

ನಾಡಹಬ್ಬ ದಸರಾವನ್ನು ಗೌರವ ಮತ್ತು ವೈಭವಕ್ಕೆ ತಕ್ಕಂತೆ ಆಚರಿಸಲು ಪ್ರತಿ ವರ್ಷವೂ ಎಲ್ಲರಿಗೂ ಅನುಕೂಲವಾಗುವ ರೀತಿ ಸಹಕಾರ ನೀಡಲು ಪ್ರಯತ್ನಿಸುತ್ತಿದ್ದರೂ ರಾಜಮನೆತನದ ಸಹಕಾರವನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ ಎಂಬ ಭಾವನೆ ಮೂಡುತ್ತಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಹೇಳಿರುವುದು ಅವರ ನೋವಿನ ಪ್ರತೀಕ ಎನ್ನಬಹುದು .

ಈ ಬಾರಿ ದಸರಾ ಮಹೋತ್ಸವವನ್ನು ನಡೆಸುವಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯ ಕೊರತೆಯಿಂದ ವಜ್ರಮುಷ್ಟಿ ಕಾಳಗ ನಡೆದಿಲ್ಲ ಹಾಗೂ ಚಿನ್ನದ ಅಂಬಾರಿ ಬಳಿ ಭದ್ರತಾ ನಿಯಮ ಉಲ್ಲಂಘಿಸಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಸೆಲಿ ಮತ್ತು ಛಾಯಾಚಿತ್ರ ತೆಗೆದುಕೊಳ್ಳಲು ಮುಗಿಬೀಳುವುದು ಆಘಾತಕಾರಿ ಸಂಗತಿಯಾಗಿದ್ದು ಇದು ಶಿಸ್ತಿನ ಕೊರತೆ ಮತ್ತು ಕರ್ತವ್ಯಲೋಪಕ್ಕೆ ಎಡೆಮಾಡಿಕೊಡುತ್ತದೆ ಎಂದು ಹೇಳಿರುವುದು ಸರ್ಕಾರಕ್ಕೆ ಕಿವಿ ಹಿಂಡಿದಂತೆಯೇ ಸರಿ. ಇನ್ನು ಮುಂದಾದರೂ ಸರ್ಕಾರದ ಜನಪ್ರತಿನಿದಿಗಳು ದಸರಾ ಹಬ್ಬದ ಬಗ್ಗೆ ಅರಿತಿರುವ ಅಧಿಕಾರಿಗಳನ್ನು ನಿಯೋಜಿಸಿ ಸ್ಥಳೀಯರ ಅಭಿಪ್ರಾಯವನ್ನು ಪಡೆದು ದಸರಾ ಆಚರಣೆಯನ್ನು ನಾಡದೇವತೆಯ ಗೌರವ, ಘನತೆ, ವೈಭವ, ಸಂಸ್ಕೃತಿಗೆ ಕಿಂಚಿತ್ತೂ ತೊಂದರೆ ಆಗದ ರೀತಿಯಲ್ಲಿ ಆಚರಿಸಲು ನೆರವಾಗುವುದು ಒಳಿತು.

-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ದಸರಾ ಆಚರಣೆ: ತಜ್ಞರ ಸಮಿತಿ ರಚಿಸಲಿ

ಇತ್ತೀಚೆಗೆ ಯಶಸ್ವಿಯಾಗಿ ಮುಕ್ತಾಯಗೊಂಡ ಈ ವರ್ಷದ ದಸರಾ ಮಹೋತ್ಸವದ ಬಗ್ಗೆ ನಾನಾ ರೀತಿಯ ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ದಲಿತ…

2 mins ago

ಓದುಗರ ಪತ್ರ: ಊರಿನ ಮೂಲ ಹೆಸರು ಉಳಿಯಲಿ

ಕಂಚುಗಾರನ ಕೊಪ್ಪಲು, ಕೆಂಪೇಗೌಡನ ಕೊಪ್ಪಲು, ಕಾಳೇಗೌಡನ ಕೊಪ್ಪಲು, ಕೆಂಚೇಗೌಡನ ಕೊಪ್ಪಲು, ಕೊಮ್ಮೇಗೌಡನ ಕೊಪ್ಪಲು ಹಾಗೂ ಕನ್ನೇಗೌಡನ ಕೊಪ್ಪಲು ಮುಂತಾದ ಪ್ರದೇಶಗಳನ್ನು…

4 mins ago

ದಸರೆಗೆ ಜೀವಂತ ಆನೆಗಳ ಬಳಕೆ ನಿಲ್ಲಲಿ

ಸ್ಟ್ಯಾನ್ಲಿ, ನಿರ್ದೇಶಕರು, ಒಡನಾಡಿ ಸೇವಾಸಂಸ್ಥೆ  ಸರ್ಕಾರವು ಮಾನವ ಸ್ನೇಹಿ, ತಾಂತ್ರಿಕ ಪರ್ಯಾಯ ವ್ಯವಸ್ಥೆ ರೂಪಿಸಲಿ ನಾಡಹಬ್ಬ ಮೈಸೂರು ದಸರಾ, ಜಿಲ್ಲಾವಾರು…

10 mins ago

‘ದಾಸೋಹ’, ‘ಸಾಮಾಜಿಕ ಬದ್ಧತೆ’ ಎಂಬ ಮಾರ್ಗದರ್ಶಿ

ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಇತ್ತೀಚೆಗೆ ನನ್ನ ಉದ್ಯಮಿ ಸ್ನೇಹಿತರೊಬ್ಬರು ಕಾರ್ಪೊರೇಟ್ ಸಾಮಾಜಿಕ…

23 mins ago

ಬಿಗಿ ಭದ್ರತೆಯಲ್ಲಿ ಹಾಸನಾಂಬಾ ದೇವಾಲಯಕ್ಕೆ ಒಡವೆಗಳ ರವಾನೆ

ಹಾಸನ: ಅಕ್ಟೋಬರ್.‌29ರಿಂದ ನವೆಂಬರ್.‌11ರವರೆಗೆ ಹಾಸನಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ…

18 hours ago