ಇತ್ತೀಚೆಗೆ ಯಶಸ್ವಿಯಾಗಿ ಮುಕ್ತಾಯಗೊಂಡ ಈ ವರ್ಷದ ದಸರಾ ಮಹೋತ್ಸವದ ಬಗ್ಗೆ ನಾನಾ ರೀತಿಯ ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿವೆ. ಮುಖ್ಯವಾಗಿ ದಲಿತ ಸಮುದಾಯಕ್ಕೆ ಸೇರಿದ ಮೂವರು ಸಚಿವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಹೋಗಲು ಪೊಲೀಸ್ ಅಧಿಕಾರಿಯೊಬ್ಬರು ಅನುಮತಿ ನಿರಾಕರಿಸಿದ ಬಗ್ಗೆ ಸ್ವತಃ ಆಡಳಿತ ಪಕ್ಷದವರಿಂದಲೇ ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿವೆ.
ಈ ಬಗ್ಗೆ ಮುಖ್ಯಮಂತ್ರಿ ತನಿಖೆ ನಡೆಸಲು ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ ನೀಡಿ ಕೈತೊಳೆದುಕೊಂಡಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ ರಾಜವಂಶಸ್ಥೆ ಪ್ರಮೋದಾ ದೇವಿಯವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಜಂಬೂ ಸವಾರಿ ಮೆರವಣಿಗೆಯಲ್ಲಿ ಉಂಟಾದ ಹಲವಾರು ಲೋಪ-ದೋಷಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದಿದ್ದಾರೆ. ಇನ್ನು ಮುಂದೆ ಜಯದಶಮಿ ಬದಲು ಚಾಮುಂಡೇಶ್ವರಿ ರಥೋತ್ಸವದಂದು ಜಂಬೂ ಸವಾರಿ ನಡೆಸಲು ಸಲಹೆ ನೀಡಿzರೆ. ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದ ಮೇಲ್ವಿಚಾರಣೆಗೆ ಮೂವರು ಸಚಿವರನ್ನು ನೇಮಿಸಿದ್ದರೂ ಅವರ‍್ಯಾರೂ ಜಂಬೂ ಸವಾರಿಯ ದಿನ ಕಾಣಿಸಿ ಕೊಳ್ಳಲಿಲ್ಲವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಕುತೂಹಲಕಾರಿಯಾಗಿದೆ. ಬಹುಶಃ ದಸರಾ ಮಹೋತ್ಸವದ ಬಗ್ಗೆ ಈ ರೀತಿಯ ಕಟು ಟೀಕೆ-ಟಿಪ್ಪಣಿಗಳು ವ್ಯಕ್ತವಾಗುತ್ತಿರುವುದು ಇದೇ ಮೊದಲು ಎನ್ನಬಹುದು. ದಸರಾ ಮಹೋತ್ಸವ, ಕೇವಲ ಒಂದು ಸಾಧಾರಣ ಮಹೋತ್ಸವ ಆಗಿರದೇ ಜಗತಿಕ ಮಟ್ಟದಲ್ಲಿ ಗಮನ ಸೆಳೆಯುವ ಮಹೋತ್ಸವ ವಾಗಿದೆ. ಇಂತಹ ಮಹೋತ್ಸವವನ್ನು ನಡೆಸಲು ಸಾಕಷ್ಟು ಪೂರ್ವಭಾವಿ ಸಿದ್ಧತೆ ಇರಬೇಕಾಗುತ್ತದೆ. ಸಂತೆ-ಹೊತ್ತಿಗೆ ಮೂರು ಮೊಳ ಅನ್ನುವ ಹಾಗೆ ಕೆಲಸ ಮಾಡಬಾರದು.
ಇನ್ನು ಮುಂದೆ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲು ರಾಜ್ಯ ಸರ್ಕಾರಕ್ಕೆ ಅಗತ್ಯ ಸಲಹೆ- ಸೂಚನೆಗಳನ್ನು ನೀಡಲು ತಜ್ಞರ ಸಲಹಾ ಸಮಿತಿಯನ್ನು ರಚಿಸುವುದು ಒಳ್ಳೆಯದು.
– ಕೆ.ವಿ.ವಾಸು, ಮೈಸೂರು
ಖಾಸಗಿ ಕಂಪೆನಿಗಳು ಕನ್ನಡಿಗರನು ಕಡೆಗಣಿಸಿದರೆ ಸೂಕ್ತಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಸಿದ್ದಾರೆ ಸಿಎಂ ಕನ್ನಡಿಗರ ಹಕ್ಕು ಅವಕಾಶ ಕಾಯುವುದಾಗಿಯೂ ಘೋಷಿಸಿದ್ದಾರೆ! ಹೆಮ್ಮೆ…
ಕಂಚುಗಾರನ ಕೊಪ್ಪಲು, ಕೆಂಪೇಗೌಡನ ಕೊಪ್ಪಲು, ಕಾಳೇಗೌಡನ ಕೊಪ್ಪಲು, ಕೆಂಚೇಗೌಡನ ಕೊಪ್ಪಲು, ಕೊಮ್ಮೇಗೌಡನ ಕೊಪ್ಪಲು ಹಾಗೂ ಕನ್ನೇಗೌಡನ ಕೊಪ್ಪಲು ಮುಂತಾದ ಪ್ರದೇಶಗಳನ್ನು…
ನಾಡಹಬ್ಬ ದಸರಾವನ್ನು ಗೌರವ ಮತ್ತು ವೈಭವಕ್ಕೆ ತಕ್ಕಂತೆ ಆಚರಿಸಲು ಪ್ರತಿ ವರ್ಷವೂ ಎಲ್ಲರಿಗೂ ಅನುಕೂಲವಾಗುವ ರೀತಿ ಸಹಕಾರ ನೀಡಲು ಪ್ರಯತ್ನಿಸುತ್ತಿದ್ದರೂ…
ಸ್ಟ್ಯಾನ್ಲಿ, ನಿರ್ದೇಶಕರು, ಒಡನಾಡಿ ಸೇವಾಸಂಸ್ಥೆ ಸರ್ಕಾರವು ಮಾನವ ಸ್ನೇಹಿ, ತಾಂತ್ರಿಕ ಪರ್ಯಾಯ ವ್ಯವಸ್ಥೆ ರೂಪಿಸಲಿ ನಾಡಹಬ್ಬ ಮೈಸೂರು ದಸರಾ, ಜಿಲ್ಲಾವಾರು…
ಎಸ್.ಎಲ್.ಚೆನ್ನಬಸವಣ್ಣ , ಐಪಿಎಸ್, ಉಪ ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಇತ್ತೀಚೆಗೆ ನನ್ನ ಉದ್ಯಮಿ ಸ್ನೇಹಿತರೊಬ್ಬರು ಕಾರ್ಪೊರೇಟ್ ಸಾಮಾಜಿಕ…