Andolana originals

ಓದುಗರ ಪತ್ರ: ಇ- ಖಾತಾ ಆಯ್ತು ಇನ್ನು ಸಿಆರ್ ವಿಶೇಷ ಅಭಿಯಾನ

ಮೈಸೂರಿನಲ್ಲಿ ಸುಮಾರು ವರ್ಷಗಳಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾನೂನು ಉಲ್ಲಂಘನೆಯಾದ ಕಟ್ಟಡಗಳು ಪೂರ್ಣಗೊಂಡಿದ್ದರೂ ಸಿ.ಆರ್. (ಕಟ್ಟಡ ಪ್ರಮಾಣ ಪತ್ರ ) ಸಿಗದೆ ಸಾರ್ವಜನಿಕರು ಪರಿತಪಿಸುತ್ತಿದ್ದುದು ಸರಿಯಷ್ಟೇ.

ಕಟ್ಟಡಗಳನ್ನು ಕಟ್ಟುವಾಗ ಪ್ಲಾನ್ ಪ್ರಕಾರ ಕಟ್ಟದೆ ಶೇ. ೫ ರಿಂದ ಶೇ. ೧೫ ರಷ್ಟು ಉಲ್ಲಂಘನೆಯಾಗಿ ಪೂರ್ಣಗೊಂಡಿರುವ ಕಟ್ಟಡಗಳಿಗೆ, ನಿಯಮಾನುಸಾರ ಶುಲ್ಕ ಪಾವತಿಸಿಕೊಂಡು ಪಾಲಿಕೆ ವ್ಯಾಪ್ತಿಯ ಎಲ್ಲ ೯ ವಲಯ ಕಚೇರಿಗಳಲ್ಲೂ ವಿಶೇಷ ಅಭಿಯಾನದಡಿ ಡಿ.೪ ರಿಂದ ಅರ್ಜಿ ಸ್ವೀಕಾರ ಮಾಡಿ, ಜ. ೮,೨೦೨೭ ರಿಂದ ಸಿ ಆರ್ (ಕಟ್ಟಡ ಪ್ರಮಾಣಪತ್ರ) ವಿತರಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಅವರು ಹೇಳಿರುವುದು ನೆಮ್ಮದಿಯ ವಿಚಾರ. ಇ- ಖಾತಾ ಅಭಿಯಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಸಿ ಆರ್ ವಿಶೇಷ ಅಭಿಯಾನ ಮುನ್ನೆಲೆಗೆ ಬಂದಿದ್ದು ಅಗತ್ಯವಿದ್ದವರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ.

-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ‘ಮಂತ್ರ ಮಾಂಗಲ್ಯ’ ಮದುವೆಗಳು ಹೆಚ್ಚಾಗಲಿ

ಕರ್ನಾಟಕ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕ, ನಂಜನಗೂಡು ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುವ ದರ್ಶನ್ ಧ್ರುವನಾರಾಯಣರ ಸರಳ ‘ಮಂತ್ರ ಮಾಂಗಲ್ಯ’ ಮದುವೆ…

9 seconds ago

ಓದುಗರ ಪತ್ರ: ಜಲಾಶಯಗಳ ಹೂಳೆತ್ತುವ ಕಾರ್ಯ ಚಾಲನೆಗೊಳ್ಳಲಿ

ರಾಜ್ಯದ ಪ್ರಮುಖ ೧೪ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ೧೩೫ ಟಿಎಂಸಿ ನೀರಿನ ಕೊರತೆಯಿದ್ದು, ಕೇವಲ ೬೫ ಟಿಎಂಸಿ ನೀರು ಮಾತ್ರ…

5 mins ago

ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗೆ ಎನ್‌ಡಿಎ ನಿಗೂಢ ಕಸರತ್ತು

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಜನಗಣತಿಯ ಜನಸಂಖ್ಯೆ ಗಣನೆ ಬದಲಿಗೆ ಎಲ್ಲ ರಾಜ್ಯಗಳ ಲೋಕಸಭೆ ಮತ್ತು…

15 mins ago

ಅರಕೆರೆಯ ಚನ್ನಕೇಶವ ದೇವರಿಗೆ ಸುಧಾ ಅವರದೇ ನಿತ್ಯ ಸೇವೆ

ಅಕ್ಷತಾ “ದೇವಸ್ಥಾನದಲ್ಲಿ ಪೂಜೆ ಮಾಡಲು ಅರ್ಚಕರಿಲ್ಲ. ದೀಪ ಹಚ್ಚಲು ಎಣ್ಣೆ ತಂದುಕೊಡುವವರಿಲ್ಲ. ದೇವಸ್ಥಾನವನ್ನು ಸ್ವಚ್ಛಗೊಳಿಸಲು ಯಾರೂ ಮುಂದೆ ಬರುವುದಿಲ್ಲ. ದೇವಸ್ಥಾನದ…

26 mins ago

ಬೆಟ್ಟ ಕುರುಬರ ಪುಟ್ಟಮ್ಮನವರ ಜೊತೆ ಒಂದಿಷ್ಟು ಹೊತ್ತು

ಸೂರ್ಯಪುತ್ರ ಹೆಗ್ಗಡದೇವನಕೋಟೆ ಎಲಚಿಕಟ್ಟೆ ಹಾಡಿಯ ಬೆಟ್ಟಕುರುಬರ ಪುಟ್ಟಮ್ಮನ ಕುಟುಂಬ ಬಹಳ ಹಿಂದಿನಿಂದಲೂ ಕಾಡನ್ನೇ ನೆಚ್ಚಿ ಬದುಕಿದವರು. ಕಾಡಿನಲ್ಲೇ ಹುಟ್ಟಿ ಬೆಳೆದ…

30 mins ago

ಮುತ್ತಾತ ಕೆಂಚಪ್ಪನವರ ನೆಲದ ಮೇಲೂ ಸರ್ಕಾರದ ಕೆಂಗಣ್ಣು

ಗೋಳೂರು ನಾರಾಯಣಸ್ವಾಮಿ ನಾವು ಅಣ್ಣ-ತಮ್ಮಂದಿರು ಓದು-ಬರಹ ಮುಗಿಸಿ ಕೆಲಸಕ್ಕೆ ಅಂತ ನಂಜನಗೂಡು-ಮೈಸೂರು ಅಲೆದು, ದುಡಿದು ತಿನ್ನುತ್ತಿದ್ದ ಕಾಲದಲ್ಲಿ ನಮ್ಮನ್ನು ಇನ್ನಿಲ್ಲದಂತೆ…

36 mins ago