ಸಾಂಸ್ಕೃತಿಕ ನಗರಿ, ಅರೆಮನೆ ನಗರಿ, ಸ್ವಚ್ಛನಗರಿ, ಹಿರಿಯ ನಾಗರಿಕರ ಸ್ವರ್ಗ ಎಂದೆಲ್ಲಾ ಹೆಸರುವಾಸಿಯಾಗಿರುವ ಮೈಸೂರಿನಲ್ಲೂ ಈಗಿನ ಕಾನೂನು ವ್ಯವಸ್ಥೆಯ ಬಗ್ಗೆ ಯೋಚಿಸಬೇಕಾದ ಸಂಗತಿಗಳು ನಡೆಯುತ್ತಿವೆ. ಮೈಸೂರು ನಗರ ವ್ಯಾಪ್ತಿಯಲ್ಲಿ ಆತಂಕ ಮೂಡಿಸುವ ಘಟನೆಗಳು ಕಡಿಮೆಯಾಗು ತ್ತಿಲ್ಲವೇನೋ ಎಂಬ ಚಿಂತಿಯೂ ಶಾಂತಿಪ್ರಿಯರನ್ನು ಕಾಡುತ್ತಿದೆ.
ಅಲ್ಲದೆ ನಗರದಲ್ಲಿ ಆನೇಕ ದ್ವಿಚಕ್ರ ವಾಹನಗಳು ನಂಬರ್ ಪ್ಲೇಟ್ ಇಲ್ಲದೇ ಸಂಚರಿಸುತ್ತಿವೆ. ನಾನಾ ಕಡೆ ವಾಹನಗಳಿಗೆ ದಂಡ ಹಾಕುವ ಉತ್ಸಾಹ ಸಂಚಾರ ಪೊಲೀಸರು ತೋರುತ್ತಿದ್ದರೂ ನಂಬರ್ ಪ್ಲೇಟ್ ಇಲ್ಲದ, ಹೆಲ್ಮೆಟ್ ಧರಿಸದ, ಏಕಮುಖ ರಸ್ತೆಯನ್ನೂ ಲೆಕ್ಕಕ್ಕಿಡದೆ ಆನೇಕ ವಾಹನಗಳು ಓಡಾಡುವುದನ್ನೂ ಕಾಣಬಹುದು. ಪೊಲೀಸರನ್ನು ಕಂಡರೆ ಹಿಂತಿರುಗಿಸಿಕೊಂಡು, ಇಲ್ಲವೆ ಹೇಗೋ ಪಾರಾಗಿ ಹೋಗುವ ಚತುರರೂ ಇರುತ್ತಾರೆ. ದಂಡ ವಸೂಲಿಯೊಂದೇ ಗುರಿಯಾಗಿಟ್ಟುಕ್ಕೊಳ್ಳದೆ ದ್ವಿಚಕ್ರವಾಹನ ಸವಾರರು ಹಾಗೂ ಒಟ್ಟಾರೆ ವಾಹನ ಸವಾರರು ಸಂಚಾರ ನಿಯಮ ಪಾಲಿಸುವ ಭಯ ಇಲ್ಲವೆ ಶಿಸ್ತು ಮೂಡುವಂತೆ ಮಾಡಿದರೆ ಅದು ಶ್ಲಾಘನೀಯ ಕೆಲಸವಾಗುತ್ತದೆ.
ನಂಬರ್ ಪ್ಲೇಟ್ ಇಲ್ಲದೇ ರಸ್ತೆಗಳಲ್ಲಿ ವಾಹನಗಳು ಓಡಾಡಬವಂತಾದರೆ ಸಮಾಜಘಾತುಕ ಕೆಲಸಗಳಿಗೆ ಅನುವು ಮಾಡಿಕೊಟ್ಟಂತಲ್ಲವೇ? ಸರಗಳ್ಳರು, ದರೋಡೆ, ಸಮಾಜಘಾತುಕ ಕೃತ್ಯ ಏಸಗುವವರಿಗೆ ಇದು ಅನುಕೂಲವಾಗುತ್ತದೆ. ಈ ಬಗ್ಗೆ ಪೊಲೀಸ್ ಆಯುಕ್ತರು ಸಂಬಂಧಪಟ್ಟವರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟು ಮೈಸೂರಿನಲ್ಲಿ ಆದಷ್ಟು ಶಾಂತಿ ಹಾಗೂ ಸಂಯಮದ ವಾತಾವರಣ ಮುಂದುವರಿಯುವಂತೆ ನೋಡಿಕೊಳ್ಳಬೇಕು.
-ಹೆಚ್. ಪಿ. ಮಹದೇವಸ್ವಾಮಿ ಹೊರಳಹಳ್ಳಿ, ತಿ. ನರಸೀಪುರ ತಾಲ್ಲೂಕು
ಇತ್ತೀಚಿನ ದಿನಗಳಲ್ಲಿ ಹೆಚ್ಚು ಸದ್ದುಮಾಡುತ್ತಿರುವ ಸ್ಟ್ರಿಂಗ್ ಆಪರೇಷನ್ ಸುದ್ದಿ, ಅದರ ಸುತ್ತ ನಡೆಯುವ ಆರೋಪ-ಪ್ರತ್ಯಾರೋಪಗಳು ಹಾಗೂ ಸಿಡಿ/ಪೆನ್ ಡ್ರೈವ್ಗಳ ವಿಚಾರ…
ಈ ವರ್ಷದ ದಸರಾ ಮಹೋತ್ಸವದಲ್ಲಿನ ವಿದ್ಯುತ್ ದೀಪಾಲಂಕಾರಗಳು ಪ್ರತಿ ವರ್ಷದಂತೆ ಈ ವರ್ಷವೂ ಜನರ ಮನಸ್ಸನ್ನು ಆಕರ್ಷಿಸುತ್ತಿದೆ. ಅದರಲ್ಲೂ ದೇವರಾಜ…
‘ಮತ್ತೆ ಹಾರ್ಟ್ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ’- ಇದು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಕುರಿತು…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ನನ್ನ ಮನೆಯಲ್ಲಿ ಇಟ್ಟಿದ್ದ ನೋಟಿನ ಕಂತೆಗಳನ್ನು ಪೊಲೀಸ್ ಸಿಬ್ಬಂದಿ ಮತ್ತು ಮಹಜರ್ ಸಾಕ್ಷಿದಾರರು ಎಣಿಸಿದರು.…
ಕೆ.ಎಸ್.ಚಂದ್ರಶೇಖರ ಮೂರ್ತಿ ಮೈಸೂರಿನ ಎನ್.ಆರ್. ಕ್ಷೇತ್ರದಲ್ಲಿ ೫೦೦ಕ್ಕೂ ಹೆಚ್ಚು ಮತದಾರರ ವಿರುದ್ಧ ಸುಳ್ಳು ಮಾಹಿತಿ ಸಲ್ಲಿಕೆ ಆರೋಪ; ಪೊಲೀಸ್ ತನಿಖೆ …
ಆರ್.ಎಲ್.ಮಂಜುನಾಥ್ ದಸರಾ ನೋಡಲು ಬಂದವರ ಪಾಡು ಅಯೋಮಯ; ತಾತ್ಕಾಲಿಕ ಶೆಲ್ಟರ್ ಅಳವಡಿಸಲು ಆಗ್ರಹ ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವದ…