Andolana originals

ಓದುಗರ ಪತ್ರ: ಎಲ್ಲರ ಕಣ್ತೆರೆಸುವ ವರದಿ

ನಮ್ಮ ಸುತ್ತಲಿನ ಪ್ರಪಂಚ ಬಹಳ ಸುಂದರವಾಗಿದೆ. 76 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತದ ಆಳುವ ವರ್ಗಗಳು ಕಟ್ಟಕಡೆಯ ವ್ಯಕ್ತಿಯವರೆಗೂ ತನ್ನ ಅಭಿವೃದ್ಧಿಯ ಹೆಜ್ಜೆಗಳನ್ನು ತಲುಪಿಸಿದ್ದು, ಸಮಸ್ತ ಜನಕೋಟಿಯೂ ಸುಖ ಸಮೃದ್ಧಿಯಿಂದ ಬದುಕುತ್ತಿದ್ದಾರೆ ಎಂದು ಭಾವಿಸುತ್ತಾ ನಗರಗಳ ಹಿತವಲಯಗಳಲ್ಲಿ ಬದುಕು ಸವೆಸುವುದನ್ನು ಕಲಿತ ಸಮಾಜಕ್ಕೆ, ತನ್ನ ದೃಷ್ಟಿ ಎಷ್ಟು ಮಸುಕಾಗಿದೆ ಎಂದು ನಿರೂಪಿಸುವ ರೀತಿಯಲ್ಲಿ ‘ಆಂದೋಲನ’ ದಿನಪತ್ರಿಕೆಯ ತಂಡ ಮಲೆ ಮಹದೇಶ್ವರ ಬೆಟ್ಟದ ಸುತ್ತಲಿನ ಕಗ್ಗಾಡುಗಳಲ್ಲಿರುವ ಕುಗ್ರಾಮಗಳ ಪರಿಚಯವನ್ನು ಮಾಡಿಕೊಟ್ಟಿರುವುದು ನಿಜಕ್ಕೂ ಅಭಿನಂದನಾರ್ಹ.

ಇಂಡಿಗನತ್ತ, ಮೆಂದಾರೆ, ದೊಡ್ಡಾಣೆ, ಕೊಕ್ಕಬೋರೆ, ತೋಕೆರೆ ಗ್ರಾಮಗಳ ಒಳಹೊಕ್ಕು, ಅಲ್ಲಿ ನಿಕೃಷ್ಟ ಬಾಳ್ವೆ ನಡೆಸುತ್ತಿರುವ ಅವಕಾಶ ವಂಚಿತ ಜನರನ್ನು ನಾಡಿನ ಜನತೆಗೆ ಪರಿಚಯಿಸುವ ಮೂಲಕ ‘ಆಂದೋಲನ’ ತಂಡ ನಾಗರಿಕ ಜಗತ್ತಿನ ಕಣ್ಣುಗಳಿಗೆ ಕವಿದಿದ್ದ ಪೊರೆಯನ್ನು ಕಳಚಿಹಾಕಿದೆ. ನಮ್ಮ ನಡುವೆಯೇ ಇಂತಹ ಗ್ರಾಮಗಳೂ ಇವೆಯೇ? ಎಂದು ಹುಬ್ಬೇರಿಸುವಂತೆ ವರದಿ ಮಾಡಲಾಗಿದೆ. ವರದಿಗಳಲ್ಲಿರುವ ಮಾನವೀಯ ಧ್ವನಿ ಮತ್ತು ಸಂವೇದನಾಶೀಲ ಅಕ್ಷರಗಳು ಆಳುವ ವರ್ಗಗಳನ್ನಷ್ಟೇ ಅಲ್ಲದೆ, ಈ ವರ್ಗಗಳನ್ನು ಮೆರೆಸುವ ಪ್ರಜ್ಞಾವಂತ ಸಮಾಜವನ್ನೂ ಎಚ್ಚರಿಸುವಂತಿವೆ. ಈ ವರದಿಗಾರಿಕೆ ಬಗ್ಗೆ ,ಆಂದೋಲನ’ದ ಬೆನ್ನುತಟ್ಟುವುದರೊಂದಿಗೇ, ನಮ್ಮ ಚುನಾಯಿತ ಪ್ರತಿನಿಧಿಗಳ ಎದೆಯ ಕದ ತಟ್ಟುವುದೂ ಅತ್ಯವಶ್ಯ ಎನ್ನುವುದನ್ನು ಈ ವರದಿಗಳು ನಿರೂಪಿಸಿವೆ. -ನಾ.ದಿವಾಕರ, ಮೈಸೂರು.

andolana

Recent Posts

ಶಿವಾಜಿ ಗಣೇಶನ್‌ ಅವರ ದೆಹಲಿ ಕಣ್ಣೋಟ | ರಾಮಮಂದಿರ ಅಕ್ರಮ ಮಂಕಾಗಿಸಿದ ಬಿಜೆಪಿ ಭವಿಷ್ಯ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಬಗೆಗೆ ಭಕ್ತರು ಭಕ್ತಿಯಿಂದ ನಡೆದುಕೊಳ್ಳುವುದು ಮಾತ್ರವಲ್ಲ, ತಮ್ಮ ಇಚ್ಛೆಯ ಈಡೇರಿಕೆಗಾಗಿ ಹರಕೆ ಹೊತ್ತವರು , ದಾನ…

4 hours ago

ಭಾನುವಾರದ ಹಾಡುಪಾಡು | ಈಗ ಕೇರಳದಲ್ಲೂ ಫ್ರೀ ಬಸ್ ಪ್ರಿಯದರ್ಶಿನಿ

ಕೇರಳಂ ಎಂಬ ಈ ಸ್ತ್ರೀ ರಾಜ್ಯದ ಮಹಿಳೆಯರು ಉಚಿತ ಪ್ರಯಾಣದ ಸಂಪೂರ್ಣ ಸುಖವನ್ನು ಪಡೆಯುತ್ತಿದ್ದಾರೆ. ಈ ಸುಖ ಕ್ಷಣಿಕವೋ, ಶಾಶ್ವತವೋ…

5 hours ago

ಭಾನುವಾರದ ಹಾಡುಪಾಡು | ಕೊಡಗು ಕಾಡಿನ ಆ ಕಾಲದ ಮಳೆಗಾಲ ವೈಭವ

ಕೃಪಾ ದೇವರಾಜ್, ಮಡಿಕೇರಿ ಧೋ... ಎಂದು ಸುರಿಯುವ ಮಳೆ, ಅಜ್ಜ ಕಟ್ಟಿದ ಹಳೇ ನಾಡ ಹೆಂಚಿನ ಮನೆ, ನಿರಂತರವಾಗಿ ಸುರಿಯುವ…

6 hours ago

ಭಾನುವಾರದ ಹಾಡುಪಾಡು | ಹತ್ತನೆಯ ಸಾಹಿತ್ಯ ಸಂಭ್ರಮದ ಹೊತ್ತಲ್ಲಿ ಹದಿನಾರರ ಹರಯದ ಬುಕ್ ಕ್ಲಬ್ ಕುರಿತು

ಜುಲೈ ನಾಲ್ಕು ಮತ್ತು ಐದರ ಶನಿವಾರ ಮತ್ತು ಭಾನುವಾರ ಮೈಸೂರಿನ ಸದರ್ನ್ ಸ್ಟಾರ್‌ನಲ್ಲಿ ವಾರ್ಷಿಕ ಸಾಹಿತ್ಯ ರಸದೂಟ ಪೃಥ್ವಿ ಸುಧೀಂದ್ರ…

6 hours ago

ಅಗ್ನಿ ದುರಂತ | ಕೊನೆಗೂ ಅಬಕಾರಿ ಡಿಸಿ ತಲೆದಂಡ

ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್‌ಬಾರ್) ನಲ್ಲಿ ಸಂಭವಿಸಿದ  ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…

22 hours ago

ಮಕ್ಕಳ ಮನದಂಗಳದಲ್ಲಿ ಗಾಂಧೀ ಚಿಂತನೆಯ ಬೇರುಗಳು

ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…

1 day ago