Andolana originals

ಹಾಡು-ಪಾಡುವಿನ ರಾಮು ರಾಜ್ಯ

ಓ.ಎಲ್.ನಾಗಭೂಷಣ ಸ್ವಾಮಿ

‘ಹಾಡು-ಪಾಡು ರಾಮು’ ಅಂತಲೇ ಪರಿಚಯವಾಗಿರುವ ರಾಮು ನೆನಪು ಮಾತ್ರವಾಗಿ ಉಳಿದು ಇವತ್ತಿಗೆ ಮೂರು ವರ್ಷ. ರಾಮು ಮಹಾ ಭಾರತದ ಆಯ್ದ ಪ್ರಸಂಗಗಳನ್ನು ಕನ್ನಡಗೊಳಿಸಿ, ಗೆಳೆಯ ದೇವನೂರ ಮಹಾದೇವ ಸಂಪಾದಿಸಿದ “ಮಹಾಭಾರತ ದೊಳಗಿಂದ ಒಂದಷ್ಟು” ಪುಸ್ತಕವನ್ನು ಅಭಿರುಚಿ ಪ್ರಕಾಶನ ಹೊರತಂದು, ಅದರ ಬಿಡುಗಡೆ ೧೩-೬-೨೦೨೬ ರಂದು ರಂಗಾಯಣದಲ್ಲಿ ಆಯಿತು. ಆ ವರದಿ ಒಳಪುಟಗಳಲ್ಲಿದೆ.

ಮಳೆ ತುಂತುರು ಇದ್ದರೂ ಸುಮಾರು ಇನ್ನೂರು ಜನ ಸಮಾ ರಂಭಕ್ಕೆ ಬಂದಿದ್ದರು. ಅಧಿಕಾರವಿರದೆ ಬದುಕಿದ, ಶ್ರೀಮಂತಿಕೆಯ ಸೋಂಕೂ ಇರದ, ಜಾತಿಯ ಮೈಲಿಗೆಯನ್ನು ಒಂದಿಷ್ಟೂ ಅಂಟಿಸಿಕೊಳ್ಳದೆ ಬದುಕಿದ, ಎಲ್ಲರನ್ನೂ ಪ್ರೀತಿ, ಮರುಕದ ನೋಟದಲ್ಲಿ ನೋಡುತ್ತಿದ್ದ ರಾಮುವಿನ ಪುಸ್ತಕವೆಂದು ಅಭಿಮಾನ, ಪ್ರೀತಿಯಿಂದ ಬಂದವರಲ್ಲಿ ನನಗಿಂತ ಹಿರಿಯರು, ನನ್ನ ಸಮಕಾಲೀನರು, ಕಿರಿಯರು ಮತ್ತು ಈಗಿನ್ನು ಹದಿವಯಸ್ಸು ದಾಟು ತಿರುವವರೂ ಸೇರಿದ್ದರು. ಒಳ್ಳೆಯತನ, ಪ್ರೀತಿ, ಮನುಷ್ಯತ್ವ ಇನ್ನೂ ಜೀವಂತ ಅನ್ನುವುದಕ್ಕೆ ಸಾಕ್ಷಿಯ ಹಾಗಿತ್ತು. ವಿವೇಕವಿದ್ದರೂ ಸ್ಪರ್ಧೆ ಇರದ, ಅಸೂಯೆಯ ನೆರಳೂ ಬೀಳದ, ಬಹಳಷ್ಟು ನೊಂದರೂ ಸಂಕಟಪಟ್ಟರೂ ಮುಗ್ಧತೆಯನ್ನು ಕಳಕೊಳ್ಳದೆ ರಾಮು ಅವನ ಸಂಪರ್ಕಕ್ಕೆ ಬಂದವರ ಬಾಳದಾರಿಯ ದೀಪದ ಹಾಗೆ ಬದುಕಿದ. ಮನುಷ್ಯರು ಸ್ವಭಾವದ ಅತ್ಯುತ್ತಮ ನ್ಯಾಯಾಧೀಶರಾದ ಪುಟ್ಟ ಮಕ್ಕಳು ಯಾವತ್ತೂ ರಾಮುವನ್ನು ಒಲ್ಲೆವೆಂದು ದೂರತಳ್ಳಿದ್ದು ನೋಡಿಲ್ಲ. ವಯಸ್ಸಾದರೂ ಅವನೊಳಗಿನ ಮಗು ಜೀವಂತವಾಗಿತ್ತು. ವ್ಯಾಸ ರಾಮುಗೆ ಪ್ರಿಯವಾದ ಕವಿ. ಹಾಗೆಯೇ ದೇವನೂರು ಆಧುನಿಕ ಪಂಪನ ಹಾಗೆ ಅನ್ನುವುದು ರಾಮುನ ತೀರ್ಮಾನ.

ಮಹದೇವ ಓದಬೇಕು, ಹೊಸ ರೀತಿಯಲ್ಲಿ ಬರೆಯುವುದಕ್ಕೆ ಸ್ಛೂರ್ತಿ ಸಿಗಬೇಕು ಅನ್ನುವ ಕಾರಣಕ್ಕೇ ಮಹಾಭಾರತದ ಕಥೆಗಳ ಅನುವಾದ ಮಾಡಿದ. ಮಹಾಭಾರತವೇ ಒಂದು ಭಾಷೆ, ಅದನ್ನು ಕನ್ನಡದಲ್ಲಿ ಹೇಳುವುದಕ್ಕೆ ಹೊಸ ಭಾಷೆಯನ್ನೇ ಕಟ್ಟಿಕೊಳ್ಳಬೇಕು ಅನ್ನುತ್ತಿದ್ದ. ಅವನು ಮಾಡಿದ ಅನು ವಾದವನ್ನು ಮಹದೇವ ಓರಣಗೊಳಿಸಿ ಸಿದ್ಧಪಡಿಸಿದ್ದಾರೆ. ರಾಮು ತನ್ನ ಓದಿನಿಂದ ಪಡೆದ ಬೆಳಕನ್ನು ನಮಗೆ ದಾಟಿಸಿದ್ದಾನೆ. ಅವನ ವ್ಯಕ್ತಿತ್ವ, ಅವನ ಬರಹ ಎರಡೂ ಬೆಳಕನ್ನು ದಾಟಿಸುವ ಕೆಲಸಗಳೇ. ರಾಮುವಿನ ಸಂಪರ್ಕಕ್ಕೆ ಬಂದವರೆಲ್ಲ ರಾಮ ರಾಜ್ಯದ ಪ್ರಜೆಗಳಾಗುತ್ತಿದ್ದರು. ಈಗ ಮೂರು ವರುಷವಾದರೂ ಆ ಪ್ರೀತಿ ಕರಗಿಲ್ಲ. ಅವನ ನೆನಪು ಬೆಳಕಾಗಿ ಉಳಿದಿರಲಿ ಅನ್ನುವುದು ಹಾರೈಕೆ. ಆಂದೋಲನದಲ್ಲಿ ಸುಮಾರು ಇಪ್ಪತ್ತು ವರ್ಷಗಳಷ್ಟು ಕಾಲ ಅವನು ಬೇರೆ ಬೇರೆ ಹೆಸರುಗಳಲ್ಲಿ ಬರೆದ ಬಗೆ ಬಗೆಯ ಬರಹಗಳುಪ್ರಕಟವಾದರೆ ಅವನ ಓದಿನ ವಿಸ್ತಾರ, ನಿರೂಪಣೆಯಲ್ಲಿ ಕೈಗೊಂಡ ಪ್ರಯೋಗಗಳು ಅರಿವಾಗುತ್ತವೆ. ನಮ್ಮ ತಲೆಮಾರು ಕಂಡ ದೊಡ್ಡ ಜೀವ ಹಾಡು-ಪಾಡು ರಾಮು ಅವನನ್ನು ಬಲ್ಲವರ ಎಲ್ಲರ ಮನಸಿನಲ್ಲಿ ಹೊತ್ತಿಸಿದ ಉತ್ಸಾಹ, ಪ್ರೀತಿಯ ಬೆಳಕು ನಂದದೆ ಇರಲಿ ಅನ್ನುವ ಹಾರೈಕೆ ಇಂದಿನ ಸಮಾರಂಭದ ಹೈಲೈಟ್ ಅನ್ನಿಸಿತು.

ಬಾಕ್‌ವ್ಯಾಸ ರಾಮುಗೆ ಪ್ರಿಯವಾದ ಕವಿ. ಹಾಗೆಯೇ ದೇವನೂರು ಆಧುನಿಕ ಪಂಪನ ಹಾಗೆ ಅನ್ನುವುದು ರಾಮುನ ತೀರ್ಮಾನ. ಮಹದೇವ ಓದಬೇಕು, ಹೊಸ ರೀತಿಯಲ್ಲಿ ಬರೆಯುವುದಕ್ಕೆ ಸ್ಛೂರ್ತಿ ಸಿಗಬೇಕು ಅನ್ನುವ ಕಾರಣಕ್ಕೇ ಮಹಾಭಾರತದ ಕಥೆಗಳ ಅನುವಾದ ಮಾಡಿದ. ಮಹಾಭಾರತವೇ ಒಂದು ಭಾಷೆ, ಅದನ್ನು ಕನ್ನಡದಲ್ಲಿ ಹೇಳುವುದಕ್ಕೆ ಹೊಸ ಭಾಷೆಯನ್ನೇ ಕಟ್ಟಿಕೊಳ್ಳಬೇಕು ಅನ್ನುತ್ತಿದ್ದ.

ಅಧಿಕಾರದ ಭಾಷೆಯಲ್ಲಿ ಮಾತ್ರ ಮಹಾಕಾವ್ಯಗಳು ಹುಟ್ಟಬೇಕು ಎಂಬ ಕಲ್ಪನೆಯನ್ನು ಪಂಪನು ಮುರಿದಂತೆ, ಈ ನೆಲದ ವಿವೇಕ, ಅನುಭವ ಮತ್ತು ಜನರ ಬದುಕಿನ ಸಂಕಟಗಳನ್ನು ಮಹಾಭಾರತದೊಂದಿಗೆ ಬೆಸೆಯುವ ಮತ್ತೊಂದು ಮಹತ್ವದ ಪ್ರಯತ್ನವನ್ನು ಹಾಡುಪಾಡು ರಾಮು ಅವರು ‘ಮಹಾಭಾರತದೊಳಗಿಂದ ಒಂದಿಷ್ಟು’ ಕೃತಿಯ ಮೂಲಕ ಮಾಡಿದ್ದಾರೆ.

– ಚ.ಹ.ರಘುನಾಥ 

” ವ್ಯಾಸ ರಾಮುಗೆ ಪ್ರಿಯವಾದ ಕವಿ. ಹಾಗೆಯೇ ದೇವನೂರು ಆಧುನಿಕ ಪಂಪನ ಹಾಗೆ ಅನ್ನುವುದು ರಾಮುನ ತೀರ್ಮಾನ. ಮಹದೇವ ಓದಬೇಕು, ಹೊಸ ರೀತಿಯಲ್ಲಿ ಬರೆಯುವುದಕ್ಕೆ ಸ್ಛೂರ್ತಿ ಸಿಗಬೇಕು ಅನ್ನುವ ಕಾರಣಕ್ಕೇ ಮಹಾಭಾರತದ ಕಥೆಗಳ ಅನುವಾದ ಮಾಡಿದ. ಮಹಾಭಾರತವೇ ಒಂದು ಭಾಷೆ, ಅದನ್ನು ಕನ್ನಡದಲ್ಲಿ ಹೇಳುವುದಕ್ಕೆ ಹೊಸ ಭಾಷೆಯನ್ನೇ ಕಟ್ಟಿಕೊಳ್ಳಬೇಕು ಅನ್ನುತ್ತಿದ್ದ.”

 

 

 

 

ಆಂದೋಲನ ಡೆಸ್ಕ್

Recent Posts

ಭಾನುವಾರದ ಹಾಡುಪಾಡು | ಹೊರಗೆ ನಗುವಿನ ಮೇಕಪ್‌, ಒಳಗೆ ಕುದಿಯುವ ಬೇಗುದಿ

ಮೇಘನ ಕೆ.ಆರ್‌ ಕೇರಳಿಗಳಾದ ನನಗೆ ವರ್ಷಕ್ಕೆರಡು ಹಬ್ಬ-ಓಣಂ, ವಿಶು ಮಾತ್ರ ತಿಳಿದಿತ್ತು. ದೀಪಾವಳಿಗೆ ದನಗಳಿಗೆ ಪೂಜೆ ಮಾಡಿ ಅಮ್ಮ ಕೆಲಸಕ್ಕೆ…

2 hours ago

ಭಾನುವಾರದ ಹಾಡುಪಾಡು | ಮಳೆ ತರುವ ತಾಯಯಿ ಈ ಪುಟ್ಟ ಗೌರಿ

ಡಾ. ಶಿಲಿನಾ ಕೋಟೆ ಎನ್.‌ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಧಾರ್ಮಿಕ ಆಚರಣೆ ಗಳಲ್ಲ; ಅವು ಪ್ರಕೃತಿ, ಕೃಷಿ, ಮಳೆ,…

2 hours ago

ಗೌರಮ್ಮ ಭೂಮಿಗೆ ಬರುವ ದಿನ

ಶುಭಮಂಗಳ ರಾಮಾಪುರ ಗೌರಿಹಬ್ಬವೆಂದ ಕೂಡಲೇ ಸಂಭ್ರಮದ ನೆನಪು ಒಂದೆಡೆಯಾದರೆ ಕೆಲಸದ ಹೊರೆ ಮತ್ತೊಂದೆಡೆ. ನನ್ನೂರಿನಲ್ಲಂತೂ ಗೌರಿಹಬ್ಬಕ್ಕೆ ಮಡಿ ಮಾಡುವುದೇ ದೊಡ್ಡ…

2 hours ago

ಮಗಳು ಗೌರಿ, ದೇವತೆಯೂ ಗೌರಿ, ಮಳೆಯು ಗೌರಿ, ಬೆಂಕಿಯೂ ಗೌರಿ

ನಾಳಿನ ಗೌರಿ ಗಣೇಶ ಸಂಭ್ರಮಕ್ಕೆ ಬರಹಗಳ ಬಾಗಿನ ಡಾ.ಶುಭಶ್ರೀ ಪ್ರಸಾದ್‌, ಮಂಡ್ಯ ‘ಮಗಳು’ಎಂದ ಕ್ಷಣ ಕಣ್ಮುಂದೆ ಬರುವುದು ಜರಿ ಲಂಗ,…

2 hours ago

ಗೌರಿ-ಗಣೇಶ ಹಬ್ಬಕ್ಕೆ ಸಕಲ ಸಿದ್ಧತೆ

ಅರಮನೆ ನಗರಿಯ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು ಸೇವಂತಿಗೆ ಹೂವು, ಏಲಕ್ಕಿ ಬಾಳೆಹಣ್ಣು ಸೇರಿ ಇನ್ನಿತರೆ ಹಣ್ಣುಗಳ ಬೆಲೆ ಹೆಚ್ಚಳ…

2 hours ago

ʼಮಣ್ಣಿನ ಗಣಪನಿಗೆ ಮನ್ನಣೆಗೆ ಸಿಗಲಿʼ

ಭಾರತಿ ಸಜ್ಜನ್‌ ಮೈಸೂರು : ಜಾಗತಿಕ ತಾಪಮಾನ ಏರುಗತಿಯ ನಡುವೆಯೇ ಗೌರಿ-ಗಣೇಶ ಹಬ್ಬಕ್ಕೆ ದಿನಗಣನೆ ಶುರುವಾಗಿದ್ದು, ಎಡೆ ಸಿದ್ಧತೆ ನಡೆದಿದೆ.…

2 hours ago