Andolana originals

ಅರಣ್ಯ ಪ್ರದೇಶದಲ್ಲಿ ಮಳೆ, ಪ್ರಾಣಿಗಳಿಗಿಲ್ಲ ನೀರಿನ ಚಿಂತೆ

ಯುಗಾದಿ ಮುನ್ನವೇ ಮಳೆಯ ಸಿಂಚನಕ್ಕೆ ಅಧಿಕಾರಿಗಳ ಮನದಲ್ಲಿ ಸಂತಸ; ಒಂದೂವರೆ ತಿಂಗಳಿನಿಂದ ಒಣಗಿದ್ದ ಕುರುಚಲು ಗಿಡಗಳಿಗೆ ನೀರಿನ ಆಸರೆ

ಕೆ. ಬಿ. ರಮೇಶನಾಯಕ

ಮೈಸೂರು: ತೀವ್ರ ಬಿಸಿಲಿನಿಂದ ಒಣಗಿದ್ದ ಅಭಯಾರಣ್ಯ ಪ್ರದೇಶಗಳಲ್ಲಿ ಭಾನುವಾರದಿಂದ ಸತತವಾಗಿ ೩ ದಿನಗಳು ಉತ್ತಮವಾದ ಮಳೆಯಾಗಿದ್ದು, ವನ್ಯಜೀವಿಗಳಿಗೆ ಕಾಡಿದ್ದ ಕುಡಿಯುವ ನೀರಿನ ಆತಂಕ ಸ್ವಲ್ಪ ದಿನಗಳ ಮಟ್ಟಿಗೆ ದೂರವಾಗಿದೆ.

ಕಾಡಿನಲ್ಲಿ ಇರುವ ಕೆರೆಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸುವ ಕೆಲಸ ಮಾಡಲಾಗಿತ್ತಾದರೂ ಮೂರು ದಿನಗಳು ಬಿದ್ದ ಮಳೆಯಿಂದಾಗಿ ಕೆರೆಗಳಿಗೆ ನೀರು ಸೇರುವ ಜತೆಗೆ ಒಣಗಿದ್ದ ಕುರುಚಲು ಗಿಡಗಳಿಗೆ ನೀರಿನ ಆಸರೆಯಾಗಿದೆ. ಅದರಲ್ಲೂ ಮಲೆಮಹದೇಶ್ವರ ಬೆಟ್ಟ, ಬಿಆರ್‌ಟಿ ಬಂಡೀಪುರ, ನಾಗರ ಹೊಳೆ ಅಭಯಾರಣ್ಯ ಪ್ರದೇಶಗಳಲ್ಲಿ ಮಳೆಯಾಗಿರುವುದು ಅಽಕಾರಿಗಳಲ್ಲಿದ್ದ ಆತಂಕವನ್ನು ಕಡಿಮೆ ಮಾಡಿದೆ.

ಬೇಸಿಗೆ ಕಾಲ ಆಗಮನವಾಗುತ್ತಿದ್ದಂತೆ ಕಾಡಿನಲ್ಲಿ ಮರಗಿಡಗಳು ಒಣಗಿ, ಕೆರೆಕಟ್ಟೆಗಳು ಬರಿದಾಗಿ ವನ್ಯಜೀವಿಗಳು ಆಹಾರ, ನೀರು ಹುಡುಕಿಕೊಂಡು ನಾಡಿನತ್ತ ಬರುತ್ತಿದ್ದವು. ಅದರಲ್ಲೂ ಆನೆ, ಜಿಂಕೆ, ಹುಲಿ, ಚಿರತೆ ಮೊದಲಾದ ಪ್ರಾಣಿಗಳಿಗೆ ನೀರು ಸಿಗುವಂತೆ ಮಾಡಲು ಕೆರೆಗಳಿಗೆ ನೀರು ತುಂಬಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿತ್ತು. ಆದರೆ, ಯುಗಾದಿ ಹಬ್ಬಕ್ಕೆ ೧೦ ದಿನಗಳು ಇರುವಂತೆಯೇ ಮಳೆಯ ಆಗಮನವಾಗಿರುವುದು ಗಮನಾರ್ಹವಾಗಿದೆ.

ನಾಗರಹೊಳೆ ಪ್ರದೇಶದಲ್ಲಿ ಉತ್ತಮ ಮಳೆ: ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯ ವೀರನಹೊಸಹಳ್ಳಿ, ಮತ್ತಿಗೋಡು, ಅಂತರಸಂತೆ, ಕಲ್ಲಹಳ್ಳ ಬಳಿ ಉತ್ತಮ ಮಳೆಯಾಗಿದ್ದರೆ, ಬಂಡೀಪುರ ಭಾಗದಲ್ಲಿ ಒಂದು ಸೆಂ. ಮೀಟರ್, ಮಲೆಮಹದೇಶ್ವರ ಅರಣ್ಯ ಪ್ರದೇಶದಲ್ಲಿ ಎರಡು ಸೆಂ. ಮೀಟರ್ ಮಳೆಯಾಗಿದೆ ಎಂದು ಹೇಳಲಾಗಿದೆ. ಸೋಮವಾರ ಸಂಜೆ ಸುರಿದ ಮಳೆಯು ಕಟ್ಟೆಗಳಿಗೆ ನೀರು ಹರಿದು ಬಂದಿದ್ದು, ಮರಗಿಡಗಳು, ಕುರುಚಲುಗಿಡಗಳಿಗೆ ನೀರು ಸಿಕ್ಕಿರುವುದರಿಂದ ಹಸಿರುಕಾಣಿಸಿಕೊಳ್ಳಲು ದಾರಿಯಾಗಿದೆ. ಒಂದೇ ಮಳೆಗೆ ಕನಿಷ್ಠ ಹತ್ತು ದಿನಗಳ ಕಾಲ ಹಸಿರಿನಿಂದ ಕೂಡಿರುವ ಜತೆಗೆ ಜಿಂಕೆ, ಆನೆಗಳು, ಕಡವೆ, ಹುಲಿಗಳಿಗೆ ನೀರು ಅಲ್ಲಲ್ಲಿ ದೊರೆಯಲಿದೆ ಎಂದು ಎಸಿಎಫ್ ಲಕ್ಷ್ಮೀಕಾಂತ್ ಹೇಳುತ್ತಾರೆ. ‌

ಕಾಡ್ಗಿಚ್ಚಿನ ಪ್ರಕರಣ ಇಲ್ಲ
ಕಳೆದ ಒಂದೂವರೆ ತಿಂಗಳಿಂದ ಬಂಡೀಪುರ, ನಾಗರಹೊಳೆ ಅರಣ್ಯ ಪ್ರದೇಶಗಳಲ್ಲಿ ಒಂದೇ ಒಂದು ಕಾಡ್ಗಿಚ್ಚಿನ ಪ್ರಕರಣ ಸಂಭವಿಸಿಲ್ಲ. ಬೇಸಿಗೆ ಕಾಲದಲ್ಲಿ ಉಂಟಾಗುವ ಕಾಡ್ಗಿಚ್ಚು ಅಥವಾ ದುಷ್ಕರ್ಮಿಗಳ ಕೃತ್ಯದಿಂದ ಕಾಡಂಚಿನ ಪ್ರದೇಶಗಳಿಗೆ ಬೆಂಕಿ ಬೀಳದಂತೆ ತಂಡಗಳನ್ನು ರಚನೆ ಮಾಡಿ ವಿಶೇಷ ನಿಗಾ ಇಡಲಾಗಿತ್ತು. ಅಲ್ಲಲ್ಲಿ ಫೈರ್‌ಲೈನ್ ಮಾಡಿಕೊಂಡು ನೀರನ್ನು ಸಿಂಪಡಿಸುವ ಕೆಲಸ ಮಾಡಿದ್ದರಿಂದ ಅರಣ್ಯ ಇಲಾಖೆ ಅಽಕಾರಿಗಳ ಯೋಜನೆ ಸಫಲವಾಗಿದೆ. ಇದಕ್ಕಾಗಿ ಅಗ್ನಿಶಾಮಕ ವಾಹನ ಮಾದರಿಯಲ್ಲಿಯೇ ಲಘು ವಾಹನ ತಯಾರಿಸಿ, ಇದರ ಬಳಕೆ ಕುರಿತು ಸಿಬ್ಬಂದಿಗೆ ತರಬೇತಿ ನೀಡಲಾಗಿತ್ತು ಎಂದು ಎಸಿಎ- ಲಕ್ಷ್ಮೀಕಾಂತ್ ಹೇಳಿದ್ದಾರೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಗ್ನಿಶಾಮಕ ವಾಹನ ಬರುವುದು ತಡವಾಗುತ್ತದೆ. ಅಲ್ಲದೆ, ಕಿರಿದಾದ ಮತ್ತು ತಗ್ಗು ಪ್ರದೇಶಗಳಲ್ಲಿ ಸಂಚಾರ ಅಸಾಧ್ಯ. ಹೀಗಾಗಿ, ಇಲಾಖೆ ಈ ಬಾರಿ ಹೊಸ ಪ್ರಯೋಗಕ್ಕೆ ಮುಂದಾಗಿ, ರಾಷ್ಟ್ರೀಯ ಉದ್ಯಾನಗಳ ಉಪ ವಿಭಾಗಗಳಿಗೆ ತಲಾ ಒಂದೊಂದು ವಾಹನ ಸಿದ್ಧಪಡಿಸಿಕೊಂಡು ಇದರಲ್ಲಿ ೨ ಸಾವಿರ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಅಳವಡಿಸಲಾಗಿತ್ತು. ಇದಕ್ಕೆ ಪಂಪ್ ಜೋಡಿಸಲಾ ಗಿದ್ದು, ಇದು ಸುಮಾರು ೫೦ ಮೀಟರ್ ದೂರಕ್ಕೆ ನೀರು ಚಿಮ್ಮಿಸುವ ಸಾಮರ್ಥ್ಯ ಹೊಂದಿದೆ.

ಸೋಮವಾರ, ಮಂಗಳವಾರ ಮಳೆ ಬಿದ್ದಿರುವುದರಿಂದ ಒಂದಿಷ್ಟು ನೀರು ಕೆರೆಗಳಿಗೆ ಬಂದು ಸೇರಿದೆ. ಇದರಿಂದಾಗಿ ಕನಿಷ್ಠ ಹತ್ತು ದಿನಗಳ ಮಟ್ಟಿಗೆ ಅನುಕೂಲವಾಗುವ ಜತೆಗೆ ಹಸಿರು ಕಾಣಿಸಿಕೊಳ್ಳಲು ನೆರವಾಗಿದೆ. ಮುಂದಿನ ದಿನಗಳಲ್ಲಿ ಸ್ವಲ್ಪ ಸ್ವಲ್ಪ ಬಿದ್ದರೂ ಹಸಿರುಪ್ರದೇಶಗಳಿಗೆ ಅನುಕೂಲವಾಗಲಿದೆ. -ಲಕ್ಷ್ಮೀಕಾಂತ್,ಎಸಿಎಫ್‌

ಆಂದೋಲನ ಡೆಸ್ಕ್

Recent Posts

ದಸರಾ ವೆಬ್‌ಸೈಟ್‌ ಲೋಕಾರ್ಪಣೆ : ಅ.11ರಿಂದ 21ರವರೆಗೆ ನಡೆಯಲಿರುವ ಕಾರ್ಯಕ್ರಮಗಳ ಮಾಹಿತಿ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲು ಹಾಗೂ ಪ್ರವಾಸಿಗರಿಗೆ ಉಪಯುಕ್ತವಾದ ಮಾಹಿತಿ ಕೊಡಲು ದಸರಾ-೨೦೨೬ರ…

9 hours ago

ತಮಿಳುನಾಡಿಗೆ ಕಾವೇರಿ ನೀರು: 3 ಸಾವಿರ ಕ್ಯೂಸೆಕ್‌ಗೆ ಇಳಿಸಲು ರಾಜ್ಯ ಸರ್ಕಾರ ಮನವಿ

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 6 ಸಾವಿರ ಕ್ಯೂಸೆಕ್‌ ನೀರನ್ನು 3 ಸಾವಿರ…

11 hours ago

ರಾಜ್ಯ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ: ಸೆಪ್ಟೆಂಬರ್.18 ರಿಂದ ಅಮಿತ್ ಶಾ 2 ದಿನ ರಾಜ್ಯ ಪ್ರವಾಸ ‌

ಹುಬ್ಬಳ್ಳಿ: ಸೆಪ್ಟೆಂಬರ್ 18ರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ 2 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಸೆಪ್ಟೆಂಬರ್ 18ರ…

11 hours ago

ರಾಮನಗುಡ್ಡ ಕೆರೆ ಭರ್ತಿ : ಕೋಡಿ ಬಿದ್ದು ಹರಿದ ನೀರು

ಮಹಾದೇಶ್. ಎಂ ಗೌಡ ಹನೂರು: ತಾಲ್ಲೂಕಿನ ಮಂಗಲ ಗ್ರಾಮದ ಹುಲುಸುಗುಡ್ಡೆ ಬಳಿ ಇರುವ ಐತಿಹಾಸಿಕ ರಾಮನಗುಡ್ಡ ಕೆರೆ ಸಂಪೂರ್ಣ ಭರ್ತಿಯಾಗಿ…

15 hours ago

ಓದುಗರ ಪತ್ರ: ಕೊನೆಗೊಳ್ಳಲಿ ಸಂಘರ್ಷ!

ಕೊನೆಗೊಳ್ಳಲಿ ಸಂಘರ್ಷ! ಯುದ್ಧವನು ಕೊನೆಗಾಣಿಸಲು ರಾಜತಾಂತ್ರಿಕ ಮಾತುಕತೆಯೇ ಉತ್ತಮವೆಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಒಕ್ಕೊರಲಿನಿಂದ ಒಪ್ಪಿರುವುದು ಸ್ವಾಗತಾರ್ಹ! ಇದಲ್ಲವೇ…

20 hours ago

ಓದುಗರ ಪತ್ರ: ಚುರುಕಾಗಲಿ 6ರ ಪ್ಲಾಟ್ ಫಾರಂ ಟಿಕೆಟ್ ಕೌಂಟರ್

ಮೈಸೂರಿನ ನೈಋತ್ಯ ರೈಲ್ವೆಗೆ ಸೇರಿರುವ ಅಶೋಕ ಪುರಂ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರಂ ೬ರ ಕಡೆ ರೈಲು ಪ್ರಯಾಣಿಕರಿಗೆ ಅನುಕೂಲವಾಗಲೆಂದು…

20 hours ago