Andolana originals

ಪಂಜು ಗಂಗೊಳ್ಳಿ ಅವರ ವಾರದ ಅಂಕಣ : ಪ್ರತೀ ವಾರಾಂತ್ಯ 100 ಜನರ ಹಸಿವು ತಣಿಸುವ ಸಂಡೇ ಬ್ರೇಕ್‌ಫಾಸ್ಟ್‌

2023ರಿಂದ “ಮಾತೋಶ್ರೀ ಫೌಂಡೇಶನ್‌”ಯಡಿ ಈ ಕಾರ್ಯಕ್ರಮಕ್ಕೆ ಚಾಲನೆ

ಭಾನುವಾರ ಬಂತೆಂದರೆ ಸಾಮಾನ್ಯವಾಗಿ ಹೆಚ್ಚಿನ ಮಧ್ಯಮ ವರ್ಗದ ಮನೆಗಳಲ್ಲಿ ಅಡುಗೆ ಕೋಣೆಗಳು ಬೆಳಗುವುದು ವಾರದ ಉಳಿದ ದಿನಗಳಿಗಿಂತ ತಡವಾಗಿ. ಅಂದು ಕಚೇರಿಗೋ, ಕೆಲಸಕ್ಕೋ ಹೋಗುವ ತರಾತುರಿ ಇರುವುದಿಲ್ಲ. ಸಿಗುವುದೊಂದು ವಾರದ ರಜೆ. ಹಾಗಾಗಿ ಆವತ್ತು ಎಲ್ಲರೂ ತಡವಾಗಿ ಹಾಸಿಗೆ ಬಿಡುತ್ತಾರೆ. ಆದರೆ, ಮುಂಬೈಯ ದೀಪೇಶ್ ದೇಡಿಯಾ ಹಾಗೂ ಪೂಜ ದೇಡಿಯಾ ದಂಪತಿಗಳ ಮನೆಯಲ್ಲಿ ಇದು ಪೂರಾ ತಿರುಗಮುರುಗ. ಅಂದರೆ, ಅಂದು ವಾರದ ಇತರ ದಿನಗಳಿಗಿಂತ ಕೆಲವು ಗಂಟೆಗಳ ಬೇಗ, ಅಂದರೆ ಬೆಳಗಿನಜಾವ ೪ ಗಂಟೆಗೆ ಅವರ ಮನೆಯ ಅಡುಗೆ ಮನೆಯಲ್ಲಿ ಒಲೆ ಹೊತ್ತಿಸಲ್ಪಡುತ್ತದೆ. ಅವರೂ ಕೂಡಾ ಹೆಚ್ಚಿನ ಮಧ್ಯಮವರ್ಗದ ಕುಟುಂಬಗಳಂತೆ ಉದ್ಯೋಗಸ್ಥ ದಂಪತಿಗಳೇ. ಪೂಜ ಒಬ್ಬ ವೃತ್ತಿಪರ ಶೆಪ್ ಹಾಗೂ ನ್ಯೂಟ್ರಿಶನಿಸ್ಟ್ ಆಗಿದ್ದರೆ, ದೀಪೇಶ್ ಒಬ್ಬ ಬ್ಯಾಂಕರ್. ಆದರೂ ಭಾನುವಾರ ಅವರ ಅವರ ಮನೆಯಲ್ಲಿ ಉಳಿದ ದಿನಗಳಿಗಿಂತ ೩-೪ ಗಂಟೆಗಳಷ್ಟು ಬೇಗ ಒಲೆ ಹೊತ್ತಿಸಲ್ಪಡುತ್ತದೆ. ಮತ್ತು, ಅಷ್ಟು ಬೇಗ ಅವರ ಅಡುಗೆ ಮನೆಯಲ್ಲಿ ಒಲೆ ಹೊತ್ತಿಸಲ್ಪಡುವುದು ಅವರ ಕುಟುಂಬಕ್ಕಾಗಿಯೂ ಅಲ್ಲ! ಅಕ್ಕಪಕ್ಕದ ದಿನಗೂಲಿ ನೌಕರರು, ನಿರ್ಗತಿಕರು ಮೊದಲಾದವರಿಗಾಗಿ.

ಭಾನುವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದ ಇಬ್ಬರೂ ಉಪಾಹಾರ ತಯಾರಿಕೆಯಲ್ಲಿ ತೊಡಗುತ್ತಾರೆ. ನೂರು ಜನರಿಗಾಗುವಷ್ಟು ಉಪಾಹಾರಕ್ಕೆ ತರಕಾರಿ ಹೆಚ್ಚುತ್ತಾರೆ. ಇತರ ಅಡುಗೆ ಸಾಮಗ್ರಿಗಳನ್ನು ಅಳೆದು, ಬೇಕಾದ ಪ್ರಮಾಣದಲ್ಲಿ ಇಟ್ಟುಕೊಳ್ಳುತ್ತಾರೆ. ಅಷ್ಟು ದೊಡ್ಡ ಪ್ರಮಾಣದ ಅಡುಗೆ ತಯಾರಿ ನಡೆಯುವಾಗಲೂ ಅವರು ತುಸುವೂ ಗಡಿಬಿಡಿ, ಅವಸರ ಮಾಡಿಕೊಳ್ಳುವುದಿಲ್ಲ. ಎಲ್ಲವೂ ಅದರದ್ದೇ ಆದ ಓಘದಲ್ಲಿ ನಡೆಯುತ್ತದೆ. ಏಕೆಂದರೆ, ಕಳೆದ ಮೂರು ವರ್ಷಗಳಿಂದ ಅವರು ಇದನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವುದರಿಂದ ಪ್ರತಿಯೊಂದು ಹಂತವೂ ಅವರ ನಿಯಂತ್ರಣದಲ್ಲಿರುತ್ತದೆ.

ನಾಲ್ಕು ಗಂಟೆಗೆ ಶುರುವಾದ ಅವರ ಅಡುಗೆ ಏಳು, ಏಳೂವರೆಗೆ ಮುಗಿದು ನೂರು ಜನರಿಗಾಗುವಷ್ಟು ಬಿಸಿ ಬಿಸಿ ಉಪಾಹಾರ ತಯಾರಾಗುತ್ತದೆ.

ದೀಪೇಶ್ ಹಾಗೂ ಪೂಜ ೨೦೨೩ ರಿಂದ ತಮ್ಮ ‘ಮಾತೋಶ್ರೀ -ಫೌಂಡೇಶನ್’ ಅಡಿ ಈ ‘ಸಂಡೇ ಬ್ರೇಕ್ -ಸ್ಟ್’ ಮೂಲಕ ಈವರೆಗೆ ೧೫,೦೦೦ಕ್ಕೂ ಹೆಚ್ಚು ತಟ್ಟೆಗಳಷ್ಟು ಉಪಾಹಾರಗಳನ್ನು ಹಂಚಿದ್ದಾರೆ.

ದಿನಗೂಲಿ ನೌಕರರು ಹಾಗೂ ಸಮಾಜದ ದುರ್ಬಲ ಸ್ತರದ ಜನರು ಇದರ -ಲಾನುಭಗಳು. ದೀಪೇಶ್ ದೇಡಿಯಾರ ಬದುಕಿನಲ್ಲಿ ನಡೆದ ಒಂದು ಘಟನೆ ಈ ‘ಸಂಡೇ ಬ್ರೇಕ್ -ಸ್ಟ್’ ಕಾರ್ಯಕ್ರಮಕ್ಕೆ ಕಾರಣ.

ದೀಪೇಶ್ ಹುಟ್ಟಿದಾಗ ಅವರು ಬದುಕುಳಿಯಬೇಕಾದರೆ ಅವರಿಗೆ ತುರ್ತಾಗಿ ರಕ್ತದ ಅಗತ್ಯ ಬಿದ್ದಿತು. ಆಗ ಯಾರೋ ಅಪರಿಚಿತರು ರಕ್ತ ದಾನ ಮಾಡಿ ಅವರು ಬದುಕುಳಿದರು. ರಕ್ತದಾನ ಮಾಡಿದವರು ಯಾರೆಂಬುದು ಅವರಿಗೆ ಯಾವತ್ತೂ ತಿಳಿಯಲಿಲ್ಲ. ತಿಳಿಯುವ ಅವಕಾಶವೂ ಇರಲಿಲ್ಲ. ಹಾಗಾಗಿ, ದೀಪೇಶ್ ತನಗೆ ಬುದ್ಧಿ ಬಂದಂದಿನಿಂದ ಆ ಘಟನೆಯನ್ನು ಜತನದಿಂದ ನೆನಪಿಟ್ಟುಕೊಂಡಿದ್ದರು. ಮತ್ತು, ಆ ಋಣವನ್ನು ಹೇಗೆ ತೀರಿಸಬಹುದು ಎಂಬುದರ ಬಗ್ಗೆ ಯಾವತ್ತೂ ಆಲೋಚಿಸುತ್ತಿದ್ದರು. ೨೦೨೩ರಲ್ಲಿ ಅವರು ಪೂಜರನ್ನು ಮದುವೆಯಾದಾಗ ತನ್ನ ಆ ನೆನಪನ್ನು ಅವರೊಂದಿಗೆ ಹಂಚಿಕೊಳ್ಳುವಾಗ ಬಹಳ ದೊಡ್ಡದಲ್ಲದಿದ್ದರೂ ತಮ್ಮ ಕೈಲಾದ ಚಿಕ್ಕ ರೀತಿಯ ಯಾವುದಾದರೂ ಒಂದು ಸಾಮಾಜಿಕ ಕಾರ್ಯವನ್ನು ಮಾಡೋಣ ಎಂದು ನಿರ್ಧರಿಸಿದರು. ಅದರಂತೆ, ಭಾನುವಾರ ಬೆಳಿಗ್ಗೆ ೧೦೦ ಜನರಿಗೆ ಈ ಉಪಾಹಾರ ನೀಡುವ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಆ ಕೆಲಸಕ್ಕಾಗಿಯೇ ‘ಮಾತೋಶ್ರೀ -ಂಡೇಶನ್’ನ್ನು ಹುಟ್ಟು ಹಾಕಿದರು.

ಉಪಾಹಾರ ಹಂಚುವ ನಿರ್ಧಾರವನ್ನು ಮಾಡಿದ ನಂತರ ಅವರು ತಮ್ಮ ಕುಟುಂಬ ಸದಸ್ಯರು, ಸ್ನೇತರೊಂದಿಗೆ ಚರ್ಚಿಸಿದರು. ಅದಕ್ಕಾಗಿ ಒಂದು ವಾಟ್ಸಾಪ್ ಗ್ರೂಪನ್ನು ಪ್ರಾರಂಭಿಸಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಾಕಿದರು. ೨೦೨೩ರ ಜುಲೈ ೨ರಂದು ಮುಂಬೈಯ ಉಪನಗರ ಭಾಂಡುಪ್ ಎಂಬಲ್ಲಿನ ಸಾಯಿ ಮಂದಿರದಲ್ಲಿ ಅವರು ತಮ್ಮ ಪ್ರಪ್ರಥಮ ‘ಸಂಡೇ ಬ್ರೇಕ್-ಸ್ಟ್’ ಕಾರ್ಯಕ್ರಮವನ್ನು ನಡೆಸಿದರು. ಅಂದು ಶುರುವಾದ ಈ ‘ಸಂಡೇ ಬ್ರೇಕ್-ಸ್ಟ್ ಕಾರ್ಯಕ್ರಮ ಈವತ್ತಿನವರೆಗೂ ಒಮ್ಮೆಯೂ ನಿಂತಿಲ್ಲ. ೨೦೨೪ರಲ್ಲಿ ಪೂಜ ಚೊಚ್ಚಲು ಬಸುರಾದಾಗ ಎರಡು ತಿಂಗಳು ಅದನ್ನು ನಿಲ್ಲಿಸುವ ಆಲೋಚನೆ ಮಾಡಿದ್ದರು. ಆದರೆ, ಆಗಲೂ ನಿಲ್ಲಿಸದೆ ಮುಂದುವರಿಸಿದರು.

‘ಸಂಡೇ ಬ್ರೇಕ್-ಸ್ಟ್’ಗೆ ಗುರುವಾರದಿಂದಲೇ ತಯಾರಿ ಪ್ರಾರಂಭಿಸಬೇಕಾಗುತ್ತದೆ. ಆವತ್ತೇ ಮೆನು ಏನೆಂಬುದು ನಿರ್ಧಾರವಾಗುತ್ತದೆ. ಮೆನುಗೆ ಅನುಗುಣವಾಗಿ ಮುಂದಿನ ತಯಾರಿಗಳು ನಡೆಯುತ್ತವೆ. ಶುಕ್ರವಾರ ಮತ್ತು ಶನಿವಾರ ಡಿ-ಮಾರ್ಟಿಗೆ ಹೋಗಿ ಅಡುಗೆಗೆ ಬೇಕಾದ ಸಾಮಾನುಗಳನ್ನು ತರುತ್ತಾರೆ. ಭಾನುವಾರ ಬೆಳಗಿನ ಜಾವ ಆಹಾರ ತಯಾರಿ ನಡೆಯುತ್ತದೆ. ಅವಲಕ್ಕಿ, ಇಡ್ಲಿ ಅಥವಾ ಉಪ್ಪಿಟ್ಟಾದರೆ ಭಾನುವಾರ ಬೆಳಗಿನ ಜಾವ ೪ ಗಂಟೆಗೆ ಎದ್ದು ತಯಾರಿ ನಡೆಸುತ್ತಾರೆ. ಸಳ್ ಪಾವ್ ಅಥವಾ ಚೋಲೇ ಆದರೆ ೩ ಗಂಟೆಗೆ ಎದ್ದು ತಯಾರಿ ಶುರು ಮಾಡಬೇಕಾಗುತ್ತದೆ. ತರಕಾರಿ ಕತ್ತರಿಸುವುದರಿಂದ ಹಿಡಿದು, ಅಡುಗೆ ಮಾಡುವುದು, ಪ್ಯಾಕ್ ಮಾಡುವುದು, ಸಾಗಿಸುವುದು ಎಲ್ಲವನ್ನೂ ಗಂಡ ಹೆಂಡತಿಯೇ ಮಾಡುತ್ತಾರೆ. ಯಾರನ್ನೂ ಸಹಾಯಕರನ್ನಾಗಿ ಇರಿಸಿಕೊಂಡಿಲ್ಲ. ಮತ್ತು, ಅವರೇ ೩೦-೪೫ ನಿಮಿಷಗಳ ನಿಂತು ಸ್ವತಃ ಉಪಾಹಾರವನ್ನು ಹಂಚುತ್ತಾರೆ. ಉಪಾಹಾರದ ಕೊನೆಯಲ್ಲಿ ಒಂದೊಂದು ಬಾಳೆಹಣ್ಣನ್ನು ನೀಡುತ್ತಾರೆ.

ಒಂದು ಸಂಡೇ ಬ್ರೇಕ್ -ಸ್ಟಿಗೆ ಮೆನುವನ್ನು ಹೊಂದಿಕೊಂಡು ೩,೦೦೦-೩,೫೦೦೦ ರೂಪಾಯಿ ಖರ್ಚಾಗುತ್ತದೆ. ಆಗಾಗ್ಗೆ ಇವರ ಸಂಬಂಧಿಕರು, ಆತ್ಮೀಯರು ದೇಣಿಗೆ ಕೊಟ್ಟು ನೆರವಾಗುತ್ತಾರೆ. ಕೆಲವರು ತಮ್ಮ ಕುಟುಂಬಗಳ ಜನ್ಮದಿನಾಚರಣೆ, ವಿವಾಹ ವಾರ್ಷಿಕೋತ್ಸವ ಮೊದಲಾದ ವಿಶೇಷ ದಿನಗಳನ್ನು ದೇಡಿಯಾ ದಂಪತಿಗಳೊಂದಿಗೆ ಸೇರಿ ಸಂಡೇ ಬ್ರೇಕ್-ಸ್ಟ್ ನಡೆಸುತ್ತಾರೆ. ದೇಡಿಯಾ ದಂಪತಿಗಳು ಸಂಡೇ ಬ್ರೇಕ್‌ಪಾಸ್ಟ್ ಅಲ್ಲದೆ ಇತರ ಕೆಲವು ರೀತಿಯಲ್ಲೂ ಜನರಿಗೆ ನೆರವಾಗುತ್ತಿದ್ದಾರೆ. ಮಹಿಳಾ ದಿನಾಚರಣೆಯಂದು ಅವರು ಸೀರೆ ಹಾಗೂ ಲಂಚ್ ಬಾಕ್ಸ್‌ನಂತಹ ಗೃಹ ಪರಿಕರಗಳನ್ನು ನೀಡುತ್ತಾರೆ. ಗಣೇಶ ಚತುರ್ಥಿಯಂದು ಅವರು ತಮ್ಮ ಮನೆಗೆ ಗಣೇಶ ಮೂರ್ತಿಯನ್ನು ತರುತ್ತಾರೆ.

ಆಗ ತಮ್ಮ ಮನೆಗೆ ಬರುವ ಅತಿಥಿಗಳಿಗೆ ಸಿಹಿ ಅಥವಾ ಹೂಗಳ ಬದಲಿಗೆ ಸ್ಟೇಷನರಿ ವಸ್ತುಗಳನ್ನು ತರಲು ಕೇಳಿಕೊಳ್ಳುತ್ತಾರೆ. ಹೀಗೆ ಸಂಗ್ರಹವಾದ ಸ್ಟೇಷನರಿಗಳನ್ನು ಅವರು ಆಸುಪಾಸಿನ ಬಡ ಶಾಲಾ ಮಕ್ಕಳಿಗೆ ನೀಡುತ್ತಾರೆ. ಹೀಗೆ ಪೂಜ ಹಾಗೂ ದೀಪೇಶ್ ದಂಪತಿಗಳು ದೊಡ್ಡ ಪ್ರಮಾಣದಲ್ಲಲ್ಲದಿದ್ದರೂ ತಮ್ಮ ಶಕ್ತ್ಯಾನುಸಾರ ಸಾಮಾಜಿಕ ಕೆಲಸಗಳನ್ನು ಮಾಡುತ್ತಿದ್ದಾರೆ. ಹಾಗೂ ತಮ್ಮಂತೆಯೇ ಇತರರೂ ತಮ್ಮ ತಮ್ಮ ಪರಿಸರದಲ್ಲಿ ತಮ್ಮ ಕೈಲಾಗುವ ಸಾಮಾಜಿಕ ಕಾರ್ಯಗಳನ್ನು ಮಾಡುವಂತೆ ಕೇಳಿಕೊಳ್ಳುತ್ತಾರೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ನೀರು ಬಿಟ್ಟು ರೈತರಿಗೆ ಅನುಕೂಲ ಕಲ್ಪಿಸಿ

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯು ವನಸಿರಿ ನಾಡು ಎಂದೆ ಪ್ರಸಿದ್ಧಿ ಪಡೆದಿದೆ ಹಾಗೆ ಜಲಾಶಯಗಳ ಬೀಡು ಎಂದು ಹೆಸರು ಪಡೆದುಕೊಂಡಿದೆ. ಈಗ…

22 hours ago

ಓದುಗರ ಪತ್ರ | ಈ ವಿಶಾಲ ಪಾರ್ಕ್‌ಗೆ ಬೇಕು ಶೌಚಾಲಯ

ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಕುವೆಂಪು ನಗರದ ಎಂ -ಬ್ಲಾಕ್ ನಲ್ಲಿರುವ ಭಾರತ್ ಮಾತಾ ಉದ್ಯಾನವನವು ಕುವೆಂಪು ನಗರದ ಪ್ರಮುಖ…

22 hours ago

ಓದುಗರ ಪತ್ರ | ಚರಂಡಿ ಸೇರುತ್ತಿರುವ ನೀರಿಗೆ ‘ತಡೆ’ಹಾಕಿ

ಮೈಸೂರಿನ ವಿಜಯನಗರ ಎರಡನೇ ಹಂತದ ದಿವ್ಯರೂಪ ಕಲ್ಯಾಣ ಮಂಟಪದ ಸಮೀಪ ಮೂರು ವಾರಗಳಿಂದ ದಿನದಲ್ಲಿ ಆರು ಗಂಟೆಗಳ ಕಾಲ ಪ್ರತಿ…

22 hours ago

ನಾಡಿನುದ್ದಕ್ಕೂ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಕಂಪು

ಡಿಸೆಂಬರ್‌ನಲ್ಲಿ ವಜ್ರಮಹೋತ್ಸವ ; ಸಂಭ್ರಮಕ್ಕೆ ಸಿದ್ಧತೆ ಚಿರಂಜೀವಿ ಸಿ.ಹುಲ್ಲಹಳ್ಳಿ ಕರ್ನಾಟಕದ ನೆಲ, ಜಲ, ಭಾಷೆಯ ಏಳಿಗೆಗಾಗಿ ಕಾವ್ಯ, ಸಾಹಿತ್ಯ ಮತ್ತು…

22 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಗಾಂಧಿ ವಾದಕ್ಕೆ ಮನಸೋತಿದ್ದ ಬಳ್ಳಾರಿ ಸಿದ್ದಮ್ಮ

ಡಾ. ಎಂ. ಡಿ. ಉಮೇಶ, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಬಳ್ಳಾರಿ ಸಿದ್ದಮ್ಮನವರು ೧೯೦೩ರಲ್ಲಿ ಬಸೆಟಪ್ಪ…

22 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಆಹಾರದ ಕುರಿತು ಕೆಲವು ಚಿಲ್ಲರೆ ಪ್ರಯೋಗಗಳು

ನಾನು ನನ್ನನ್ನು ಆಳವಾಗಿ ಪರಿಶೋಧಿಸಿಕೊಂಡಂತೆಲ್ಲ ನನ್ನ ಆಂತರಿಕ ಮತ್ತು ಬಾಹ್ಯ ವಿಷಯಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ನನಗೆ ತೋರಿತು. ನನ್ನ…

22 hours ago