ಓದುಗರ ಪತ್ರ

ಓದುಗರ ಪತ್ರ | ನೀರು ಬಿಟ್ಟು ರೈತರಿಗೆ ಅನುಕೂಲ ಕಲ್ಪಿಸಿ

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆಯು ವನಸಿರಿ ನಾಡು ಎಂದೆ ಪ್ರಸಿದ್ಧಿ ಪಡೆದಿದೆ ಹಾಗೆ ಜಲಾಶಯಗಳ ಬೀಡು ಎಂದು ಹೆಸರು ಪಡೆದುಕೊಂಡಿದೆ. ಈಗ ಕೇರಳ ರಾಜ್ಯದಲ್ಲಿ ಹೆಚ್ಚು ಹೆಚ್ಚು ಮಳೆಯಾಗಿರುವುದರಿಂದ ಕಬಿನಿ ಜಲಾಶಯವು ತುಂಬಿದೆ. ಆದರೆ ತಾರಕ ಜಲಾಶಯ ತುಂಬಬೇಕಾದರೆ ಇನ್ನು ಸಾಕಷ್ಟು ದಿನ ಬೇಕಾಗುತದೆ. ಆದ್ದರಿಂದ ಕಬಿನಿ ಜಲಾಶಯದಿಂದ ತಾರಕ ಜಲಾಶಯಕ್ಕೆ ನೀರನ್ನು ತುಂಬಿಸಬಹುದು.

ಆದರೆ ವಿದ್ಯುತ್ ಬಿಲ್ಲು ಬಾಕಿ ಇರುವುದರಿಂದ ವಿದ್ಯುತ್ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಲಿಪ್ತಿಕೇಶನ್‌ಗೆ ಬಹಳ ಸಮಸ್ಯೆ ಆಗಿದೆ.

ಹಾಗೆಯೇ ಮಧ್ಯೆ ಮಧ್ಯೆ ನೀರಿನ ಪೈಪುಗಳು ದುರಸ್ತಿಯಲ್ಲಿವೆ. ಕಬಿನಿ ಜಲಾಶಯದಿಂದ ತಾರಕ ಜಲಾಶಯಕ್ಕೆ ನೀರನ್ನು ಬಿಟ್ಟರೆ, ಹೆಬ್ಬಾಳ ಜಲಾಶಯವು ತುಂಬಿಕೊಳ್ಳುತ್ತದೆ. ಇದರಿಂದ ಬೆಳಗನಹಳ್ಳಿ, ಕಾವಲ, ಹೈರಿಗೆ, ಮಾಲಾರ ಕಾಲೋನಿ, ಮಾದಾಪುರ, ದೇವರಾಜ್ ಕಾಲೋನಿ, ಕೋಳಗಾಲ, ಗುಜಪ್ಪನಹುಂಡಿ. ಹಾಗೂ ಇತರೆ ಗ್ರಾಮಗಳ ರೈತರು ಭತ್ತ, ಜೋಳ ಹಾಗೂ ಕಡಲೆಕಾಯಿ, ಕಬ್ಬು ಹಾಗೂ ಇತರೆ ಬೆಳೆಗಳನ್ನು ಬೆಳೆಯಲು ಅವಕಾಶ ಸಿಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಽಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.

– ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಭರದಿಂದ ಸಾಗಿದ ದಸರಾ ಕಾಮಗಾರಿ

೫.೯೬ ಕೋಟಿ ರೂ.ವೆಚ್ಚದಲ್ಲಿ ಪೇಂಟಿಂಗ್, ಫುಟ್‌ಪಾತ್ ಅಂಚುಗಳಿಗೆ ಬಣ್ಣ, ವೃತ್ತಗಳ ದುರಸ್ತಿ ಸೆ.೩೦ರೊಳಗೆ ಕಾಮಗಾರಿ ಮುಗಿಸಲು ಗುತ್ತಿಗೆದಾರರಿಗೆ ತಾಕೀತು ಮೈಸೂರು:…

1 hour ago

ಮಣ್ಣಾದ ಸತ್ಯಕ್ಕೆ ಮರುಜೀವ

ಸೌಜನ್ಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ‘ನ್ಯಾಯಾದೀಪ’ ರಾಜ್ಯದ ಜನಮಾನಸವನ್ನು ತೀವ್ರವಾಗಿ ಕಾಡುತ್ತಿರುವ ಹಾಗೂ ಇಡೀ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿರುವ ಧರ್ಮಸ್ಥಳದ…

1 hour ago

ಓದುಗರ ಪತ್ರ: ವಿವೇಕವಿದ್ದರೆ ಮಾರಕವೂ ಪೂರಕ!

ಸಮಾಜಕ್ಕೆ ವಿeನಿಗಳು ನೀಡಿರುವ, ನೀಡುತ್ತಿರುವ ಅಪಾರವಾದ ಕೊಡುಗೆಯಿಂದಾಗಿ ತಂತ್ರeನದ ಕ್ರಾಂತಿಯ ಜೊತೆಗೆ ನಾನಾ ಕ್ಷೇತ್ರಗಳಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದಾಗಿ ಜಗತ್ತಿನ ಅಭಿವೃದ್ಧಿ…

1 hour ago

ಓದುಗರ ಪತ್ರ: ವಿದ್ಯುತ್: ಸರ್ಕಾರ ಭರವಸೆ ಈಡೇರಿಸಲಿ

ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ದಿನಕ್ಕೆ ೯ ತಾಸು ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಈಗ ಅದನ್ನು ೫ ತಾಸಿಗೆ…

1 hour ago

ಓದುಗರ ಪತ್ರ: ಕೇಂದ್ರ ಗೃಹ ಸಚಿವರು ಈ ರೀತಿ ಹೇಳಬಹುದೇ?

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ಕಾರದ ವಿರುದ್ಧ ಹೋರಾಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದ ಬಿಜೆಪಿ ನಾಯಕರಿಗೆ…

1 hour ago

ಓದುಗರ ಪತ್ರ: ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ದೊರೆಯುವುದೇ?

೧೪ ವರ್ಷಗಳಿಂದ ಪೊಲೀಸ್ ತನಿಖೆ ನ್ಯಾಯಾಲಯ / ಸಿಬಿಐ / ತನಿಖಾ ಸಂಸ್ಥೆಗಳಲ್ಲಿ ‘ಅಲೆದಾಟ’ನಡೆಸುತ್ತಿರುವ ಸೌಜನ್ಯಾ ಪ್ರಕರಣದಲ್ಲಿ ನಿಜಕ್ಕೂ ನ್ಯಾಯ…

1 hour ago