Andolana originals

ಮೈಸೂರು ʼಜಯದೇವʼಕ್ಕೆ ಹೃದಯ ಬಿರಿಯುವಷ್ಟು ಒತ್ತಡ

ಮೈಸೂರು: ದಶಕಗಳ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಗೆ ದುಬಾರಿ ವೆಚ್ಚದ ಚಿಕಿತ್ಸೆ ಪಡೆಯುವುದನ್ನು ತಗ್ಗಿಸುವ ಜತೆಗೆ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ – ಸಂಶೋಧನಾ ಸಂಸ್ಥೆಗೆ ಇದ್ದ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಮೈಸೂರಿನಲ್ಲಿ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ನಿರ್ಮಿಸಲಾಯಿತು. ಆದರೆ, ಈ ಆಸ್ಪತ್ರೆ ಕೂಡ ಮೈಸೂರು ಭಾಗದ ನಾಲ್ಕೈದು ಜಿಲ್ಲೆಗಳ ರೋಗಿಗಳಿಂದ ಒತ್ತಡಕ್ಕೆ ಸಿಲುಕಿದೆ.

ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹೊರ ರೋಗಿಗಳನ್ನು ತಪಾಸಣೆ ಮಾಡುವುದಕ್ಕೆ ಅಗತ್ಯ ಸಂಖ್ಯೆಯ ವೈದ್ಯರ ಕೊರತೆ ಇದೆ. ಹಾಗಾಗಿ ಹೊರ ರೋಗಿಗಳನ್ನು ಪರೀಕ್ಷಿಸಲು ಕರ್ತವ್ಯನಿರತ ವೈದ್ಯರು ಒತ್ತಡದಿಂದಲೇ ಕಾರ್ಯ ನಿರ್ವಹಿಸುವಂತಾಗಿದೆ. ಹೀಗಾಗಿಯೇ, ಮೈಸೂರಿನ ಜಯದೇವ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರು, ಸಿಬ್ಬಂದಿಯನ್ನು ಸರ್ಕಾರ ನೇಮಕಾತಿ ಮಾಡದಿದ್ದಲ್ಲಿ ಆಸ್ಪತ್ರೆಯ ವೈದ್ಯರೇ ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶಕ್ಕೆ ದಾರಿಯಾಗಲಿದೆ.

ದಶಕಗಳ ಹಿಂದೆ ಆರ್ಥಿಕ ಸ್ಥಿತಿವಂತರಿಗೆ ಹೃದಯಾಘಾತವಾದರೆ ವಿಕ್ರಂ, ಅಪೋಲೋ, ನಾರಾಯಣ ಹೃದಯಾಲಯ, ಜೆಎಸ್‌ಎಸ್ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದರು. ಬಡವರಾದರೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರ ದೂರದ ಜಿಲ್ಲೆಗಳ ಜನರಿಗೆ ಅನುಕೂಲವಾಗಲೆಂದು ಕೃಷ್ಣರಾಜೇಂದ್ರ ಆಸ್ಪತ್ರೆಯ ಕಾಂತರಾಜ್ ಕಟ್ಟಡದಲ್ಲಿ ಜಯದೇವ ಆಸ್ಪತ್ರೆ ಘಟಕವನ್ನು ಪ್ರಾರಂಭ ಮಾಡಿತ್ತು. ನಂತರ, ಕೆಆರ್‌ಎಸ್ ರಸ್ತೆಯಲ್ಲಿರುವ ಕುಂಬಾರಕೊಪ್ಪಲು ಬಳಿ ಅತ್ಯಾಧುನಿಕ ಶೈಲಿಯಲ್ಲಿ ೪೦೦ ಹಾಸಿಗೆಗಳ ಸಾಮರ್ಥ್ಯದ ನೂತನ ಆಸ್ಪತ್ರೆಯನ್ನು ನಿರ್ಮಾಣ ಮಾಡಿ ೨೦೧೮ರಲ್ಲಿ ಪೂರ್ಣಪ್ರಮಾಣದಲ್ಲಿ ಸೇವೆಯನ್ನು ಆರಂಭಿಸ ಲಾಯಿತ್ತು. ಅಲ್ಲಿಂದ ಇಲ್ಲಿಯವರೆಗೆ ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ ಜಿಲ್ಲೆಗಳ ಜನರಿಗೆ ಚಿಕಿತ್ಸೆ ನೀಡುತ್ತಿದ್ದು, ಬೆಂಗಳೂರಿನ ಸಂಚಾರ ದಟ್ಟಣೆ ಕಾರಣದಿಂದಾಗಿ ರಾಮನಗರ ಭಾಗದ ಜನರು ಕೂಡ ಮೈಸೂರಿಗೆ ಬಂದು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ, ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ವೈದ್ಯರು ಒತ್ತಡದಲ್ಲಿ ಕಾರ್ಯ ನಿರ್ವಹಿಸುವಂತಾಗಿದೆ.

ರೋಗಿಗಳ ಸಂಖ್ಯೆ ಗಣನೀಯ ಏರಿಕೆ:

ತೀವ್ರ ಬಿಸಿಲಿನ ಹೊಡೆತಕ್ಕೆ ಸನ್‌ಸ್ಟ್ರೋಕ್ ಉಂಟಾಗಿ ಹೃದಯಾಘಾತ ಪ್ರಕರಣಗಳು ಸೇರಿದಂತೆ ಹಲವಾರು ಸಮಸ್ಯೆಗಳಿಂದ ಹೃದಯಾಘಾತ ಹೆಚ್ಚಾಗುತ್ತಿ ರುವುದರಿಂದ ರೋಗಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, ಆಸ್ಪತ್ರೆಯು ನೀಡಿರುವ ಅಧಿಕೃತವಾದ ಅಂಕಿಅಂಶಗಳೇ ಸಾಕ್ಷಿಯಾಗಿದೆ. ೪೦೦ ಹಾಸಿಗೆಗಳ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ಪ್ರಸ್ತುತ ೪೦ ಜನ ವೈದ್ಯರು, ೨೪ ಜನ ಕಾರ್ಡಿಯಾಲಾಜಿಸ್ಟ್ , ೧೦ ಅನಸ್ಥೇಶಿಯ ತಜ್ಞರು , ಒಬ್ಬರು ಸರ್ಜನ್ ಇದ್ದಾರೆ. ಪೋಸ್ಟ್ ಗ್ರ್ಯಾಜುಯೇಟ್ ಮುಗಿಸಿರುವ ೧೦ ಜನ ವೈದ್ಯರು ಇದ್ದಾರೆ. ಆದರೆ, ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯನ್ನು ಗಮನಿಸಿದರೆ ಇನ್ನೂ ೨೦ ಮಂದಿ ವೈದ್ಯರು, ೧೦ ಜನ ಕಾರ್ಡಿಯಾಲಾಜಿಸ್ಟ್‌ಗಳ ಅವಶ್ಯಕತೆ ಇದೆ. ಅದರಲ್ಲೂ ಐಸಿಯುನಲ್ಲಿರುವ ರೋಗಿಗಳನ್ನು ಮೂರು ಪಾಳಿಯಲ್ಲಿ ನೋಡಿಕೊಳ ಬೇಕಿರುವ ಕಾರಣ ಕಾರ್ಡಿಯಾಲಜಿಸ್ಟ್‌ಗಳ ಕೊರತೆ ನೀಗಿಸಲು ಆದ್ಯತೆ ಕೊಡಬೇಕಿದೆ. ಶನಿವಾರದಿಂದ ಮಂಗಳವಾರದವರೆಗೆ ಹೊರ ರೋಗಿಗಳನ್ನು ತಪಾಸಣೆಗೊಳಪಡಿಸುವಾಗ ತೀರಾ ಒತ್ತ ಡವಿದ್ದು, ಬೆಳಿಗೆ ೧೦ರಿಂದ ಸಂಜೆ ೬ಗಂಟೆ ತನಕವೂ ಒತ ಡದಲೆ ಕಾರ್ಯ ನಿರ್ವಹಿಸುವ ವೈದ್ಯರು, ರಾತ್ರಿ ಪಾಳಿಯ ಕರ್ತವ್ಯಕೆ ಬರದಿದ್ದರೆ ವಾರ್ಡ್‌ಗಳ ಒಳ ರೋಗಿಗಳ ನಿರ್ವಹಣೆಗೆ ಕಷ್ಟಕರವಾಗುತ್ತಿದೆ ಎಂದು ಹೇಳಲಾಗಿದೆ. ಚಾಮರಾಜನಗರ, ಮಂಡ್ಯ ಜಿಲ್ಲಾ ಆಸ್ಪತ್ರೆಗಳಲ್ಲಿ ಬಹುತೇಕ ವೈದ್ಯರು ಹೃದಯಾ ಘಾತಕ್ಕೊಳಗಾಗುವ ರೋಗಿಗಳನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳುತ್ತಾರೆ. ತೀವ್ರ ಹೃದಯಾಘಾತಕೆ ಒಳಗಾದ ವ್ಯಕ್ತಿಯನ್ನು ಕರೆತಂದು ಚಿಕಿತ್ಸೆ ಆರಂಭಿಸುವ ಹೊತ್ತಿಗೆ ಪ್ರಾಣ ಹೋಗಿರುತ್ತದೆ. ಮಾರ್ಗಮಧ್ಯೆ ರೋಗಿಯ ಜೀವ ಹೋದರೂ, ಅದನ್ನು ಆಸ ತ್ರೆಯಲ್ಲಿ ಘೋಷಣೆ ಮಾಡುವುದು ಅನಿವಾರ್ಯ. ಹೀಗಾಗಿಯೇ, ಜಯದೇವ ಆಸ ತ್ರೆಗೆ ಯಾವುದೇ ರೋಗಿ ಬಂದರೂ ವೈದ್ಯರು ತುರ್ತು ಚಿಕಿತೆ ಕೊಡಬೇಕಿರುವ ಕಾರಣ ಒತ್ತಡಕ್ಕೆ ಸಿಲುಕಿಬಿಡುತ್ತಾರೆ. ಈ ಒತ್ತಡ ತಗ್ಗಿಸಬೇಕಾದರೆ ವೈದ್ಯರ ಕೊರತೆಯನ್ನು ನೀಗಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ವೈದ್ಯರೊಬ್ಬರು ಹೇಳಿದರು.

ಆಂದೋಲನ ಡೆಸ್ಕ್

Recent Posts

ಪಡಿತರ ವಿತರಣೆ | ಸಮಯ ಬದಲಾವಣೆ

ನ್ಯಾಯಬೆಲೆ ಅಂಗಡಿಗಳ ಗ್ರಾಹಕರ ಮನವಿಗೆ ಸರ್ಕಾರದ ಸ್ಪಂದನೆ ಅ.1ರಿಂದ ಬೆಳಿಗ್ಗೆ 7ರಿಂದ ಮಧ್ಯಾಹ್ನ 12; ಸಂಜೆ 4ರಿಂದ ರಾತ್ರಿ 8…

21 mins ago

3,705 ಕೋಟಿ ರೂ. ಪರಿಹಾರ ಕೋರಿ ಕೇಂದ್ರಕ್ಕೆ ಮೆಮೊರಾಂಡಂ ಸಲ್ಲಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮೊದಲ ಹಂತದಲ್ಲಿ ಘೋಷಿಸಲಾದ 101…

10 hours ago

ಹನೂರು | ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಕಾರ್ಮಿಕ ಸಾವು

ಹನೂರು : ಕೆಲಸಕ್ಕೆ ಹೋಗಿ ವಾಪಸ್ ಬರುವಾಗ ಮಳೆಯ ನೀರಿನಲ್ಲಿ ಕೊಚ್ಚಿ ಹೋಗಿ ಗಾರೆ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಹನೂರು…

11 hours ago

ಗ್ರಾಮದ ಸ್ವಚ್ಛತೆ ನೋಡಿಕೊಳ್ಳುವವರೇ ಅನೈರ್ಮಲ್ಯಕ್ಕೆ ಕಾರಣ?

ನಂಜನಗೂಡು : ಗ್ರಾಮದ ಸ್ವಚ್ಛತೆಯ ಜವಾಬ್ದಾರಿ ಹೊತ್ತವರೇ ಪಂಚಾಯಿತಿ ಆವರಣವನ್ನೆ ಮೂತ್ರಾಲಯವಾಗಿಸಿ ಅನೈರ್ಮಲ್ಯಕ್ಕೆ ಕಾರಣರಾದರೆ ಬೇರೆಯವರಿಗೆ ಸ್ವಚ್ಚತೆ ಕಾಪಾಡುವ ಬಗ್ಗೆ…

12 hours ago

ಮಹಾಪ್ರವಾಹಕ್ಕೆ ನೇಪಾಳ ತತ್ತರ: ನಾಪತ್ತೆಯಾದವರ ಸಂಖ್ಯೆ 6100ಕ್ಕೆ ಏರಿಕೆ

ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…

17 hours ago

ಓದುಗರ ಪತ್ರ: ಇನ್ಸ್‌ಪೆಕ್ಟರ್ ಧನಂಜಯರ ಹೇಳಿಕೆಯಲ್ಲಿ ತಪ್ಪಿಲ್ಲ

ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…

1 day ago